Srirasthu Shubhamasthu: ಮಗಳ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದ ತುಳಸಿ!

By ಪೂರ್ವ

ದತ್ತಣ್ಣನ ಮನೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಊಟ ಮಾಡುತ್ತಾ ಇರುತ್ತಾರೆ. ಈ ವೇಳೆ ದತ್ತ ಕೆಫೆಯ ಗೆಲುವಿನಲ್ಲಿ ನಡೆದ ವಿಚಾರವನ್ನು ಹಾಗೆಯೇ ತಾನು ನಡೆದುಕೊಂಡ ರೀತಿಯನ್ನು ಗೆಳೆಯ ಶೇಷುಗೆ ಹೇಳಿಕೊಳ್ಳುತ್ತಿರುತ್ತಾನೆ. ಸಿರಿ ಸಮರ್ಥ್ ಇನ್ನೂ ಕೂಡ ಬಂದಿಲ್ಲ ಅಂತ ಅಸಮಧಾನವಾಗಿರುತ್ತಾಳೆ. ಅಷ್ಟರಲ್ಲಿ ಸಮರ್ಥ ಸಿಹಿ ತೆಗೆದುಕೊಂಡು ಬರುತ್ತಾನೆ. ದತ್ತ ಗೆದ್ದಿದ್ದಕ್ಕೆ ಸ್ವೀಟ್ ತರಿಸಿರುತ್ತಾನೆ. ಸಮರ್ಥ್ ತಡವಾಗಿ ಬರಲು ಕಾರಣ ನಂದಿನಿ. ನಂದಿನಿಯ ಜೊತೆ ಮಾತನಾಡುತ್ತಿದ್ದರಿಂದ ಸಮರ್ಥ್ ಸ್ವಲ್ಪ ತಡವಾಗಿ ಬರುತ್ತಾನೆ ಇದನ್ನು ಕೇಳಿದ ಸಿರಿ ಮುಖ ಬಾಡಿ ಹೋಗುತ್ತದೆ.

ಪಾಪ ಸಮರ್ಥ್‌ಗೆ ನಂದಿನಿ ಆಟ ಇನ್ನೂ ಗೊತ್ತಾಗಿಲ್ಲ. ಪೂರ್ಣಿಮ ಬೇರೆ ತರಹ ಸಂಭ್ರಮ ಆವರಣೆ ಮಾಡುತ್ತ ಇರುತ್ತಾಳೆ. ರೂಮನ್ನೆಲ್ಲಾ ಅಲಂಕಾರ ಮಾಡಿ ಪ್ರೀತಿಯಿಂದ ಅವಿಗೆ ಥ್ಯಾಂಕ್ಸ್ ಹೇಳುತ್ತಾಳೆ. ಇನ್ನೊಂದು ಕಡೆ ಕೋಪಗೊಂಡ ಅಭಿಯನ್ನು ಶಾರ್ವರಿ ಸಮಾಧಾನ ಮಾಡುತ್ತಾಳೆ. ಸಮಾಧಾನ ಮಾಡುವ ನೆಪದಲ್ಲಿ ಇನ್ನೂ ಸ್ವಲ್ಪ ಚುಚ್ಚಿ ಮಾತನಾಡುತ್ತಾಳೆ.

Kannada serial Srirasthu Shubhamasthu written update on 13th April

ಮಾಧವನ ಮೇಲೆ ಇನ್ನೂ ಕೋಪ ಬರುವ ಹಾಗೆ ಮಾಡುತ್ತಾಳೆ. ಮಹೇಶನಿಗೆ ಕೆಫೆಯಲ್ಲಿ ನಡೆದದ್ದೆಲ್ಲ ಹೇಳುತ್ತಿರುವಾಗ, ಪಾಪಮ್ಮ ಬಂದು ಗೆಲುವಲ್ಲಿ ಅವಿಯ ಪಾತ್ರವನ್ನು ತಿಳಿಸುತ್ತಾರೆ. ಅಭಿ ಬೇಸರ ಮಾಡಿಕೊಂಡಿರುವುದು ಅಷ್ಟೊಂದು ಆ ಬಗ್ಗೆ ಯೋಚನೆ ಮಾಡಲಿಲ್ಲ ಆದರೆ ಅವಿ ಕೆಫೆ ಉಳಿಸಿಕೊಳ್ಳಲು ಮಾಡಿದ ಸಹಾಯವನ್ನು ಮಾತ್ರ ಮಾಧವ ನೆನಪು ಮಾಡಿಕೊಂಡು ಖುಷಿ ಪಡುತ್ತಾನೆ.

ದತ್ತ ಪೂಜೆಯ ನಂತರ ತುಳಸಿ ಬಳಿ ಹಣ ನೀಡಲು ಕೊನೆಯ ದಿನ ಸಂಧ್ಯಾ ಬಳಿ ಹಣ ಕೇಳಲು ಹೇಳುತ್ತಾನೆ. ಹಾಗೆಯೇ ತುಳಸಿ ಸಂಧ್ಯಾ ಬಳಿ ಹಣ ಕೇಳಿದಾಗ ಆಕೆ ಹೇಳಿದ ಉತ್ತರ ಕಂಡು ತುಳಸಿ ಶಾಕ್ ಆಗುತ್ತಾಳೆ. ದತ್ತ ಹೇಳಿದ ಹಾಗೆಯೇ ಆಕೆಗೆ ತನ್ನ ಮಗಳ ಬಣ್ಣ ಅರಿವಾಗುತ್ತದೆ .

ಪಾಪಮ್ಮ ತಿಂಡಿಗೆ ಸ್ವೀಟ್ ಕೂಡ ಮಾಡಿದ್ದಾರೆ ಅಂತ ಗೊತ್ತಾಗಿ ಅಭಿ ಸಿಡಿದೇಳುತ್ತಾನೆ. ಎಲ್ಲರೂ ನನ್ನ ಸೋಲನ್ನ ನೋಡಿ ಅವಮಾನ ಮಾಡ್ತಿದ್ದಾರೆ ಎಂಬುದು ಅವನ ಅನಿಸಿಕೆ. ಅವನು ಪಾಪಮ್ಮನನ್ನು ಕೆಟ್ಟದಾಗಿ ಮಾತನಾಡಿಸಿದ್ದಕ್ಕೆ ಮಾಧವ್ ಆಕ್ಷೇಪಣೆ ಮಾಡುತ್ತಾಮೆ. ಅಭಿ ವರ್ತನೆ ನೋಡಿ ಅವಿ ಬಯ್ಯುತ್ತಾನೆ.

Kannada serial Srirasthu Shubhamasthu written update on 13th April

ಇದನ್ನು ನೋಡಿದ ಮನೆ ಮಂದಿಗೆ ಬಹಳ ಖುಷಿ ಆಗುತ್ತದೆ. ಮಾಧವನಿಗೆ ತನ್ನ ಮಕ್ಕಳು ದೂರ ಆಗಿ ಬಿಟ್ಟರು ಎನ್ನುವ ಕೊರಗು ಬಹಳವಿತ್ತು. ಆದರೆ ಮಾಧವ ಅವರ ಮೊದಲ ಮಗ ಮಾತ್ರ ಕೆಫೆ ಉಳಿಸಿಕೊಡುವಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದ. ಈ ವಿಚಾರ ಪಾಪಮ್ಮಗೆ ಪೂರ್ಣಿಮಗೆ ತಿಳಿದಿರುತ್ತದೆ. ಪೂರ್ಣಿಮಾ ತನ್ನ ಗಂಡನ ನಡವಳಿಕೆ ಬಗ್ಗೆ ಬಹಳ ಖುಷಿ ಪಡುತ್ತಾಳೆ.

ಇನ್ನು ಪಾಪಮ್ಮ ಮರೆಯಲ್ಲಿ ನಿಂತುಕೊಂಡು ಖುಷಿ ಪಡುತ್ತಾ ಇರುತ್ತಾಳೆ. ಮಾಧವ ಕೂಡ ಬಹಳ ಖುಷಿ ಪಡುತ್ತಾನೆ. ಚಿಕ್ಕ ಮಗ ಜನಾರ್ಧನ್ ಮಾತು ಕೇಳಿ ನನ್ನ ಎದುರು ಹಾಕಿಕೊಂಡು ಇರಬಹುದು ಆದರೆ ಒಂದಲ್ಲ ಒಂದು ದಿನ ಆತನಿಗೆ ಅರ್ಥ ಆಗುವ ಎಲ್ಲ ಲಕ್ಷಣ ಕಂಡು ಬರುತ್ತದೆ ಎಂದು ಮಾಧವ ಮನದಲ್ಲಿ ಹೇಳಿಕೊಳ್ಳುತ್ತಾನೆ.

More from Filmibeat

English summary
Kannada serial sri rastu shubha mastu written update on 13th April.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X