Srirasthu Shubhamasthu: ಕೊನೆಗೂ ಸಮರ್ಥ್ ಮಾಡುತ್ತಿರುವ ಕೆಲಸ ಸಿರಿಗೆ ತಿಳಿಯಿತು! ಮುಂದೇನು ಮಾಡುತ್ತಾಳೆ ಸಿರಿ?
ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡುಗರಿಗೆ ಖುಷಿ ನೀಡುತ್ತಿದೆ. ಇದೀಗ ಯಾವ ವಿಚಾರ ಯಾರಿಗೆ ತಿಳಿಯಬಾರದೆಂದು ತುಳಸಿ ಅಂದುಕೊಂಡಿದ್ದಳು ಆ ವಿಚಾರ ಇದೀಗ ಸಿರಿಗೆ ಗೊತ್ತಾಗಿದೆ. ಸಮರ್ಥ್ ತನ್ನ ಹೆಂಡತಿಗೆ ಅಭಿಯ ವರ್ತನೆ ಮಿತಿಮೀರುತಿದೆ, ಹಾಗೆಯೇ ನನ್ನನ್ನು ಸಪ್ಲೇಯರ್ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಎನ್ನುವ ವಿಚಾರ ಹೇಳಿರುವುದಿಲ್ಲ.
ಇದೀಗ ಸಿರಿಗೆ ಸಮರ್ಥ್ ಯಾವ ಕೆಲಸ ಮಾಡುತ್ತಿದ್ದಾನೆ ಎನ್ನುವುದು ಸಿಕ್ಕಿದೆ. ಆತ ದೊಡ್ಡ ಕೆಲಸದಲ್ಲಿದ್ದಾನೆ, ಮ್ಯಾನೇಜರ್ ಪೋಸ್ಟ್ ನಲ್ಲಿ ಇದ್ದಾರೆ ಅಂದುಕೊಂಡಿದ್ದ ಸಿರಿಗೆ ಇದೀಗ ಶಾಕ್ ಆಗಿದೆ. ಇದೀಗ ತುಳಸಿ ತವರು ಮನೆಗೆ ಬರುತ್ತಾಳೆ . ಎಲ್ಲರ ಯೋಗಕ್ಷೇಮ ವಿಚಾರಣೆ ಮಾಡಿದ ತುಳಸಿ, ಸಿರಿಯ ಯೋಗ ಕ್ಷೇಮವಾಗಿಯೇ ಸಮರ್ಥ ಬಗ್ಗೆ ಕೂಡ ವಿಚಾರಣೆ ಮಾಡುತ್ತಾಳೆ. ತನ್ನ ಮಗ ಹೇಗಿದ್ದಾನೆ ಏನು ಮಾಡುತ್ತಿದ್ದಾನೆ .ನನ್ನ ಬಗ್ಗೆ ಯೋಚನೆ ಮಾಡುತ್ತಿದ್ದಾನೆ ಎಂದೆಲ್ಲಾ ಮನದಲ್ಲಿ ಅಂದುಕೊಂಡು ಬಹಳ ಖುಷಿ ಪಡುತ್ತಿರುತ್ತಾರೆ .

ದತ್ತನ ಮನೆಗೆ ಬಂದ ತುಳಸಿ
ಯಾವ ವಿಚಾರ ಯಾರಿಗೆ ತಿಳಿಯಬಾರದು ಎಂದು ಅಂದುಕೊಂಡು ಇದ್ದಾರೋ ಆ ವಿಚಾರ ಇದೀಗ ಸಿರಿಗೆ ತಿಳಿದು ಹೋಗಿದೆ. ಸಮರ್ಥ ಕೈಯಲ್ಲಿ ಬೊಬ್ಬೆ ಬಂದಿರುವುದನ್ನು ನೋಡಿದ ಸಿರಿ ಅನುಮಾನ ಬಂದು ಸಮರ್ಥ್ ಮಾಡುತ್ತಿರುವ ಕೆಲಸ ಯಾವುದು ಎಂದು ತಿಳಿಸುಕೊಂಡಿದ್ದಾಳೆ. ಸಮರ್ಥ್ ಮಾಡುತ್ತಿದ್ದ ಕೆಲಸವನ್ನು ನೋಡಿ ಸಿರಿಗೆ ಬಹಳ ದುಃಖವಾಗುತ್ತದೆ.

ಸಮರ್ಥ್ ವಿಚಾರದಲ್ಲಿ ಬೇಸರಗೊಂಡ ಸಿರಿ
ಇನ್ನು ಈ ವಿಚಾರವನ್ನು ತುಳಸಿ ಬಳಿ ಹೇಳಿದಾಗ ಅಭಿ ಏನಾದರು ಸಮರ್ಥ್ ಗೆ ಕಾಟ ಕೊಟ್ಟು ಬಿಟ್ಟನ ಎಂದು ಕೇಳುತ್ತಾಳೆ. ಅದಕ್ಕೆ ಸಿರಿ ಅಭಿ ಸಮರ್ಥ್ ಗೆ ಕೊಡುತ್ತಿರುವ ಕಷ್ಟ ಬಹಳಷ್ಟಿದೆ. ಆದರೆ ಇದೆಲ್ಲವನ್ನೂ ಸಮರ್ಥ್ ನನ್ನ ಬಳಿ ಹೇಳುತ್ತಿಲ್ಲ. ಆತನಿಗೆ ನನ್ನ ಬಳಿ ಹೇಳಬೇಕು ಅನ್ನಿಸಲಿಲ್ಲ ಎಂದು ಹೇಳುತ್ತಾಳೆ. ಆಗ ನಿನ್ನ ಬಳಿ ಮುಚ್ಚಿಡಬೇಕು ಎನ್ನುವ ಉದ್ದೇಶ ನನಗೆ ಹಾಗೂ ಸಮರ್ಥ್ ಗೆ ಇರಲಿಲ್ಲ ಎನ್ನುತ್ತಾಳೆ ತುಳಸಿ.
ಮಗನ ಪರ ಮಾತನಾಡಿದ ತುಳಸಿ
ಸಮರ್ಥ್ ನಿನ್ನ ಬಳಿ ಎಲ್ಲಾ ವಿಚಾರ ಹೇಳುತ್ತಿದ್ದ ಆದರೆ ಈ ವಿಚಾರ ನಿನಗೆ ಗೊತ್ತಾದರೆ ಸಮರ್ಥ್ ನಿನ್ನ ಮುಂದೆ ಸಣ್ಣವನಾಗಿ ಬಿಡುತ್ತಾನೆ ಎನ್ನುವ ಭಯ ಆತನಿಗೆ. ಅದಕ್ಕಾಗಿ ಆತ ಎನು ಹೇಳದೆ ಸುಮ್ಮನಿದ್ದ ಅನ್ನಿಸುತ್ತದೆ. ನನಗೆ ಕೂಡ ನಿನ್ನ ಬಳಿ ಹೇಳುವ ಧೈರ್ಯ ಬರಲಿಲ್ಲ ಎಂದು ಹೇಳಿದ್ದಾಳೆ. ಅಭಿ ಸಮರ್ಥ್ ಗೆ ಬಹಳಷ್ಟು ಕಷ್ಟ ನೀಡಿದರೂ ಕೂಡ ಸಮರ್ಥ್ ಮಾತ್ರ ಎನು ಮಾತನಾಡದೆ ಬಂದದ್ದು ಬರಲಿ ಎನ್ನುವ ಹಾಗೆ ಎಲ್ಲಾ ಕಷ್ಟವನ್ನು ಸಹಿಸಿಕೊಂಡು ಹೋಗುತ್ತಿದ್ದಾನೆ ಇದೀಗ ಸಿರಿ ಯಾವ ರೀತಿ ಸಾಥ್ ನೀಡುತ್ತಾಳೆ ಸಮರ್ಥ್ ಗೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications











