Srirasthu Shubhamasthu: ಮಾಧವನ ಕಿಫೆಯಲ್ಲಿ ಊಟ ಸವಿದ ದತ್ತ; ದತ್ತನ ಲೆಕ್ಕದಲ್ಲಿ ಮಾಧವಗೆ ಸ್ಪೆಷಲ್ ಗಿಫ್ಟ್!

Kannada serial Srirasthu Shubhamasthu written update on 27th February

ಮಾಧವನ ಕೆಫೆಯಲ್ಲಿ ಊಟ ಮುಗಿಸಿದ ತುಳಸಿ ಕೈ ತೊಳೆಯಲು ತೆರಳುತ್ತಾಳೆ. ಆಗ ಸಿರಿ ಅಮ್ಮ ಕೈ ತೊಳೆಯಲು ಇಲ್ಲಿಯೇ ತರುತ್ತಾರೆ ಎಂದಾಗ ತುಳಸಿ ನನಗೆ ಅದು ಸರಿ ಆಗುವುದಿಲ್ಲ ಅದಕ್ಕಾಗಿ ನಾನು ಅಲ್ಲೇ ಹೋಗಿ ಕೈ ತೊಳೆಯುತ್ತೇನೆ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಸಿರಿ ಆಯಿತು ಅನ್ನುತ್ತಾಳೆ. ತುಳಸಿ ಹೋದ ಬಳಿಕ ಅಲ್ಲಿಗೆ ಬಂದ ಮಾಧವ ಎಲ್ಲರ ಬಳಿಯೂ ಏನಾದರೂ ಬೇಕಾ ಎಂದು ಕೇಳುತ್ತಾನೆ. ಆಗ ಎಲ್ಲರಿಗೂ ಹೊಟ್ಟೆ ತುಂಬಿತು ಎಂದು ಜೋರಾಗಿ ಹೇಳುತ್ತಾರೆ. ಇದನ್ನು ಕೇಳಿದ ಮಾಧವ ಕೈ ತೊಳೆಯಲು ನೀರನ್ನು ಕಳುಹಿಸುತ್ತಾನೆ.

ದತ್ತ ಅದನ್ನು ಗಟ ಗಟನೆ ಕುಡಿದು ಬಿಡುತ್ತಾನೆ. ಅದನ್ನು ನೋಡಿ ಸಮರ್ಥ್ ತಾತ ಇದೇನು ಮಾಡಿಬಿಟ್ಟರಿ ನೀವು, ಇದನ್ನು ಯಾಕೆ ಕುಡಿದದ್ದು ಇದು ಕೈ ತೊಳೆಯಲು ಕೊಟ್ಟ ನೀರು ಎಂದಾಗ ದತ್ತಗೆ ಶಾಕ್ ಆಗುತ್ತದೆ. ಆದರೂ ದತ್ತ ಏನೇನೋ ಸಬೂಬು ಹೇಳಿ ಮೊಮ್ಮಗನ ಬಾಯಿ ಮುಚ್ಚಿಸಿ ಬಿಡುತ್ತಾರೆ. ಇದನ್ನೆಲ್ಲ ನೋಡಿದ ಸಿರಿ ಹಾಗೂ ಮಾಧವ ನಕ್ಕು ಬಿಕುಟರೆ.

ಇನ್ನು ತುಳಸಿ ಮಾಧವನ ಕೆಫೆ ಸುತ್ತುತ್ತ ಇರಬೇಕಾದರೆ ಉಪ್ಪಿನಕಾಯಿ ಮಾರಾಟ ಮಾಡುತ್ತಿರುವುದನ್ನು ನೋಡುತ್ತ ಇರುವಾಗ ಅಲ್ಲಿಗೆ ಬಂದ ಮಾಧವ ಇದು ನಾನು ತರಕಾರಿ ತೆಗೆದುಕೊಳ್ಳುವ ತಾಯವ್ವ ಮಾಡುವ ಉಪ್ಪಿನ ಕಾಯಿ, ಆಕೆಗೆ ಬಹಳ ಕಷ್ಟ ಆ ಕಾರಣ ಬೆಳಗ್ಗೆ ತರಕಾರಿ ಮಾರಿ ರಾತ್ರಿ ಹೊತ್ತು ಉಪ್ಪಿನಕಾಯಿ ಮಾಡುತ್ತಾರೆ ಅದನ್ನು ಅವರಿಗೆ ಸ್ವಲ್ಪ ಸಹಾಯ ಆಗಲಿ ಎಂದು ಮಾರಾಟ ಮಾಡುತ್ತೇವೆ ಎಂದು ಹಕೂರುತ್ತಾ

ಅದನ್ನು ಕೇಳಿ ತುಳಸಿ ಕೂಡ ಯೋಚನೆ ಮಾಡುತ್ತಾಳೆ. ಅದನ್ನು ನೋಡಿದ ಮಾಧವ ನೀವು ಡಬ್ಬ ಕೊಡುವ ಬಗ್ಗೆ ಯೋಚನೆ ಮಾಡುತ್ತಾ ಇದ್ದೀರಾ ಎಂದೆಲ್ಲ ಹೇಳಿದಾಗ ತುಳಸಿ ತನ್ನ ಮನದಲ್ಲಿ ಇರುವ ತಳಮಳವನ್ನು ಹೇಳಿಕೊಳ್ಳುತ್ತಾಳೆ.

ಅದನ್ನು ನೋಡಿದ ಮಾಧವ ಮನಸ್ಸಿಗೆ ಖುಷಿ ಸಿಗುವುದು ಆದರೆ ನಮ್ಮ ಕೈಯಲ್ಲಿ ಆದ ಕೆಲಸ ಮಾಡಬೇಕು ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ಮಾತ್ರ ಮನದಲ್ಲೇ ಏನೋ ಒಂದು ನಿರ್ಧಾರ ಮಾಡಿಕೊಂಡು ಇರುತ್ತಾಳೆ. ಇನ್ನು ತುಳಸಿ ಕೈ ತೊಳೆದು ಡೈನಿಂಗ್ ಟೇಬಲ್ ಬಳಿ ಬಂದು ಕೂರುತ್ತಾಳೆ.

ಬಳಿಕ ಎಲ್ಲರೂ ಹೊರಡಲು ಅನುವಾದಾಗ ದತ್ತ ಕೈಯಲ್ಲಿ ಇದ್ದ ಗಣೇಶನ ಮೂರ್ತಿಯನ್ನು ಮಾಧವನಿಗೆ ಕೊಟ್ಟು ನಾನು ಎಲ್ಲೂ ಬಿಟ್ಟಿ ಊಟ ಮಾಡುವವನೂ ಅಲ್ಲ ನೀನು ಇದನ್ನು ತೆಗೆದುಕೋ ಎಂದು ಕೊಡುತ್ತಾರೆ. ಬಳಿಕ ಅಲ್ಲಿಂದ ಮನೆಗೆ ಹೋಗುತ್ತಾರೆ. ಇನ್ನು ಅವಿ ಹಾಗೂ ಶಾರ್ವರಿ ಅಭಿ ಮೆಚ್ಚಿದ ಹುಡುಗಿ ಮನೆಗೆ ಹೋಗುತ್ತಾರೆ.

ಇನ್ನು ಹುಡುಗಿ ಬಳಿ ಎಲ್ಲಾ ಮಾತು ಕತೆ ಆದ ಬಳಿಕ ಆಕೆಯ ತಂದೆ ಬರುತ್ತಾರೆ. ಆಕೆಯ ತಂದೆಯನ್ನು ನೋಡಿ ಒಮ್ಮೆ ಅವಿಗೆ ಶಾಕ್ ಆಗುತ್ತದೆ. ಯಾರಿಂದ ನಮ್ಮ ಬ್ಯುಸಿನೆಸ್ ಗೆ ಇಷ್ಟು ಲಾಸ್ ಆಗುತ್ತದೆಯೋ ಹಾಗೆಯೇ ತನ್ನ ತಂದೆಯನ್ನು ನೋಡಿದರೆ ಯಾರಿಗೆ ಆಗುತ್ತಿಲ್ಲವೋ ಅವರ ಮಗಳನ್ನು ನಾವು ಸೊಸೆ ಆಗಿ ಒಪ್ಪುವುದು ಹೇಗೆ ನನಗೆ ಈ ಮದುವೆ ಒಪ್ಪಿಗೆ ಎಲ್ಲಾ ಎಂದಾಗ ಶಾರ್ವರಿ ಏನೇನೋ ಸಬೂಬು ಹೇಳುತ್ತಾಳೆ. ಆದರೆ ಶಾರ್ವರಿ ಮಾತನ್ನು ಕೊಂಚವೂ ಕೇಳಿಸಿಕೊಳ್ಳದೆ ಅವಿ ಜನಾರ್ಧನ ಮನೆಯಿಂದ ಹೊರಟು ಬಿಡುತ್ತಾನೆಅ

ಇನ್ನು ಇದೆಲ್ಲವನ್ನೂ ನೋಡಿ ಅಭಿ ಹುಡುಗಿಗೆ ಶಾಕ್ ಆಗುತ್ತದೆ. ಇನ್ನು ಜುಗ್ಗ ಮನೆಯಲ್ಲಿ ತಾಯಿ ಮಗಳು ಇಬ್ಬರು ಅಳುತ್ತಾ ಇದ್ದರೆ ಸೊಸೆ ಹಾಗೂ ಮಾವ ಕಿತ್ತಾಡುತ್ತಾ ಇದ್ದಾರೆ. ಇದನ್ನು ನೋಡಿದ ಜಗ್ಗನ ಹೆಂಡತಿಗೆ ಕೋಪ ಬರುತ್ತೆ. ಉಪ್ಪಿಟ್ಟು ಕೇಸರಿ ಬಾತ್ ಉಳಿಸಲು ಹೋಗಿ ನನ್ನ ಮಗಳ ಮದುವೆಗೆ ನಿಂತು ಹೋಗುವ ಹಾಗೆ ಆಯಿತಲ್ಲ ಎಂದು ಸಂಕಟ ಪಡುತ್ತಾ ಇರುತ್ತಾಳೆ.

ಇನ್ನು ಚೋಟು ತುಳಸಿ ಮನೆಗೆ ಓಡಿ ಬರುತ್ತಾನೆ. ಆಗ ಆತನ ತಾಯಿ ಕೂಡ ಹಿಂದೆಯಿಂದ ಬರುತ್ತಾಳೆ. ಅದನ್ನು ನೋಡಿದ ಚೋಟು ತುಳಸಿ ಆಂಟಿ ಎಂದು ಕರೆಯುತ್ತಾನೆ. ಅಷ್ಟರಲ್ಲಿ ತುಳಸಿ ಹಾಗೂ ಆಕೆಯ ಕುಟುಂಬ ಕೆಫೆಯಲ್ಲಿ ಊಟ ಮುಗಿಸಿ ಬರುತ್ತಾರೆ. ತುಳಸಿಯನ್ನು ನೋಡಿದ ಕೂಡಲೇ ಚೋಟು ತಾಯಿ ಜಗಳಕ್ಕೆ ಬರುತ್ತಾಳೆ.

ಶೇಷನ ಮಾತು ಲೆಕ್ಕಿಸದೆ ತುಳಸಿಗೆ ಬಯ್ಯುತ್ತಾ ಇರುತ್ತಾಳೆ. ಇದೆಲ್ಲವನ್ನೂ ಕೇಳಿಸಿಕೊಂಡ ದತ್ತ ನನ್ನ ಸೊಸೆ ಹೇಗೆ ಎಂದು ನನಗೆ ಗೊತ್ತು, ಮೊದಲು ನೀನು ನೆಟ್ಟಗೆ ಆಗು ಎಂದೆಲ್ಲ ಹೇಳುತ್ತಾನೆ. ಆದನ್ನು ಕೇಳದೆ ಎಲ್ಲರೆದುರು ಕೂಗಾಡಿ ರಂಪಾಟ ಮಾಡುತ್ತಾಳೆ.

More from Filmibeat

English summary
Kannada serial Srirasthu Shubhamasthu written update on 27th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X