Srirasthu Shubhamasthu: ಮಾಧವನಿಗೆ ತಿಳಿಯದೇ ನಡೆದು ಹೋಗುತ್ತಾ ನಿಶ್ಚಿತಾರ್ಥ?

ಶ್ರೀರಸ್ತು ಶುಭಮಸ್ತು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಮಾಧವ ದತ್ತನ ಕೈಗೆ ಸಿಕ್ಕಿ ಬಿದ್ದಿದ್ದಾನೆ. ದತ್ತ ಅವರ ಕ್ಲಬ್ ನಲ್ಲಿ ಕೂಡ ಚೆಸ್ ಆಡುವಂತೆ ಮಾಧವನನ್ನು ಫೋರ್ಸ್ ಮಾಡಿ ಮನವೊಲಿಸುತ್ತಾರೆ.ದತ್ತ ಮೊದಲ ಚೆಸ್ ಪಂದ್ಯಾಟದಲ್ಲಿ ಮಾಧವ ವಿರುದ್ದ ಆಟ ಆಡಿ ಗೆದ್ದಿರುತ್ತಾನೆ. ಅದನ್ನು ನೋಡಿದ ಮಾಧವ ದತ್ತನ ಖುಷಿ ಪಡಿಸುವುದೆ ನನ್ನ ಗುರಿ ಅನ್ನುವ ಹಾಗೆ ನಾನು ಕ್ಲಬ್ ಗೆ ಬರುತ್ತೇನೆ ಎಂದು ಹೇಳಿ ದತ್ತ ಹಾಗೂ ಮಾಧವ ಜೊತೆಯಲ್ಲೇ ಹೊರಡುತ್ತಾರೆ..
ಮಾಧವನ ಸ್ಕೂಟರ್ ಇರುತ್ತಾರೆ ದತ್ತ. ದತ್ತನಿಗೆ ಮಾಧವ ಅಂದರೆ ಪ್ರೀತಿ ಆದರೆ ಅದನ್ನು ಮಾಧವನ ಜೊತೆ ತೋರಿಸಿಕೊಳ್ಳದೆ ತನ್ನದೇ ನಡೆಯಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಇತ್ತ ಪೂರ್ಣಿಮಾ ಬಹಳ ಬೇಸರ ಪಟ್ಟುಕೊಂಡು ಇರುತ್ತಾಳೆ. ಅಭಿ ನಿಶ್ಚಿತಾರ್ಥ ಮಾವನಿಗೆ ಗೊತ್ತಿಲ್ಲದೆ ನಡೆಯುತ್ತಿದೆ ಎಂದು ಬಹಳ ಬೇಸರ ಪಟ್ಟುಕೊಂಡು ಇರುತ್ತಾಳೆ. ಪೂರ್ಣಿಮಾಳನ್ನು ನೋಡಿದ ಅವಿನಾಶ್ ಯಾಕೆ ಪೂರ್ಣಿಮಾ ಬಹಳ ಬೇಸರ ಪಟ್ಟುಕೊಂಡು ಇದ್ದೀಯಾ ಎಂದೆಲ್ಲ ಹೇಳುತ್ತಾನೆ.
ಪೂರ್ಣಿಮಾ ಸುಮ್ಮನೆ ಇರುತ್ತಾಳೆ. ಬಳಿಕ ಮಾತು ಮುಂದುವರೆಸಿದ ಅವಿ ಎಲ್ಲರೂ ಇಲ್ಲಿ ಬಹಳ ಸಂತಸದಿಂದ ಇದ್ದಾರೆ ನೀನು ಯಾಕೆ ಇಷ್ಟು ಬೇಸರ ಪಟ್ಟುಕೊಂಡು ಇದ್ದಿಯಲ್ಲ, ಎಲ್ಲರೂ ಖುಷಿ ಪಡುವ ವೇಳೆ ನೀನು ಖುಷಿ ಪಡಬೇಕು ಈ ತರ ಎಲ್ಲಾ ಯೋಚನೆ ಮಾಡಿಕೊಂಡು ಇರಬಾರದು ಎಂದು ಹೇಳುತ್ತಾನೆ. ಆದರೆ ಪೂರ್ಣಿಮಾ ತನ್ನ ಮಾವನಿಗೆ ಈ ವಿಚಾರ ತಿಳಿಯದೇ ಇರುವುದು ಬಹಳ ಬೇಸರ ಆಗಿದೆ, ಮಾವನಿಗೆ ಈ ವಿಚಾರ ತಿಳಿದಿದ್ದರೆ ಅವರು ಹೀಗೆ ಆಗಲು ಬಿಡುತ್ತಾ ಇರಲಿಲ್ಲ ಎಂದು ಬೇಸರ ಹೊರ ಹಾಕುತ್ತಾರೆ. ಆದರೂ ಅವಿ ಮಾತ್ರ ಅದು ಯಾವುದನ್ನು ಕೇಳಿಸಿಕೊಳ್ಳದೆ ತನ್ನ ಮಾತೇ ನಡೆಯಬೇಕು ಅನ್ನುವ ಹಾಗೆ ಮಾತನಾಡುತ್ತಾನೆ.
ಇನ್ನು ಶಾರ್ವರೀ ಬಳಿಗೆ ಬರುತ್ತಾಳೆ ಪೂರ್ಣಿಮಾ ..ಶಾರ್ವರೀ ಬಹಳ ದುಃಖದಲ್ಲಿ ಇರುವ ಹಾಗೆ ಇರುತ್ತಾಳೆ. ಇದನ್ನು ನೋಡಿದ ಪೂರ್ಣಿಮಾ ಶಾರ್ವರೀ ಬಳಿ ಬಂದು ಅತ್ತೆ ನೀವು ಯಾವುದೇ ತಪ್ಪು ಮಾಡುವುದು ಇಲ್ಲ ಎಂದು ಅಂದುಕೊಂಡು ಇದ್ದೆ, ನೀವು ತೆಗೆದುಕೊಂಡ ಯಾವ ನಿರ್ಧಾರಕ್ಕೂ ನಾವು ಅಡ್ಡಿ ಬಂದವರೇ ಅಲ್ಲ, ಆದರೆ ಈ ನಿರ್ಧಾರ ನನಗೆ ಯಾಕೋ ಸರಿ ಎಂದು ಅನ್ನಿಸಲೇ ಇಲ್ಲ, ನಾಳೆ ಮನೆಯಲ್ಲಿ ಶುಭ ಕಾರ್ಯ ಇದೆ ಆದರೆ ಮಾವನಿಗೆ ಈ ಬಗ್ಗೆ ಏನು ತಿಳಿದೇ ಇಲ್ಲ, ಮಾವನ ಬಳಿ ಒಂದು ಮಾತು ಹೇಳಿ ಇಂಥ ನಿರ್ಧಾರ ತೆಗೆದುಕೊಳ್ಳಬಹುದಾಗಿತ್ತು ಎಂದು ಹೇಳುತ್ತಾಳೆ.
ನಿನಗೆ ಕೂಡ ಹೇಳಬಹುದಾಗಿತ್ತು ಪೂರ್ಣಿಮಾ, ಬಾ ಈಗಲೂ ನಾವು ಒಟ್ಟಿಗೆ ಕರೆ ಮಾಡೋಣ ಎಂದು ಹೇಳುತ್ತಾಳೆ. ಬಳಿಕ ಮಾಧವನಿಗೆ ಕರೆ ಮಾಡುತ್ತಾರೆ. ಮಾಧವ ಸ್ಕೂಟರ್ ನಲ್ಲಿ ಹೋಗುತ್ತಾ ಇರುವಾಗ ಕರೆ ಬರುತ್ತದೆ. ಮಾಧವ ಕರೆ ಸ್ವೀಕರಿಸಲು ಸ್ಕೂಟರ್ ನಿಲ್ಲಿಸುತ್ತಾರೆ. ಇದನ್ನು ಕಂಡ ದತ್ತ ಕಿಡಿ ಕಿಡಿ ಎನ್ನುತ್ತಾನೆ .. ಏನಿದು ಇಲ್ಲಿ ಎಲ್ಲ ಗಾಡಿ ನಿಲ್ಲಿಸಿ ಬಿಟ್ಟೆ ಫೋನ್ ನನಗೆ ಬರುವುದು ಇಲ್ವಾ .. ಎಲ್ಲರೂ ನಮಗಾಗಿ ಕ್ಲಬ್ ನಲ್ಲಿ ಕಾಯುತ್ತಾ ಇರುತ್ತಾರೆ .. ನಾವು ಹೋಗೋಣ ಎಂದಾಗ ಮಾಧವ ಕರೆ ಸ್ವೀಕರಿಸದೆ ಹೋಗುತ್ತಾರೆ..
ಇನ್ನೂ ಕ್ಲಬ್ ನಲ್ಲಿ ಚೆಸ್ ಪಂದ್ಯಕ್ಕೆ ಶೇಷ ಎಲ್ಲಾ ತಯಾರಿ ಮಾಡಿಕೊಂಡು ಇರುತ್ತಾನೆ. ಮಾಧವ ನ್ನು ಕಂಡ ಕ್ಲಬ್ ಮಂದಿಗೆ ಬಹಳ ಖುಷಿ ಆಗುತ್ತದೆ. ಮಾಧವನ ಬಳಿ ಸೆಲ್ಪಿ ಕೇಳಿಕೊಂಡು ಬರುತ್ತಾರೆ. ಆದರೆ ಇದೆಲ್ಲವನ್ನೂ ನೋಡಿದ ದತ್ತಗೆ ಬಹಳ ಕೋಪ ಬರುತ್ತದೆ ಹಾಗೆಯೇ ದತ್ತನ ಹಿಂದೆ ಯಾರು ಇರಾದ್ದನ್ನು ಕಂಡು ಬೇಸರ ಹಾಗೂ ಕೋಪ ಎರಡು ಆಗುತ್ತದೆ.


Click it and Unblock the Notifications











