Srirasthu Shubhamasthu:ಮಾಧವನ ಕೆಫೆಗೆ ಆಗಮಿಸಿದ ತುಳಸಿ; ಮಾಧವನಿಗೆ ಬಂದ ಸಂಕಷ್ಟ ನಿವಾರಣೆಯಾಗುತ್ತಾ?

By Poorva

ಮಾಧವ, ಪೂರ್ಣಿಮಾ ಹಾಗೂ ಮ್ಯಾಗಿ ಕೆಫೆಯಲ್ಲಿ ಯಾರು ಇಲ್ಲದನ್ನು ಕಂಡು ನಾಳಿನ ಪ್ರೋಗ್ರಾಂ ಹೇಗೆ ನಡೆಯುತ್ತದೆ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಟಿವಿಯಲ್ಲಿ ಪ್ರೋಮೋ ಟೆಲಿಕಾಸ್ಟ್ ಮಾಡಿ ಆಗಿದೆ. ಇನ್ನು ನಾಳೆ ಜನ ಬಂದೇ ಬರುತ್ತಾರೆ. ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಆಗ ಮಾಧವ ಆದದ್ದು ಆಗಲಿ ಬೆಳಗ್ಗೆ ಬೇಗ ಬರೋಣ ಎಂದು ಹೇಳಿ ಮನೆಗೆ ಹೋಗುತ್ತಾರೆ. ಇನ್ನು ಬೆಳಗಾಗುತ್ತಲೇ ಎಲ್ಲರೂ ಬೇಗ ಮನೆಯಿಂದ ಹೊರಡುತ್ತಾರೆ. ತುಳಸಿ ತಾನು ಕೆಲಸ ಮಾಡುತ್ತಾ ಇರುವಲ್ಲಿಗೆ ಬರುತ್ತಾಳೆ. ಬಂದು ಅವರ ಬಳಿ ಒಂದು ಸಹಾಯ ಕೂಡ ಕೇಳುತ್ತಾಳೆ.

ಕೊನೆಗೆ ಅವರು ಒಪ್ಪುತ್ತಾರೆ. ಇನ್ನು ಮಾಧವ ಮನೆಯಿಂದ ಹೊರಡುತ್ತಾನೆ. ಹಾಗೆಯೇ ಪೂರ್ಣಿಮಾ ಕೂಡ ತರಾತುರಿಯಲ್ಲಿ ಕೆಫೆಗೆ ಹೊರಡುವ ವೇಳೆ ಅವಿ ಎದ್ದು ಇಷ್ಟು ಬೇಗ ಯಾಕೆ ಹೋಗುತ್ತೀರಾ ಎಂದು ಕೇಳಿದ ವೇಳೆ ಪೂರ್ಣಿಮಾ ಎಲ್ಲಾ ವಿಚಾರವನ್ನು ನಿಧಾನವಾಗಿ ಹೇಳುತ್ತಾಳೆ. ಇದನ್ನು ಕೇಳಿದ ಅವಿ ಜನಾರ್ಧನ್ ಎದುರು ನೀವು ಸೋಲು ಒಪ್ಪಿಕೊಳ್ಳಬೇಡಿ ನನ್ನ ಸಹಾಯ ಏನಾದರು ಬೇಕಾದರೆ ಹೇಳಿ ಎಂದು ಹೇಳುತ್ತಾನೆ.

Kannada serial Srirasthu Shubhamasthu written update on 5th April

ಇದನ್ನು ಕೇಳಿದ ಪೂರ್ಣಿಮಾಗೆ ಖುಷಿ ಆಗುತ್ತದೆ. ಮಾಧವ ಮನೆಯಿಂದ ಹೊರಡುವ ವೇಳೆ ಜನಾರ್ಧನ್ ಬರುತ್ತಾನೆ. ಆತನನ್ನು ಕಂಡು ಮಾಧವಗೆ ಕೊಂಚ ಶಾಕ್ ಆಗುತ್ತದೆ. ಬಳಿಕ ಜನಾರ್ಧನ್ ಮಾಧವನ ಬಳಿ ವಿಶ್ ಮಾಡುತ್ತ ಇರುತ್ತಾನೆ. ಬಳಿಕ ಕೊಂಕಿನಿಂದ ಮಾತನಾಡುತ್ತ ಇರುತ್ತಾನೆ. ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಮಾಧವ ಅಲ್ಲಿಂದ ಹೊರಟು ಹೋಗುತ್ತಾನೆ. ಆಗ ಅಲ್ಲಿಗೆ ಬಂದ ಶಾರ್ವರಿ ಬಳಿ ತನ್ನನ್ನು ತಾನು ಹೊಗಳುತ್ತಾ ಇರುತ್ತಾನೆ. ಆದರೆ ಶಾರ್ವರಿ ಅಷ್ಟೊಂದು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದನ್ನು ನೋಡಿ ಜನಾರ್ಧನ್ ತೆಪ್ಪಗೆ ಆಗುತ್ತಾನೆ.

ಆ ಕೂಡಲೇ ಅಭಿ ರೂಮ್‌ಗೆ ಹೋಗುತ್ತಾನೆ. ಅಭಿ ಇನ್ನೂ ಮಲಗಿರುತ್ತಾನೆ. ಆತನನ್ನು ಎಷ್ಟು ಎದ್ದೇಳಿಸುವ ಪ್ರಯತ್ನ ಮಾಡಿದರೂ ಆತ ಎದ್ದೇಳದ್ದನ್ನು ಕಂಡು ಆತನ ಸೊಂಟದ ಬಳಿ ಗಿಂಡುತ್ತಾನೆ. ನಿದ್ದೆಯಿಂದ ಎದ್ದ ಅಭಿ ಯಾಕೆ ಪಪ್ಪಾ ಇಷ್ಟು ಹೊತ್ತಿಗೆ ಬಂದ್ರಿ ಎಂದೆಲ್ಲ ಕೇಳಿದಾಗ ಮಾಧವಗೆ ವಿಶ್ ಮಾಡಲು ಬಂದೆ ಎಂದೆಲ್ಲ ಅಭಿ ಜೊತೆ ಜನಾರ್ಧನ್ ಮಾತನಾಡುತ್ತಾ ಇರುವಾಗ ಅವಿ ಅಭಿ ರೂಮ್ ಕಡೆ ಬರುತ್ತಾನೆ.

Kannada serial Srirasthu Shubhamasthu written update on 5th April

ಅಭಿ ಬಳಿ ಇದನ್ನು ಇಲ್ಲಿಯೇ ನಿಲ್ಲಿಸಿ ಬಿಡು ಎಂದು ವಾರ್ನಿಂಗ್ ಮಾಡಬೇಕು ಎಂದೆಲ್ಲ ಯೋಚನೆ ಮಾಡುತ್ತಾ ಬರುತ್ತಾನೆ. ಆಗ ಆತನಿಗೆ ಜನಾರ್ಧನ್ ವಾಯ್ಸ್ ಕೇಳುತ್ತದೆ. ಆತ ಅಭಿ ಜೊತೆ ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಂಡ ಅವಿಗೆ ಶಾಕ್ ಆಗುತ್ತದೆ. ಇನ್ನು ಶಾರ್ವರಿ ದತ್ತನ ಮನೆಗೆ ಹೋಗುತ್ತಾಳೆ. ಆಕೆಯನ್ನು ನೋಡಿ ಯಾರು ಏನೆಂದು ವಿಚಾರಣೆ ಮಾಡಿದಾಗ ದತ್ತನ ಬಳಿ ತಾನು ಗಾರ್ಮೆಂಟ್ ಆಫೀಸರ್ ಎಂದು ಸುಳ್ಳು ಹೇಳುತ್ತಾಳೆ.

ಇನ್ನು ದತ್ತನ ಮನೆ ಒಳಗೆ ಬಂದ ಶಾರ್ವರಿ ದತ್ತನ ಬಳಿ ಒಂದು ಲೋಟ ನೀರು ಕೇಳುತ್ತಾಳೆ. ನೀರು ತರಲು ಹೋದ ದತ್ತನಿಗೆ ಅನುಮಾನ ಕಾಡುತ್ತದೆ. ಇನ್ನು ಕೆಫೆಗೆ ಬಂದ ಮಾಧವ ಹಾಗೂ ಆತನ ಪ್ಯಾಮಿಲಿ ದೇವರ ಬಳಿ ಪ್ರಾರ್ಥನೆ ಮಾಡಿಕೊಂಡು ಇರಬೇಕಾದರೆ ತುಳಸಿ ಹಾಗೂ ಆಕೆ ಕೆಲಸ ಮಾಡುತ್ತಿರುವ ಓನರ್ ಹಾಗೂ ಅಲ್ಲಿರುವ ಕೆಲಸದವರನ್ನು ಕರೆದುಕೊಂಡು ಬರುತ್ತಾಳೆ. ಇದನ್ನು ನೋಡಿ ಮಾಧವಗೆ ಬಹಳ ಖುಷಿ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Srirasthu Shubhamasthu written updated on 5th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X