Srirasthu Shubhamasthu: ಮಗ ಕಾಣದೇ ಮಾಧವ ಕಂಗಾಲು; ಅಭಿ ಮಾಡಿದ ಕೆಲಸ ತಿಳಿದರೆ ಮುಂದೇನು ಮಾಡುತ್ತಾನೆ?
ಪೂರ್ಣಿಮಾ ಮಲಗಲೆಂದು ಬೆಡ್ ರೂಂ ಕಡೆ ಹೋಗುತ್ತಿರುವಾಗ ಮಾಧವ ಪೂರ್ಣಿಮಾಳನ್ನು ಕರೆಯುತ್ತಾನೆ. ಮಾಧವನಿಗೆ ಒಂದೇ ಚಿಂತೆ ಅಭಿ ಏನು ಕಾಣಿಸುತ್ತಿಲ್ಲ ಯಾಕೆ ಏನಾಯಿತು ಆತನಿಗೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಅದನ್ನು ಪೂರ್ಣಿ ಜೊತೆ ಕೇಳುವಾಗ ಕೊಂಚ ತಡ ಬಡಾಯಿಸುತ್ತ ಅವರು ಅವರ ಗೆಳೆಯನ ಮನೆಗೆ ಹೋಗಿದ್ದಾರೆ ಎಂದು ಹೇಳುತ್ತಾಳೆ. ಬಳಿಕ ಮನದಲ್ಲೇ ಯೋಚನೆ ಮಾಡಿದ ಪೂರ್ಣಿಮಾ ಮಾವನ ಬಳಿ ಇಲ್ಲಿ ನಡೆದ ಘಟನೆ ಬಗ್ಗೆ ಹೇಳುವುದಿಲ್ಲ, ಹೇಳಿದರೆ ಬಹಳ ಕೋಪ ಮಾಡಿಕೊಳ್ಳುತ್ತಾರೆ, ಅದಕ್ಕೆ ಈ ವಿಚಾರವನ್ನು ಹೇಳದೆ ಇದ್ದರೆ ಉತ್ತಮ ಎಂದು ಅಂದುಕೊಳ್ತಾಳೆ.
ಬಳಿಕ ಮಾಧವ ಅಭಿಗೆ ಕರೆ ಮಾಡುವಂತೆ ಪೂರ್ಣಿಮಾಳನ್ನು ಒತ್ತಾಯಿಸುತ್ತಾನೆ. ಆದರೆ ಪೂರ್ಣಿಮಾ ಏನೂ ಮಾತನಾಡದೆ ಅಭಿಗೆ ಕರೆ ಮಾಡುತ್ತಾಳೆ. ಆದರೆ ಅಭಿ ಕರೆ ಸ್ವೀಕರಿಸದೆ ಇರುವುದನ್ನು ಕಂಡು ಸುಮ್ಮನಾಗುತ್ತಾರೆ. ಬಳಿಕ ಮಾಧವ ಯಾಕೋ ಅವನು ಫೋನ್ ತೆಗೆಯುತ್ತಿಲ್ಲ ಎಲ್ಲಾದರೂ ಫೋನ್ ಮಾಡಿದರೆ ಹೇಳು ಪೂರ್ಣಿಮಾ ಎಂದು ಹೇಳಿ ಮಾಧವ ಹೋಗುತ್ತಾನೆ. ಇತ್ತ ಜನಾರ್ದನ್ ಮನೆಯಲ್ಲಿ ಇರುವ ಅಭಿಗೆ ಪುನಃ ಪೂರ್ಣಿಮಾ ಕರೆ ಮಾಡುತ್ತಾಳೆ. ಅದನ್ನು ನೋಡಿ ಅಭಿ ಅಣ್ಣನೇ ಕರೆ ಮಾಡಲು ಹೇಳಿಬೇಕೆಂದು ಕರೆ ಸ್ವೀಕರಿಸಿ ಮಾತನಾಡುತ್ತಾನೆ.

ಇದನ್ನು ನೋಡಿದ ದೀಪಿಕಾ ಸುಮ್ಮನೆ ಆಗುತ್ತಾಳೆ. ಅಭಿ ಏನು ಅತ್ತಿಗೆ ಕರೆ ಮಾಡಿದಿರಿ ಅಣ್ಣ ಹೇಳಿದ್ದಾ, ಅಣ್ಣ ಪಕ್ಕದಲ್ಲೇ ಇದ್ದಾನ ಎಂದು ಕೇಳುತ್ತಾನೆ. ಆದರೆ ಪೂರ್ಣಿಮಾ ತೊದಲು ಮಾತು ಆಡುತ್ತಾ ಇರುವಾಗಲೇ ಆಕೆಗೆ ತಿಳಿಯುತ್ತದೆ ಅಣ್ಣ ಎನು ಹೇಳಿಯೇ ಇಲ್ಲ ಎಂದು. ಬಳಿಕ ಪೂರ್ಣಿಮಾ ಬಳಿ ಸರಿಯಾಗಿ ಮಾತು ಆಡದೆ ಪೂರ್ಣಿಮಾ ಹೇಳಿದ ಮಾತನ್ನು ಕೇಳಿಸಿಕೊಳ್ಳದೆ ಸುಮ್ಮನೆ ಕರೆ ಕಟ್ ಮಾಡುತ್ತಾನೆ. ಇದನ್ನೆಲ್ಲ ನೋಡಿದ ಪೂರ್ಣಿಮಾಗೆ ಅಣ್ಣ ತಮ್ಮಂದಿರ ಮಧ್ಯೆ ಬಿರುಕು ಉಂಟಾಗಬಾರದು ಇಬ್ಬರು ಸಾಮರಸ್ಯದಿಂದ ಇರಬೇಕು ಎಂದು ಆಲೋಚನೆ ಮಾಡಿ ಜನಾರ್ಧನ ಮನೆಗೆ ಹೋಗಲು ರೆಡಿ ಆಗುತ್ತಾಳೆ. ಆಗ ಪಾಪಮ್ಮ ಎದುರಿಗೆ ಸಿಗುತ್ತಾಳೆ. ಪಾಪಮ್ಮನ ಬಳಿ ಮಾವ ಹಾಗೂ ತನ್ನ ಗಂಡ ಏನಾದರು ನನ್ನ ಬಗ್ಗೆ ಕೇಳಿದರೆ ಸುಳ್ಳು ಹೇಳುವಂತೆ ಹೇಳಿ ಹೋಗುತ್ತಾಳೆ.
ಆ ಕೂಡಲೇ ಮಹಡಿ ಮೇಲಿಂದ ಮಾಧವ ಇಳಿದು ಬಂದು ಪೂರ್ಣಿಮಾ ಎಲ್ಲಿ ಹೋದಳು ಎಂದು ಕೇಳುತ್ತಾ ಇರುತ್ತಾನೆ. ಇದನ್ನು ಕಂಡ ಪಾಪಾಮ್ಮ ಸಿರಿ ಜೊತೆ ಸುತ್ತಾಡಿಕೊಂಡು ಬರುತ್ತೇನೆ ಎಂದು ಹೋದರು ಎಂದಾಗ ಮಾಧವ ಹೌದಾ ಎಂದು ನಿರಾಶೆಗೊಂಡವನಂತೆ ಹೇಳುತ್ತಾನೆ. ಇದನ್ನು ಕೇಳಿದ ಮಾಧವ ನಾನು ಕೆಫೆ ಕಡೆ ಹೋಗಿ ಬರುತ್ತೇನೆ ಎಂದು ಹೋಗುತ್ತಾನೆ. ಇದನ್ನೆಲ್ಲ ನೋಡಿದ ಪಾಪಮ್ಮಗೆ ಕೊಂಚ ಬೇಸರ ಆಗುತ್ತದೆ.

ಇನ್ನು ಜನಾರ್ಧನ ಮನೆಯಲ್ಲಿ ಹಾಯಾಗಿ ಕುಳಿತಿದ್ದ ಅಭಿ ಜೊತೆ ಜನಾರ್ಧನ ಮಾತನಾಡುತ್ತಾನೆ. ಅಭಿ ನಿಮ್ಮ ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡದೆ ಹೋದರೂ ನಾನೇ ಮದುವೆ ಮಾಡಿಸುತ್ತೇನೆ ಎಂದೆಲ್ಲ ಹೇಳಬೇಕಾದರೆ ಪೂರ್ಣಿಮಾ ಬರುತ್ತಾಳೆ. ಪೂರ್ಣಿಮಾಳನ್ನು ನೋಡಿ ಅಭಿ ಶಾಕ್ ಆದರೆ ಜನಾರ್ಧನ ಸುಮ್ಮನೆ ಇರುತ್ತಾನೆ.
ಪೂರ್ಣಿಮಾ ಅಭಿಯನ್ನು ಮನೆಗೆ ಎಷ್ಟೇ ಕರೆದರೂ ಅಭಿ ಮಾತ್ರ ಮನೆಗೆ ಬರಲು ಸಿದ್ದ ಇಲ್ಲ, ನನ್ನ ಅಲ್ಲಿ ಯಾರು ಕೇರ್ ಮಾಡುವುದಿಲ್ಲ ನಾನು ಯಾಕೆ ಬರಲಿ ಎಂಬುವುದು ಆತನ ಪ್ರಶ್ನೆ. ಆದರೂ ಜನರ್ಧನ್ ನಾನು ಅಭಿಯನ್ನು ಕರೆದುಕೊಂಡು ಬರುತ್ತೇನೆ, ಆದರೆ ನಮಗೆ ಅವಮಾನ ಆಗಬಾರದು ಉತ್ತಮ ಆತಿಥ್ಯ ನೀಡಬೇಕು ಎಂದು ಹೇಳುತ್ತಾನೆ. ಇದನ್ನು ಕೇಳಿದ ಪೂರ್ಣಿಮಾ ಆಯಿತು ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಹೊರಟು ಹೋಗುತ್ತಾನೆ
ಮಾಧವ ರಾತ್ರಿ ಹೊತ್ತು ಮನೆಗೆ ಬಂದಾಗಲೂ ಅಭಿ ಕಾಣದೆ ಇರುವುದನ್ನು ಕಂಡು ಅಭಿಗೆ ಕರೆ ಮಾಡುತ್ತಾನೆ. ಆದರೆ ಅಭಿ ತಂದೆಯ ಕರೆ ಸ್ವೀಕರಿಸುವುದಿಲ್ಲ, ಇನ್ನೂ ಇದನ್ನೆಲ್ಲ ನೋಡಿದ ಶಾರ್ವರಿ ಮನದಲ್ಲೇ ನಗುತ್ತಾ ಇರುತ್ತಾಳೆ. ಇನ್ನು ಶಾರ್ವರಿ ಬಳಿ ಆಕೆಯ ಮಗಳು ಬಂದು ಮನೆ ಹಾಳು ಮಾಡುವ ಬಗ್ಗೆ ಮಾತನಾಡುತ್ತಾ ಇರುತ್ತಾಳೆ. ಇದನ್ನು ಕಂಡ ಶಾರ್ವರಿ ನಾನು ಮಾಡೋ ಕೆಲಸದಲ್ಲಿ ನಿನಗೆ ಖುಷಿ ನೀಡುತ್ತಿದೆ ಅಲ್ವಾ ಎಂಜಾಯ್ ಮಾಡು ಎಂದು ನಗುತ್ತಾ ಹೇಳುತ್ತಾಳೆ .
ಇನ್ನು ಅಮ್ಮನನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದು ಅಲ್ಲಿಂದ ಹೋಗುತ್ತಾಳೆ. ಆಗ ಮಲಗಿದ್ದ ಮಾಧವನ ತಮ್ಮನಿಗೆ ಎಚ್ಚರವಾಗಿ ನೋಡುತ್ತಾ ಇರುತ್ತಾನೆ. ಇನ್ನು ಅವಿ ಬಳಿ ಪೂರ್ಣಿಮಾ ನಿಮ್ಮ ಬಳಿ ಸ್ವಲ್ಪ ಮಾತನಾಡಬೇಕಿತ್ತು, ಮಾತನಾಡಲು ನೀವು ಪ್ರೀ ಇದ್ದೀರಾ ಎಂದು ಕೇಳಿದಾಗ ಅವಿ ಯಾಕೆ ಇಷ್ಟೆಲ್ಲ ಕೇಳುತ್ತಿಯಾ ಮಾತಾಡು ಎಂದು ಹೇಳಿದಾಗ ಜನಾರ್ಧನ ಮನೆಗೆ ಹೋಗಿದ್ದ ವಿಚಾರ ಎಲ್ಲಾ ಹೇಳುತ್ತಾಳೆ. ಬಳಿಕ ಆಭಿಯನ್ನು ಅವರು ಕರೆದುಕೊಂಡು ಮನೆಗೆ ಬರುತ್ತಾರೆ ಎಂದೆಲ್ಲ ಹೇಳಿದಾಗ ಅವಿ ಸರಿ ಅವರೆಲ್ಲ ಮನೆಗೆ ಬರಲಿ ಆಮೇಲೆ ನೋಡೋಣ ಎಂದು ಹೇಳಿದಾಗ ಪೂರ್ಣಿಮಾಗೆ ಕೊಂಚ ಸಮಾಧಾನ ಆಗುತ್ತದೆ .


Click it and Unblock the Notifications











