Srirasthu Shubhamasthu: ತುಳಸಿ ಬಳಿ ಹಣ ಕೀಳಲು ಸಂಧ್ಯಾ ಮಾಸ್ಟರ್ ಪ್ಲಾನ್?

By Poorva

ತುಳಸಿ ಸಂಧ್ಯಾಳ ಚಿಂತೆಯಲ್ಲಿ ಇದ್ದಾಳೆ. ನನ್ನ ಮಗಳು ಮದುವೆ ಆಗಿ ಹೋದ ಬಳಿಕ ತೊಂದರೆಯ ಮೇಲೆ ತೊಂದರೆ ಆಗುತ್ತಾ ಇದೆ, ಯಾಕೆ ಹೀಗೆ ಆಗುತ್ತಿದೆ, ನನ್ನ ಮಗಳು ಇಷ್ಟೆಲ್ಲ ಕಷ್ಟದಲ್ಲಿ ಇದ್ದರೂ ಆಕೆಗೆ ಸ್ವಲ್ಪವೂ ಸಹಾಯ ಮಾಡಲು ಆಗುತ್ತಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾ ಇರುವಾಗ ಸಿರಿ ತುಳಸಿ ಬಳಿ ಫುಡ್ ಬಾಕ್ಸ್ ಕೆಲಸದ ಬಗ್ಗೆ ಹೇಳುತ್ತಾಳೆ. ಮನೆಯಲ್ಲಿ ಕೆಲಸ ಮಾಡಿ ದುಡ್ಡು ಸಂಪಾದನೆ ಮಾಡಬಹುದು ಎಂದೆಲ್ಲ ತುಳಸಿಗೆ ಹೇಳಿದಾಗ ಆಕೆ ಯೋಚನೆ ಮಾಡುತ್ತಾಳೆ.

ನಾನು ಏನಾದರೂ ಕೆಲಸ ಮಾಡಿದರೆ ನನ್ನ ಮಗಳು ಕೇಳಿದಾಗ ಹಣ ಕೊಡಬಹುದು ಎಂದೆಲ್ಲ ಯೋಚನೆ ಮಾಡಿ ನನಗೆ ಹಣದ ಅಗತ್ಯ ಇದೆ ಸಂಧ್ಯಾ ತುಂಬಾ ಕಷ್ಟದಲ್ಲಿ ಇದ್ದಾಳೆ ಆಕೆಗೆ ಮೂರು ಲಕ್ಷ ಬೇಕಂತೆ ನಾನು ದುಡಿಯುತ್ತಿದ್ದರೆ ಹೀಗೆಲ್ಲ ಆಗುತ್ತಾ ಇರಲಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿರಿ ತುಳಸಿಗೆ ಸಮಾಧಾನ ಹೇಳಿ ತಾನೆ ಸಮರ್ಥ್ ಬಳಿ ಈ ವಿಚಾರ ಮಾತನಾಡುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ.

Kannada serial Srirasthu Shubhamasthu written update on 23rd February .

ಇನ್ನು ಸಂಧ್ಯಾ ತುಳಸಿಗೆ ಕರೆ ಮಾಡುತ್ತಾಳೆ. ತುಳಸಿಗೆ ಕರೆ ಮಾಡಿದ ಸಂಧ್ಯಾ ಹಣ ಅರೇಂಜ್ ಮಾಡಿದ್ದೀಯಾ ಅಮ್ಮ ನನಗೆ ಬಹಳ ಕಷ್ಟ ಆಗುತ್ತಿದೆ ಎಂದೆಲ್ಲ ಕೊಂಚ ಧಿಮಾಕಿನಿಂದ ಮಾತನಾಡುತ್ತಾಳೆ. ಆದರೂ ತುಳಸಿ ಕೊಂಚವೂ ಬೇಸರ ಮಾಡಿಕೊಳ್ಳದೆ ಆಕೆಗೆ ಸಮಾಧಾನ ಹೇಳುತ್ತಾಳೆ. ಆದರೂ ಸಂಧ್ಯಾ ನನಗೆ ಹಣ ಬೇಕು ಇಲ್ಲವಾದರೆ ನನ್ನ ಗಂಡ ಜೈಲಿಗೆ ಹೋಗಬೇಕಾಗುತ್ತದೆ ಎಂದು ಸುಳ್ಳು ಹೇಳಿ ಫೋನ್ ಇಡುತ್ತಾಳೆ. ತುಳಸಿಗೆ ಇನ್ನೂ ತಲೆ ನೋವು ಹೆಚ್ಚಾಗುತ್ತದೆ. ಇನ್ನು ಸಂಧ್ಯಾ ತನ್ನ ಗಂಡನ ಬಳಿ ಮಾತನಾಡುತ್ತಾ ಇರುತ್ತಾಳೆ.

ಆಗ ಆಕೆಯ ಗಂಡ ಯಾಕೆ ಸಂಧ್ಯಾ ಅಮ್ಮನ ಬಳಿ ದುಡ್ಡು ಎಂದೆಲ್ಲ ಮಾತನಾಡುತ್ತಾ ಇದ್ದೀಯಾ ಎಂದಾಗ ಸಂಧ್ಯಾ ವ್ಯಂಗ್ಯವಾಗಿ ನೀವು ದುಡ್ಡು ನಿಮ್ಮ ಅಪ್ಪನ ಕೈಗೆ ಕೊಟ್ಟರೆ ನನಗೆ ಯಾರು ಹಣ ಕೊಡುತ್ತಾರೆ ಎಂದೆಲ್ಲ ಹೇಳಿ ಬಳಿಕ ಮೆತ್ತಗೆ ನಾನು ಹಣ ಕೇಳಿದ್ದು ನಮ್ಮ ಒಳ್ಳೆಯದಕ್ಕೆ, ಹಾಗೆಯೇ ನನಗೂ ಖರ್ಚಿಗೂ ಹಣ ಬೇಕು ಅದಕ್ಕೆ ಮೂರು ಲಕ್ಷ ಹಣ ಕೇಳಿದೆ ಎಂದಾಗ ಆಕೆಯ ಗಂಡನಿಗೆ ಶಾಕ್ ಆಗುತ್ತದೆ. ಇನ್ನು ಅಲ್ಲಿಗೆ ಬಂದ ಜುಗ್ಗ ಸಂಧ್ಯಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಏನಮ್ಮ ಮುದ್ದು ಸೊಸೆ ನನ್ನ ಮಗನ ತಲೆಯಲ್ಲಿ ಇಲ್ಲದನ್ನೆಲ್ಲ ತುಂಬುತ್ತಾ ಇದ್ದೀಯಾ ಏನು ಕಥೆ ನಿಂದು ಎಂದೆಲ್ಲಾ ಹೇಳುತ್ತಾನೆ.

ಅದನ್ನು ಕೇಳಿದ ಸಂಧ್ಯಾ ಮಾವನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ನನಗೆ ನೀವು ನೂರು ರೂಪಾಯಿ ಕೊಡುತ್ತೀರಾ ಅದು ಎಲ್ಲಿಗೆ ಸಾಕಾಗುತ್ತದೆ ಎಂದೆಲ್ಲ ಹೇಳಿದಾಗ ಜುಗ್ಗ ನೀನು ಇಷ್ಟೆಲ್ಲ ಮಾತು ಆಡುತ್ತಿಯಾ ನಿನಗೆ ನೂರು ರೂಪಾಯಿ ಕೊಡುವುದನ್ನು ನಿಲ್ಲಿಸುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿ ಸಂಧ್ಯಾಗೆ ಇನ್ನೂ ಕೋಪ ಬರುತ್ತದೆ. ಬಳಿಕ ಮಾತಿಗೆ ಮಾತು ಬೆಳೆಸಿ ಬಿಡುತ್ತಾಳೆ. ಇದನ್ನು ನೋಡಿದ ಪ್ರಸಾದ್ ಇಬ್ಬರ ಬಳಿಯೂ ಕೊಂಚ ಜೋರಾಗಿ ಮಾತನಾಡಿದಾಗ ಜುಗ್ಗ ಅಲ್ಲಿಂದ ಹೋಗುತ್ತಾನೆ.‌ ಆದರೆ ಸಂಧ್ಯಾಗೆ ಒಂದು ಖುಷಿ ಏನೆಂದರೆ ತಾನು ತಾಯಿ ಬಳಿ ಹಣ ಕೇಳುತ್ತಿರುವ ವಿಷಯ ಮಾವನಿಗೆ ಗೊತ್ತಾಗಿಲ್ಲ ಎಂದು ಖುಷಿ ಪಡುತ್ತಾಳೆ.

Kannada serial Srirasthu Shubhamasthu written update on 23rd February .

ಇನ್ನು ದತ್ತ ಕೆಫೆಗೆ ಹೊರಟು ನಿಲ್ಲುತ್ತಾನೆ. ಆಗ ಅಲ್ಲಿಗೆ ಬಂದ ತುಳಸಿ ಮಾವನ ಬಳಿ ನಿಂತುಕೊಂಡು ಮಾತನಾಡುತ್ತಾ ಇರುವಾಗ ದತ್ತ ಕರ್ಚಿಪ್ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಒಳಗೆ ಹೋಗುತ್ತಾನೆ. ಆಗ ಅಲ್ಲಿಗೆ ಬಂದ ಸಮರ್ಥ್ ಗೆ ಒಂದು ಕರೆ ಬರುತ್ತದೆ. ಟಿಫನ್ ಬಾಕ್ಸ್ ರೆಡಿ ಮಾಡಿಕೊಡುವಂತೆ ಆತನ ಗೆಳೆಯ ತಲೆ ತಿನ್ನುತ್ತಾನೆ. ಇದನ್ನು ಕೇಳಿ ತನ್ನ ತಾಯಿ ಬಳಿ ಈ ಬಗ್ಗೆ ಪ್ರಸ್ತಾಪ ಮಾಡುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ದತ್ತ ಬರುತ್ತಾನೆ. ಎಲ್ಲರೂ ಕೆಫೆಗೆ ಹೋಗುತ್ತಾರೆ.

ದತ್ತನನ್ನು ಕೆಫೆಯಲ್ಲಿ ನೋಡಿ ಮಾಧವ ಖುಷಿ ಪಡುತ್ತಾನೆ. ಬಳಿಕ ಅವರಿಗೆ ವೆಲ್ ಕಂ ಡ್ರಿಂಕ್ಸ್ ಅನ್ನು ಕೊಡುತ್ತಾನೆ. ಇದನ್ನು ನೋಡಿ ಮೊದಲಿಗೆ ಬೇಡ ಎಂದರೂ ಬಳಿಕ ಸುಮ್ಮನೆ ಆಗುತ್ತಾರೆ. ಇನ್ನು ಪೂರ್ಣಿಮಾ ಬಳಿ ಅವಿ ನಿಜ ವಿಚಾರವನ್ನು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಶಾರ್ವರಿ ಕೂಪಿತಗೊಳ್ಳುತ್ತಾಳೆ. ಆವಿಯ ಮನಸ್ಥಿತಿ ಏನೆಂದರೆ ನಾಳೆ ನನ್ನಿಂದ ಅಲ್ಲದೆ ಬೇರೆಯವರಿಂದ ಸುದ್ದಿ ತಿಳಿದರೆ ಪೂರ್ಣಿಮಾ ಬಹಳ ಕೋಪ ಮಾಡಿಕೊಳ್ತಾಳೆ, ಅದಕ್ಕೆ ನಾನೇ ನಿಜ ಹೇಳಿ ಬಿಡುತ್ತೇನೆ ಎಂದು ಯೋಚಿಸಿ ನಿಜ ವಿಚಾರ ತಿಳಿಸುತ್ತಾನೆ.

More from Filmibeat

English summary
Kannada serial sri rastu shubha mastu written updated on 23rd February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X