ಅಮ್ಮನ ಮುಂದೆ ಗೋಳಾಡುತ್ತಿರುವ ಸಂಧ್ಯಾ ಮೋಸದಾಟ ತುಳಸಿಗೆ ತಿಳಿಯುತ್ತಾ?

By Poorva

ಮಾಧವ ತನ್ನ ಮಕ್ಕಳಿಗಾಗಿ ಏನು ಮಾಡಲೂ ತಯಾರಾಗಿದ್ದಾನೆ. ಒಟ್ಟಿನಲ್ಲಿ ಎಲ್ಲರೂ ಖುಷಿಯಾಗಿ ಇರಬೇಕು ಎನ್ನುವುದು ಮಾಧವನ ಗುಣ. ಮಾಧವನ ಗುಣವನ್ನು ಯಾರು ಅರ್ಥ ಮಾಡಿಕೊಳ್ಳದೆ ನಾನು ಮಾಡಿದ್ದೆ ಶಾಸನ ಅನ್ನುವ ಹಾಗೆ ಶಾರ್ವರಿ ನಡೆದುಕೊಳ್ಳುತ್ತಾಳೆ. ಅಷ್ಟಕ್ಕೂ ಶಾರ್ವರಿ ಮಾಧವನ ಮೇಲೆ ಕೆಟ್ಟ ಕಣ್ಣು ಹಾಕಿದ್ದಾಳೆ ಎಂಬುವುದು ತಿಳಿಯುತ್ತಿಲ್ಲ.

ಎಲ್ಲರ ಒಳಿತನ್ನು ಬಯಸುವ ಮಾಧವನಿಗೆ ತನ್ನ ಮಕ್ಕಳು ಶತ್ರುಗಳು ಅನ್ನುವ ರೀತಿ ನಡೆದುಕೊಳ್ಳುತ್ತಾರೆ. ಆದರೆ ಇದಾವುದನ್ನೂ ಮನದಲ್ಲಿ ಇಟ್ಟುಕೊಳ್ಳದೆ ಮಾಧವ ತನ್ನ ಇಚ್ಚೆಯ ಪ್ರಕಾರ ನಡೆದುಕೊಂಡು ಒಬ್ಬೊಂಟಿಯಾಗಿದ್ದಾನೆ. ಇನ್ನು ಶಾರ್ವಾರಿ ಜನಾರ್ಧನ್ ಬಳಿ ಮಾತನಾಡುತ್ತಾ ಇರುತ್ತಾಖೆ. ಅಭಿ ಒಳ್ಳೆಯ ಹಾದಿಯನ್ನು ಹಿಡಿಯಬೇಕು, ಆದರೆ ಮಾಧವ ಮಾತ್ರ ಕುಸಿದು ಹೋಗಬೇಕು ಎಂದು ಹೇಳುತ್ತ ಇರುತ್ತಾರೆ.

Kannada serial Srirasthu Shubhamasthu written update on 24th March

ಜನಾರ್ಧನ್ ಮಗಳು ಮಾಧವನ ಮಗನ ಮದುವೆ ಆದ ಬಳಿಕ ಆಸ್ತಿಯೆಲ್ಲ ಮಗಳ ಪಾಲಾಗುತ್ತದೆ ಯಾಕೆಂದರೆ ಜನಾರ್ಧನ್ ಗೆ ಇರೋದು ಒಬ್ಬಳೇ ಮಗಳು, ಆದರೂ ಜನಾರ್ಧನ್ ಬ್ಯುಸಿನೆಸ್ ವಿಷಯವಾಗಿ ಮಧವಾನನ್ನು ಎದುರು ಹಾಕಿಕೊಂಡಿದ್ದರೂ ಅದೇ ದ್ವೇಷ ಅನ್ನುವ ಹಾಗೆ ನಡೆದುಕೊಂಡು ಇರುವುದು ಮಾತ್ರ ಬಹಳ ಚೋದ್ಯ ಆಗುತ್ತದೆ. ಶಾರ್ವರಿ ಜೊತೆ ಸೇರಿಕೊಂಡು ಜನಾರ್ಧನ್ ಕೂಡ ಮನೆ ಹಾಳು ಮಾಡುವ ಯೋಚನೆ ಮಾಡುತ್ತಾ ಇರುತ್ತ್ತಾನೆ. ಇನ್ನು ಶಾರ್ವರಿ ಜನಾರ್ಧನ್ ಬಳಿ ಮಾಧವನ ಕೆಫೆ ಬಗ್ಗೆ ಮಾತನಾಡುತ್ತಾ ಇರುತ್ತಾಳೆ.

ಮಾಧವನ ಖುಷಿ ಇರುವುದು ಆತನ ಕೆಫೆಯಲ್ಲಿ ಆ ಕೆಫೆಯನ್ನೆ ಮುಚ್ಚಿಬಿಟ್ಟರೆ ಹೇಗೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆ ಕೆಫೆಯನ್ನು ತೆಗೆದು ಬೇರೆ ಏನಾದರು ಬ್ಯುಸಿನೆಸ್ ಅಲ್ಲಿ ಮಾಡಬಹುದು ಅಲ್ವಾ ಎಂದು ಹೇಳುತ್ತ ಇರುತ್ತಾಳೆ. ಇನ್ನು ಮಾಧವ ಮಹೇಶನ ಜೊತೆ ಮಾತನಾಡುತ್ತಾ ಇರುತ್ತಾನೆ. ಮಹೇಶ ನೀನು ಒಬ್ಬ ನನ್ನ ಬಳಿ ಇದ್ದರೆ ನನಗೆ ಇನ್ನೇನು ಬೇಡ, ಮಹೇಶ ನಾನು ಅಭಿ ನಿಶ್ಚಿತಾರ್ಥ ದಿನ ಎಷ್ಟೆಲ್ಲ ಕುಗ್ಗಿ ಹೋಗಿದ್ದೆ ಅದನ್ನು ನೀನು ನೋಡಿದ್ದಿಯಾ, ಆದರೆ ತುಳಸಿ ನನಗೆ ಸಹಾಯ ಮಾಡಿದರು ನನ್ನ ಮನದ ದುಃಖವನ್ನು ನಾನು ಅವರ ಮುಂದೆ ತೋಡಿಕೊಂಡ ಕೂಡಲೇ ನನಗೆ ಸ್ಪಂದಿಸಿ ನನ್ನನ್ನು ಸಂತೈಸಿದರು ಎಂದೆಲ್ಲ ಮಗುವಿನ ಹಾಗೆ ಮಹೇಶನ ಬಳಿ ಮಾತನಾಡುತ್ತಾನೆ.

ಮಹೇಶ ತುಳಸಿ ಅವರಿಗೆ ನಾನು ಏನಾದರೂ ಗಿಫ್ಟ್ ನೀಡಬೇಕು ಯಾವ ಗಿಫ್ಟ್ ನೀಡಬೇಕು ಆದರೆ ಯಾವ ಗಿಫ್ಟ್ ನೀಡಬೇಕು ಎಂಬುವುದು ಮಾತ್ರ ತನ್ನ ಅರಿವಿಗೆ ಬರುತ್ತಿಲ್ಲ ಎಂದೆಲ್ಲ ಯೋಚನೆ ಮಾಡುತ್ತಾ ಆತನ ಬಳಿ ಹೇಳುತ್ತಾನೆ. ಬಳಿಕ ಮಾಧವ ಮಹೇಶ ನಿನಗೆ ಏನಾದರೂ ಉಪಾಯ ಹೊಳೆದರೆ ಹೇಳು ಎಂದು ಹೇಳುತ್ತಾನೆ. ಇದನ್ನು ಕೇಳಿದ ಮಹೇಶ ಮಾಧವನ ಕೈ ಮೇಲೆ ಕೈ ಇಡಬೇಕು ಎನ್ನುವಷ್ಟರಲ್ಲಿ ಮಾಧವ ಅಲ್ಲಿದ್ದ ಕೈಯನ್ನು ತೆಗೆಯುತ್ತಾನೆ.

ಇನ್ನು ಮಾಧವ ವನಜ ಅವರು ಕೊಟ್ಟ ದುಡ್ಡನ್ನು ತುಳಸಿಗೆ ಹೇಗಾದರೂ ಮಾಡಿ ತಲುಪಿಸಬೇಕು ಹಾಗೆಯೇ ಏನಾದರು ಗಿಫ್ಟ್ ಕೊಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ದತ್ತ ಹಾಗೂ ಶೇಷ ಹೊರಗಡೆ ಹೋಗುತ್ತಾ ಇರುವಾಗ ಮಕ್ಕಳೆಲ್ಲ ಬಂದು ದತ್ತನ ಬಳಿ ಫುಟ್ ಬಾಲ್ ಆಡಲು ಹೇಳುತ್ತಾರೆ. ಆದರೆ ಫುಟ್ ಬಾಲ್ ಆಡುವ ಎಂದಾಗ ದತ್ತ ಮೊದಲಿಗೆ ಸುಮ್ಮನೆ ಇದ್ದರೂ ಆ ಬಳಿಕ ಮಕ್ಕಳ ಜೊತೆ ಮಕ್ಕಳಾಗಿ ಫುಟ್ ಬಾಲ್ ಆಟ ಆಡುತ್ತಾರೆ.

ಇನ್ನು ಸಂಧ್ಯಾ ಮಾತ್ರ ತಾಯಿಯ ಬಳಿ ಹೊಸ ಕ್ರಿಯೇಟ್ ಮಾಡಿದ್ದಾಳೆ. ಸಂಧ್ಯಾ ನಾಟಕಕ್ಕೆ ಬಲಿಯಾಗಿ ತುಳಸಿ ಸಂಧ್ಯಾಗೆ ಹಣ ಕೊಡುವುದಾಗಿ ಮಾತು ಕೊಡುತ್ತಾಳಾ ಕಾದು ನೋಡಬೇಕಿದೆ.

More from Filmibeat

English summary
Kannada serial sri rastu shubha mastu written updated on 24th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X