Srirasthu Shubhamasthu: ಮಗನ ಬಳಿ ಚಾಲೆಂಜ್ ಮಾಡಿದ ಮಾಧವನಿಗೆ ಸಹಾಯ ಮಾಡಲು ಹೊರಟ ದತ್ತ!
ದತ್ತ ರವೀಂದ್ರ ಅವರ ಕೆಲಸದವನ ಜೊತೆ ಮಾತನಾಡುತ್ತಾ ಇರುತ್ತಾನೆ. ದತ್ತ ಆತನ ಕಾಲು ಎಳೆಯುತ್ತಾ ಇರುತ್ತಾನೆ. ಆ ಬಳಿಕ ರವೀಂದ್ರ ಯಾಕೆ ಬರಲಿಲ್ಲ ಎಂಬ ಪ್ರಶ್ನೆ ಕೇಳಿದಾಗ ಆತ ಯಾರಿಗೆ ಕೂಡ ತಿಳಿಯದ ಹಾಗೆ ನಟನೆ ಮಾಡುತ್ತಾನೆ. ಇನ್ನು ದತ್ತ ಕೇಶವನ ಬಳಿ ಮದುವೆ ಬಗ್ಗೆ ಪ್ರಸ್ತಾಪ ಮಾಡುತ್ತಾನೆ. ಆಗ ಕೇಶವ ನಾಚಿ ನೀರಾಗಿ ಹೋಗಿರುತ್ತಾನೆ.
ಇನ್ನು ತುಳಸಿ ಹಣ ಕೊಡಲು ಬರುತ್ತಾಳೆ. ಆಗ ಕೇಶವ ಆ ಹಣವನ್ನು ಸ್ವೀಕರಿಸದೆ ಇರುತ್ತಾನೆ. ಆಗ ದತ್ತ ಕೇಶವ ಹಣ ತೆಗೆದುಕೋ, ಮನೆಯವರೇ ಮೋಸ ಮಾಡುತ್ತಾರೆ, ನೀನು ಮೋಸ ಮಾಡಿದ ಹಣ ಇದು ಅಲ್ಲ ಅಲ್ವಾ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ಸುಮ್ಮನೆ ಆಗುತ್ತಾಳೆ. ಬಳಿಕ ದತ್ತನ ಒತ್ತಾಯಕ್ಕೆ ಹಣ ತೆಗೆದುಕೊಂಡು ಹೋಗುತ್ತಾನೆ. ಇನ್ನು ತುಳಸಿ ದತ್ತನ ಬಳಿ ಹಣ ಕೊಡುತ್ತಾಳೆ.

ತುಳಸಿ ಕೊಟ್ಟ ಹಣ ನೋಡಿ ಏನು ತುಳಸಿ ನೀನು ಹಣ ಕೊಡುತ್ತಾ ಇದ್ದೀಯಾ ಯಾಕೆ ನಿನ್ನ ಮಗಳು ಕೊಡಲ್ವಾ ಎಂದಾಗ ತುಳಸಿ ತನ್ನ ಮಗಳಿಗೆ ಸಹಾಯ ಆಗಲಿ ಎಂದು ಈ ರೀತಿ ಮಾಡುತ್ತಾ ಇದ್ದೇನೆ ಎಂದು ಹೇಳುತ್ತಾಳೆ. ಆದರೆ ಆ ಉತ್ತರವನ್ನು ದತ್ತ ಒಪ್ಪಲು ಸಾಧ್ಯ ಇರಲಿಲ್ಲ. ತುಳಸಿ ಸುಮ್ಮನೆ ಆಗುತ್ತಾಳೆ. ಇನ್ನು ಮಾಧವನ ಕೆಫಯಲ್ಲಿ ಜನಾರ್ಧನ್ ಮಾಡಿದ ಕೆಲಸಕ್ಕೆ ಯಾವ ಅಡುಗೆ ಭಟ್ಟ ಕೂಡ ಬಂದಿರುವುದಿಲ್ಲ.
ಪೂರ್ಣಿಮಾ ನಾಳಿನ ಕೆಲಸದ ಬಗ್ಗೆ ಮಾತನಾಡುತ್ತಾ ಇರುವಾಗ ಅಲ್ಲಿಗೆ ಬಂದ ಮ್ಯಾಗಿ ಕೆಫೆಗೆ ಯಾವ ಶೆಫ್ ಕೂಡ ಬಂದಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಾಧವನಿಗೆ ಏನು ಮಾಡಬೇಕು ಎಂದು ತಿಳಿಯದಾಗಿ ಹೋಗುತ್ತದೆ. ಶೆಫ್‌ಗಳು ಯಾರು ಬಾರದೆ ಇದ್ದರೆ ನಾಳಿನ ಕಾರ್ಯಕ್ರಮ ಹೇಗೆ ನಡೆಯುವುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಇನ್ನು ಶೆಫ್ ಕರೆದುಕೊಂಡು ಬರಲು ಅವರ ಮನೆಗೆ ಹೋಗುತ್ತಾನೆ. ತುಳಸಿ ಕೆಲಸಕ್ಕೆ ಹೋಗಿದ್ದಲ್ಲಿ ಮಾಧವನ ಕಾರ್ಯಕ್ರಮ ನೋಡುತ್ತಾ ಇರುತ್ತಾಳೆ. ಅದರಲ್ಲಿ ನಾಳೆ ಅಡುಗೆ ಮೇಳ ಇದೆ ಎಂಬುವುದನ್ನು ಹೇಳುತ್ತ ಇರುತ್ತಾರೆ. ಇದನ್ನು ಕೇಳಿದ ತುಳಸಿಗೆ ಖುಷಿ ಆಗುತ್ತದೆ. ಮಾಧವ ವಾಪಸ್ ಕೆಫೆಗೆ ಬರುತ್ತಾನೆ. ಮಾಧವ ಬರುತ್ತಾ ಇರುವುದನ್ನೇ ಕಾಯುತ್ತಿದ್ದ ಪೂರ್ಣಿಮ ಹಾಗೂ ಮ್ಯಾಗಿ ಶೆಫ್ ಬಗ್ಗೆ ವಿಚಾರಣೆ ಮಾಡಿದಾಗ ಅವರು ಯಾರು ನಿನ್ನೆಯಿಂದ ಮನೆಗೆ ಹೋಗಿಲ್ಲವಂತೆ ಎಲ್ಲಿ ಹೋದರೂ ಎಂಬುವುದು ತಿಳಿಯುತ್ತಾ ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾರೆ.
ಇನ್ನು ಈ ವಿಚಾರವನ್ನು ಸಿರಿ ಬಳಿ ಪೂರ್ಣಿಮಾ ಹೇಳುತ್ತ ಇರುತ್ತಾಳೆ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎಂದೆಲ್ಲ ಹೇಳುತ್ತಾಳೆ. ಆಗ ಸಿರಿ ತನ್ನ ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಾ ಇರುತ್ತಾಳೆ. ಆಗ ದತ್ತ ಆ ಚಪ್ಪಲಿ ಕಳ್ಳನಿಗೆ ನನ್ನಿಂದ ಆದ ಸಹಾಯ ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ .


Click it and Unblock the Notifications