Srirasthu Shubhamasthu: ಮುಗಿಯದ ದತ್ತನ ರಗಳೆ; ದತ್ತ ಮಾಡಿದ ಆರ್ಡರ್ ಕೇಳಿ ಮನೆ ಮಂದಿ ಸುಸ್ತು!

By Poorva

ಮಾಧವನ ಕೆಫೆಗೆ ದತ್ತನ ಕುಟುಂಬ ಆಗಮಿಸಿದೆ. ಎಲ್ಲರನ್ನೂ ಬಹಳ ಆದರದಿಂದ ಸ್ವಾಗತ ಮಾಡುತ್ತಾರೆ. ದತ್ತನ ಕೆಲಸಗಾರ ದತ್ತನನ್ನ ತಾತ ಎಂದಿದ್ದೇ ತಡ ಕುಪಿತಗೊಂಡ ದತ್ತ ಮಾತ್ರ ಯಾರೋ ತಾತ ಎಂದು ಕೇಳಿದಾಗ ಕೆಲಸದವನಿಗೆ ಭಯ ಆಗಿ ಸರ್ ಎಂದು ಕರೆದು ಬಿಟ್ಟು ಮಾಧವನ ಮುಖ ನೋಡುತ್ತಾರೆ. ಆಗ ಮಾಧವ ಕಣ್ಣು ಸನ್ನೆಯಿಂದಲೆ ಆತನಿಗೆ ಸಮಾಧಾನ ಹೇಳುತ್ತಾನೆ.

ಇದೀಗ ದತ್ತನ ಪುಂಡಾಟ ಮಾಧವನ ಮುಖದಲ್ಲಿ ನಗು ಮೂಡಿಸಿದೆ. ಮಾಧವ ಕೆಫೆಯಲ್ಲಿ ಇರುವ ಖುರ್ಚಿಗಳನ್ನು ನೋಡಿ ಇದೇನು ಹಗ್ಗ ಕಟ್ಟಿ ಖುರ್ಚಿ ಗಟ್ಟಿ ಆಗಿದೆ ಅಲ್ವಾ ಎಂದು ಹೇಳುತ್ತಾನೆ. ಅದನ್ನು ಕೇಳಿ ಅಲ್ಲಿ ನೆರೆದವರು ಎಲ್ಲರೂ ಜೋರಾಗಿ ನಗುತ್ತಾರೆ. ಅದನ್ನು ನೋಡಿ ಸಮರ್ಥ್ ಗೆ ಮಾತ್ರ ಮುಜುಗರ ಆಗುತ್ತದೆ. ದತ್ತನ ಬಳಿ ಸುಮ್ಮನೆ ಕುಳಿತುಕೊಳ್ಳಲು ಹೇಳುತ್ತಾನೆ. ಬಳಿಕ ದತ್ತನ ಬಳಿ ಆತನ ಕೆಲಸದಾತ ಮೆನು ಕೊಟ್ಟು ಇವತ್ತು ನಿಮಗಾಗಿ ಸ್ಪೆಷಲ್ ಮೆನು ಆಗಿದೆ, ಇದನ್ನು ತೆಗೆದುಕೊಳ್ಳಿ ಎಂದು ಹೇಳಿ ಮಾಧವ ಮೆನು ಕೊಡುತ್ತಾನೆ .

Kannada serial Srirasthu Shubhamasthu written update on 24th February

ಇದೀಗ ಮಾಧವನ ಕೆಫೆಯಲ್ಲಿ ದತ್ತನದ್ದೇ ರಾಜ್ಯ ಭಾರ ಎಂದರೆ ತಪ್ಪಾಗದು. ಇನ್ನು ದತ್ತನ ಬಳಿ ತುಳಸಿ ಕೈ ತೊಳೆಯಲು ಹೇಳಿದಾಗ ದತ್ತ ಮಾತ್ರ ಊಟ ಮಾಡಿದ ಬಳಿಕ ಒಟ್ಟಿಗೆ ಕೈ ತೊಳೆಯುವುದಾಗಿ ಹೇಳುತ್ತಾನೆ. ಇದನ್ನು ಕೇಳಿದ ಅಲ್ಲಿದ್ದವರು ನಗುತ್ತಾರೆ. ಬಳಿಕ ಕೈ ತೊಳೆಯಲು ಸಮರ್ಥ್ ತುಳಸಿ ಹೋಗುತ್ತಾರೆ. ಇನ್ನು ಇವರಿಬ್ಬರೂ ಇಲ್ಲದ ವೇಳೆ ಮಾಧವ ಬರುತ್ತಾನೆ. ಮಸಾಲ ಪಾಪಡ್ ತರುತ್ತಾನೆ. ಇದೆಲ್ಲವನ್ನೂ ನಾನು ಆರ್ಡರ್ ಮಾಡೇ ಇಲ್ಲ ಎಂದು ದತ್ತ ಹೇಳಿದಾಗ ನಾನು ಸ್ಯಾಂಪಲ್‌ಗೆ ತಂದೆ ಅಷ್ಟೇ, ಆರ್ಡರ್ ಮಾಡುವವರೆಗೆ ಎನ್ನುತ್ತಾನೆ.

ಸಿರಿ ಸರ್ ನೀವು ಯಾಕೆ ಇದೆಲ್ಲಾ ತರಲು ಹೋಗಿದ್ದಿರಾ ಎಂದಾಗ ಮಾಧವ ಮನೆಗೆ ಬಂದ ಅತಿಥಿಗಳಿಗೆ ಇಷ್ಟು ಸತ್ಕಾರ ಮಾಡದೇ ಇದ್ದರೆ ಹೇಗೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ದತ್ತ ಮೆನುವನ್ನು ನೋಡಿ ಹಲವು ಐಟಂಗಳನ್ನು ಆರ್ಡರ್ ಮಾಡುತ್ತಾನೆ. ಇದನ್ನು ನೋಡಿದ ಸದಾ ಮಾತ್ರ ಮನದಲ್ಲಿ ತಾತನಿಗೆ ಇಂತಹ ಐಟಂ ಅಂದರೆ ಬಹಳ ಇಷ್ಟ ಕಾಣುತ್ತದೆ ಎನ್ನುತ್ತಾನೆ. ಸಿರಿ ಕೂಡ ಮೆತ್ತಗೆ ನಗುತ್ತಾ ಇರುತ್ತಾಳೆ..

Kannada serial Srirasthu Shubhamasthu written update on 24th February

ಇನ್ನು ಜುಗ್ಗ ತನ್ನ ಮಗಳಿಗೆ ಗಂಡು ಹುಡುಕುತ್ತಾ ಇರುವಾಗ ಒಂದು ಸಂಬಂಧ ಮನೆಗೆ ಬರುತ್ತದೆ. ಅದನ್ನು ನೋಡಿದ ಜುಗ್ಗಗೆ ಬಹಳ ಖುಷಿ ಆಗುತ್ತದೆ. ಹುಡುಗನ ಕಡೆಯವರಿಗೆ ತಿಂಡಿ ಕೊಟ್ಟ ಬಳಿಕ ಜುಗ್ಗ ಹುಡುಗಿಯನ್ನು ನೋಡಬಹುದು ಅಲ್ವಾ ಎಂದಾಗ ಹುಡುಗಿ ನೋಡುವ ಶಾಸ್ತ್ರ ಕೂಡ ನಡೆಯುತ್ತದೆ. ಹುಡುಗಿಯನ್ನು ನೋಡಿದ ಕೂಡಲೇ ಹುಡುಗನ ಕಡೆಯವರಿಗೆ ಇಷ್ಟ ಆಗುತ್ತದೆ. ಹುಡುಗನ ಕಡೆಯವರು ತಿಂಡಿ ತಿನ್ನುತ್ತಿರುವ ವೇಳೆ ದತ್ತ ಮಧ್ಯ ಬಾಯಿ ಹಾಕಿ ಅಲ್ವಾ ಎಂದು ಹೇಳುತ್ತಾರೆ. ಅದನ್ನು ನೋಡಿ ಹುಡುಗನ ಕಡೆಯವರಿಗೆ ಒಂದು ತರ ಆಗುತ್ತದೆ.

ತಿನ್ನಲು ತೆಗೆದುಕೊಂಡು ಇದ್ದ ತಿಂಡಿಯನ್ನೆ ಕೆಳಗೆ ಇಡುತ್ತಾರೆ. ಆಗ ಹುಡುಗನ ತಾಯಿ ಹೇಳುತ್ತಾರೆ ಏನ್ರೀ ನೀವು ಪ್ಲೇಟ್ ತೆಗೆದುಕೊಳ್ಳಲು ಹೋದರೆ ತಡೆಯುತ್ತ ಇದ್ದೀರಾ ನಮಗೆ ತಿನ್ನಲು ಗತಿ ಇಲ್ಲ ಎಂದುಕೊಂಡು ಬಂದಿದ್ದೇನೆ ಎಂದು ಅಂದುಕೊಂಡು ಇದ್ದೀರಾ ಎಂದಾಗ ಪ್ರಸಾದ್ ಮೆತ್ತಗೆ ಆಂಟಿ ತಪ್ಪು ತಿಳಿಯಬೇಡಿ ಎಂದು ಹೇಳಿದರೂ ಹುಡುಗನ ತಾಯಿ ಸಮಾಧಾನ ಮಾಡಿಕೊಳ್ಳದೆ ಮಾತುಗಳನ್ನು ಆಡುತ್ತಾರೆ.ಆಗಲೇ ತಿಳಿಯುತ್ತದೆ ಆಕೆಗೆ ಜುಗ್ಗ ಬಹಳ ಜಿಪುಣ ಎಂದು.

ಬಳಿಕ ದೊಡ್ಡ ರಂಪಾಟ ಮಾಡಿ ಈ ಮದುವೇನೂ ಬೇಡ ಎನು ಬೇಡ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇದನ್ನು ನೋಡಿದ ಸಂಧ್ಯಾ ಹಾಗೂ ಪ್ರಸಾದ್ ಮುನಿಸಿಕೊಂಡರೆ ಜುಗ್ಗ ಮಾತ್ರ ಬಹಳ ಕೋಪ ಮಾಡಿಕೊಂಡು ಇರುತ್ತಾನೆ. ಆದರೆ ಜುಗ್ಗನ ಮಗಳಿಗೆ ಬಹಳ ಬೇಸರ ಆಗುತ್ತದೆ. ಇನ್ನು ದತ್ತ ಟೇಬಲ್‌ಗೆ ತಂದಿದ್ದ ಎಲ್ಲಾ ಡಿಶ್ ಅನ್ನು ಒಂದೊಂದಾಗಿ ಟೇಸ್ಟ್ ಮಾಡುತ್ತಾ ಇರುತ್ತಾನೆ. ಇದನ್ನು ನೋಡಿ ಅಲ್ಲಿರುವವರು ಎಲ್ಲಾ ಶಾಕ್ ಆದರೂ ಬಳಿಕ ಆತ ಎನು ತಿಂಡಿ ತಿಂಡಿದ್ದಾನೋ ಅದರಲ್ಲಿಯೇ ಅವರು ಕೂಡ ತಿನ್ನಲು ಶುರು ಮಾಡುತ್ತಾರೆ.

More from Filmibeat

English summary
Kannada serial sri rastu shubha mastu written updated on 24th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X