Srirasthu Shubhamasthu: ದತ್ತನಿಗೆ ಬಂತು ಪ್ರೇಮ ಪತ್ರ; ಪತ್ರ ಬರದಾಕೆಯನ್ನು ಹುಡುಕುತ್ತಾನಾ ದತ್ತ?
ದತ್ತ ಮನೆಯಲ್ಲಿ ಕುಳಿತು ಟಿವಿ ನೋಡುತ್ತಾ ಇರಬೇಕಾದರೆ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಬಾಗಿಲು ತೆಗೆದು ನೋಡುವಾಗ ಪೋಸ್ಟ್ ಮ್ಯಾನ್ ಇರುತ್ತಾರೆ. ಯಾರಿಗೆ ಲೆಟರ್ ಬಂದಿರುವುದು ಎಂದೆಲ್ಲ ವಿಚಾರಿಸಿದಾಗ ದತ್ತಾತ್ರೇಯ ಅವರಿಗೆ ಪೋಸ್ಟ್ ಬಂದಿದೆ ಎನ್ನುತ್ತಾನೆ. ಇದರಿಂದ ದತ್ತನಿಗೆ ಆಶ್ಚರ್ಯ ಆಗುತ್ತದೆ. ಮನೆ ಒಳಗೆ ಬಂದ ದತ್ತ ಜೋಕಾಲಿ ಮೇಲೆ ಕುಳಿತುಕೊಂಡು ಪೇಪರ್ ಓದಲು ಶುರು ಮಾಡುತ್ತಾರೆ.
ಅದರಲ್ಲಿ ಭವಿಷ್ಯ ಎಲ್ಲಾ ನೋಡಿ ಮೆತ್ತಗೆ ರೂಮ್ ಕಡೆ ಹೋಗುತ್ತಾನೆ. ಬಳಿಕ ಲೆಟರ್ ಮೇಲೆ ಡಿಯರ್ ದತ್ತು ಎಂದೆಲ್ಲ ಬರೆದಿರುತ್ತದೆ, ಅದನ್ನು ನೋಡಿದ ದತ್ತಗೆ ಆಶ್ಚರ್ಯ ಆಗುತ್ತದೆ. ನನ್ನ ತಂದೆ ತಾಯಿ ನನ್ನ ಹೀಗೆ ಕರೆಯುತ್ತಾ ಇದ್ದರು, ಇದ್ಯರಪ್ಪ ನನ್ನ ಈ ರೀತಿ ಕರೆಯೋದು ಎಂದೆಲ್ಲ ಯೋಚನೆ ಮಾಡಿ ಪುನಃ ಲೆಟರ್ ಓದುತ್ತಾನೆ. ಬಳಿಕ ಅದರಲ್ಲಿ ಪಾರ್ಕ್ ನಲ್ಲಿ ಭೇಟಿ ಆಗುವ ಎಂದೆಲ್ಲ ಬರೆದಿರುತ್ತದೆ. ಆ ವೇಳೆ ಅಲ್ಲಿಗೆ ಶೇಷ ಬರುತ್ತಾನೆ. ದತ್ತನ ಮುಖ ಕೊಂಚ ಗಲಿಬಿಲಿ ಆಗಿರುವುದನ್ನು ನೋಡಿದ ಶೇಷ ಮೆತ್ತಗೆ ದತ್ತ ಬಳಿ ಏನಾಯಿತೋ ಯಾಕೆ ಇಷ್ಟು ಬೆವರುತ್ತಿದ್ದೀಯಾ ಏನಾಯಿತು ಎಂದೆಲ್ಲ ಕೇಳುತ್ತಾನೆ. ಆದರೆ ದತ್ತ ಮಾತ್ರ ಏನೂ ಹೇಳದೆ ಸುಮ್ಮನೆ ಇರುತ್ತಾನೆ
ಕೊನೆಗೆ ಲೆಟರ್ ವಿಚಾರ ಹೇಳುತ್ತಾನೆ. ಇದನ್ನು ಕೇಳಿದ ಶೇಷ ಯಾರು ಏನು ಎಂದು ವಿಚಾರ ಮಾಡೋಣ ಪಾರ್ಕ್ ಗೆ ಹೋಗೋಣ ಎಂದಾಗ ದತ್ತ ಎಂತದ್ದೂ ಬೇಡ ಯಾರೋ ನಮಗೆ ಕಾಗೆ ಹಾರಿಸುತ್ತ ಇದ್ದಾರೆ, ಬೀದಿ ಹುಡುಗರಿಗೆ ನನ್ನ ಕಂಡರೆ ಮೊದಲೇ ಆಗುವುದಿಲ್ಲ ಇನ್ನೂ ಅವರೇನಾದರೂ ಕಾಲು ಎಳೆಯಬಹುದು ಎಂದು ಹೇಳುತ್ತಾನೆ.

ಮಾಧವನ ಕೆಫೆಯಲ್ಲಿ ಸಿಹಿ ತಯಾರು ಮಾಡುತ್ತಿರುವ ತುಳಸಿ
ಇನ್ನು ಮಾಧವ ಹಾಗೂ ತುಳಸಿ ಕೆಫೆಯಲ್ಲಿ ತಮ್ಮ ತಮ್ಮ ಮಕ್ಕಳಿಗೆ ವ್ಯಾಲೆಂಟೈನ್ಸ್ ಡೇಗೆ ಏನಾದರು ಸರ್ಪ್ರೈಸ್ ಕೊಡಬೇಕು ಎಂದು ಡಿನ್ನರ್ ಅರೇಂಜ್ ಮಾಡುತ್ತಾರೆ. ಅದಕ್ಕೆ ಒಂದು ಸ್ವೀಟ್ ಮಾಡೋಣ ಅಂದುಕೊಳ್ಳುತ್ತಾರೆ. ಆಗ ಮಾಧವ ಮನೆಯಲ್ಲಿ ಸಿಹಿ ಮಾಡಿದರೆ ಮಕ್ಕಳು ಬಂದರೆ ಎಲ್ಲಾ ತಲೆಕೆಳಗಾಗುತ್ತದೆ, ಇಲ್ಲಿಯೇ ಸಿಹಿಯನ್ನು ಮಾಡಿ ಎಂದು ಹೇಳುತ್ತಾನೆ.

ಮಕ್ಕಳಿಗೆ ವ್ಯಾಲೆಂಟೈನ್ಸ್ ಡೇಗೆ ಸರ್ಪ್ರೈಸ್ ನೀಡಲು ತುಳಸಿ ಮಾಧವ ಹರಸಾಹಸ
ಆ ಬಳಿಕ ಮ್ಯಾಗಿಗೆ ಮಾಧವ ಮಕ್ಕಳಿಗೆ ಎಲ್ಲರಿಗೂ ಕೆಫೆಗೆ ಬರುವಂತೆ ಮೆಸೆಜ್ ಮಾಡಿ ಬಿಡು ಎಂದು ಹೇಳಿದಾಗ ಅವೀಗೆ ಹೇಗೆ ಹೇಳುವುದು ಎಂದು ಗೊತ್ತಾಗದೆ ಮ್ಯಾಗಿ ಮಾಧವನ ಬಳಿ ಕೇಳಿದಾಗ ಮಾಧವ ಅವಿಗೆ ಸುಳ್ಳು ಹೇಳುವುದು ಬೇಡ ಎಂದು ಹೇಳುತ್ತಾನೆ. ಆದರೆ ಅದನ್ನು ಕೇಳಿದ ಮ್ಯಾಗಿ ಸುಳ್ಳು ಹೇಳಿದರೂ ಅದು ಅವರ ಖುಷಿಗೆ ಅಲ್ವಾ ಎಂದೆಲ್ಲ ಹೇಳಿ ಮಾಧವ ಅವರನ್ನು ಒಪ್ಪುವ ಹಾಗೆ ಮಾಡುತ್ತಾಳೆ. ಬಳಿಕ ಅವಿ ಕಾರಿನ ಡ್ರೈವರ್ ಗೆ ಕರೆ ಮಾಡಿ ಹೇಳುತ್ತಾರೆ.

ಹೆಸರು ಕಾಳಿನ ಹಲ್ವಾ ನೋಡಿ ಖುಷಿಪಟ್ಟ ಮಾಧವ
ಇನ್ನು ತುಳಸಿ ಹೆಸರು ಕಾಳಿನ ಹಲ್ವಾ ಮಾಡುತ್ತಾಳೆ. ಅದನ್ನು ನೋಡಿ ಎಲ್ಲರಿಗೂ ಬಹಳ ಖುಷಿ ಆಗುತ್ತದೆ. ಇವತ್ತು ಹೊಮ್ ಮೇಡ್ ಸಿಹಿಯನ್ನು ನಾವು ತಿನ್ನಬಹುದು ಎಂದು ಖುಷಿ ಪಡುತ್ತಾರೆ. ಇನ್ನು ಸಿರಿಗೆ ಪೂರ್ಣಿಮಾ ಕರೆ ಮಾಡುತ್ತಾಳೆ. ಕರೆ ಸ್ವೀಕರಿಸಿ ಮಾತನಾಡಿದ ಸಿರಿಯನ್ನು ನೋಡಿ ಪೂರ್ಣಿಮಾ ನನಗೆ ನಿನ್ನ ಕರೆ ನೋಡಿ ಬಹಳ ಖುಷಿ ಆಯಿತು ಎಂದಾಗ ಪೂರ್ಣಿಮಾ ನನಗೆ ನಿನ್ನ ಬಳಿ ಮಾತನಾಡಿದರೆ ಬಹಳ ಖುಷಿ ಆಗುತ್ತದೆ, ಹಾಗೆ ಮನಸ್ಸಿಗೆ ಸಮಾಧಾನ ಸಿಗುತ್ತದೆ ಎಂದು ಹೇಳುತ್ತಾಳೆ .

ಸಿರಿಗೆ ಕರೆ ಮಾಡಿದ ಪೂರ್ಣಿಮಾ
ಇವತ್ತು ವ್ಯಾಲೆಂಟೈನ್ಸ್ ಡೇ ಅಲ್ವಾ ಸಿರಿ ಇವತ್ತು ನಾವು ಏನಾದರು ನಮ್ಮ ಗಂಡಂದಿರಿಗೆ ಸರ್ಪ್ರೈಸ್ ಕೊಡೋಣ ಎಂದು ಕೇಳಿದಾಗ ಸಿರಿ ಬೇಡ ಎಂದು ಹೇಳುತ್ತಾಳೆ. ಯಾಕೆಂದರೆ ಮದುವೆಗೆ ಮುಂಚೆ ಎಲ್ಲವೂ ನೆನಪು ಇರುತ್ತದೆ, ಮದುವೆ ಆದ ಬಳಿಕ ಎಲ್ಲಾ ಮರೆತು ಹೋಗುತ್ತದೆ ಎಂದೆಲ್ಲ ಹೇಳಿ ಕರೆ ಕಟ್ ಮಾಡುತ್ತಾಳೆ. ಆ ವೇಳೆ ಇಬ್ಬರಿಗೂ ಮೆಸೇಜ್ ಬರುತ್ತದೆ. ಕೆಫೆಯಲ್ಲಿ ಡಿನ್ನರ್ ಇದೆ ಎಂದು ಅದನ್ನು ನೋಡಿದ ಪೂರ್ಣಿಮಾಗೆ ಕೊಂಚ ಆಶ್ಚರ್ಯ ಆದರೂ ಸುಮ್ಮನಾಗುತ್ತಾಳೆ. ಇನ್ನು ದತ್ತ ಮಾತ್ರ ಆಗಾಗ ಕನ್ನಡಿಯನ್ನು ನೋಡುತ್ತಾ ಇರುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











