Srirasthu Shubhamasthu: ಸಿರಿಯನ್ನು ಕಿಡ್ನಾಪ್ ಮಾಡಿದ ರೌಡಿಗಳು!

By Poorva

ಶ್ರೀರಸ್ತು ಶುಭಮಸ್ತು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸೂರೆಗೊಳ್ಳುವ ಹಾಗೆ ಮಾಡುತ್ತಿದೆ.‌ಇದೀಗ ಮಾಧವ ದತ್ತನನ್ನು ನೋಡಿಕೊಂಡು ನಿದ್ದೆ ಹೋಗಿದ್ದಾನೆ. ದತ್ತ ನನ್ನ ಬಿಟ್ಟು ಹೋಗಬೇಡ ಎಂದು ಹೇಳಿದ ಒಂದೇ ಕಾರಣಕ್ಕೆ ಮಾಧವ ಅವರನ್ನು ಬಿಟ್ಟು ಹೋಗದೆ ಸುಮ್ಮನೆ ಖುರ್ಚಿ ಮೇಲೆ ಮಲಗಿ ನಿದ್ದೆ ಹೋಗುತ್ತಾನೆ. ಇನ್ನು ತುಳಸಿ ಮಾತ್ರ ಮಾಧವನಿಗೆ ಧನ್ಯವಾದ ಹೇಳುತ್ತ ಇರುತ್ತಾಳೆ.

ಆಕೆಗೆ ಮೈಸೂರು ಪಾಕ್ ಮಾಡಲು ಒಂದು ಆರ್ಡರ್ ಬೇರೆ ಸಿಕ್ಕಿರುತ್ತದೆ. ಆದರೆ ಮಾವನಿಗೆ ಹುಷಾರ್ ಇಲ್ಲದನ್ನು ಕಂಡ ತುಳಸಿ ಕಂಗಾಲಾಗಿ ಹೋಗಿದ್ದಳು. ಆದರೆ ಮಾಧವ ದತ್ತನನ್ನು ಮಗುವಿನ ಹಾಗೆ ನೋಡಿಕೊಳ್ಳುತ್ತಾನೆ, ಇದರಿಂದ ತುಳಸಿಗೆ ಸಮಾಧಾನ ಆಗುತ್ತದೆ. ಇನ್ನು ಸಂಧ್ಯಾ ತನ್ನ ಗಂಡ ಇನ್ನೂ ಯಾಕೆ ಬರಲಿಲ್ಲ ಎಂದು ಚಡಪಡಿಸುತ್ತಾ ಇರುವಾಗ ಅಲ್ಲಿಗೆ ಆಕೆಯ ಗಂಡನ ತಂಗಿ ಬರುತ್ತಾಳೆ. ಬರುವಾಗ ನಾಲ್ಕೈದು ಡ್ರೆಸ್ ತೆಗೆದುಕೊಂಡು ಬರುತ್ತಾಳೆ. ಮರುದಿನ ಆಕೆಯನ್ನು ನೋಡಲು ಹುಡುಗನ ಕಡೆಯವರು ಪಾರ್ಕ್ ಗೆ ಕರೆದಿರುತ್ತಾರೆ.

Kannada serial Srirasthu Shubhamasthu written update on 15th March

ಯಾವ ಡ್ರೆಸ್ ಹಾಕಿಕೊಳ್ಳಬೇಕು ಎಂದು ಕೇಳುತ್ತಾ ಸಂಧ್ಯಾ ಬಳಿ ಬರುತ್ತಾಳೆ. ಅದಕ್ಕೆ ಸಂಧ್ಯಾ ಮಾತ್ರ ಇಂತಹ ಡ್ರೆಸ್ ಹಾಕಿಕೊಳ್ಳಿ ಎಂದು ಸಜೆಸ್ಟ್ ಮಾಡುತ್ತಾಳೆ. ಹಾಗೆಯೇ ನಾನು ಬರುತ್ತೇನೆ ನಿನ್ನ ಜೊತೆ ಏನು ಟೆನ್ಶನ್ ಮಾಡಿಕೊಳ್ಳಬೇಡಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆಕೆಯ ಮನಸಿಗೆ ನೆಮ್ಮದಿ ಸಿಗುತ್ತದೆ. ಇನ್ನು ಗಂಡನಿಗೆ ಫೋನ್ ಮಾಡಬೇಕು ಎಂದು ಎಷ್ಟೇ ಫೋನ್ ಹುಡುಕಿದರೂ ಆಕೆಗೆ ಫೋನ್ ಸಿಗುವುದು ಇಲ್ಲ. ಬಳಿಕ ಮನೆಯ ಒಳಗಡೆ ಎಲ್ಲಾದರೂ ಇರಬಹುದಾ ಎಂದು ಹುಡುಕುತ್ತಾ ಬರಬೇಕಾದರೆ ಜುಗ್ಗನ ಕೈಯಲ್ಲಿ ಮೊಬೈಲ್ ಕಂಡು ದಂಗಾಗುತ್ತಾಳೆ. ಆ ವೇಳೆ ತುಳಸಿ ಕೂಡ ಕರೆ ಮಾಡಿ ಮಾತನಾಡುತ್ತಾ ಇರುತ್ತಾಳೆ.‌ ಇದನ್ನೆಲ್ಲ ಕೇಳಿಸಿಕೊಂಡ ಜುಗ್ಗ ಏನು ಮಾತನಾಡದೆ ಸುಮ್ಮನೆ ನಿಂತಿರುತ್ತಾನೆ.

ಇದನ್ನು ಕಂಡ ಸಂಧ್ಯಾಗೆ ವಿಪರೀತ ಕೋಪ ಬಂದು ಮಾವ ಎಂದು ಹೇಳುತ್ತಾಳೆ. ಆ ಬಳಿಕ ಫೋನ್ ಎಳೆದು ತೆಗೆದುಕೊಂಡು ಅಮ್ಮ ನಿನ್ನ ಬಳಿ ಮತ್ತೆ ಮಾತನಾಡುತ್ತೇನೆ ಎಂದು ಹೇಳಿ ಫೋನ್ ಇಡುತ್ತಾಳೆ. ಇದನ್ನು ಕೇಳಿಸಿಕೊಂಡ ತುಳಸಿ ಮನದಲ್ಲಿ ಮಗಳು ಬ್ಯುಸಿ ಇರಬೇಕು ಹಣ ಪಡೆದುಕೊಂಡ ಬಳಿಕ ಆಕೆಗೆ ಕರೆ ಮಾಡೋಣ ಎಂದುಕೊಂಡು ಸುಮ್ಮನೆ ಆಗುತ್ಹಾಕುತ್ತಾಳೆ.ನು ಸಂಧ್ಯಾ ಮಾವನಿಗೆ ಚೆನ್ನಾಗಿ ಬೈದು ಬಾಗಿಲನ್ನು ಪಟಾರ್ ಎಂದು ಹಾಕುತ್ತಾಳೆ ಇದನ್ನು ಕೇಳಿಸಿಕೊಂಡ ದತ್ತ ಮಾತ್ರ ಮೆತ್ತಗೆ ಡೋರ್ ಹಾಕೆ ಎಂದು ಹೇಳುತ್ತಾನೆ.

ಇನ್ನು ತುಳಸಿ ಮಾಧವ ಅವರನ್ನು ಎಬ್ಬಿಸುತ್ತಾ ಇರುತ್ತಾಳೆ. ಮಾಧವ ಎದ್ದು ಕುಳಿತುಕೊಂಡು ಹೊರಡಲು ಸಿದ್ಧ ಆಗುತ್ತಾನೆ. ದತ್ತನ ಬಳಿ ಬರಲ ಎಂದು ಹೇಳಿದಾಗ ದತ್ತ ಹೇಳುತ್ತಾರೆ ನನ್ನ ಮಗನೇ ಬಂದ ಹಾಗೆ ಅನ್ನಿಸಿ ಬಿಟ್ಟಿತು ಎಂದು ಹೇಳಿದಾಗ ತುಳಸಿ ಭಾವುಕ ಆಗುತ್ತಾಳೆ.. ಬಳಿಕ ಮಾಧವ ಅಲ್ಲಿಂದ ಹೊರಟು ಹೋಗುತ್ತಾನೆ.. ಇನ್ನೂ ಪೂರ್ಣಿಮಾ ಮಾತ್ರ ಅವಿ ಜೊತೆ ಹೇಳುತ್ತಾಳೆ.

Kannada serial Srirasthu Shubhamasthu written update on 15th March

ನೀವು ನಿಶ್ಚಿತಾರ್ಥ ನಡೆಯುವಲ್ಲಿಗೆ ಹೋಗಿ ನಾನು ಬರುವುದು ಇಲ್ಲ, ಮಾವನಿಗೆ ನಿಜ ವಿಚಾರ ತಿಳಿಸಿ ಬರುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅವಿ ರಿಕ್ವೆಸ್ಟ್ ಮಾಡುತ್ತಾನೆ. ಆದರೆ ಅದಾವುದನ್ನೂ ಲೆಕ್ಕಿಸದೆ ಸುಮ್ಮನೆ ಇರುತ್ತಾರೆ. ಇನ್ನು ಸಿರಿ ಸಮರ್ಥ್ ಜಾಲಿ ಮೂಡ್‌ನಲ್ಲಿ ಇರುತ್ತಾರೆ. ಮುಂಜಾನೆ ಹೊತ್ತಿಗೆ ಸನ್ ರೈಸ್ ಅನ್ನು ನೋಡುತ್ತಾ ಕಳೆದು ಬಿಡುತ್ತಾರೆ. ರೌಡಿಗಳು ಸಿರಿ ಹಾಗೂ ಸಮರ್ಥ್ ಅನ್ನು ಫಾಲೋ ಮಾಡಿಕೊಂಡು ಬರುತ್ತಲೇ ಇರುತ್ತಾರೆ.

ಆದರೆ ಇದಾವುದೂ ಯಾರಿಗೂ ತಿಳಿದೇ ಇಲ್ಲ, ಇನ್ನೂ ಇಬ್ಬರು ಒಳ್ಳೆಯ ಮೂಡ್‌ನಲ್ಲಿ ಇರಬೇಕಾದರೆ ಸಿರಿ ತಂದೆ ಕರೆ ಮಾಡುತ್ತಾರೆ. ಆಗ ನೆಟ್‌ವರ್ಕ್ ಇಲ್ಲ ಎಂದು ಸೈಡ್‌ಗೆ ಹೋಗಿ ಮಾತನಾಡಲು ಬರುತ್ತಾರೆ. ಇದನ್ನು ಕಂಡು ರೌಡಿಗಳು ಸಿರಿಯನ್ನು ಹೊತ್ತೊಯ್ಯುತ್ತಾರೆ. ಇದನ್ನು ಕಂಡ ಸಿರಿ ಮಾತ್ರ ಭಯದಿಂದ ಚೀರಿಕೊಳ್ಳುತ್ತ ಇರುತ್ತಾಳೆ.

More from Filmibeat

English summary
Kannada serial sri rastu shubha mastu written updated on 15th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X