Srirasthu Shubhamasthu: ಸಿರಿಗೆ ಮೂಡಿದೆ ಅನುಮಾನ; ಸಿರಿ - ಸಮರ್ಥ್ ಫಾಲೋ ಮಾಡುತ್ತಿರುವುದಾದರೂ ಯಾರು?

By Poorva

ದತ್ತ ಮಾಧವನನ್ನು ನೋಡಿದರೆ ಮೊದಲು ಸಿಡುಕುತ್ತಿದ್ದ ಆದರೆ ಇದೀಗ ಬಹಳ ಆತ್ಮೀಯ ಆಗಿ ಬಿಟ್ಟಿದ್ದಾನೆ. ಚಪ್ಪಲಿ ಕಳ್ಳ, ಚಪ್ಪಲಿ ಕಳ್ಳ ಎಂದು ಹೇಳುತ್ತ ಮಾಧವನನ್ನು ಆಗಾಗ ಕರೆಯುತ್ತಾನೆ ದತ್ತ.‌ಮಾಧವ ಮನೆಗೆ ಹೋಗದೆ ದತ್ತನ ಜೊತೇನೆ ಇರುತ್ತಾನೆ. ದತ್ತಗೆ ಜ್ವರ ಶುರು ಆಗಿದ್ದೇ ತಡ ಆತನನ್ನು ಕಂಟ್ರೋಲ್ ಮಾಡಲು ಯಾರಿಂದಲೂ ಸಾಧ್ಯ ಇರಲಿಲ್ಲ, ಆ ಬಳಿಕ ದತ್ತ ಮಾಧವನನ್ನು ನಿಲ್ಲಲು ಹೇಳುತ್ತಾನೆ.

ಇದನ್ನೆಲ್ಲ ನೋಡಿದ ಶೇಷ ತುಳಸಿ ಜೊತೆ ತುಳಸಿ ದತ್ತ ಹುಷಾರಿಲ್ಲದ ಸಮಯದಲ್ಲಿ ನಿನ್ನ ಎಷ್ಟು ಗೋಳು ಹೊಯ್ದುಕೊಳ್ಳುತ್ತಾ ಇದ್ದರು, ಆದರೆ ಇವತ್ತು ಮಾಧವ ಅವರು ತಗಲಾಕಿ ಕೊಂಡರು ಎನ್ನುತ್ತಾನೆ. ಮುಂಚೆ ಮಾಧವ ಅವರನ್ನು ಕಂಡರೆ ಆಗುತ್ತಿರಲಿಲ್ಲ, ಈಗ ಅವರಿಬ್ಬರೂ ಒಂದು ಈ ದತ್ತನನ್ನು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ ಎಂದು ಹೇಳುತ್ತಾನೆ.

Kannada serial Srirasthu Shubhamasthu written update on 14th March

ತುಳಸಿ ಅಣ್ಣ ನೀವು ಇದೀಗ ಮನೆಗೆ ತೆರಳಿ ಅಮ್ಮ ನಿಮಗಾಗಿ ಕಾಯುತ್ತಾ ಇರುತ್ತಾರೆ ಎಂದು ಹೇಳಿದಾಗ ಶೇಷ ಹೊರಟು ಹೋಗುತ್ತಾನೆ. ಇನ್ನು ದತ್ತ ಮಾಧವನ ಬಳಿ ತಲೆಗೆ ಪಟ್ಟಿ ಹಾಕುವಂತೆ ಹೇಳುತ್ತಾನೆ. ಇದನ್ನು ಕೇಳಿದ ಮಾಧವ ದತ್ತನ ತಲೆಗೆ ಒದ್ದೆ ಬಟ್ಟೆ ಹಾಕುತ್ತಾನೆ. ಬಳಿಕ ಮಾತ್ರೆ ಕೊಡಲು ಮಾಧವ ದತ್ತನ ಬಳಿ ಬಂದರೆ ಮಾತ್ರೆ ತೆಗೆದುಕೊಳ್ಳದೆ ದತ್ತ ಮೊಂಡ ಹಠ ಮಾಡುತ್ತಾನೆ. ಇದನ್ನು ಕೇಳಿದ ಮಾಧವ ಸೂಪ್ ಮಾಡಿ ಕೊಡುತ್ತಾರೆ.

ಅದರಲ್ಲಿ ಮಾಧವ ದತ್ತನಿಗೆ ತಿಳಿಯದ ಹಾಗೆ ಮಾತ್ರೆ ಬೆರೆಸಿ ಕೊಡುತ್ತಾನೆ. ಇದನ್ನು ಕುಡಿದ ದತ್ತನಿಗೆ ಸಮಾಧಾನ ಆಗುತ್ತದೆ. ಇನ್ನು ತುಳಸಿ ಬಳಿ ತಮ್ಮ ಕೆಲಸ ಮಾಡಲು ದತ್ತ ಹೇಳುತ್ತಾನೆ. ತುಳಸಿ 150 ಮೈಸೂರ್ ಪಾಕ್ ಸಿಹಿಯನ್ನು ಮಾಡಲು ತಯಾರಿ ಶುರು ಮಾಡಿಕೊಂಡಿರುತ್ತಾಳೆ. ತುಳಸಿ ಮನದಲ್ಲಿ ಅದೆಷ್ಟು ನೋವು ಇದ್ದರೂ ಅದು ಯಾವುದನ್ನು ತೋರಿಸಿಕೊಳ್ಳದೆ ಏನು ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದಾಳೆ. ಈ ಬಗ್ಗೆ ತುಳಸಿ ಬಳಿ ಕೇಳಬೇಕು ಎಂದುಕೊಂಡಾಗ ದತ್ತ ಜೋರಾಗಿ ಮಾಧವನನ್ನು ಕರೆಯುತ್ತಾರೆ.

ಮಾಧವ ಪುಸ್ತಕ ಹಿಡಿದು ಓದುತ್ತಾ ಇರುತ್ತಾನೆ. ಇದನ್ನು ನೋಡಿದ ದತ್ತನಿಗೆ ನಿದ್ದೆ ಬರುವುದು ಇಲ್ಲ. ಬಳಿಕ ಅದು ಹೇಗೋ ಕೊಸರಿಕೊಂಡು ಮಲಗುತ್ತಾನರ. ಇನ್ನ ಸಿರಿ ಹಾಗೂ ಸಮರ್ಥ್ ಒಂದು ರೆಸ್ಟೋರೆಂಟ್ ಗೆ ಹೋಗುತ್ತಾರೆ.‌ಈ ಮೊದಲು ಬಹಳ ಖುಷಿಯಲ್ಲಿ ಇದ್ದ ಸಿರಿಗೆ ಶಾಕ್ ಆಗುತ್ತದೆ.‌ ತನ್ನನ್ನು ಯಾರೋ ಫಾಲೋ ಮಾಡಿಕೊಂಡು ಇರುವುದು ಗಮನಿಸಿದ ಸಿರಿಗೆ ಬಹಳ ಶಾಕ್ ಆಗುತ್ತದೆ.‌ಇದನ್ನು ಗಮನಿಸಿದ ಸಮರ್ಥ್ ಸಿರಿಗೆ ಸಮಾಧಾನ ಮಾಡುತ್ತಾನೆ. ಇನ್ನು ಫೈಯರ್ ಕ್ಯಾಂಪ್ ಬಳಿ ಕೂಡ ಹೀಗೆ ಆಗುತ್ತದೆ.

ಯಾರೋ ಹಿಂದೆಯಿಂದ ಬಂದ ಹಾಗೆ ಅನ್ನಿಸುತ್ತದೆ. ಸಿರಿಗೆ ಇದೆಲ್ಲವನ್ನೂ ಕಂಡು ಆತಂಕ ಇನ್ನೂ ಹೆಚ್ಚಾಗುತ್ತದೆ. ಬಳಿಕ ಏನು ಮಾತನಾಡದೆ ಸುಮ್ಮನಿರುತ್ತಾರೆ. ಆ ಬಳಿಕ ಸಿರಿ ಸಮರ್ಥ್ ಬಳಿ ಇರುವ ವಿಚಾರವನ್ನು ಹೇಳಿ ಬಿಡುತ್ತಾಳೆ. ಇದನ್ನು ಕೇಳಿದ ಸಮರ್ಥ್ ಸಿರಿಗೆ ಸಮಾಧಾನ ಹೇಳಿ ಬಳಿಕ ಎಂಜಾಯ್ ಮಾಡುವ ಎಂದು ಹೇಳುತ್ತಾನೆ. ಬಳಿಕ ವಾಸ್ತವಕ್ಕೆ ಬಂದ ಸಿರಿಯನ್ನು ಖುಷಿ ಪಡುತ್ತಾರೆ. ಇನ್ನು ಶಾರ್ವರಿ ಮನೆಗೆ ಬಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಬಾವ ಯಾಕೆ ಕರೆ ಸ್ವೀಕಾರ ಮಾಡಿ ಇಲ್ಲ ಎಂದು ಮೊಬೈಲ್ ಚೆಕ್ ಮಾಡುವ ವೇಳೆ ಮಾಧವ ಅವರ ಕರೆ ಬಂದಿರುವುದು ಕಾಣಿಸುತ್ತದೆ. ಆ ಬಳಿಕ ಆಕೆಯ ಮಗಳನ್ನು ವಿಚಾರಣೆ ಮಾಡುತ್ತಾಳೆ. ಆಗ ನಿಜಾಂಶ ಬೆಳಕಿಗೆ ಬರುತ್ತದೆ.

More from Filmibeat

English summary
Kannada serial sri rastu shubha mastu written updated on 14th March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X