ಮಕ್ಕಳ ವರ್ತನೆಯಿಂದ ನೊಂದ ಮಾಧವನನ್ನು ಹೇಗೆ ಸಂತೈಸುತ್ತಾಳೆ ತುಳಸಿ?

By Poorva

ಮಾಧವ ಬಹಳ ದುಃಖದಿಂದ ಇರುತ್ತಾನೆ. ಆತನಿಗೆ ತನ್ನ ಮಕ್ಕಳು ನನ್ನ ಗೌರವಿಸದ ಕಾರಣ ಬಹಳ ನೋವು ಆಗುತ್ತದೆ. ಯಾಕೆ ಹೀಗೆ ನನ್ನ ಬದುಕಿನಲ್ಲಿ ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸುತ್ತಾನೆ. ಇನ್ನು ತುಳಸಿ ಹಾಗೂ ದತ್ತ ಕಳುಹಿಸಿದ್ದ ಹುಡುಗ ಮನೆಗೆ ಬರುತ್ತಾನೆ. ತುಳಸಿ ಆತನ ಬಳಿ ಮಾವನ ಬಳಿ ಏನು ಹೇಳಬೇಡ ನೊಂದುಕೊಳ್ಳುತ್ತಾರೆ ನಮ್ಮೊಂದಿಗೆ ಇರಲಿ ಎಂದೆಲ್ಲ ಹೇಳುತ್ತಾಳೆ.

ಅದನ್ನು ಕೇಳಿದ ಆತ ಅವರು ಶ್ರೀಮಂತರಾಗಿರಬಹುದು ಆದರೂ ನಮ್ಮ ಜೊತೆ ಅವರು ಆ ರೀತಿ ನಡೆದುಕೊಂಡಿದ್ದು ನನಗೆ ಸರಿ ಕಾಣಲಿಲ್ಲ ಎಂದಾಗ ತುಳಸಿ ಹೇಗೋ ಸಮಾಧಾನ ಮಾಡುತ್ತಾಳೆ. ಬಳಿಕ ಅಲ್ಲಿಂದ ಸೀದಾ ಮನೆಯ ಒಳಗೆ ಹೋಗುತ್ತಾಳೆ. ದತ್ತ ಹಾಗೂ ಶೇಷ ಇಬ್ಬರು ವಾಕಿಂಗ್ ಮಾಡುತ್ತಾ ಇರುವಾಗ ಶೇಷನ ಜೊತೆ ದತ್ತ ತನ್ನ ಮನದ ವೇದನೆಯನ್ನು ತೋಡಿಕೊಳ್ಳುತ್ತಾನೆ.

Kannada serial Srirasthu Shubhamasthu written update on 22nd March

ಮನೆಯಲ್ಲಿ ಸಮರ್ಥ್ ಹಾಗೂ ಸಿರಿ ಇಲ್ಲದೆ ಇರುವುದರಿಂದ ಮನೆ ಬಿಕೋ ಎನ್ನುತ್ತಿದೆ. ಈಗ ತುಳಸಿ ಕೂಡ ಇಲ್ಲ, ಮನೆಯಲ್ಲಿ ಇರಲು ಆಗದೆ ದತ್ತ ಹಾಗೂ ಶೇಷ ವಾಕಿಂಗ್ ಮಾಡುತ್ತಾ ಇರುತ್ತಾರೆ. ದತ್ತ ಮನದ ಮಾತನ್ನು ಶೇಷ ಬಳಿ ಹೇಳಿದಾಗ ಶೇಷ ಮನದಲ್ಲಿ ಈ ಮಾತನ್ನು ದತ್ತ ತುಳಸಿ ಮುಂದೆ ಹೇಳಿದರೆ ಆಕೆಗೆ ಅದೆಷ್ಟು ಖುಷಿ ಆಗುತ್ತಾ ಇತ್ತು ಆದರೆ ಇದೀಗ ಎನು ಮಾಡಬೇಕು ಎಂದುಕೊಂಡು ಸುಮ್ಮನೆ ಇರುತ್ತಾನೆ.

ಇನ್ನು ದತ್ತ ಮನೆ ಕಡೆ ನಡೆಯುತ್ತಾನೆ. ಮನೆಗೆ ಸಂಧ್ಯಾ ಹಾಗೂ ಆಕೆಯ ಅತ್ತಿಗೆ ಒಳಗೆ ಬರುತ್ತಾರೆ. ಸಂಧ್ಯಾ ಅತ್ತಿಗೆಯ ಮುಖ ಬಾಡಿ ಹೋಗಿತ್ತು. ಜುಗ್ಗ ಮಾಡಿದ ಕೆಲಸಕ್ಕೆ ಮಾತ್ರ ಬಹಳ ಬೇಸರ ವ್ಯಕ್ತ ಪಡಿಸುತ್ತಾ ಇರುತ್ತಾರೆ. ಇದನ್ನು ನೋಡಿದ ಸಂಧ್ಯಾ ಅತ್ತಿಗೆ ಮನೆಯ ಒಳಗೆ ಬಂದು ಜೋರಾಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ಸಂಧ್ಯಾ ಜುಗ್ಗ ಮಾಡಿದ ಕೆಲಸಕ್ಕೆ ಈ ಸಂಬಂಧ ಬಿದ್ದು ಹೋಯಿತು ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಜುಗ್ಗನ ಹೆಂಡತಿಗೆ ಶಾಕ್ ಆಗುತ್ತದೆ.

Kannada serial Srirasthu Shubhamasthu written update on 22nd March

ಜುಗ್ಗನ ಮಗಳು ಅಪ್ಪ ನನಗೆ ಇನ್ನು ಮದುವೆ ಮಾಡಿಸುವುದು ಬೇಡ, ಗಂಡು ನೋಡಲು ಬರುತ್ತಾರೆ ಎಂದು ದೊಡ್ಡ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದೆ ಆದರೆ ಇದೀಗ ಆ ಆಶಾ ಗೋಪುರ ಕಳಚಿ ಬಿದ್ದಿದೆ ಎಂದೆಲ್ಲ ಬೇಸರ ವ್ಯಕ್ತ ಪಡಿಸುತ್ತಾ ಇರುತ್ತಾಳೆ. ಶಾರ್ವರಿ ಮಾಡಿದ ಕೆಲಸಕ್ಕೆ ಜನಾರ್ಧನ್ ಬೆನ್ನು ತಟ್ಟುತ್ತಾನೆ.

ಶಾರ್ವರಿ ನೀವು ಎನು ಕೆಲಸ ಮಾಡಿದರೂ ಮನೆಯವರ ಎದುರು ನೀವು ಗ್ರೇಟ್ ಅನ್ನಿಸುಕೊಳ್ಳುತ್ತ ಇರುತ್ತಿರಾ, ಮನೆಗೆ ಇದು ಬಹಳ ಖುಷಿ ನೀಡುತ್ತಾ ಇದೆ ಎಂದೆಲ್ಲ ಜನಾರ್ಧನ್ ಹೇಳಿದಾಗ ಶಾರ್ವರಿ ಮಾತ್ರ ನಾನು ಅಂದುಕೊಂಡ ಕೆಲಸ ಎಲ್ಲವನ್ನೂ ಮಾಡುತ್ತೀನಿ ಎಂದು ಹೇಳುತ್ತಾಳೆ. ಇದನ್ನು ಕದ್ದು ಕೇಳಿಸಿಕೊಳ್ಳುತ್ತಾ ಇದ್ದ ಶಾರ್ವರಿ ಮಗಳಿಗೆ ಶಾಕ್ ಆಗುತ್ತದೆ. ಮಾಧವ ನಿಶ್ಚಿತಾರ್ಥ ಕಾರ್ಯಕ್ರಮದಿಂದ ಹೊರ ನಡೆಯುತ್ತಾ ಇರುವುದನ್ನು ನೋಡಿದ ಪಾಪಮ್ಮ ಹಾಗೂ ಪೂರ್ಣಿಮಾ ಮಾಧವನನ್ನು ಹಿಂಬಾಲಿಸುತ್ತಾ ಬರುತ್ತಾರೆ ಆದರೆ. ಮಾಧವ ಕಾರಿನಲ್ಲಿ ಕುಳಿತು ಡ್ರೈವರ್ ಬಳಿ ಹೋಗೋಣ ಎಂದು ಹೇಳುತ್ತಾನೆ.

ಆಗ ಪೂರ್ಣಿಮಾ ಹಾಗೂ ಪಾಪಮ್ಮ ಬರುತ್ತಾರೆ. ಎಷ್ಟೇ ಸಮಾಧಾನ ಹೇಳಿದರೂ ಮಾಧವ ಮಾತ್ರ ಹಳೆಯದನ್ನೆಲ್ಲ ನೆನೆದುಕೊಂಡು ಬಹಳ ನೊಂದುಕೊಂಡಿರುತ್ತಾನೆ. ಕಾರು ಅರ್ಧ ದಾರಿ ತನಕ ಬಂದಾಗ ಮಾಧವ ಕಾರು ನಿಲ್ಲಿಸಲು ಹೇಳುತ್ತಾನೆ. ಆ ಬಳಿಕ ಕಾರಿನಿಂದ ಇಳಿದು ನಡೆದುಕೊಂಡು ಹೋಗುತ್ತಾನೆ. ಇದನ್ನು ನೋಡಿದ ಪೂರ್ಣಿಮಾ ಮಾಧವನನ್ನು ತಡೆಯಲು ನೋಡುತ್ತಾಳೆ. ಆದರೆ ಮಾಧವ ಮಾತ್ರ ಸೀದಾ ಹೋಗುತ್ತಾನೆ. ತುಳಸಿ ಮನೆಗೆ ಬರುತ್ತಾನೆ ಮಾಧವ. ಮಾಧವನ ಸ್ಥಿತಿ ಕಂಡು ತುಳಸಿಗೆ ಬೇಸರ ಆಗುತ್ತದೆ. ಬಳಿಕ ಒಳಗೆ ಕುಳಿತು ಜೋರಾಗಿ ಅಳುತ್ತಾನೆ.

More from Filmibeat

English summary
Kannada serial sri rastu shubha mastu written update on 22nd March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X