Srirasthu Shubhamasthu: ಮಾಧವನ ಕೆಫೆಗೆ ಮೈನ್ ಶೆಫ್ ಆಗಿ ಬರುತ್ತಾಳಾ ತುಳಸಿ?

By Poorva

ಕೆಫೆ ಮಾಧವನ ಪಾಲಾಗಿದೆ ಈ ವಿಚಾರ ಮಾಧ್ಯಮದವರಿಗೆ ತಿಳಿಯುತ್ತದೆ. ಮಾಧವ ಚಾಲೆಂಜ್ ಹಾಕಿರುವುದು ಎಲ್ಲರಿಗೂ ತಿಳಿದಿರುತ್ತದೆ. ಇನ್ನು ಮಾಧವನನ್ನು ಇಂಟರ್ ವ್ಯೂ ಮಾಡಲು ಬಂದ ಪತ್ರಕರ್ತೆ ಬಳಿ ಮಾಧವ ಪದ್ಮ ಹಾಗೂ ಅವರ ಬಳಗ ಸಹಾಯ ಮಾಡಿದುದರ ಬಗ್ಗೆ ಹೇಳುತ್ತಾನೆ. ಹಾಗೆಯೇ ತನ್ನ ಕುಟುಂಬ ವಿಚಾರವನ್ನು ಯಾರ ಬಳಿಯೂ ಹೇಳಿಕೊಳ್ಳದೆ ಸುಮ್ಮನೆ ಇರುತ್ತಾನೆ. ಹಾಗೆಯೇ ಪದ್ಮ ಹಾಗೂ ಅವರ ಬಳಗವನ್ನು ಇಂಟರ್ ವ್ಯೂ ಮಾಡಲು ಸಲಹೆ ನೀಡುತ್ತಾನೆ.

ಇದನ್ನು ಕೇಳಿದ ಪತ್ರಕರ್ತೆ ಪದ್ಮ ಅವರ ಸಂದರ್ಶನ ಮಾಡಲು ಹೋಗುತ್ತಾರೆ. ಇನ್ನು ಅವರಿಗೆ ಬೇಕಾದ ಮಾಹಿತಿಯನ್ನು ಮ್ಯಾಗಿ ಕೊಟ್ಟು ಕಳುಹಿಸುತ್ತಾಳೆ. ತುಳಸಿ ಮನೆಗೆ ಡಬ್ಬಿ ತೆಗೆದುಕೊಂಡು ಹೋಗಲು ಬಂದಿದ್ದ ಹುಡುಗ ತಲೆ ತಿರುಗಿ ಬೀಳುತ್ತಾನೆ. ಇದನ್ನ ನೋಡಿದ ತುಳಸಿ ಬೇಗ ಹೋಗಿ ಆತನನ್ನು ಎದ್ದು ಕುಳಿತುಕೊಳ್ಳುವ ಹಾಗೆ ಮಾಡಿ ಆತನಿಗೆ ನೀರು ತೆಗೆದುಕೊಂಡು ಬರುತ್ತಾಳೆ.

https://kannada.filmibeat.com/tamil/former-cricketer-muttiah-muralitharan-birthday-biopic-movie-800-motion-poster-released-067201.html

ತುಳಸಿ ಆತನ ಬಳಿ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದಾಗ ಆತ ನನಗೆ ಐಎಎಸ್ ಆಫೀಸರ್ ಆಗಬೇಕು ನಾನು ಅದಕ್ಕಾಗಿ ಓದುತ್ತಾ ಇದ್ದೇನೆ ದಿನವಿಡೀ ಕೆಲಸ ಮಾಡುತ್ತೇನೆ ರಾತ್ರಿ ಓದುತ್ತೇನೆ ಆದ ಕಾರಣ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದೇ ಹೀಗೆ ಆಗಿದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿಗೆ ಬಹಳ ಖುಷಿ ಆಗುತ್ತದೆ. ಇನ್ನು ಮಾಧವ ಮೈನ್ ಶೆಫ್ ಹುಡುಕಾಟಕ್ಕೆ ತೊಡಗುತ್ತಾನೆ. ಆದರೆ ಆತನಿಗೆ ಬೇಕಾದ ಕೆಲವು ಕ್ವಾಲಿಟಿ ಇರುವ ಶೇಪ್ ಬೇಕಾಗಿರುತ್ತಾರೆ. ಆದರೆ ಅವರು ಯಾರೂ ಬಾರದ ಕಾರಣ ತುಳಸಿ ಅವರನ್ನೇ ಶೆಫ್ ಮಾಡಿದರೆ ಹೇಗೆ ಎಂದು ಯೋಚನೆ ಮಾಡುತ್ತಾನೆ.

ತುಳಸಿ ಮನೆಗೆ ಮಾಧವ ಆಗಮಿಸುವ ವೇಳೆ ಕೇಶವನ ಬಳಿ ತುಳಸಿ ಮಾತನಾಡುತ್ತಾ ಇರುತ್ತಾಳೆ. ಮಾಧವ ನೋಡದೆ ಬಹಳ ಖುಷಿ ಪಟ್ಟುಕೊಂಡು ಮಾತನಾಡುತ್ತಾ ಇರುವಾಗ ಮಾಧವ ಬಂದಿರುವುದು ತುಳಸಿಗೆ ಕಾಣುತ್ತದೆ. ಅರೆರೆ ಮಾಧವ ಅವರೇ ಬನ್ನಿ ಕುಳಿತುಕೊಳ್ಳಿ ಎಂದು ಹೇಳುತ್ತಾಳೆ. ಆ ಕೂಡಲೇ ಅಲ್ಲಿಂದ ಕೇಶವ ಹೊರಡುತ್ತಾನೆ. ಮಾಧವ ಹಾಗೂ ಸದಾಗೆ ತುಳಸಿ ನೀರು ಕೊಡುತ್ತಾಳೆ.

ಇನ್ನು ಮಾಧವ ತಾನು ಬಂದಿರುವ ಉದ್ದೇಶವನ್ನು ತುಳಸಿ ಬಳಿ ಹೇಳಿದಾಗ ತುಳಸಿಗೆ ಖುಷಿ ಹಾಗೂ ಆಶ್ಚರ್ಯ ಆಗುತ್ತದೆ. ಇನ್ನು ತುಳಸಿ ಮಾತನಾಡದೆ ಮೂಕ ವಿಸ್ಮಿತಗೊಂಡಿರುತ್ತಾಳೆ. ಇದನ್ನು ನೋಡಿದ ಮಾಧವ ನೀವು ಮೊನ್ನೆ ಕುಕ್ಕಿಂಗ್ ಮಾಡುವಾಗ ನನಗೆ ತಿಳಿಯಿತು, ನಿಮಗೆ ಅಡುಗೆ ಮಾಡುವುದರಲ್ಲಿ ಮಾತ್ರ ಎಕ್ಸ್ಪೀರಿಯೆನ್ಸ್ ಅಲ್ಲ ಎಲ್ಲವನ್ನೂ ಮ್ಯಾನೇಜ್ ಮಾಡುವ ಕೆಪಾಸಿಟಿ ಇದೆ ಎಂದು, ಆ ಕಾರಣಕ್ಕೆ ಮೈನ್ ಶೆಫ್ ಆಗಿ ನೀವು ಬರುತ್ತೀರಾ ಎಂದು ಸೀರೆ ಕೊಡುತ್ತಾನೆ. ನಾವು ಯಾರನ್ನೇ ಕೆಲಸ ಮಾಡಲು ಕರೆಯುವಾಗ ಸೀರೆ ಕೊಟ್ಟು ಕರೆಯುವ ವಾಡಿಕೆ ಎಂದು ಹೇಳುತ್ತಾನೆ.

ಇದನ್ನು ಕೇಳಿದ ತುಳಸಿಗೆ ಬಹಳ ಖುಷಿ ಆಗುತ್ತದೆ. ಆದರೆ ಮಾವನ ಬಳಿ ಒಂದು ಮಾತು ಕೇಳಬೇಕು ಎನ್ನುವುದು ಆಕೆಯ ಅಭಿಪ್ರಾಯ. ದತ್ತ ಹಾಗೂ ಶೇಷ ಮಾತನಾಡುತ್ತಾ ಬರುತ್ತಾ ಇರುತ್ತಾರೆ. ಆಗ ತುಳಸಿ ವಿಚಾರವನ್ನು ಹೇಳಿದಾಗ ಶೇಷ ಅಯ್ಯೋ ಪಾಪ ಎಂದರೆ ದತ್ತ ಮಾತ್ರ ಆ ರೀತಿ ಅನ್ನದೆ ತುಳಸಿಗೆ ಯಾವುದು ಸರಿ ಯಾವುದು ತಪ್ಪು ತಿಳಿಯಬೇಕು ನಾನು ಹೋದ ಬಳಿಕ ಕೂಡ ತುಳಸಿಯನ್ನು ಹೀಗೆ ಬಂದು ಪೀಡಿಸುತ್ತ ಇದ್ದರೆ ಆ ಕಾರಣಕ್ಕಾಗಿ ನಾನು ತುಳಸಿ ವಿಚಾರದಲ್ಲಿ ಕಠೋರವಾಗೀ ಇದ್ದೇನೆ ಎಂದು ಹೇಳುತ್ತಾನೆ. ಇನ್ನು ದತ್ತನಿಗೆ ಸಂಧ್ಯಾ ಕಾಣ ಸಿಗುತ್ತಾಳೆ. ಆಗ ಸಂಧ್ಯಾಗೆ ದತ್ತ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾನೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial sri rastu shubha mastu written updated on 17th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X