Srirasthu Shubhamasthu: ಭಾರದ ಮನಸ್ಸಿನಿಂದ ನಿಶ್ಚಿತಾರ್ಥಕ್ಕೆ ಬಂದ ಮಾಧವ!

By Poorva

ತುಳಸಿ ಮನೆಯಿಂದ ಹೊರಟ ಮಾಧವ ನೇರವಾಗಿ ಮನೆಗೆ ಬರುತ್ತಾನೆ. ಆಗ ಮನೆಯಲ್ಲಿ ಯಾರೂ ಇಲ್ಲದನ್ನು ಕಂಡು ಎಲ್ಲರನ್ನೂ ಕರೆಯುತ್ತಾನೆ. ಆದರೆ ಯಾರೂ ಬಾರದ್ದನ್ನು ಕಂಡು ಎಲ್ಲಿಗೆ ಹೋದರು ಇಷ್ಟು ಬೇಗ ಎಂದು ತಲೆ ಕೆಡಿಸಿಕೊಳ್ಳುತ್ತಾನೆ. ಬಳಿಕ ಮನೆಯ ಹೊರಗೆ ಬಂದಾಗ ವಾಚ್ ಮ್ಯಾನ್ ಗುಡ್ ಮಾರ್ನಿಂಗ್ ಸರ್ ಎಂದು ವಿಶ್ ಮಾಡಿ ನೀವು ಇಲ್ಲಿ ಎಂದು ಆಶ್ಚರ್ಯದಿಂದ ಕೇಳಿ ಇವತ್ತು ಅಭಿ ಸರ್ ನಿಶ್ಚಿತಾರ್ಥ ಎಲ್ಲರೂ ಹೋಗಿದ್ದಾರೆ ಎಂದು ಹೇಳುತ್ತಾನೆ. ಅದನ್ನು ಕೇಳಿದ ಮಾಧವಗೆ ಏನು ಹೇಳಬೇಕು ಎಂದು ತೋಚದೇ ಅಲ್ಲಿಯೇ ನಿಂತುಬಿಡ್ತಾನೆ.

ಬಳಿಕ ಮೆತ್ತಗೆ ಮನೆಯ ಒಳಗೆ ಹೋಗಿ ಅಳುತ್ತಾನೆ. ನನ್ನ ಮಕ್ಕಳ ಮನದಲ್ಲಿ ನಾನು ಇಲ್ಲ ಎಂದು ತಿಳಿದಿದೆ, ನನಗೆ ಅಪ್ಪನ ಸ್ಥಾನ ಇಲ್ಲ ಆದರೆ ಬೇರೆ ಯಾವುದಾದರೂ ಒಂದು ಸ್ಥಾನವನ್ನು ಅವರು ನನಗೆ ನೀಡಬಹುದಾಗಿತ್ತು ಎಂದು ಬೇಸರ ಪಟ್ಟುಕೊಳ್ಳುತ್ತಾನೆ. ನಿಶ್ಚಿತಾರ್ಥದ ಸಂಭ್ರಮದಲ್ಲಿ ಇರಬೇಕಾದ ಪೂರ್ಣಿಮಾ ಬಹಳ ಸಪ್ಪೆಯಾಗಿರುತ್ತಾಳೆ. ಇದನ್ನು ನೋಡಿದ ಆಕೆಯ ಗಂಡ ಸಮಾಧಾನ ಮಾಡುತ್ತಾನೆ. ಆದರೆ ಪೂರ್ಣಿಮಾ ಮಾವ ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ, ಫೋನ್ ತೆಗೆಯುತ್ತಾ ಇಲ್ಲ, ನನಗೆ ಆತಂಕ ಆಗುತ್ತಿದೆ ಆದರೆ ನೀವು ಮಾತ್ರ ಮದುವೆ ಎಂದೆಲ್ಲ ಮಾತನಾಡುತ್ತಾ ಕಾಲ ಕಳೆಯುತ್ತಾ ಇದ್ದೀರಾ ಎಂದೆಲ್ಲ ಹೇಳುತ್ತಾಳೆ.

Kannada serial Srirasthu Shubhamasthu written update on 16th March

ಅದನ್ನು ಕೇಳಿದ ಅವಿಗೆ ಕೊಂಚ ಕಿರಿ ಕಿರಿ ಆಗುತ್ತದೆ. ಆ ಬಳಿಕ ಅಲ್ಲಿಂದ ಹೋಗುತ್ತಾನೆ. ಇನ್ನು ಶಾರ್ವರಿ ಅಭಿ ಹುಡುಗಿ ರೂಮಿಗೆ ಹೋಗುತ್ತಾಳೆ. ಶಾರ್ವರಿ ಹೋಗುತ್ತಿದ್ದ ಹಾಗೆಯೇ ಅಭಿ ಹುಡುಗಿ ಮೇಕಪ್ ಆರ್ಟಿಸ್ಟ್ ಅನ್ನು ಹೊರಗೆ ಕಳುಹಿಸುತ್ತಾಳೆ. ಬಳಿಕ ಶಾರ್ವರಿಗೆ ಧನ್ಯವಾದ ಹೇಳುತ್ತಾಳೆ. ನೀವು ಇರದಿದ್ದರೆ ಇವತ್ತು ನನ್ನ ಅಭಿ ನಿಶ್ಚಿತಾರ್ಥ ನಡೆಯುತ್ತಾ ಇರಲಿಲ್ಲ, ಅಭಿ ನನಗೆ ಸಿಗುತ್ತಾ ಇರಲಿಲ್ಲ ಎನ್ನುತ್ತಾಳೆ.

ಈ ವೇಳೆ ಶಾರ್ವರಿ ವೇರಿ ಗುಡ್ ಹೀಗೆಯೇ ಆಕ್ಟ್ ಮಾಡು ಎಂದು ಹೇಳಿದಾಗ ಯಾರೋ ಬಾಗಿಲು ಬಡಿದ ಸದ್ದು ಆಗುತ್ತದೆ. ಇದನ್ನು ನೋಡಿದ ಶಾರ್ವರಿ ಯಾರೆಂದು ನೋಡಿದಾಗ ಪೂರ್ಣಿಮಾ ನಿಂತಿರುವುದನ್ನು ಕಂಡು ಕೊಂಚ ಶಾಕ್ ಆಗುತ್ತದೆ. ಪೂರ್ಣಿಮಾ ತನ್ನ ಅತ್ತೆಯನ್ನು ಕರೆದು ಮಾವ ಬಂದಿಲ್ಲ ಎಂದಾಗ ಶಾರ್ವರಿ ಮಾವ ಮನೆಗೆ ಬಂದಿದ್ದಾರೆ ನೀನು ಚಿಂತಿಸಬೇಡ ಎಲ್ಲಾ ಸರಿ ಹೋಗುತ್ತದೆ ಎಂದಾಗ ಸರಿ ಎಂದು ಹೇಳಿ ಮಾವನನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಮನೆಗೆ ಹೋಗುತ್ತಾಳೆ.

Kannada serial Srirasthu Shubhamasthu written update on 16th March

ಮನೆಗೆ ಹೋದ ಪೂರ್ಣಿಮಾಗೆ ಮಾಧವನ ಸ್ಥಿತಿ ನೋಡಲು ಆಗಲಿಲ್ಲ. ಮಾವ ಎಲ್ಲಿ ಹೋಗಿದ್ದೀರಿ ಎಂದೆಲ್ಲ ವಿಚಾರಣೆ ಮಾಡಿದಾಗ ಮಾಧವ ಮಗನ ನಿಶ್ಚಿತಾರ್ಥದ ಗುಂಗಲ್ಲೇ ಇರುತ್ತಾನೆ. ಬಳಿಕ ಪೂರ್ಣಿಮಾ ಜೊತೆ ಅಳುತ್ತಾನೆ. ಆ ಬಳಿಕ ಪೂರ್ಣಿಮಾ ಹೇಗೋ ಒತ್ತಾಯ ಮಾಡಿ ಕರೆದುಕೊಂಡು ಬರುತ್ತಾಳೆ. ಇನ್ನು ತುಳಸಿ ಸಿಹಿ ಮಾಡಿ ಪ್ಯಾಕ್ ಮಾಡುತ್ತಾ ಇರುತ್ತಾಳೆ. ದತ್ತ ತುಳಸಿ ಜೊತೆ ನನ್ನ ಫೋನ್ ಕೊಡು ಎಂದು ಹೇಳಿ ಭೀಗರಿಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಾನೆ. ಹಾಗೆಯೇ ಶೇಷನನ್ನು ಮನೆಗೆ ಬರಲು ಹೇಳುತ್ತಾನೆ .

ಶೇಷ ದಂಪತಿ ಸಮೇತರಾಗಿ ಬಂದು ದತ್ತನ ಆರೋಗ್ಯ ವಿಚಾರಣೆ ಮಾಡುತ್ತಾರೆ. ಬಳಿಕ ತುಳಸಿ ಅವರಿಗೆ ತಿನ್ನಲು ಸಿಹಿ ಕೊಡುತ್ತಾಳೆ. ಅದನ್ನು ತಿಂದ ಬಳಿಕ ಎಲ್ಲರಿಗೂ ಬಹಳ ಖುಷಿ ಆಗುತ್ತದೆ. ಇನ್ನು ತುಳಸಿ ನಿರಾತಂಕವಾಗಿ ಸಿಹಿಯನ್ನು ಕೊಟ್ಟು ಬರಲು ಮಾಧವನ ಮಗನ ನಿಶ್ಚಿತಾರ್ಥಕ್ಕೆ ಬರುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial sri rastu shubha mastu written updated on 16th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X