ಮಕ್ಕಳಿಗೆ ಪ್ರೇಮಿಗಳ ದಿನದ ಸರ್ಪ್ರೈಸ್ ನೀಡಿದ ಮಾಧವ ತುಳಸಿ!
ಇದೀಗ ಎಲ್ಲರೂ ವ್ಯಾಲೆಂಟೈನ್ಸ್ ಡೇ ಮೂಡ್‌ನಲ್ಲಿದ್ದಾರೆ. ಅವಿ, ಸಿರಿ ಹಾಗೂ ಪೂರ್ಣಿಮಾ ಇರುವಲ್ಲಿಗೆ ಬಂದು ಅಲ್ಲಿರುವ ಅರೇಂಜ್‌ಮೆಂಟ್ ನೋಡಿ ಇವರಿಬ್ಬರೂ ಸೇರಿ ಮಾಡಿರಬೇಕು ಎಂದು ಹೇಳಿ ಬಹಳ ಖುಷಿಪಡುತ್ತಾನೆ. ಅಷ್ಟರಲ್ಲಿ ಸಮರ್ಥ್ ಅಲ್ಲಿಗೆ ಬರುತ್ತಾನೆ. ಅಲ್ಲಿ ಅವರೆಲ್ಲರನ್ನೂ ನೋಡಿ ಇನ್ನೂ ಖುಷಿ ಪಡುತ್ತಾನೆ. ಇನ್ನು ಸಮರ್ಥ್ ಹಾಗೂ ಸಿರಿಯನ್ನು ನೋಡಿದ ಅವಿ ಪೂರ್ಣಿ ಬಳಿ ಅವರಿಬ್ಬರೂ ಇಲ್ಲಿ ಖುಷಿ ಆಗಿ ಇರಲಿ ನಾವು ನಮ್ಮ ಟೇಬಲ್ ಗೆ ಹೋಗೋಣ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪೂರ್ಣಿಮಾ ಅಲ್ಲಿಂದ ತೆರಳುತ್ತಾಳೆ. ಇನ್ನು ಸಮರ್ಥ್ ಸಿರಿ ಬಹಳ ಖುಷಿಯಲ್ಲಿ ಮಾತನಾಡುತ್ತಾ ಇರುವಾಗ ಸಮರ್ಥ್ ಇವತ್ತು ವ್ಯಾಲೆಂಟೈನ್ ಡೇ ಅಂತ ನನಗೆ ಗೊತ್ತೇ ಇರಲಿಲ್ಲ, ನೀನು ಇದೆಲ್ಲ ಅರೇಂಜ್ ಮಾಡಿರುವುದನ್ನು ನೋಡಿ ನನಗೆ ಖುಷಿ ಆಯಿತು ಎಂದೆಲ್ಲ ಹೇಳಿದಾಗ ಸುಮ್ಮನೆ ಆಗುತ್ತಾರೆ.
ಆದರೆ ಸಿರಿ ನಾನು ಇದೆಲ್ಲ ಅರೇಂಜ್ ಮಾಡಿರುವುದು ನೀನು ಎಂದುಕೊಂಡೆ ಎಂದಾಗ ಅಲ್ಲಿಗೆ ಬಂದ ಮ್ಯಾಗಿ ನಾನಲ್ಲ ಎನ್ನುತ್ತಾಳೆ. ಇದನ್ನು ಕೇಳಿದ ಅವರಿಬ್ಬರಿಗೂ ಶಾಕ್ ಆಗುತ್ತದೆ. ತುಳಸಿ ಕೊಟ್ಟ ಗಿಫ್ಟ್ ಅನ್ನೂ ಅವರಿಗೆ ಕೊಟ್ಟು ಅಲ್ಲಿಂದ ಮ್ಯಾಗಿ ಹೋಗುತ್ತಾಳೆ. ಇತ್ತ ಅವಿ ಕೂಡ ಪೂರ್ಣಿಮಾಗೆ ಡೈಮಂಡ್ ರಿಂಗ್ ಗಿಫ್ಟ್ ಕೊಡುತ್ತಾನೆ. ಪೂರ್ಣಿಮಾ ಅವಿ ಬಳಿ ಮಗು ವಿಚಾರದಲ್ಲಿ ನೀವು ತುಂಬಾ ಕುಗ್ಗಿ ಹೋಗಿದ್ದೀರಿ, ನಿಮ್ಮ ಸಂತೋಷವನ್ನು ನಾನು ನೋಡಿರಲಿಲ್ಲ ಆದರೆ ಇದೀಗ ನೀವು ಖುಷಿ ಆಗಿರುವುದನ್ನು ನೋಡಿ ನನಗೆ ಸಂತಸ ಆಗಿದೆ ಎಂದು ಹೇಳುತ್ತಾಳೆ.

ಪೂರ್ಣಿಮಾ ಬಳಿ ನಿಜ ಹೇಳಿದ ಸರ್ವೆಂಟ್
ಇದನ್ನು ನೋಡಿದ ಅವಿ ಕೂಡ ಮಾತನಾಡದೆ ಸುಮ್ಮನೆ ಇರಬೇಕಾದರೆ ಅವಿಗೆ ಕರೆ ಬರುತ್ತದೆ. ಆ ವೇಳೆ ಅಲ್ಲಿಗೆ ಬಂದಾತ ಪೂರ್ಣಿಮಾ ಬಳಿ ಇದೆಲ್ಲ ರೆಡಿ ಮಾಡಿದ್ದು ಮಾಧವ ಸರ್ ಹಾಗೂ ತುಳಸಿ ಮೇಡಂ ಎಂದು ಹೇಳುತ್ತಾನೆ. ಬಳಿಕ ತುಳಸಿ ಮಾಡಿಕೊಟ್ಟ ಸಿಹಿಯನ್ನು ಅವರಿಬ್ಬರಿಗೆ ಬಡಿಸುತ್ತಾನೆ. ಅದನ್ನು ನೋಡಿ ಬಹಳ ಖುಷಿ ಪಡುತ್ತಾನೆ. ತುಳಸಿ ಮನೆಯಲ್ಲಿ ಒಬ್ಬಳೇ ಇರಬೇಕಾದರೆ ಯಾರೋ ಬಂದು ಕದ ತಟ್ಟಿದ ಹಾಗೆ ಆಗುತ್ತದೆ. ಬಾಗಿಲು ತೆಗೆದು ನೋಡಬೇಕಾದರೆ ಅದು ಸಂದ್ಯಾ. ಆಕೆಯನ್ನು ನೋಡಿ ತುಳಸಿಗೆ ಆತಂಕ ಆಗುತ್ತದೆ. ಆದರೆ ಆಕೆ ಮುದುಕ ಮನೆಯಲ್ಲಿ ಇದ್ದಾನ ಎಂದೆಲ್ಲ ಕೇಳಿದಾಗ ಅವರು ಇಲ್ಲ ಎಂದು ಹೇಳುತ್ತಾಳೆ.

ತನ್ನ ಕಷ್ಟವನ್ನು ಅಮ್ಮನ ಬಳಿ ಹೇಳಿಕೊಂಡ ಸಂಧ್ಯಾ
ಬಳಿಕ ಅಳಿಯಂದಿರು ಎಲ್ಲಿ ಎಂದು ಕೇಳಿದಾಗ ಮನೆಯ ಹೊರಗೆ ನಿಂತುಕೊಂಡಿರುವುದನ್ನು ಕಂಡು ಒಳಗೆ ಕರೆಯುತ್ತಾಳೆ. ಆದರೆ ಆತ ತಾತನ ಭಯಕ್ಕೆ ಹೊರಗಡೆಯೇ ಇದ್ದ. ಇನ್ನು ಜುಗ್ಗ ತಮ್ಮ ಬಳಿಯಿಂದ ದುಡ್ಡು ಖರ್ಚಿಗೂ ಕೊಡದ ಹಾಗೆ ಎಲ್ಲಾ ತೆಗೆದುಕೊಂಡು ಹೋಗುತ್ತಾ ಇದ್ದಾನೆ, ನಮಗೆ ಖರ್ಚಿಗೂ ಕಾಸು ಇಲ್ಲ ಎಂದು ಬೇಸರದಿಂದ ಹೇಳ್ತಾಳೆ. ತುಳಸಿ ಆಕೆಗೆ ಖರ್ಚಿಗೆ ಕಾಸು ಕೊಡುತ್ತಾಳೆ. ಅದರಲ್ಲೂ ಮಿಕ್ಕಿದ್ದೆಲ್ಲವನ್ನು ಕೊಟ್ಟರೂ ಸಂದ್ಯ ಇಷ್ಟೇನಾ ಎಂದು ಹೇಳುತ್ತಾಳೆ. ಇವತ್ತಿಗೆ ಇಷ್ಟು ಸಾಕು ನಾಳೆಗೆ ಇನ್ನೂ ಬೇಕು ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಬಾಗಿಲ ಬಳಿ ಬಂದು ನಿಂತ ತುಳಸಿ ಮಗಳು ಹೋಗುವುದನ್ನು ನೋಡುತ್ತಾ ನಿಂತಿರುತ್ತಾಳೆ.

ಪಾರ್ಕ್‌ಗೆ ಬಂದ ದತ್ತ
ಇನ್ನು ದತ್ತ ಮಾತ್ರ ಪಾರ್ಕ್ ನಲ್ಲಿ ಪತ್ರ ಬರೆದಾಕೆಯನ್ನು ಹುಡುಕುತ್ತಾ ಇರುತ್ತಾನೆ. ಜುಬ್ಬ ಪೈಜಾಮ ಎಲ್ಲಾ ಹಾಕಿ ಸಖತ್ ಆಗಿ ಕಾಣಿಸುತ್ತ ಇರುತ್ತಾನೆ. ಆತನನ್ನು ಹಿಂಬಾಲಿಸಿಕೊಂಡು ಶೇಷ ಕೂಡ ಬರುತ್ತಾನೆ. ದತ್ತನ ಬಳಿ ಒಂದು ಹುಡುಗಿ ಬಂದು ಸೈಡ್ ಬಿಡು ತಾತ ಎಂದು ಹೇಳಿದರೆ ಇನ್ನೊಬ್ಬಳು ಮುದುಕಿ ಬಂದು ಟೈಮ್ ಎಷ್ಟಾಯಿತು ಎಂದೆಲ್ಲ ಕೇಳುತ್ತಾ ಇರುತ್ತಾರೆ. ಅವರೆಲ್ಲ ಹೋದ ಬಳಿಕ ಅಲ್ಲಿಗೆ ಬಂದ ದತ್ತ ಸರಸು ಪತ್ರಕ್ಕಾಗಿ ಪಾರ್ಕ್‌ಗೆ ಬಂದ್ಯೋ ಎಂದೆಲ್ಲ ಹೇಳಿ ನಗುತ್ತಾನೆ. ಆಗ ದತ್ತಗೆ ತಿಳಿಯುತ್ತದೆ ಇದೆಲ್ಲ ಶೇಶನದ್ದೆ ಕಿತಾಪತಿ ಎಂದು. ಶೇಶನನ್ನು ಓಡಿಸಿಕೊಂಡು ಕೋಲಿನಲ್ಲಿ ಹೊಡೆಯಲು ಹೋಗುತ್ತಾನೆ.


Click it and Unblock the Notifications











