Srirasthu Shubhamasthu: ಮಾಧವನ ಕೆಫೆಗೆ ದತ್ತ ಆಗಮಿಸುತ್ತಾರಾ? ಮಾವನ ನಿರ್ಧಾರದ ಮೇಲೆ ನಿಂತಿದೆ ತುಳಸಿ ಭವಿಷ್ಯ?

By Poorva

ಶ್ರೀರಸ್ತು ಶುಭಮಸ್ತು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಶಿವರಾತ್ರಿ ಜಾಗರಣೆ ಮಾಡುತ್ತಿರುವ ಮಾಧವನ ಬಳಿ ಶಾರ್ವರಿ ಬರುತ್ತಾಳೆ. ತುಳಸಿ ಬಗ್ಗೆ ಒಂದಷ್ಟು ಮಾಹಿತಿ ಏನಾದರು ದೊರಕುತ್ತದ ಎಂದು ಕಾಯುತ್ತ ಇರುತ್ತಾಳೆ. ಹಾಲು ಹಿಡಿದುಕೊಂಡು ಮಾಧವನ ಬಳಿ ಬಂದ ಶಾರ್ವರಿ ಮಾಧವನ ಪಕ್ಕ ಬಂದು ಕುಳಿತುಕೊಳ್ತಾಳೆ. ಇನ್ನು ಶಿವನ ಆರಾಧನೆಯಲ್ಲಿ ಮಗ್ನ ಆಗಿದ್ದ ಮಾಧವ ಮೆತ್ತಗೆ ಕಣ್ಣು ತೆರೆಯುತ್ತಾನೆ.

ಪಕ್ಕದಲ್ಲಿ ಶಾರ್ವರಿ ಕುಳಿತಿರುವುದನ್ನು ಕಂಡ ಮಾಧವ ನಗುತ್ತಾ ಸ್ವಲ್ಪ ಆದರೂ ಜಾಗರಣೆ ಮಾಡೋಣ ಅಂತ ಎಂದು ಹೇಳಿದಾಗ ಶಾರ್ವರಿ ಬಾವ ನೀವು ಇವತ್ತು ದಿನಪೂರ್ತಿ ಏನನ್ನೂ ತಿನ್ನಲ್ಲ ಎಂದು ತಿಳಿದಿದೆ, ಆದರೂ ನಿಮಗೆ ಹಾಲು ತಂದಿದ್ದೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಾಧವ ಮಾತ್ರ ಇದೆಲ್ಲ ತೊಂದರೆ ಯಾಕೆ ತೆಗೆದುಕೊಂಡೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಶಾರ್ವರಿ ದೇವಾಲಯದಲ್ಲಿ ನಿಮ್ಮ ಬಳಿ ಅಭಿಮಾನಿಗಳು ಮಾತನಾಡುತ್ತಾ ಇದ್ದರೂ ಅದಕ್ಕೆ ನಾನು ಸುಮ್ಮನೆ ಇದ್ದೆ ಎನ್ನುತ್ತಾಳೆ.

Kannada serial Srirasthu shubhamasthu written updated on 21st February

ಮಾಧವ ಅವರು ಅಭಿಮಾನಿನು ಹೌದು ಹಾಗೆಯೇ ಆಕೆ ನನ್ನ ಉತ್ತಮ ಗೆಳತಿ ಕೂಡ ಎಂದು ಹೇಳಿ ಮುಂದೆ ಮಾತು ಆಡದೆ ಸುಮ್ಮನೆ ಇರುತ್ತಾನೆ. ಆದರೆ ಶಾರ್ವರಿ ಮಾಧವನ ಬಳಿ ತುಳಸಿ ಬಗ್ಗೆ ಕೇಳಬೇಕು ಎನ್ನುವಷ್ಟರಲ್ಲಿ ಮಾಧವ ಕಣ್ಣು ಮುಚ್ಚಿಕೊಂಡು ಶಿವನ ಧ್ಯಾನ ಮಾಡುತ್ತಾ ಇರುತ್ತಾನೆ. ಇದರಿಂದ ಶಾರ್ವರಿಗೆ ನಿರಾಸೆ ಆಗುತ್ತದೆ. ಇನ್ನು ದತ್ತ ಮಾತ್ರ ಮಾಧವನ ಹಳೆ ಸ್ಕೂಟರ್ ಮೇಲೆ ಕುಳಿತುಕೊಂಡಿರುತ್ತಾನೆ. ಅಲ್ಲಿಗೆ ಬಂದ ತುಳಸಿಮಾವ ಕಾಫಿ ತೆಗೆದುಕೊಳ್ಳಿ ಎಂದು ಹೇಳಿದಾಗ ಸ್ಕೂಟರ್ ಏರಿ ಕುಳಿತಿದ್ದ ದತ್ತ ಕಾಫಿ ಅಲ್ಲಿ ಇಡು ಎಂದು ಹೇಳುತ್ತಾರೆ. ತುಳಸಿ ಕಾಫಿಯನ್ನು ಸ್ಕೂಟರ್ ಮೇಲೆ ಇಡುತ್ತಾಳೆ.

ಆ ವೇಳೆ ದತ್ತ ಓದುತ್ತಿರುವ ಪೇಪರ್ ಕಾಫಿ ಲೋಟದ ಮೇಲೆ ಸ್ವಲ್ಪ ತಾಗಿ ಕಾಫಿ ಲೋಟ ಕೆಳಗೆ ಬೀಳುತ್ತದೆ. ಸ್ಕೂಟರ್ ಮೇಲೆ ಕೂಡ ಚೆಲ್ಲುತ್ತದೆ. ಆದರೆ ತುಳಸಿ ಮಾವನ ಮೇಲೆ ಬಿಸಿ ಕಾಫಿ ಏನಾದರು ಚೆಲ್ಲಿ ಬಿಟ್ಟಿತಾ ಏನು ಕಥೆ ಎಂದು ಗಾಬರಿ ಪಡುತ್ತಾಳೆ . ಇದನ್ನು ನೋಡಿದ ದತ್ತ ನನಗೆ ಏನು ಆಗಿಲ್ಲ ಈ ಸ್ಕೂಟರ್ ಅನ್ನು ಸ್ವಚ್ಛಗೊಳಿಸಿಬಿಡು ಎಂದು ಹೇಳುತ್ತಾರೆ. ತುಳಸಿ ಮನೆಯ ಒಳಗೆ ಹೋದ ಕೂಡಲೇ ದತ್ತ ಸ್ಕೂಟರ್ ನೋಡಿ ಏನು ಚಪ್ಪಲಿ ಕಳ್ಳನ ಹಾಗೆ ಸ್ಕೂಟರ್ ಕೂಡ ಕಾಫಿ ಕುಡಿಯುತ್ತಾ ಎಂದು ಮಾತನಾಡಿಕೊಂಡು ಇರಬೇಕಾದರೆ ತುಳಸಿ ಬಂದು ಸ್ಕೂಟರ್ ತೊಳೆಯುತ್ತಾಳೆ.

Kannada serial Srirasthu shubhamasthu written updated on 21st February

ಇನ್ನು ಈ ವೇಳೆ ಮಾಧವ ದತ್ತನ ಮನೆಗೆ ಬರುತ್ತಾನೆ. ದತ್ತ ಮನೆ ಒಳಗೆ ಕರೆಯದೆ ಸುಮ್ಮನೆ ಬರುತ್ತಾನೆ. ದತ್ತನ ಹಿಂದೆ ಮಾಧವ ಕೂಡ ಬರುತ್ತಾನೆ . ಇನ್ನು ಮಾಧವ ದತ್ತನ ಬಳಿ ಮಾತನಾಡುತ್ತಾ ಇರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಕಾಫಿ ಹಿಡಿದು ಬಂದ ತುಳಸಿ ಮಾಧವನನ್ನು ನೋಡಿ ಖುಷಿ ಪಡುತ್ತಾಳೆ. ಆಗ ದತ್ತ ಮೆತ್ತಗೆ ಏನು ನನ್ನ ಮೇಲೆ ಅಭಿಷೇಕ ಮಾಡಬೇಕು ಎಂದುಕೊಂಡು ಇದ್ದೀಯಾ ಎಂದೆಲ್ಲ ಹೇಳುತ್ತಾರೆ. ಅದನ್ನು ಕೇಳಿದ ತುಳಸಿ ಎಚ್ಚೆತ್ತುಕೊಂಡು ಕಾಫಿ ಕೊಟ್ಟು ಮಾಧವನ ಬಳಿ ಮಾತನಾಡುತ್ತಾಳೆ.

ಬಳಿಕ ಅವರನ್ನು ಕುಳಿತುಕೊಳ್ಳಲು ಹೇಳಿ ಅವರಿಗೆ ಕಾಫಿ ತರಲು ಹೋಗುತ್ತಾಳೆ. ಅಷ್ಟರಲ್ಲಿ ದತ್ತನಿಗೆ ತನ್ನ ಚಪ್ಪಲಿ ನೆನಪಾಗಿ ಚಪ್ಪಲಿ ಇದೆಯೋ ಇಲ್ಲವೋ ಎಂದು ನೋಡಲು ಹೋಗುತ್ತಾನೆ. ಚಪ್ಪಲಿ ಇದ್ದ ಸ್ಥಳದಲ್ಲಿ ಇರುವುದನ್ನು ಕಂಡು ಕೊಂಚ ಖುಷಿ ಪಡುತ್ತಾರೆ. ಆಗ ಅಲ್ಲಿಗೆ ಬಂದ ತುಳಸಿ ಮಾಧವನ ಬಳಿ ಕಣ್ಣು ಸನ್ನೆಯಿಂದಲೆ ಕ್ಷಮೆ ಕೇಳುತ್ತಾಳೆ. ಅದಕ್ಕೆ ಮಾಧವ ನಗುತ್ತಾ ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುತ್ತಾನೆ. ಬಳಿಕ ಮಾಧವನ ಬಳಿ ಬಂದ ದತ್ತ ಕುರ್ಚಿ ಮೇಲೆ ಕುಳಿತುಕೊಳ್ತಾನೆ. ಇದನ್ನು ನೋಡಿದ ಮಾಧವ ನಿಮಗೆ ಒಂದು ಒಳ್ಳೆಯ ವಿಚಾರ ಹೇಳಬೇಕು ಎಂದು ಬಂದೆ, ನಮ್ಮ ಚಾನೆಲ್ ನಲ್ಲಿ ತುಳಸಿಯವರು ಮಾಡಿದ ಕಾರ್ಯಕ್ರಮ ವೀಕ್ಷಕರ ಮನ ಮುಟ್ಟಿದೆ, ಅತೀ ಹೆಚ್ಚು ಜನರು ಈ ಕಾರ್ಯಕ್ರಮವನ್ನು ನೋಡಿದ್ದಾರೆ, ಅದಕ್ಕೆ ನಮ್ಮ ಕೆಫೆಯಲ್ಲಿ ಲಂಚ್ ಅರೇಂಜ್ ಮಾಡಿದ್ದೇವೆ ನೀವು ಬರಬೇಕು ಎಂದಾಗ ಕೋಪಗೊಂಡ ದತ್ತ ನೀವು ನಮ್ಮನ್ನು ಒಂದು ಮಾತು ಕೇಳಿದಿರಾ ಇದೆಲ್ಲ ಮಾಡುವಾಗ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮಾಧವ ಸುಮ್ಮನೆ ಆಗುತ್ತಾನೆ.

More from Filmibeat

English summary
Kannada serial sri rastu shubha mastu written updated on 21st February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X