Srirasthu Shubhamasthu: ಕೊನೆಗೂ ಸಿರಿಗೆ ತಂದೆಯ ಖಾಯಿಲೆ ಬಗ್ಗೆ ತಿಳಿದೇ ಹೋಗುತ್ತಾ?
ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುವಂತೆ ಮಾಡುತ್ತಿದೆ. ಇದೀಗ ಡಬ್ಬಿ ಸರ್ವಿಸ್ ಶುರು ಮಾಡಲು ತುಳಸಿಗೆ ಮಾವನ ಬೆಂಬಲ ಸಿಕ್ಕಿದೆ. ತುಳಸಿ ಸಿರಿ ಬಳಿ ಮಾತನಾಡುತ್ತಾ ಇರುವುದನ್ನು ದತ್ತ ಅದು ಹೇಗೋ ಕೇಳಿಸಿಕೊಂಡು ಬಿಟ್ಟಿದ್ದಾರೆ. ಮರುದಿನ ಬೆಳಗ್ಗೆ ಟಿಫನ್ ಬಾಕ್ಸ್‌ಗಳನ್ನು ತರುತ್ತಾರೆ.
ಇದನ್ನೆಲ್ಲ ನೋಡಿ ತುಳಸಿಗೆ ಶಾಕ್ ಆದರೂ ಏನು ಎಂದು ತಿಳಿಯದೇ ಸುಮ್ಮನೆ ಆಗಿ ಬಿಡುತ್ತಾಳೆ. ಆದರೆ ತಾತನ ನಡವಳಿಕೆ ಕಂಡು ತುಳಸಿ ಬಹಳ ಖುಷಿ ಪಡುತ್ತಾಳೆ. ಬಳಿಕ ಡಬ್ಬಿ ಸರ್ವಿಸ್‌ಗೆ ಒಪ್ಪಿಗೆಯನ್ನು ಸೂಚಿಸುತ್ತಾರೆ. ಸಿರಿ ಖುಷಿಯಲ್ಲಿ ದತ್ತನನ್ನು ತಬ್ಬಿಕೊಳ್ಳಲು ಬರುತ್ತಾಳೆ. ಅದನ್ನು ನೋಡಿದ ದತ್ತಾಗೆ ಹುಸಿ ಕೋಪ ಬರುತ್ತದೆ. ಅದನ್ನು ಕಂಡ ಸಿರಿ ಕೈಕುಲುಕಿ ಸಂಭ್ರಮಿಸುತ್ತಾಳೆ.

ಇನ್ನು ತುಳಸಿ ಮಾವನಿಗೆ ಕೃತಜ್ಞತೆ ಸಲ್ಲಿಸುತ್ತಾಳೆ. ಸಿರಿ ತಾತನ ಬಳಿ ಇಂದೇ ಡಬ್ಬಿ ಸರ್ವಿಸ್ ಕೊಡಬಹುದ ಎಂದೆಲ್ಲ ಹೇಳುತ್ತಾಳೆ. ಅದನ್ನು ಕೇಳಿದ ದತ್ತ ಶುಭಸ್ಯ ಶೀಗ್ರಾಂ ಎಂದು ಹೇಳುತ್ತಾನೆ. ಅದನ್ನು ಕೇಳಿ ಎಲ್ಲರೂ ಸಂಭ್ರಮ ಪಡುತ್ತಾರೆ. ಇನ್ನು ಅಭಿಯನ್ನು ಹುಡುಕಿಕೊಂಡು ಕ್ಲೈಂಟ್ ಬರುತ್ತಾರೆ. ಆದರೆ ಅವಿ ಕ್ಲೈಂಟ್ ಮೀಟಿಂಗ್‌ಗೆ ತೆರಳಿದ್ದಾನೆ. ಅಭಿ ಮೀಟಿಂಗ್ ಅರೇಂಜ್ ಮಾಡಿರುವುದು ಅವಿಗೆ ತಿಳಿದಿಲ್ಲ.
ಅಭಿ ಅವಿಗೆ ಕರೆ ಮಾಡಿ ಮೀಟಿಂಗ್ ಅರೇಂಜ್ ಮೆಂಟ್ ಮಾಡಿದ್ದೇನೆ ಬಾ ಎಂದು ಕರೆಯುತ್ತಾನೆ. ಆದರೆ ಅವಿ ಬೇರೆ ಕೈಂಟ್ ಅನ್ನು ಮೀಟ್ ಮಾಡುವುದಾಗಿ ಹೇಳುತ್ತಾನೆ. ಅದನ್ನು ಕೇಳಿ ಅಭಿಗೆ ಕೋಪ ಬಂದು ಫೋನ್ ಇಟ್ಟು ಬಿಡುತ್ತಾನೆ. ಇನ್ನು ಮಾಧವ ಆತನ ತಮ್ಮನ ಬಳಿ ಮಾತನಾಡಲು ಬರುತ್ತಾನೆ. ತಮ್ಮನ ಬಳಿ ನಾನು ನಿನ್ನೆ ಆ ರೀತಿ ನಿನ್ನ ಬಳಿ ಮಾತನಾಡಬಾರದಾಗಿತ್ತು, ನಿನಗೆ ಕೂಡ ಬಹಳ ಬೇಸರ ಆಗಿದೆ ಇದು ನನಗೆ ತಿಳಿದಿದೆ, ಅದಕ್ಕೆ ನಿನ್ನ ಬಳಿ ಮಾತನಾಡಲು ಬಂದೆ ಎಂದು ಹೇಳಿ ತುಳಸಿ ಹಾಗೂ ಆಕೆಯ ಕುಟುಂಬ ಕೆಫೆಗೆ ಬಂದಿದ್ದ ವಿಚಾರವನ್ನು ಹೇಳುತ್ತಾನೆ.

ಅವರ ಕುಟುಂಬ ನೋಡಲು ಬಹಳ ಖುಷಿ ಆಗುತ್ತದೆ. ನನಗೆ ಬಹಳ ಖುಷಿ ಆಯಿತು. ನೀನು ಸುಮತಿ ಇರುತ್ತಿದ್ದರೆ ನನಗೆ ಬಹಳ ಖುಷಿ ಆಗುತ್ತಿತ್ತು ಎಂದು ಹೇಳುತ್ತಾನೆ . ಇನ್ನು ತುಳಸಿ ಮನೆಯಲ್ಲಿ ಡಬ್ಬಿ ಸರ್ವಿಸ್ ಶುರು ಮಾಡುವ ಮುನ್ನ ಪೂಜೆ ಮಾಡುತ್ತಾರೆ. ದತ್ತನ ಮನೆಗೆ ಶೇಷ ಹಾಗೂ ಆತನ ಹೆಂಡತಿ ಕೂಡ ಬರುತ್ತಾರೆ. ಪೂಜೆ ಆದ ಬಳಿಕ ತುಳಸಿಯ ಮನೆಯಲ್ಲಿ ಅಡುಗೆ ಶುರು ಆಗುತ್ತದೆ. ಸಿರಿ ಹಾಗೂ ಶೇಷನ ಹೆಂಡತಿ ಎಲ್ಲಾ ಸೇರಿ ಅಡುಗೆ ಮಾಡುತ್ತಾರೆ.
ಇದನ್ನು ಕಂಡ ಶೇಷಗೆ ಬಹಳ ಖುಷಿ ಆಗುತ್ತದೆ. ಇನ್ನು ಶೇಷ ಹಾಗೂ ದತ್ತ ಚೆಸ್ ಆಡುತ್ತಾ ಇರಬೇಕಾದರೆ ಸಿರಿ ತಂದೆ ಬರುತ್ತಾರೆ. ಅವರ ಜೊತೆ ಕೇಶವ ಕೂಡ ಬರುತ್ತಾನೆ. ಸಿರಿ ತಂದೆ ಎಲ್ಲರನ್ನೂ ಗುರುತಿಸುತ್ತಾರೆ. ಆದರೆ ಶೇಷನನ್ನು ಗುರುತಿಸದೇ ಇದ್ಯಾರು ಎಂದು ಕೇಳಿ ಬಿಡುತ್ತಾರೆ. ಇದನ್ನು ಕೇಳಿ ಎಲ್ಲರೂ ಕಕ್ಕಾಬಿಕ್ಕಿ ಆಗುತ್ತಾರೆ. ಆಗ ಸಿರಿ ಅದು ಶೇಷ ಅಂಕಲ್ ಎಂದು ಹೇಳಿದಾಗ ನಗುತ್ತಾ ಸಿರಿ ತಂದೆ ನಾನು ಸುಮ್ಮನೆ ತಮಾಷೆ ಮಾಡಿದ್ದು ಎನ್ನುತ್ತಾನೆ. ಆದರೂ ಏನೂ ಮಾತನಾಡದೆ ಸುಮ್ಮನೆ ಇರುತ್ತಾರೆ.
ದತ್ತ ಮನದಲ್ಲಿ ಸಿರಿಗೆ ತನ್ನ ತಂದೆಗೆ ಮರುವಿನ ಕಾಯಿಲೆ ಇದೆ ಎಂದು ಗೊತ್ತಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಇಷ್ಟರಲ್ಲಿ ಸೊಸೆ ಅಡುಗೆ ಮಾಡಿ ಟಿಫನ್ ಬಾಕ್ಸ್ ರೆಡಿ ಮಾಡಿ ತರುವುದನ್ನು ದತ್ತ ನೋಡುತ್ತಾರೆ. ಬಳಿಕ ಕೇಶವನ ಬಳಿ ಟಿಫನ್ ಬಾಕ್ಸ್ ತೆಗೆದುಕೊಂಡು ಹೋಗುವಂತೆ ಹೇಳಿ ಕಳುಹಿಸುತ್ತಾರೆ.


Click it and Unblock the Notifications











