Srirasthu Shubhamasthu: ಹತ್ತಿರವಾಗ್ತಿದ್ದಾರೆ ತುಳಸಿ-ಮಾಧವ, ತುಳಸಿ ಜೀವನ ಹಾಳು ಮಾಡುತ್ತಾ ಶಾರ್ವರಿ ಕೋಪ?
ಶ್ರೀರಸ್ತು ಶುಭಮಸ್ತು ಧಾರಾವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಖುಷಿ ನೀಡುತ್ತಿದೆ. ಇದೀಗ ಶಾರ್ವರಿಗೆ ತುಳಸಿ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಎಲ್ಲಾ ನಾನು ಹೇಳಿದ ಹಾಗೆ ನಡೆಯಬೇಕು. ಯಾರು ಏನೇ ಅಂದರೂ ನಾನೇ ಈ ಮನೆಯ ಪಟ್ಟಧರಿಸಬೇಕು ಎಂಬ ಶಾರ್ವರಿ ಕನಸು ಭಗ್ನವಾಗಿದೆ. ಇತ್ತ ತುಳಸಿ ಹಾಗೂ ಮಾಧವ ಇನ್ನಷ್ಟು ಹತ್ತಿರ ಆಗಿದ್ದಾರೆ.
ತುಳಸಿ ಏನೇ ಕೆಲಸ ಮಾಡಿದರೂ ಶಾರ್ವರಿ ಮಾತ್ರ ಅದಕ್ಕೆ ವಿರೋಧವನ್ನು ವ್ಯಕ್ತ ಪಡಿಸುತ್ತಾ ಇರುತ್ತಾಳೆ. ಆದರೆ ಯಾರು ಏನೇ ಹೇಳಿದರೂ ತುಳಸಿ ಮಾತ್ರ ಯಾರ ಮಾತೂ ಕೇಳದ ಮಾಧವನ ಮರ್ಯಾದೆ ಕಾಪಾಡಿದ್ದು ಶಾರ್ವರಿಗೆ ನುಂಗಲಾಗದ ಬಿಸಿ ತುಪ್ಪದ ಹಾಗೆ ಆಗಿದೆ. ಅವರಿಬ್ಬರನ್ನು ಎಷ್ಟೇ ದೂರ ಮಾಡಲು ಹೊರಟರು ತುಳಸಿ ಮತ್ತು ಮಾಧವ ಇನ್ನಷ್ಟು ಹತ್ತಿರ ಆಗುತ್ತಿದ್ದಾರೆ.

ಇನ್ನೂ ಅಭಿ ಮದುವೆ ಹೇಗಾದರೂ ಮಾಡಿ ಮಾಡಬೇಕು. ಆತನ ಜೀವನ ನಮ್ಮಿಂದಲೇ ಹಾಳಾಗಿ ಹೋಗಿದ್ದು. ಆದರೆ ಇದೀಗ ಆತನ ಜೀವನ ಸರಿ ಪಡಿಸುವ ಹೊಣೆಯನ್ನು ನಾವು ಹೊರಬೇಕು. ಆತನಿಗೆ ಅನ್ಯಾಯ ಆಗದ ಹಾಗೆ ನೋಡಿಕೊಳ್ಳಬೇಕು ಎಂದು ತುಳಸಿ ಹೇಳುತ್ತಾರೆ.
ಮಾಧವನ ಪಾಲಿಗೆ ಉತ್ತಮ ಸ್ನೇಹಿತೆ ತುಳಸಿ
ತುಳಸಿ ಮಾತು ಕೇಳಿಸಿಕೊಂಡ ಮಾಧವ ಕೂಡ ತಲೆ ಅಲ್ಲಾಡಿಸುತ್ತ ಇರುತ್ತಾನೆ. ಹಾಗೆಯೇ ತುಳಸಿ ಬಳಿ ಮಾಧವ ಒಂದು ಮಾತು ಕೇಳಿಕೊಳ್ಳುತ್ತಾನೆ. ಯಾವತ್ತೂ ನಾವು ಸ್ನೇಹಿತರಾಗಿ ಇರೋಣ. ಮುಂಬರುವ ಸವಾಲನ್ನು ಇಬ್ಬರು ಸೇರಿ ಎದುರಿಸೋಣ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇದನ್ನು ಕೇಳಿ ತುಳಸಿಗೆ ಬಹಳ ಖುಷಿ ಆಗುತ್ತದೆ.
ತುಳಸಿ ಮೇಲೆ ಮುನಿಸಿಕೊಂಡ ಶಾರ್ವರಿ
ಇನ್ನೂ ತುಳಸಿ ಹಾಗೂ ಮಾಧವನ ಮೇಲೆ ಮುನಿಸಿಕೊಂಡ ಶಾರ್ವರಿ ತನ್ನ ಕೋಣೆಯೊಳಗೆ ಹೋಗಿ ಕೋಪದಿಂದ ಕೆಂಡಾಮಂಡಲ ಆಗುತ್ತಾಳೆ. ಕೋಪದಲ್ಲಿ ಇರುವ ಶಾರ್ವರಿ ತುಳಸಿ ಈ ಮನೆಯಲ್ಲಿ ಇರುವವರೆಗೆ ಆಕೆ ಯಾವತ್ತೂ ಸಂತೋಷವಾಗಿ ಇರುವುದನ್ನು ನಾನು ನೋಡಬಾರದು ಎಂದು ಜೋರಾಗಿ ಹೇಳುತ್ತಾಳೆ.

ಆಕೆಗೆ ನಾನು ಬಹಳ ಕಷ್ಟ ನೀಡಬೇಕು. ಇಲ್ಲವಾದರೆ ನನ್ನ ಮೇಲೆಯೇ ಸವಾರಿ ಮಾಡಲು ಬರಬಹುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಮಾಧವನ ತಮ್ಮ ಮಾತ್ರ ಶಾರ್ವರಿ ಸ್ಥಿತಿ ಕಂಡು ನಗುತ್ತಾ ಇರುತ್ತಾರೆ. ದುರಹಂಕಾರ ಇರುವ ಈಕೆಗೆ ಹೀಗೆಯೇ ಆಗಬೇಕು ಎಂದು ಅವರಿಗೆ ಕೂಡ ಅನ್ನಿಸಿರಬೇಕು. ಇನ್ನೂ ಶಾರ್ವರಿ ತುಳಸಿ ಖುಷಿಯನ್ನು ನಾನು ಕಿತ್ತುಕೊಳ್ಳುತ್ತೇನೆ. ಹಾಗೆಯೇ ಆಕೆಗೆ ಈ ಮನೆ ನರಕದ ಹಾಗೆ ಕಾಣಬೇಕು ಆ ರೀತಿ ಮಾಡುವ ಹಾಗೆ ನಾನು ಮಾಡುತ್ತೇನೆ.. ಆಕೆಯನ್ನು ಮನೆಬಿಟ್ಟು ಓಡಿದುತ್ತೇನೆ ಎಂದು ಪಣ ತೊಟ್ಟಿದ್ದಾಳೆ.


Click it and Unblock the Notifications











