Srirasthu Shubhamasthu: ಮಾಧವನ ಪರ ಬ್ಯಾಟಿಂಗ್ ಮಾಡಿದ ಅವಿ; ಅವಿ ಮಾತಿಗೆ ಮಾಧವ ಫುಲ್ ಖುಷ್
ತುಳಸಿ ಮಸಾಲ ಪೌಡರ್ ರೆಡಿ ಮಾಡುವ ಬ್ಯುಸಿನೆಸ್‌ಗೆ ಸಹಾಯಕಿಯಾಗಿ ಸೇರಿಕೊಂಡು ಕೆಲಸ ಮಾಡುತ್ತಾಳೆ. ಆ ವೇಳೆ ಟಿವಿಯಲ್ಲಿ ಮಾಧವನ ಕಾರ್ಯಕ್ರಮ ಬರುತ್ತದೆ. ಅದನ್ನ ನೋಡಿದ ಕೆಲಸದವರು ಬಹಳ ಖುಷಿ ಪಡುತ್ತಾರೆ. ಇನ್ನು ಕೆಲಸದ ಬಳಿಕ ತುಳಸಿ ನೇರವಾಗಿ ಮನೆಗೆ ಬರುತ್ತಾಳೆ. ಆ ವೇಳೆ ಮನೆಯ ಕೆಲಸಗಳನ್ನು ಮಾಡಿಕೊಂಡು ಊಟಕ್ಕೆ ಬಡಿಸುತ್ತಾಳೆ.
ಊಟ ಮಾಡುತ್ತಾ ಇರುವಾಗ ಸಮರ್ಥ್ ತಾತನ ಕಾಲು ಎಳೆಯುತ್ತಾ ಇರುತ್ತಾನೆ. ಇದನ್ನು ನೋಡಿದ ದತ್ತ ಒಳ ಒಳಗೆ ಕೋಪಗೊಂಡರೂ ಸುಮ್ಮನೆ ಇರುತ್ತಾನೆ. ಇನ್ನು ತುಳಸಿ ತನ್ನ ಮಾವನ ಬಳಿ ಮೆತ್ತಗೆ ಮಾವ ಮಾವ ಎಂದಾಗ ದತ್ತಗೆ ತಿಳಿಯುತ್ತದೆ. ಸರಿ ತುಳಸಿ ಏನೋ ಹೇಳಬೇಕು ಅಂದುಕೊಂಡು ಇದ್ದೆಯಲ್ಲ ಎಂದು ಹೇಳುತ್ತಾನೆ.

ಇದನ್ನು ಕೇಳಿದ ತುಳಸಿ ತಾನು ಕೆಲಸಕ್ಕೆ ಹೋಗಿರುವ ವಿಚಾರವನ್ನು ಪ್ರಸ್ತಾಪ ಮಾಡುತ್ತಾಳೆ. ಆಗ ದತ್ತ ಕೊಂಚ ಸಿಟ್ಟಿನಿಂದ ನನ್ನ ಬಳಿ ಏನು ವಿಚಾರ ಮುಚ್ಚಿ ಇಡಬಾರದು ಎಂದು ನಿನ್ನ ಬಳಿ ಹೇಳಿದ್ದೆ ಆದರೆ ಇದೀಗ ಈ ವಿಚಾರವನ್ನು ಮುಚ್ಚಿಟ್ಟಿದ್ದಿಯ, ಸರಿ ಆಯಿತು, ಈಗ ಕೆಲಸಕ್ಕೆ ಸೇರಿದ್ದು ನಿನ್ನ ಮಗಳ ಸಾಲ ತೀರಿಸಲು ತಾನೇ ನಿನಗೂ ಕೂಡ ಗೊತ್ತು ಆಕೆ ಹಣ ಕೊಡೋದಿಲ್ಲ ಎಂದು ಎನ್ನುತ್ತಾನೆ.
ಇದನ್ನು ಕೇಳಿದ ತುಳಸಿ ಇಲ್ಲ ಎಂದು ಹೇಳುತ್ತಾಳೆ. ಆಗ ದತ್ತ ಮೆತ್ತಗೆ ತುಳಸಿ ನಿನಗೆ ಅರ್ಥ ಆಗುವ ಎಲ್ಲ ದಿನ ಹತ್ತಿರದಲ್ಲಿ ಇದೆ ಎಂದು ಊಟದಿಂದ ಎದ್ದು ಹೋಗುತ್ತಾನೆ. ಆ ವೇಳೆ ಸಿರಿ ತನ್ನ ಅತ್ತೆಯ ಬಳಿ ಯಾಕೆ ಅಮ್ಮ, ನೀವು ಕೆಲಸಕ್ಕೆ ಹೋಗುವುದು ಅಗತ್ಯ ಇರಲಿಲ್ಲ ಅಲ್ವಾ, ನಿಮಗೆ ಅಂತಹ ಕಷ್ಟ ಇದ್ದರೆ ನಾನೇ ಹಣ ಕೊಡುತ್ತಾ ಇದ್ದೆ ಎನ್ನುತ್ತಾಳೆ.
ಇನ್ನು ಮಾಧವ ಹಾಗೂ ಜನಾರ್ದನ್ ನಡುವೆ ಕೆಫೆ ವಿವಾದ ನಡೆಯುತ್ತಲೇ ಇದೆ. ಕೆಫೆಯನ್ನ ಪಬ್ ಆಗಿ ಕನ್ವರ್ಟ್ ಮಾಡಲು ಜನಾರ್ಧನ್ ಹರ ಸಾಹಸ ಪಡುತ್ತಾ ಇದ್ದಾನೆ. ಅದಕ್ಕಾಗಿ ಮಾಧವನ ಜೊತೆ ಸವಾಲ್ ಹಾಕುತ್ತಾನೆ. ಮಾಧವಗೆ ಏನು ಮಾಡಬೇಕು ಎಂದು ತಿಳಿಯದೇ ಇದ್ದಾಗ ತುಳಸಿ ನೆನಪು ಆಗುತ್ತದೆ.

ದೇವರ ಮೇಲೆ ಭಾರ ಹಾಕಿ ನಾವು ನಿರ್ಧಾರವನ್ನು ತೆಗೆದುಕೊಂಡು ಮುಂದುವರೆಯಬೇಕು ಎಂದು ತುಳಸಿ ಹೇಳಿದ ಮಾತಿನ ಪ್ರಕಾರ ಯೋಚನೆ ಮಾಡಿ ಜನಾರ್ಧನ್ ಹಾಕಿರುವ ಸವಾಲನ್ನು ಸ್ವೀಕಾರ ಮಾಡುತ್ತಾನೆ. ಇದನ್ನು ಕೇಳಿದ ಮ್ಯಾಗಿ ಹಾಗೂ ಜಗ್ಗನಿಗೆ ಶಾಕ್ ಆಗುತ್ತದೆ .
ಇನ್ನು ಇದನ್ನು ಕೇಳಿಸಿಕೊಂಡ ಜನಾರ್ಧನ್ ಹಾಗೂ ಅಭಿ ಅಲ್ಲಿಂದ ಹೋಗುತ್ತಾರೆ. ಜನಾರ್ಧನ್ ಈ ವಿಚಾರವನ್ನು ಶಾರ್ವರಿ ಕಿವಿಗೆ ಬೀಳುವ ಹಾಗೆ ಮಾಡುತ್ತಾನೆ. ಆಕೆಗೆ ಬಹಳ ಖುಷಿ ಆಗುತ್ತದೆ. ಮನೆಗೆ ಬಂದ ಮಾಧವ ಸುಮ್ಮನೆ ಕುಳಿತಿರಬೇಕಾದರೆ ಅಲ್ಲಿಗೆ ಬಂದ ಪೂರ್ಣಿಮಾ ಮಾವನಿಗೆ ಧೈರ್ಯ ತುಂಬುವ ಮಾತನ್ನು ಆಡುತ್ತಾಳೆ. ಇದನ್ನು ಕೇಳಿದ ಮಾಧವಗೆ ಖುಷಿ ಆಗುತ್ತದೆ.
ಇನ್ನು ಡೈನಿಂಗ್ ಹಾಲ್‌ನಲ್ಲಿ ಊಟ ಮಾಡುತ್ತಾ ಇರುವಾಗ ಕೂಡ ಇದೇ ಚರ್ಚೆ. ಇದನ್ನು ಕೇಳಿಸಿಕೊಂಡ ಅವಿ ಕೋಪಾಗೊಳ್ಳುತ್ತ ಇರುತ್ತಾನೆ. ಇದನ್ನು ನೋಡಿದ ಪೂರ್ಣಿಮಾಗೆ ಖುಷಿ ಆದರೆ ಶಾರ್ವರಿಗೆ ಶಾಕ್ ಆಗುತ್ತದೆ. ಇನ್ನು ಪೂರ್ಣಿಮಾ ಊಟ ಆಗಿ ಸುಮ್ಮನೆ ಯೋಚನೆ ಮಾಡುತ್ತಾ ಇರುವಾಗ ಅಲ್ಲಿಗೆ ಅವಿ ಬರುತ್ತಾನೆ. ಆ ವೇಳೆ ತನ್ನ ಮನದಲ್ಲಿ ನಡೆಯುತ್ತಿರುವ ಯೋಚನೆಯನ್ನು ಅವಿಗೆ ಹೇಳಿದಾಗ ಆತ ಒಂದು ಐಡಿಯಾ ಕೊಡುತ್ತಾನೆ. ಅದನ್ನು ಕೇಳಿಸಿಕೊಂಡ ಪೂರ್ಣಿಮಾಗೆ ಬಹಳ ಸಂತಸವಾಗುತ್ತದೆ.


Click it and Unblock the Notifications











