Srirasthu Shubhamasthu: ಮದುವೆ ಮನೆಯಿಂದ ಮಾಧವ ನಾಪತ್ತೆ; ಮದುವೆಗೆ ಮಕ್ಕಳೇ ಅಡ್ಡಿ ಆಗುತ್ತಾರಾ?
ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಧಾರವಾಹಿ ನೋಡುಗರಿಗೆ ಮಾತ್ರ ಬಹಳ ಖುಷಿ ನೀಡುತ್ತಿದೆ. ಇದೀಗ ತುಳಸಿ ಹಾಗೂ ಮಾಧವನ ಮದುವೆ ಯಾವುದೇ ಅದ್ದು ಬಾರದ ಹಾಗೆ ನಡೆದರೆ ಸಾಕು ಎಂದು ಎಲ್ಲರೂ ಆಶಿಸುತ್ತಾ ಇರುತ್ತಾರೆ. ಇಬ್ಬರ ಮೇಲೆ ಅದ್ಯಾರ ಕಣ್ಣು ಕೂಡ ಬೀಳ ಬಾರದು ಎಂದು ಎಲ್ಲರೂ ಯೋಚನೆ ಮಾಡುತ್ತಾ ಇರುತ್ತಾರೆ.
ದತ್ತ ನಿಗೆ ವಯಸ್ಸಾಗುತ್ತಾ ಇದ್ದ ಹಾಗೆ ಆರೋಗ್ಯ ದಲ್ಲಿ ಕೊಂಚ ಏರು ಪೇರು ಆಗುತ್ತದೆ. ಆ ವೇಳೆ ದತ್ತ ಗಮನದಲ್ಲಿ ಇರೋದು ಒಂದೇ ನಾನು ಬದುಕಿ ಇರುವವರೆಗೂ ತುಳಸಿಯನ್ನು ಆಕೆಯ ಮಕ್ಕಳು ಸ್ವಲ್ಪ ಚೆನ್ನಾಗಿ ನೋಡಿಕೊಳ್ಳುತ್ತಾ ಇರಬಹುದು. ಆದರೆ ನಾನು ಸತ್ತ ಬಳಿಕ ತುಳಸಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬುವುದು ಬಹು ದೊಡ್ಡ ಅನುಮಾನವಾಗಿದೆ ದತ್ತನಿಗೆ.

ಇದೀಗ ದತ್ತ ಮಾತ್ರ ತುಳಸಿ ಹಾಗೂ ಮಾಧವನ ಮದುವೆ ಮಾಡಲು ಹೊರಟಿದ್ದಾರೆ ತುಳಸಿ ಬಳಿ ಮಾಧವ ಮನ ಬಿಚ್ಚಿ ಮಾತನಾಡಿದ್ದಾರೆ.. ಆದರೆ ತುಳಸಿ ಗೆ ಮಾಧವನ ಮನದಲ್ಲಿ ನನ್ನ ಮೇಲೆ ಪ್ರೀತಿ ಇದೆ ಎಂದು ಗೊತ್ತಾದಾಗ ಆಕೆಗೆ ಮಾತ್ರ ತಡೆಯಲಾರದಷ್ಟು ದುಃಖ ಬರುತ್ತದೆ. ಮದುವೆ ಆಗುವುದು ಇಲ್ಲ .. ನನ್ನ ಮಕ್ಕಳ ಸಲುವಾಗಿ ನಾನು ಮದುವೆ ಆಗುವುದಿಲ್ಲ.. ಮದುವೆ ಆದರೆ ಅವರಿಗೆ ನಾನು ಮೋಸ ಮಾಡಿದ ಹಾಗೆ ಎಂದುಕೊಂಡು ಮನದಲ್ಲಿ ಗಟ್ಟಿ ನಿರ್ಧಾರ ಮಾಡಬೇಕು ಎನ್ನುವಷ್ಟರಲ್ಲಿ ಮಾವ ದತ್ತ ಮದುವೆ ಮಾಡೆ ಬಿಡೋಣ ಇಂದೆ ಎಂದು ತೀರ್ಮಾನ ಮಾಡಿಬಿಟ್ಟಿರುತ್ತಾರೆ
ಇನ್ನೂ ಈ ತೀರ್ಮಾನದಿಂದ ತುಳಸಿ ಗೆ ಸಿಡಿಳೆರಗಿದಷ್ಟು ನೋವು ಆಗುತ್ತದೆ.. ಇನ್ನೂ ಎನು ಮಾತನಾಡದೆ ಮಾವನ ಮಾತಿಗೆ ಒಪ್ಪಿಗೆ ನೀಡಲು ಆಗದೆ ದಿಕ್ಕೇ ತೋಚದ ಹಾಗೆ ಆಗುತ್ತದೆ. ಇನ್ನೂ ಮಾವನ ಆಸೆಯಂತೆ ಮದುವೆಗೆ ಒಪ್ಪಿಗೆಯನ್ನು ನೀಡುತ್ತಾಳೆ. ಇನ್ನೂ ಇದನ್ನೇ ಕಾಯುತ್ತಿದ್ದ ಮಾಧವ ಮಾತ್ರ ಬಹಳ ಖುಷಿ ಪಡುತ್ತಾನೆ..
ದತ್ತನ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾನೆ. ದತ್ತ ನಿಗೆ ಮಾತ್ರ ಬಹಳ ಖುಷಿ ಆಗುತ್ತದೆ ದತ್ತ ಮಾಧವನ ಬಳಿ ಹೇಳುತ್ತಾರೆ ..ಮಾಧವ ನನ್ನ ಮಗಳನ್ನು ಚೆನ್ನಾಗಿ ನೋಡಿಕೋ ಎಂದು ಹೇಳುತ್ತಾರೆ . ಇತ್ತ ಮದುವೆ ಮನೆಯಲ್ಲಿ ಮಾತ್ರ ಮಾಧವ ಇಲ್ಲದನ್ನು ನೋಡಿದ ಅಭಿ ಕೋಪಗೊಂಡು ಇರುತ್ತಾನೆ . ಎಲ್ಲಿ ಹೋದರೂ ನನ್ನ ತಂದೆ . ಇವತ್ತು ನನ್ನ ಮದುವೆ ಎಲ್ಲಿಯೂ ಹೋಗಬಾರದು ಎಂದು ಹೇಳಿದ್ದೆ ಎಂದು ಜೋರು ಜೋರಾಗಿ ಮಾತನಾಡುತ್ತಾ ಇರುವಾಗ ಅವಿ ಹಾಗೂ ಜನಾರ್ಧನ್ ಮಾತನಾಡದೆ ಸುಮ್ಮನೆ ಇರುತ್ತಾರೆ.
ಇನ್ನೂ ಪೂರ್ಣಿಮಾ ಮಾತ್ರ ಈ ಶುಭ ಕಾರ್ಯಕ್ಕೆ ಮಾವನನ್ನು ಕರೆದುಕೊಂಡು ಬಂದೆ ಬರುತ್ತೇನೆ ಎಂದು ಹುಡುಕಲು ಹೊರಡುತ್ತಾರೆ. ಇತ್ತ ಸಮರ್ಥ್ ತನ್ನ ತಾಯಿ ಎಲ್ಲಿದ್ದಾರೆ ತಾತ ಎನು ಮಾಡಲು ಹೊರಟಿದ್ದಾರೆ ಎಂದು ಯೋಚನೆ ಮಾಡುತ್ತಾ ಇರುತ್ತಾರೆ . ಇನ್ನೂ ಮದುಮಗಳಾಗಿ ತುಳಸಿಯನ್ನು ಸಿರಿ ಸಿಂಗಾರ ಮಾಡುತ್ತಾಳೆ.
ಅತ್ತೆ ಮದುವೆ ಮಾಡಲು ಆಕೆ ಕೂಡ ತುದಿಗಾಲಿನಲ್ಲಿ ನಿಂತಿರುತ್ತಾರೆ.. ಇನ್ನೂ ಹಸೆಮಣೆ ಮೇಲೆ ಕುಳಿತ ತುಳಸಿ ಮಾಧವ ನ ಮದುವೆ ನಡೆಯುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











