Srirasthu Shubhamasthu: ಅವಿ ಕೆಂಗಣ್ಣಿಗೆ ಗುರಿ ಆದ ಶಾರ್ವರಿ!

By ಪೂರ್ವ

ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ದತ್ತ ಮಾಧವನನ್ನು ಮನೆಗೆ ಊಟಕ್ಕೂ ಕರೆದಿದ್ದಾರೆ. ಮಾಧವ ಬಹಳ ಖುಷಿಯಿಂದ ಊಟ ಮಾಡುತ್ತಾ ಇರುತ್ತಾರೆ.‌ ತುಳಸಿ ಕೂಡ ಮಾಧವನ ಬಳಿ ನಿಂತು ಬಡಿಸುತ್ತ ಇರುವ ವೇಳೆ ನನಗಾಗಿ ಇಷ್ಟೆಲ್ಲ ಐಟಂ ಯಾಕೆ ಮಾಡಲು ಹೋದಿರಿ ಎಂದು ಕೇಳುತ್ತಾಇದನ್ನು ಕೇಳಿದ ತುಳಸಿ ಹೇಳುತ್ತಾಳೆ

ನಾನು ಒಬ್ಬಳೇ ಮಾಡಲಿಲ್ಲ, ನನಗೆ ಸಿರಿ ಸಹಾಯ ಇತ್ತು ಹಾಗಾಗಿ ಮಾಡಿದೆ ಎಂದು ತುಳಸಿ ಹೇಳುತ್ತಾಳೆ. ಇದನ್ನು ಕೇಳಿದ ಮಾಧ ಬಹಳ ಖುಷಿ ಆಗುತ್ತಾನೆ. ಇನ್ನು ಮಾಧವ ಊಟ ಮಾಡಿ ಮುಗಿಸಿ ಇನ್ನೇನು ಹೊರಡಬೇಕು ಎಂದುಕೊಳ್ಳುವ ವೇಳೆ ದತ್ತ ನೀವು ನನ್ನ ಜೊತೆ ಚೆಸ್ ಆಡಲೆಬೇಕು ಎಂದು ಹೇಳುತ್ತಾನೆ. ಇದನ್ನು ಕೇಳಿ ಸಿರಿ ಮನದಲ್ಲಿ ನಗುತ್ತಾಳೆ.‌ ಇದಕ್ಕಾಗಿ ತಾತ ಮಾಧವ ಅವರನ್ನು ಕರೆದು ಊಟ ಹಾಕಿ ಚೆಸ್ ನಲ್ಲಿ ಮಾಧವ ಅವರನ್ನು ಸೋಲಿಸಲೆಬೇಕು ಅಂದುಕೊಂಡಿರುವುದು ಎಂದು ಯೋಚನೆ ಮಾಡುತ್ತಾ ನಗುತ್ತಾ ಇರುವಾಗ ದತ್ತ ಸಿರಿ ಮುಖ ನೋಡಿ ಯಾಕೆ ಸೋಗಲಾಡಿ ನಗುತ್ತಾ ಇದ್ದೀಯಾ ಎಂದಾಗ ನಗುವನ್ನ ತಡೆದುಕೊಂಡು ಸುಮ್ಮನೆ ಎಂದು ಹೇಳಿ ಒಳ ಹೋಗುತ್ತಾಳೆ

Kannada serial Srirasthu Shubhamasthu written update on 8th March

ಮಾಧವ ಅವರನ್ನು ಮಾತನಾಡಲು ಬಿಡದೆ ಚೆಸ್ ಆಡಲು ಶುರು ಮಾಡಿದಾಗ ಸಿರಿಗೆ ಸಮರ್ಥ್ ಕರೆ ಮಾಡುತ್ತಾನೆ. ಸಿರಿ ನಿನ್ನ ನಾನು ಮೀಟ್ ಮಾಡಬೇಕು ಹೊರಗೆ ಸಿಗುತ್ತಿಯಾ ಎಂದು ಕೇಳುತ್ತಾನೆ. ಇನ್ನು ಈ ವಿಚಾರವನ್ನು ತುಳಸಿ ಬಳಿ ಹೇಳಿದಾಗ ತುಳಸಿ ದತ್ತ ಬಳಿ ಪರ್ಮಿಷನ್ ತೆಗೆದುಕೊಂಡು ಅಲ್ಲಿಂದ ಸಿರಿ ಮಾಧವ ಅವರಿಗೆ ಬಾಯ್ ಹೇಳಿ ಅಲ್ಲಿಂದ ತೆರಳುತ್ತಾಳೆ. ಸ್ವಲ್ಪ ಹೊತ್ತು ಬಳಿಕ ಕಾಲಿಂಗ್ ಬೆಲ್ ಸದ್ದು ಆಗುತ್ತದೆ. ಆಗ ಕೋಪಗೊಂಡ ದತ್ತ ತುಳಸಿ ಯಾರು ಬಂದಿದ್ದಾರೆ ನೋಡು.ಎಲ್ಲರೂ ಡಿಸ್ಟರ್ಬ್ ಮಾಡುತ್ತಾರೆ ಎಂದು ಯೋಚನೆ ಮಾಡಿಕೊಂಡು ಇರುತ್ತಾರೆ.. ಆಗಲೇ ಮಾಧವ ಚೆಕ್ ಎಂದು ಹೇಳುತ್ತಾನೆ ಇದನ್ನು ಕೇಳಿದ ದತ್ತ ಅವಕ್ಕಾಗುತ್ತಾರೆ.

ತುಳಸಿ ಬಾಗಿಲು ತೆಗೆದು ನೋಡುವಾಗ ಸಂಧ್ಯಾ ಬಂದಿರುವುದನ್ನು ನೋಡಿ ಶಾಕ್ ಆಗುತ್ತದೆ . ಸಂಧ್ಯಾಳನ್ನು ತುಳಸಿ ಎಷ್ಟೇ ಸಮಾಧಾನ ಪಡಿಸಲು ನೋಡಿದರೂ ಅದು ಸಾಧ್ಯ ಆಗಲೇ ಇಲ್ಲ. ಏಕವಚನದಲ್ಲಿ ತನ್ನ ತಾತನ ಬಗ್ಗೆ ಮಾತನಾಡುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿಗೆ ಮಾಧವ ಬರುತ್ತಾನೆ. ಇನ್ನು ಜನಾರ್ಧನ ಅಭಿನ ಕರೆದುಕೊಂಡು ಮನೆಗೆ ಬರುತ್ತಾನೆ. ಆ ವೇಳೆ ಅವಿಯೂ ಅಲ್ಲಿಯೇ ಇರುತ್ತಾನೆ. ಅವಿಗೆ ಜನರ್ಧನನ್ನು ಕಂಡು ಕೋಪ ಬಂದರು ಸಮಾಧಾನ ಮಾಡಿಕೊಂಡು ಇರುತ್ತಾಳೆ.

Kannada serial Srirasthu Shubhamasthu written update on 8th March

ಇತ್ತ ಶಾರ್ವರಿ ಪಿತೂರಿ ಮಾಡಿ ಅಣ್ಣ ಹಾಗೂ ತಮ್ಮನನ್ನು ಹೇಗಪ್ಪ ಬೇರೆ ಬೇರೆ ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಅಷ್ಟರಲ್ಲಿ ಜನರ್ಧಾನ್ ಶಾರ್ವರಿ ಬಳಿ ಇಲ್ಲಿ ಇರುವವರಲ್ಲಿ ದೊಡ್ಡವರು ನೀವೇ ಅದಕ್ಕಾಗಿ ನಿಮ್ಮ ಬಳಿ ಮದುವೆ ಪ್ರಸ್ತಾಪ ಮಾಡುತ್ತಾ ಇದ್ದೇವೆ, ಮಾಧವ ಇದ್ದಿದ್ದರೆ ಬಹಳ ಚೆನ್ನಾಗಿ ಇರುತ್ತಿತ್ತು, ನಮಗಾಗಿ ಮಕ್ಕಳ ಭವಿಷ್ಯ ಹಾಳಾಗುವುದು ಬೇಡ ಎಂಬುವುದು ನನ್ನ ಉದ್ದೇಶ ಎಂದಾಗ ಶಾರ್ವರಿ ನನಗೆ ಅಭಿ ಒಪ್ಲಿಗೆಯೇ ನನ್ನ ಒಪ್ಪಿಗೆ ಅವರಿಬ್ಬರೂ ಚೆನ್ನಾಗಿ ಇರುತ್ತಾರೆ ಎಂದರೆ ನಮ್ಮದೇನಿದೆ ಎಂದು ಹೇಳುತ್ತಾಳೆ ಆ ವೇಳೆ ಜನಾರ್ಧನ ನಿಶ್ಚಿತಾರ್ಥ ವಿಷಯನ್ನು ಮಾತನಾಡುತ್ತಾರೆ.

ಇದನ್ನೆಲ್ಲ ಕೇಳಿ ಅವಿಗೆ ಮೈ ಎಲ್ಲ ಉರಿದರೆ ಪಾಪ ಪೂರ್ಣಿಮಾಗೆ ಮಾತ್ರ ಏನು ನಡೆಯುತ್ತಿದೆ ಎಂಬುವುದು ತಿಳಿಯದಾಗಿದೆ. ಇನ್ನು ಅವರೆಲ್ಲ ಹೋದ ಬಳಿಕ ಅಭಿ ಬಹಳ ಖುಷಿ ಪಡುತ್ತಾನೆ. ಆದರೆ ಅವಿ ಮಾತ್ರ ಬಹಳ ಸಿಟ್ಟು ಮಾಡಿಕೊಳ್ಳುತ್ತಾನೆ. ಇನ್ನು ಶಾರ್ವರಿ ಅತ್ತಿಂದ ಇತ್ತ ಓಡಾಡುತ್ತಾ ಇರುವಾಗ ಅವಿ ಶಾರ್ವರಿ ಬಳಿ ಕೇಳುತ್ತಾನೆ . ಜನರ್ಧನ ಬಗ್ಗೆ ನಿಮಗೆ ಗೊತ್ತು ಅಲ್ವಾ .. ಆದರೂ ನನ್ನ ಒಂದು ಮಾತು ಕೇಳದೆ ನೀವು ಅದು ಹೇಗೆ ನಿಶ್ಚಿತಾರ್ಥ ಫಿಕ್ಸ್ ಮಾಡಿದಿರಿ ಎಂದು ಕೇಳುತ್ತಾನೆ ಇದನ್ನು ಕೇಳಿದ ಶಾರ್ವರಿಗೆ ಶಾಕ್ ಆಗುತ್ತದೆ. ಅವಿ ಬಾಯಿಂದ ಇಂಥ ಮಾತುಗಳು ಬರುತ್ತದೆ ಎಂದು ಎಕ್ಸ್ಪೇಕ್ಟ್ ಮಾಡಿರಲಿಲ್ಲ ಶಾರ್ವರಿ. ಮುಂದೇನು ಕಾದು ನೋಡಬೇಕಿದೆ

More from Filmibeat

English summary
Kannada serial sri rastu shubha mastu written updated on 8th March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X