Srirasthu Shubhamasthu: ಮನೆ ಬಿಟ್ಟ ತುಳಸಿಯನ್ನು ಕಂಡ ಮಾಧವ ಶಾಕ್
ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ ಹಾಗೆಯೇ ಮುಂದೇನು ಎಂಬ ಕಾತರತೆಯನ್ನು ಕೂಡ ಜನರಿಗೆ ಆಗುತ್ತಾ ಇರುತ್ತದೆ. ಇದೀಗ ತುಳಸಿ ತನ್ನ ಮಗನಿಗೆ ಬೇಡ ಆಗಿದ್ದಾಳೆ. ಹುಟ್ಟಿಸಿದ ತಾಯಿ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡದೇ ಆಕೆಗೆ ಬಾಯಿಗೆ ಬಂದ ಹಾಗೆ ಬಯ್ಯುವುದು ಇದೆಲ್ಲವನ್ನೂ ಮಗ ಸಮರ್ಥ್ ಮಾಡುತ್ತಾ ಇದ್ದಾನೆ .
ಅಮ್ಮ ನನ್ನ ಮಾತು ಕೇಳುತ್ತಿಲ್ಲ ಎಂದು ಹೇಳಿ ಮನೆ ಬಿಟ್ಟು ಹೋಗಲು ತಯಾರಾಗಿದ್ದಾನೆ ಸಮರ್ಥ್ . ಆಗ ತುಳಸಿ ಗೆ ಎನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಆ ಬಳಿಕ ತಾನು ಯಾವ ಕೆಲಸವನ್ನೂ ಈ ಮನೆಯವರಿಗೆ ಇಷ್ಟ ಆಗದ್ದನ್ನು ನಾನು ಯಾವತ್ತೂ ಮಾಡುವುದು ಇಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾರೆ. ತನ್ನ ಮನದಲ್ಲಿ ಅದೆಷ್ಟೇ ದುಃಖ ಇದ್ದರೂ ಅದನ್ನು ಮಕ್ಕಳ ಮುಂದೆ ಯಾವತ್ತೂ ತೂರಿಸಿಕೊಂಡಳು ಅಲ್ಲ ತುಳಸಿ .ಹಾಗೆಯೇ ಇದೀಗ ತಾನು ಮನೆ ಬಿಟ್ಟು ಹೋಗಲು ಮುಂದಾಗಿದ್ದಾಳೆ..

ತಾನು ಮನೆ ಬಿಟ್ಟು ಹೋದರೆ ಮನೆಯಲ್ಲಿ ಎಲ್ಲರೂ ಖುಷಿ ಆಗಿ ಇರಬಹುದು. ನನ್ನಿಂದಾಗಿ ಯಾರು ಬೇಸರ ಮಾಡಿಕೊಳ್ಳಬಾರದು. ತನ್ನ ತಂದೆಯಂತೆ ಇರುವ ಮಾವ ಕೂಡ ಚೆನ್ನಾಗಿ ಇರಬೇಕು ಅವರಿಗೆ ಯಾವ ನೀವು ಆಗಬಾರದು ಎಂದುಕೊಂಡ ತುಳಸಿ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಇರುತ್ತಾಳೆ.
ಆ ಬಳಿಕ ಮೆತ್ತಗೆ ಮನೆ ಬಿಟ್ಟು ಹೋಗುತ್ತಾಳೆ ತುಳಸಿ. ಆದರೆ ಈ ವಿಚಾರ ಮಾತ್ರ ಯಾರಿಗೆ ಕೂಡ ತಿಳಿದಿರುವುದು ಇಲ್ಲ. ಇನ್ನೂ ದತ್ತ ಮಾತ್ರ ಸಮರ್ಥ್ ಆಡಿದ ಕೆಲವು ಚುಚ್ಚು ಮಾತುಗಳಿಂದ ಬಹಳ ನೋವು ಪಡುತ್ತಾ ಇರುತ್ತಾರೆ. ತನ್ನ ಮಗಳಂತಹ ಸೊಸೆ ಗೆ ಅದೆಷ್ಟು ಕಷ್ಟ ಕೊಡುತ್ತಿಯ ದೇವರೇ ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾನೆ.
ಇನ್ನೂ ತುಳಸಿ ಯಾವುದೋ ಒಂದು ಗಾಡಿಯಲ್ಲಿ ಕುಳಿತುಕೊಂಡು ತನ್ನ ಲಗೇಜ್ ಸಮೇತ ಪ್ರಯಾಣ ಬೆಳೆಸುತ್ತಾ ಇರುತ್ತಾರೆ. ತುಳಸಿ ಮನೆ ಬಿಟ್ಟು ಹೋಗಿರುವ ವಿಚಾರ ಮಾತ್ರ ಯಾರಿಗೆ ಕೂಡಾ ತಿಳಿದಿರುವುದಿಲ್ಲ .. ಇನ್ನೂ ಮರುದಿನ ದತ್ತನ ಮನೆಗೆ ಗೂಂಡಾಗಳು ಎಂಟ್ರಿ ಆಗುತ್ತಾರೆ ತುಳಸಿಯನ್ನು ಕಂಡ ಕಂಡಲ್ಲಿ ಹುಡುಕುತ್ತಾರೆ ಗೂಂಡಾಗಳನ್ನು ನೋಡಿದ ದತ್ತ ಯಾರೋ ನೀವೆಲ್ಲ ... ಎಂದೆಲ್ಲ ಕೇಳಿದಾಗ ರೌಡಿಗಳು ದತ್ತನಿಗೆ ಧಮ್ಕಿ ಹಾಕುತ್ತ ಇರುತ್ತಾರೆ.
ದತ್ತನ ಮಾತುಗಳನ್ನು ಕೇಳದೆ ಗೂಂಡಾಗಳು ಮನೆಯನ್ನೇ ಜಪ್ತಿ ಮಾಡುತ್ತಾ ಇರುತ್ತಾರೆ. ಇನ್ನೂ ಅವರೆಲ್ಲ ತುಳಸಿ ಇಲ್ಲದನ್ನು ಕಂಡು ಅಲ್ಲಿಂದ ಹೋಗುತ್ತಾರೆ. ಇನ್ನೂ ಮನೆಯಲ್ಲಿ ತುಳಸಿ ಇಲ್ಲದನ್ನು ಕಂಡ ದತ್ತ ಶಾಕ್ ಆಗುತ್ತಾನೆ. ತುಳಸಿ ಎಲ್ಲಿಗೆ ಹೋಗಿರಬಹುದು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ.
ಇನ್ನೂ ತುಳಸಿ ಹತ್ತಿದ ವಾಹನ ಮಾಧವ ನ ಮನೆಯ ಮುಂದೆಯೇ ಬಂದು ನಿಲ್ಲುತ್ತದೆ. ಇನ್ನೂ ತುಳಸಿ ವಾಹನದಿಂದ ಇಳಿಯುತ್ತಾಳೆ. ಮಾಧವ ತುಳಸಿಯನ್ನು ನೋಡಿ ಶಾಕ್ ಆಗುತ್ತಾನೆ. ನೀವೇನು ಮಾಡುತ್ತಾ ಇದ್ದೀರಿ ಇಲ್ಲಿ ಎಂದೆಲ್ಲ ಕೇಳಿದಾಗ ನಾನು ಮನೆ ಬಿಟ್ಟು ಬಂದು ಬಿಟ್ಟೆ ಸರ್ ಎಂದು ಜೋರಾಗಿ ಅಳುತ್ತಾಳೆ ತುಳಸಿ


Click it and Unblock the Notifications











