Srirasthu Shubhamasthu: ಮಗನ ನಿಶ್ಚಿತಾರ್ಥಕ್ಕೆ ಭಾರವಾದ ಮನಸ್ಸಿನಿಂದ ಬಂದ ಮಾಧವ

By Poorva
Kannada serial Srirasthu Shubhamasthu written update on 17th March

ಮಾಧವ ಬಹಳ ದುಃಖ ತಪ್ತನಾಗಿದ್ದಾನೆ. ಇದನ್ನು ನೋಡಿದ ಪೂರ್ಣಿಮಾ ಮಾವನಿಗೆ ಆದಷ್ಟು ಸಮಾಧಾನ ಮಾಡುತ್ತಾಳೆ. ಆದರೆ ಮಾಧವ ಒಂದು ಮಾತನಾಡದೇ ಸುಮ್ಮನೆ ಇರುತ್ತಾನೆ. ಮಾಧವ ಹೆತ್ತ ತಂದೆ ಆಗಿದ್ದರೂ ಮಕ್ಕಳಿಬ್ಬರು ಮಾಧವನನ್ನು ತಂದೆ ಎಂದು ಪರಿಗಣಿಸದೆ ಆತನನ್ನು ದೂರ ಮಾಡುತ್ತಾರೆ. ಆದರೆ ಮಾಧವ ಮಾತ್ರ ತನ್ನ ಮಕ್ಕಳೇ ನನ್ನ ಸರ್ವಸ್ವ ಎಂದುಕೊಂಡು ಇರುತ್ತಾನೆ. ಆದರೆ ಚಿಕ್ಕ ಮಗನ ನಿಶ್ಚಿತಾರ್ಥ ಇದ್ದರೂ ಮಾಧವನಿಗೆ ಮಾತ್ರ ಇದರ ಅರಿವೇ ಇಲ್ಲವಾಗುತ್ತದೆ. ಆದರೆ ಕೊನೆ ಕ್ಷಣದಲ್ಲಿ ಗೊತ್ತಾದಾಗ ಮಾಧವ ಮಾತ್ರ ಕುಸಿದು ಹೋಗುತ್ತಾನೆ.

ಮಾಧವನನ್ನು ಹೇಗಾದರೂ ಮಾಡಿ ಮಕ್ಕಳಿಂದ ದೂರ ಮಾಡಿ ಒಬ್ಬೊಂಟಿ ಮಾಡಬೇಕು ಎಂಬುವುದು ಶಾರ್ವರಿ ಬಯಕೆ. ಅದಕ್ಕಾಗಿ ಮಾಧವನನ್ನು ತಂದೆಯ ವಿರುದ್ದವಾಗಿ ಎತ್ತಿಕಟ್ಟುತ್ತಾಳೆ. ಮಾಧವ ನಿಶ್ಚಿತಾರ್ಥಕ್ಕೆ ಆಗಮಿಸುತ್ತಾನೆ. ಇನ್ನು ಮಾಧವ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರುವ ಮುಂಚೆ ತುಳಸಿ ಕೂಡ ಬರುತ್ತಾಳೆ. ಆಕೆಗೆ ಇದು ಮಾಧವ ಅವರ ಮನೆ ಕಾರ್ಯಕ್ರಮ ಎಂದು ತಿಳಿದಿರುವುದಿಲ್ಲ. ಆಕೆ ಮೈಸೂರು ಪಾಕ್ ಅನ್ನು ಹಿಡಿದುಕೊಂಡು ಬರುತ್ತಾಳೆ .

ಬಳಿಕ ಅಲ್ಲಿಯೇ ಇದ್ದ ಸೆಕ್ಯುರಿಟಿ ಗಾರ್ಡ್ ಬಳಿ ಹುಡುಗಿ ತಾಯಿ ಸ್ವೀಟ್ಸ್ ಮಾಡಿಕೊಂಡು ಬರಲು ಹೇಳಿದ್ದರು ಅದಕ್ಕೆ ತಂದಿದ್ದೇನೆ ಎಂದು ಹೇಳಿದಾಗ ಕಿಚನ್ ಡಿಪಾರ್ಟ್ಮೆಂಟ್ ಕಡೆ ಕಳುಹಿಸುತ್ತಾರೆ. ತುಳಸಿ ಅತ್ತ ಹೋಗುತ್ತಾ ಇದ್ದಾಳೆ ಅನ್ನುವಷ್ಟರಲ್ಲಿ ಅಲ್ಲಿಗೆ ಮಾಧವ ಬರುತ್ತಾನೆ. ಮಾಧವ ಸೊಸೆಯ ಒತ್ತಾಯಕ್ಕೆ ಭಾರವಾದ ಹೆಜ್ಜೆಯನ್ನು ಹಾಕಿಕೊಂಡು ಬರುತ್ತಾನೆ.

ಇನ್ನು ಶಾರ್ವರಿ ಮಾತ್ರ ಬಹಳ ಚಾಲಕಿ ಜನಾರ್ಧನ್ ಜೊತೆ ಅದೆಷ್ಟೋ ಸ್ನೇಹಾ ಸಂಭಂದವನ್ನು ಬೆಳೆಸಿಕೊಂಡು ವೈರಿಯ ಮಗಳನ್ನೆ ಮಾಧವನ ಮಗನಿಗೆ ಗಂಟು ಹಾಕುವ ಯೋಚನೆ ಫಲ ನೀಡಿದೆ ಅದಕ್ಕಾಗಿ ಜನಾರ್ಧನ್ ಶಾರ್ವರಿ ಬಳಿ ಬಂದು ಧನ್ಯವಾದ ಹೇಳುತ್ತಾನೆ. ಹಾಗೆಯೇ ಆಕೆಯ ಪ್ಲಾನ್ ಗೆ ಶಭಾಷ್ ಎಂದು ಹೇಳುತ್ತಾನೆ.

ಜನಾರ್ಧನ್‌ಗೆ ಬೇಕಾಗಿದ್ದದ್ದೂ ಅದೇ ಮಾದವನ್ನು ಹೇಗಾದರೂ ಮಾಡಿ ಮಟ್ಟ ಹಾಕಬೇಕು, ಆತನನ್ನು ಹೇಗಾದರೂ ಮಾಡಿ ಕೆಡವ ಬೇಕು, ತನ್ನ ಮಕ್ಕಳೇ ಆತನ ವಿರುದ್ಧ ನಿಲ್ಲಬೇಕು ಎಂಬುವುದು ಜನಾರ್ಧನ್ ಆಸೆ. ಶಾರ್ವರಿ ಮಾತ್ರ ಅಭಿ ಮದುವೆ ಮಾಡಿದ ಬಳಿಕ ಇರೋದು ಮಜಾ ಎಂದು ಹೇಳುತ್ತಾ ನಗುತ್ತಾ ಇರುತ್ತಾಳೆ.

ಅವಿನಾಶ್ ಅಭಿ ರೂಮ್‌ಗೆ ಬಂದು ಆತನ ಡ್ರೆಸ್ ಬಟನ್ ಹಾಕುತ್ತಾನೆ. ಇದನ್ನು ಕಂಡ ಅಭಿಗೆ ಅಣ್ಣನ ಮೇಲೆ ಕೋಪ ಹೋಗಿ ಪ್ರೀತಿ ಉಕ್ಕಿ ಹರಿಯುತ್ತದೆ. ಅಣ್ಣನ ಬಳಿ ಪ್ರೀತಿಯಿಂದ ಮಾತನಾಡುತ್ತಾನೆ. ಆ ವೇಳೆ ಅವಿ ಅಭಿಗಾಗಿ ತಂದಿದ್ದ ಒಂದು ಗಿಫ್ಟ್ ಕೊಡುತ್ತಾನೆ. ಆ ಗಿಫ್ಟ್ ಓಪನ್ ಮಾಡಿದಾಗ ಅದರಲ್ಲಿ ವಾಚ್ ಇದ್ದಿದ್ದನ್ನು ಕಂಡು ಖುಷಿ ಆಗುತ್ತದೆ. ಅಣ್ಣ ನನಗೆ ಈ ವಾಚ್ ಬಹಳ ಇಷ್ಟ ಆಯಿತು ಎಂದು ಖುಷಿ ಪಡುತ್ತಾನೆ.

ಇನ್ನು ದತ್ತ ಚಿಕ್ಕ ಮಕ್ಕಳ ಹಾಗೆ ಟಿವಿ ನೋಡಬೇಕು ಎಂದೆಲ್ಲ ಹಠ ಮಾಡುತ್ತಾ ಇರುತ್ತಾನೆ. ಶೇಷ ದತ್ತನನ್ನು ಸಮಾಧಾನ ಮಾಡುವದೇ ಆಯಿತು. ಇನ್ನು ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಾ ಇರುತ್ತದೆ. ಹುಡುಗಿಯನ್ನು ಜನಾರ್ಧನ್ ಕರೆದುಕೊಂಡು ಕೂರಿಸುತ್ತಾರೆ. ಆ ಬಳಿಕ ಜಲಜಳನ್ನು ಹುಡುಕಿಕೊಂಡು ಹೋದಾಗ ಮಾಧವ ಹಾಗೂ ಪೂರ್ಣಿಮಾ ಬರುತ್ತಿರುವುದು ನೋಡಿದ ಅವಿ ಮೆತ್ತಗೆ ಕೆಳಗಿಳಿದು ಹೋಗಿ ಎಷ್ಟು ಹೊತ್ತು ಪೂರ್ಣಿಮಾ ಬಾ ಎಂದು ಕರೆದುಕೊಂಡು ಹೋಗುತ್ತಾನೆ. ಇದನ್ನು ನೋಡಿದ ಪೂರ್ಣಿಮಾ ಗಂಡನ ಜೊತೆ ಮನಸಿಲ್ಲದ ಮನಸ್ಸಿನಿಂದ ಹೋಗುತ್ತಾರೆ.

ಸಿರಿ ಹಾಗೂ ಸಮರ್ಥ್ ಅನ್ನು ರೌಡಿಗಳ ಕೈಯಿಂದ ಪೊಲೀಸ್ ರಕ್ಷಣೆ ಮಾಡುತ್ತಾರೆ. ಆದರೆ ಸಮರ್ಥ್ ಗೆ ಮಾತ್ರ ಬಹಳ ಆತಂಕ ಆಗುತ್ತದೆ. ಇಲ್ಲಿಯವರೆಗೂ ಈ ರೌಡಿಗಳು ಹುಡುಕಿಕೊಂಡು ಬಂದಿದ್ದಾರೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Srirasthu Shubhamasthu written update on 17th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X