Srirasthu Shubhamasthu: ಸಂಧ್ಯಾಗೆ ಹಣ ಕೊಡಲು ಒಪ್ಪಿದ ದತ್ತ!

By Poorva

ಶ್ರೀರಸ್ತು ಶುಭಮಸ್ತು ಧಾರವಾಹಿ ನೋಡುಗರಿಗೆ ಕುಹಲತೂ ಮೂಡಿಸಿದೆ. ಇದೀಗ ಮಹೇಶ ಹುಷರಾಗುತ್ತಾ ಇದ್ದಾನೆ. ಇದನ್ನು ನೋಡಿದ ಶಾರ್ವರಿಗೆ ಶಾಕ್ ಕೂಡ ಆಗುತ್ತದೆ. ಶಾರ್ವರಿ ಮಾದವನನ್ನು ಕಂಡು ಕಿಡಿ ಕಾರುತ್ತಾ ಇರುತ್ತಾಳೆ. ಇನ್ನು ಮಹೇಶನಿಗೆ ಪ್ರಜ್ಞೆ ಬಂದು ಮೊದಲಿನ ಹಾಗೆ ಆದರೆ ತನ್ನ ಬಂಡವಾಳ ಹೊರ ಬೀಳುತ್ತದೆ ಎಂಬ ಗಾಬರಿ ಆಗುತ್ತದೆ.

ಇನ್ನು ಮಾಧವಗೆ ಸ್ನೇಹಿತೆ ಆಗಿರುವ ತುಳಸಿ ಯಾರು ಎಂಬುದನ್ನು ಪತ್ತೆ ಹಚ್ಚಲು ಶಾರ್ವರಿ ಶುರು ಮಾಡಿದ್ದಾಳೆ. ಆದರೆ ಮದುವೆಯಲ್ಲಿ ಸಿಕ್ಕಿದಾಕೆಯೇ ತುಳಸಿ ಎಂಬುವುದು ಶಾರ್ವರಿಗೆ ಇನ್ನೂ ತಿಳಿಯಬೇಕಷ್ಟೇ. ಇನ್ನು ಸಂಧ್ಯಾ ಮಾಡಿದ ಪ್ಲಾನ್ ಎಲ್ಲಾ ವ್ಯರ್ಥ ಆಗಿದೆ. ಆಕೆ ಕೈಗೆ ಗಾಯ ಮಾಡಿಕೊಂಡವಳ ಹಾಗೆ ನಟನೆ ಮಾಡಿ ತನ್ನ ತಾಯಿ ಹಾಗೂ ಮನೆ ಮಂದಿಯನ್ನು ಮೂರ್ಖರನ್ನಾಗಿ ಮಾಡಿದ್ದಳು. ಆದರೆ ಇದನ್ನು ನಂಬದ ಆಕೆಯ ಮಾವ ಜಗ್ಗ ಮಾತ್ರ ಆಕೆಯ ಕೋಣೆಯತ್ತ ಒಂದು ಕಿವಿಯನ್ನೇ ಇಟ್ಟಿರುತ್ತಾನೆ. ರೂಮಿನ ಒಳಗೆ ಬಂದ ಸಂಧ್ಯಾ ಬಹಳ ಖುಷಿ ಪಡುತ್ತಾಳೆ. ನಾನು ನಾಟಕ ಆಡುತ್ತಾ ಇದ್ದೇನೆ ಎಂಬ ವಿಚಾರ ಯಾರ ಗಮನಕ್ಕೆ ಬಾರದೆ ಇರುವುದನ್ನು ನೋಡಿ ಬಹಳ ಖುಷಿ ಆಗುತ್ತದೆ.

Kannada serial Srirasthu Shubhamasthu written update on 28th March

ಆ ವೇಳೆ ಆಕೆಯ ಗಂಡನಿಗೆ ಕೂಡ ಫೋನ್ ಟ್ರೈ ಮಾಡುತ್ತಾಳೆ. ಆದರೆ ಆತ ಕರೆ ಸ್ವೀಕಾರ ಮಾಡದ ಕಾರಣ ಸುಮ್ಮನೆ ಇರುತ್ತಾಳೆ. ಬಳಿಕ ಕೈಗೆ ಕಟ್ಟಿರುವ ಬ್ಯಾಂಡೇಜ್ ತೆಗೆಯುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ಜುಗ್ಗನನ್ನು ನೋಡಿದ ಸಂಧ್ಯಾಗೆ ಶಾಕ್ ಆಗುತ್ತದೆ. ಕೈಯಲ್ಲಿ ಬೇರೆ ಬ್ಯಾಂಡೇಜ್ ಇಲ್ಲ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುವಾಗ ಜುಗ್ಗ ನನ್ನ ಸೊಸೆ ಬಹಳ ಕಿಲಾಡಿ ಎಂಬುವುದು ನನಗೆ ಗೊತ್ತು ಆದರೆ ಇಷ್ಟ್ರರ ಮಟ್ಟಿಗೆ ಕಿಲಾಡಿ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದಾಗ ಸಂಧ್ಯಾಗೆ ನನ್ನ ಮಾವನಿಗೆ ಎಲ್ಲಾ ವಿಚಾರ ತಿಳಿದು ಹೋಗಿದೆ ಎಂದು ತಿಳಿಯುತ್ತದೆ.

ಇನ್ನು ತುಳಸಿ ಬಹಳ ಆತಂಕ ಪಡುತ್ತಾ ಇರುವಾಗ ದತ್ತ ತುಳಸಿ ಬಳಿ ಏನಾಯಿತು ತುಳಸಿ ಎಂದಾಗ ತುಳಸಿ ತಾನು ಮಗಳ ಮನೆಗೆ ಹೋಗಿದ್ದ ವಿಚಾರ ಅಲ್ಲಿ ನಡೆದ ವಿಚಾರವನ್ನು ಬಹಳ ಬೇಸರ ಮಾಡಿಕೊಂಡು ಹೇಳುತ್ತಾಳೆ. ಮಾವ ನಾವು ಸಂಧ್ಯಾಗೆ ಸಹಾಯ ಮಾಡಲೇ ಬೇಕಾಗಿದೆ ಯಾಕೆಂದರೆ ಅವಳು ಬಹಳ ಕಷ್ಟ ಪಡುತ್ತ ಇದ್ದಾಳೆ ಎಂದು ಹೇಳಿದಾಗ ಆಕೆಗೆ ಅಳು ಬಂದು ಬಿಡುತ್ತದೆ.

ದತ್ತ ಮಾತ್ರ ಶಾಕ್ ಆಗಿ ನಾನು ಏನು ಮಾಡಬೇಕು, ಇದನ್ನೆಲ್ಲ ನನ್ನ ಬಳಿ ಯಾಕೆ ಹೇಳುತ್ತ ಇದ್ದೀಯಾ ಎಂದು ತುಳಸಿ ಜೊತೆ ಹೇಳಿದಾಗ ತುಳಸಿ ದಯನೀಯವಾಗಿ ಮಾವನ ಬಳಿ ಸಹಾಯ ಕೇಳುತ್ತಾಳೆ. ಇದನ್ನು ಕೇಳಿದ ದತ್ತ ಸರಿ ಎಂದು ಒಪ್ಪಿಕೊಳ್ಳುತ್ತಾನೆ. ಸಂಧ್ಯಾಗಾಗಿ ಎತ್ತಿಟ್ಟ ಆಕೆಯ ಹಣವನ್ನು ಕೊಡುವ ನಿರ್ಧಾರ ಮಾಡುತ್ತಾರ. ಇನ್ನು ಸಿರಿ ಹಾಗೂ ಸಮರ್ಥ್ ತನ್ನ ಮಾವನ ಮನೆಯಲ್ಲಿ ಬಹಳ ಖುಷಿಯಲ್ಲಿ ಇರುತ್ತಾರೆ. ಸಿರಿ ತನ್ನ ತವರಿಗೆ ಬಂದು ಬಹಳ ಖುಷಿಯಲ್ಲಿ ಅಡುಗೆ ಮಾಡುತ್ತಾ ತಂದೆಯ ಕಾಲು ಎಳೆಯುತ್ತಾ ಮಾತನಾಡುತ್ತಾ ಇರುತ್ತಾಳೆ.

Kannada serial Srirasthu Shubhamasthu written update on 28th March

ಇನ್ನು ರವೀಂದ್ರ ಎಲ್ಲರೂ ಊಟ ಮಾಡುತ್ತಾ ಇರುವಾಗ ಸಮರ್ಥ್ ಜೊತೆ ನನ್ನ ಮಗಳ ಜೊತೆ ಯಾವಾಗ ಮದುವೆ ಆಗುತ್ತಿಯಾ ಎಂದು ಕೇಳಿದಾಗ ಸಿರಿಗೆ ಶಾಕ್ ಆದರೂ ಅಪ್ಪ ಯಾಕೋ ಸುಮ್ಮನೆ ಈ ರೀತಿ ಮಾತನಾಡುತ್ತಾ ಇರಬೇಕು ಎಂದು ಎದ್ದು ಹೋಗುತ್ತಾಳೆ. ಆದರೆ ಸಮರ್ಥ್ ತನ್ನ ಮಾವನಿಗೆ ಏನೋ ಆಗಿದೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

More from Filmibeat

English summary
Kannada serial sri rastu shubha mastu written updated on 28th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X