Srirasthu Shubhamasthu: ಸಂಧ್ಯಾಗೆ ಹಣ ನೀಡಿದ ದತ್ತನ ಮಾತಿನಂತೆ ಸಾಲ ತೀರಿಸುತ್ತಾಳಾ ಸಂಧ್ಯಾ?

By Poorva

ತುಳಸಿ ಮಾತು ಕೇಳಿ ದತ್ತ ಸಂಧ್ಯಾಗೆ ಹಣ ಕೊಡಲು ಒಪ್ಪಿ ಹಣ ನೀಡುತ್ತಾನೆ. ಅದನ್ನು ತುಳಸಿ ಬಳಿ ಕೊಡುವಾಗ ಸಂಧ್ಯಾ ಅದನ್ನು ಕಿತ್ತುಕೊಂಡು ಹೋಗುತ್ತಾಳೆ. ಆ ವೇಳೆ ದತ್ತ ಮನದಲ್ಲಿ ಹೋಗುವುದು ಹೋಗುತ್ತಾಳೆ ಆದರೆ ಒಂದು ಥಾಂಕ್ಸ್ ಆದರೂ ಹೇಳಿ ಹೋಗಬಹುದಿತ್ತು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಇನ್ನು ಮೊಮ್ಮಗಳ ನಡವಳಿಕೆ ದತ್ತನಿಗೆ ತಿಳಿದಿದೆ. ಆದರೆ ತುಳಸಿಗೆ ಅರ್ಥ ಆಗಬೇಕು ಎನ್ನುವ ನಿಟ್ಟಿನಲ್ಲಿ ಆ ಹಣವನ್ನು ಸಾಲದ ರೂಪದಲ್ಲಿ ಕೊಡುತ್ತಾನೆ. ತುಳಸಿ ಸಂಧ್ಯಾ ಹಣ ಕಟ್ಟದೇ ಇದ್ದರೂ ನಾನು ಕಟ್ಟುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಮಾವ ಅಸ್ತ್ರವಾಗಿ ಬಳಸಿಕೊಂಡಿದ್ದಾನೆ. ತುಳಸಿ ಮನೆಯ ಒಳಗೆ ಹೋದ ಕೂಡಲೇ ಸಮರ್ಥ್ ತಾತನ ಬಳಿ ಬರುತ್ತಾನೆ.

Kannada serial Srirasthu Shubhamasthu written update on 30th March

ಸಂಧ್ಯಾಳಿಗೆ ಅಷ್ಟು ದುಡ್ಡು ಯಾಕೆ ಕೊಟ್ಟಿದ್ದೀರಿ, ನಿಮಗೆ ಅವಳು ಏನು ಎನ್ನುವುದು ತಿಳಿದಿದೆ ಅಲ್ವಾ, ಚಿಕ್ಕ ವಯಸ್ಸಿನಿಂದಲೂ ನೋಡುತ್ತಾ ಇದ್ದೆ ಅವಳು ತುಂಬಾ ನಾಟಕ ಆಡುತ್ತಾಳೆ ಎಂದಾಗ ದತ್ತ ಅದು ತುಳಸಿಗೆ ಅರ್ಥ ಆಗಬೇಕು ನೋಡೋಣ ಮುಂದಿನ ದಿನದಲ್ಲಿ ಏನು ಆಗುತ್ತದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಮರ್ಥ್ ಅಲ್ಲಿಂದ ಒಳಗೆ ಹೋಗಿ ಬಾಗಿಲು ಹಾಕಿ ಕುಳಿತುಕೊಳ್ಳುತ್ತಾನೆ.

ಇನ್ನು ಅವಿ ಹಾಗೂ ಪೂರ್ಣಿಮಾ ಮಾತನಾಡುತ್ತಾ ಇರುವ ವೇಳೆ ಅವಿ ತನ್ನ ಬ್ಯುಸಿನೆಸ್‌ನಲ್ಲಿರುವ ಕೊಟೇಶನ್ ನೋಡುತ್ತಾನೆ. ಅವಿಗೆ ಶಾಕ್ ಆಗುತ್ತದೆ. ಇದೇನು ಕೆಫೆಯನ್ನು ಪಬ್ ಆಗಿ ಮಾಡಲು ಹೊರಟಿದ್ದಿಯಾ ಇದು ಅಪ್ಪನಿಗೆ ತಿಳಿದಿದೆಯಾ ಎಂದೆಲ್ಲ ಹೇಳಿದಾಗ ಅಭಿ ಅಣ್ಣನ ಬಳಿ ವಾಯ್ಸ್ ರೇಸ್ ಮಾಡಿ ಮಾತನಾಡುತ್ತಾನೆ. ಇದನ್ನು ಕೇಳಿದ ಅವಿಗೆ ಶಾಕ್ ಆಗುತ್ತದೆ. ಆ ವೇಳೆ ಅಲ್ಲಿಗೆ ಮಾಧವ ಬರುತ್ತಾನೆ. ಮಾಧವಾಗೆ ತನ್ನ ಕೆಫೆ ಪಬ್ ಆಗುತ್ತೆ ಎಂದು ತಿಳಿದಾಗ ಶಾಕ್ ಆಗುತ್ತದೆ. ಮಾಧವ ಇದಕ್ಕೆ ಆಸ್ಪದ ಕೊಡದ ವೇಳೆ ಅಭಿ ತನ್ನ ಮಾವನ ಬಗ್ಗೆ ಬಹಳ ಮಾತನಾಡುತ್ತಾನೆ. ತಂದೆಯನ್ನು ತುಚ್ಛವಾಗಿ ನೋಡುತ್ತಾನೆ.

ಆದರೆ ಇದರಿಂದ ಮಾಧವಗೆ ಕೊಂಚ ಕೋಪ ಬಂದರೂ ತಡೆದುಕೊಂಡಿರುತ್ತಾನೆ. ಇನ್ನು ಅವಿಗೆ ಕೂಡ ಅಭಿ ಇಲ್ಲಸಲ್ಲದ ಮಾತುಗಳನ್ನು ಹೇಳಿ ನೋವು ಮಾಡುತ್ತಾನೆ. ಆದರೆ ಅವಿ ಸಹಿಸಿಕೊಂಡಿದ್ದರೂ ಪೂರ್ಣಿಮಾ ಕಣ್ಣಲ್ಲಿ ಕಣ್ಣೀರು ಜಿನುಗುತ್ತದೆ. ಪೂರ್ಣಿಮಾ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಇನ್ನು ಮಾಧವ ಮಾತ್ರ ಇಬ್ಬರ ಗಲಾಟೆಯನ್ನು ತಡೆದು ನಿಲ್ಲಿಸುತ್ತಾನೆ.

Kannada serial Srirasthu Shubhamasthu written update on 30th March

ಇನ್ನು ಸಮರ್ಥ್ ಬಾಗಿಲು ಹಾಕಿರುವುದನ್ನು ನೋಡಿದ ಸಿರಿ ಎಷ್ಟೇ ಬಾಗಿಲು ತಟ್ಟಿದರೂ ತೆಗೆಯದೆ ಇರುತ್ತಾನೆ. ಇದನ್ನು ನೋಡಿದ ತುಳಸಿ ಬಾಗಿಲು ಬಡಿಯುತ್ತಾಳೆ. ಆಗ ಸಮರ್ಥ್ ಬಾಗಿಲು ತೆಗೆಯುತ್ತಾನೆ. ತನ್ನ ತಾಯಿಗೆ ಚೆನ್ನಾಗಿ ಬಯ್ಯುತ್ತಾ ಇರುತ್ತಾನೆ. ತಾತ ಕೂಡಿ ಇಟ್ಟಿರುವ ಹಣವನ್ನು ಈ ರೀತಿ ಪೋಲು ಮಾಡುತ್ತಾ ಇದ್ದಾಳೆ ಅಲ್ವಾ ನನ್ನ ತಾಯಿ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಜೊತೆಗೆ ಸಂಕಟ ಬೇರೆ, ಉಪ್ಪು ತಿಂದವರು ನೀರು ಕುಡಿಲೇಬೇಕು ಎನ್ನುವ ಹಾಗೆ ಸಂಧ್ಯಾ ಗತಿ ಆದರೆ ಅಮ್ಮನ ಬಳಿ ಇಲ್ಲಾಲ್ಲದನ್ನು ಹೇಳಿ ಹಣವನ್ನು ಪಿಕಿಸುತ್ತಲೆ ಇರುತ್ತಾಳೆ.

More from Filmibeat

English summary
Kannada serial sri rastu shubha mastu written updated on 30th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X