Srirasthu Shubhamasthu: ಮಗನ ವರ್ತನೆಯಿಂದ ಬೇಸರಗೊಂಡ ತುಳಸಿ; ಸಮರ್ಥ್ ಮಾತಿಗೆ ಮನ್ನಣೆ ನೀಡುತ್ತಾರ?
ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ತುಳಸಿ ಮೇಲೆ ಮಾಧವನ ಮನಸಿದೆ ಎನ್ನುವ ವಿಚಾರ ಯಾರಿಗೆ ತಿಳಿಯಬಾರದು ಎಂದುಕೊಂಡು ಇದ್ದರೂ ಅವರಿಗೆ ತಿಳಿದು ಹೋಗಿದೆ. ದತ್ತ ಬೇಕಂತಲೇ ಮೊಬೈಲ್ ಗೆ ಸಮರ್ಥ್ ಕಾಲ್ ಬಂದಾಗ ರಿಸೀವ್ ಮಾಡಿ ಕಿಸೆಗೆ ಹಾಕಿಕೊಂಡರೋ ಅಥವಾ ಮಾಧವನಿಗೆ ತುಳಸಿ ಮೇಲೆ ಇರುವ ಕಾಳಜಿ ಎನು ಎನ್ನುವುದರ ಬಗ್ಗೆ ತಿಳಿಯಬೇಕು ಎಂದು ಸ್ಪೀಕರ್ ಆನ್ ನಲ್ಲಿ ಇಟ್ಟಿದ್ದರೋ.. ಅಥವಾ ಕೈ ತಪ್ಪಿ ಕಾಲ್ ರಿಸೀವ್ ಆಯಿತೋ ಎಂಬುವುದನ್ನು ಕಾದು ನೋಡಬೇಕಿದೆ.
ಇನ್ನೂ ಸರ್ಥ ಮಾತ್ರ ಈ ವಿಚಾರ ತಿಳಿದ ದಿನದಿಂದ ಬಹಳ ಕೋಪ ಮಾಡಿಕೊಂಡು ಇದ್ದಾನೆ.ನನ್ನ ತಾಯಿಗೆ ಯಾವುದೇ ಕಳಂಕ ಬರಬಾರದು ಆಕೆ ಯಾವತ್ತೂ ಚೆನ್ನಾಗಿ ಇರಬೇಕು ಎನ್ನುವ ದೃಷ್ಟಿಯಿಂದ ಬೇಸರ ಮಾಡಿಕೊಂಡು ಇರಲು ಬಹುದು ಆತ. ಇನ್ನೂ ಸಮರ್ಥ್ ಸಿರಿ ಬಳಿ ಬಂದು ಹೇಳುತ್ತಾನೆ ಅಮ್ಮ ನಾಳೆಯಿಂದ ಕೆಲಸಕ್ಕೆ ಹೋಗುವುದು ಬೇಡ ಎಂದು ಹೇಳಿದಾಗ ಸಿರಿ ಮಾತ್ರ ಎಲ್ಲರ ಹಾಗೆ ಯಾಕೆ ಹೋಗಬಾರದು.

ಅವರಿಗೆ ಕೆಲಸಕ್ಕೆ ಹೋದರೆ ಮೈಂಡ್ ಫ್ರೀ ಆಗುತ್ತದೆ.. ಹಾಗೆಯೇ ಅವರಿಗೆ ಒಳ್ಳೆಯ ಸಂಬಳ ಕೂಡ ಇದೆ ಎಂದು ಹೇಳುತ್ತಾರೆ ಆದರೆ ಸಮರ್ಥ್ ಇದ್ಯಾವುದನ್ನೂ ಕೇಳಿಸಿಕೊಳ್ಳದೆ ನನ್ನ ಅಮ್ಮ ಎಲ್ಲಿಯೂ ಕೆಲಸಕ್ಕೆ ಹೋಗುವುದು ಬೇಡ ಎಂದು ಹೇಳುತ್ತ ಇರುತ್ತಾರೆ. ಆದರೆ ಸಮರ್ಥ್ ಮಾತನ್ನು ಸಿರಿ ಒಪ್ಪಿಕೊಳ್ಳುವುದು ಇಲ್ಲ.. ಆ ಬಳಿಕ ಸಮರ್ಥ್ ಮಾಧವ ಹಾಗೂ ದತ್ತ ನಡುವೆ ನಡೆದ ಮಾತುಕತೆಯನ್ನು ಹೇಳುತ್ತಾನೆ
ಇದನ್ನು ಕೇಳಿಸಿಕೊಂಡ ಸಿರಿ ಮಾಧವ ಸರ್ ಮಾತಿನಲ್ಲೂ ನ್ಯಾಯ ಇದೆ .. ನಮ್ಮ ಅತ್ತೆಯ ಮನಸ್ಸನ್ನು ಇಷ್ಟ ಮಾಡಿಕೊಳ್ಳದವರೆ ಇಲ್ಲ . ಮಾಧವ ಸರ್ ಒಂಟಿ ಆಗಿಯೇ ಕಾಲ ಕಳೆಯುತ್ತಾ ಇರುತ್ತಾರೆ. ಅವರ ತಲೆಯಲ್ಲಿ ನೂರಾರು ಆಲೋಚನೆಗಳು ಬಂದು ಹೋಗುತ್ತಾ ಇರುತ್ತದೆ ಅದೆಲ್ಲವನ್ನೂ ಹೇಳಿಕೊಳ್ಳಲಾದರು ಒಂದು ಜೀವ ಬೇಕು ಎಂದು ಎನಿಸಿಬಿಡುತ್ತದೆ.. ಆ ಕಾರಣದಿಂದ ಆಗಿ ಮಾಧವ ಸರ್ ಗೂ ತುಳಸಿ ಅತ್ತೆಯ ಮೇಲೆ ಪ್ರೀತಿ ಆಗಿರುತ್ತದೆ ಇದರಲ್ಲಿ ಎನು ತಪ್ಪಿಲ್ಲ ಅವರ ವಯಸ್ಸಿಗೆ ಬಂದಾಗ ನಾವು ಒಬ್ಬೊಂಟಿ ಆಗಿ ಇರುವಾಗ ಅವರ ಪರಿಸ್ಥಿತಿ ನಮಗೆ ಅರ್ಥ ಆಗುತ್ತದೆ ಎಂದು ಹೇಳುತ್ತಾರೆ..
ಆಗ ಸಮರ್ಥ್ ಮಾತ್ರ ಕೆಂಡಾಮಂಡಲ ಆಗಿ ಇರುತ್ತಾನೆ. ಇನ್ನೂ ಸಿರಿ ಹೇಳುತ್ತಾಳೆ.. ಮಾಧವ ಸರ್ ಹಾಗೆಯೇ ನಮ್ಮ ಅತ್ತೆಗು ಮಧ್ವ ಸರ್ ಮೇಲೆ ಪ್ರೀತಿ ಆಗಬಹುದು ಮುಂದೊಂದು ದಿನ ಅವರಿಬ್ಬರ ಮದುವೆನೇ ಆಗಬಹುದು ಎಂದು ಹೇಳುತತ್ತಾಳೆ ಸಿರಿ ಇದನ್ನು ಕೇಳಿದ ಸಮರ್ಥ್ ಮಾತ್ರ ಸಿರಿ ಮೇಲೆ ಕೈ ಮಾಡಲು ಕೈ ಎತ್ತಿಯೆ ಬಿಡುತ್ತಾನೆ.
ಸಮರ್ಥ್ ವರ್ತನೆಯಿಂದ ಬೇಸರ ಪಟ್ಟುಕೊಂಡು ಸಿರಿ ಮಾತ್ರ ಆತನ ಜೊತೆ ಮಾತನಾಡುವುದೇ ಬಿಟ್ಟಳು. ಇನ್ನೂ ಇಂದಿನಂತೆ ಬೆಳಗ್ಗೆ ಸಮರ್ಥ್ ತಿಂಡಿ ತಿನ್ನಲು ಡೈನಿಂಗ್ ರೂಮ್ ಗೆ ಬಂದಾಗ ಸಿರಿ ಆತನ ಬಳಿ ಎನು ಮಾತನಾಡದೆ ತಟ್ಟೆಯನ್ನು ಇಡುತ್ತಾಳೆ ಹಾಗೆಯೇ ದತ್ತನಿಗೆ ಕೂಡ ತಟ್ಟೆ ಇಡುತ್ತಾಳೆ ಸ್ವಲ್ಪ ಹೊತ್ತಾದ ಬಳಿಕ ಎಲ್ಲರೂ ಡೈನಿಂಗ್ ರೂಮ್ ಗೆ ಬರುತ್ತಾರೆ.
ತಿಂಡಿ ತಿನ್ನುವ ವೇಳೆ ಸಮರ್ಥ್ ತನ್ನ ತಾಯಿ ಬಳಿ ಹೇಳುತ್ತಾನೆ ಅಮ್ಮ ನೀನು ಇನ್ನೂ ಕೆಫೆಗೆ ಹೋಗುವುದು ಬೇಡ. ಮನೆಯಲ್ಲಿ ಇರು ಎಂದಾಗ ತುಳಸಿ ಗೆ ಶಾಕ್ ಆಗುತ್ತದೆ ಮೊನ್ನೆ ತಾನೇ ಸಂಬಳ ತೆಗೆದುಕೊಂಡೆ ಇದೀಗ ಕೆಲಸಕ್ಕೆ ಹೋಗಲಿಲ್ಲ ಎಂದರೆ ಮಾಧವ ಸರ್ ಗೆ ಹೇಗಾಗಬೇಡ ಎಂದಾಗ ಸಮರ್ಥ್ ಕೋಪ ಇನ್ನೂ ಹೆಚ್ಚು ಮಾಧವ ಸರ್ ಗೆ ಏನಾದರು ನನಗೆ ಎನು ಎಂದು ಜೋರಾಗಿ ಹೇಳುತ್ತಾನೆ.
ಇದನ್ನು ಕೇಳಿಸಿಕೊಂಡ ದತ್ತ ಮಾತನಾಡಲು ಎಂದು ಬಾಯಿ ತೆಗೆದಾಗ ನೀವು ಅಡ್ಡ ಬರಬೇಡಿ .. ನನ್ನ ತಾಯಿ ಬಳಿ ನಾನು ಮಾತನಾಡುತ್ತಾ ಇರುವುದು ನಿಮಗೆ ಎಷ್ಟು.. ನಿಮ್ಮ ಸೊಸೆಯ ಮೇಲೆ ಹಕ್ಕು ಇದೆಯೋ ಹಾಗೆಯೇ ನನಗೆ ಕೂಡ ನನ್ನ ತಾಯಿ ಸರಿ ತಪ್ಪು ಬಗ್ಗೆ ಪ್ರಶ್ನೆ ಮಾಡುವ ಹಕ್ಕಿದೆ ಎಂದು ಹೇಳುತ್ತಾನೆ.. ಸಮರ್ಥ್ ಮಾತಿಗೆ ಎಲ್ಲರಿಗೂ ಆಘಾತ ಆಗುತ್ತದೆ.


Click it and Unblock the Notifications











