Srirasthu Shubhamasthu: ಮಾಧವನನ್ನು ನೋಡಿ ತುಳಸಿ ಶಾಕ್, ಮಗಳ ಬೇಡಿಕೆಯನ್ನು ಈಡೇರಿಸುತ್ತಾಳ ತುಳಸಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ತನ್ನ ಮನೆಗೆ ಆಗಮಿಸಿದ್ದಾರೆ. ದತ್ತ ತುಳಸಿಯನ್ನು ಬಹಳ ಆದರದಿಂದ ಮನೆ ಒಳಗೆ ಕರೆಯುತ್ತಾನೆ. ತುಳಸಿಗೆ ಸಂಧ್ಯಾಳನ್ನು ನೋಡಿ ಬಹಳ ಖುಷಿ ಆಗುತ್ತದೆ. ಆಕೆ ಗರ್ಭಿಣಿ ಎಂದು ತಿಳಿದ ಬಳಿಕ ತುಳಸಿ ಸಂಧ್ಯಾ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಇನ್ನೂ ತುಳಸಿ ಏನು ಮಾತನಾಡದೆ ತನ್ನ ಮಗನ ಪ್ರೀತಿಯನ್ನು ಬೇಡುತ್ತಾ ಇರುತ್ತಾಳೆ.
ಆಕೆಗೆ ಸಮರ್ಥ್ ಎಂದರೆ ಪಂಚ ಪ್ರಾಣ. ಆದರೆ ಸಮರ್ಥ್ ತುಳಸಿ ಪ್ರೀತಿಯಿಂದ ಬಹಳ ಹಿಂದೆ ಸರಿದಿರುತ್ತಾನೆ. ಇನ್ನೂ ತುಳಸಿ ಅಡುಗೆ ಮಾಡಿ, ಸಮರ್ಥ್ ನನ್ನು ಊಟಕ್ಕೆ ಕರೆಯುತ್ತಾರೆ. ಆದರೆ ಸಮರ್ಥ್ ಊಟ ಮಾಡಲು ಹಿಂದೇಟು ಹಾಕುತ್ತಾನೆ. ಕೊನೆಗೂ ತನ್ನ ತಾತನ ಮಾತು ಕೇಳಿ ಊಟ ಮಾಡಿದಾಗ ಆತನಿಗೆ ಬಹಳ ದಿನಗಳ ನಂತರ ರುಚಿಕರವಾದ ಊಟ ಮಾಡಿದ್ದೇನೆ ಎಂದು ಬಹಳ ಖುಷಿ ಪಡುತ್ತಾನೆ.

ಇನ್ನೂ ದತ್ತ ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಮಾಧವ ದತ್ತನ ಮನೆಗೆ ಬರುತ್ತಾನೆ. ಆದರೆ ಮನೆಯ ಹೊರಗೆ ಯಾರು ಇಲ್ಲದನ್ನು ನೋಡಿ ವಾಪಸ್ ಮನೆಯತ್ತ ತೆರಳಬೇಕು ಎನ್ನುವಷ್ಟರಲ್ಲಿ ಮಾಧವ ನನ್ನು ದತ್ತ ನೋಡಿಯೇ ಬಿಡುತ್ತಾರೆ. ಚಪ್ಪಲಿ ಕಳ್ಳ ಎಂದು ಜೋರಾಗಿ ಕರೆಯುತ್ತಾರೆ. ಆಗ ತುಳಸಿಗೆ ಕೂಡ ಬಹಳ ಶಾಕ್ ಆಗುತ್ತದೆ. ಆರೇ ಇವರು ಮನೆಯ ಬಳಿ ಬಂದ್ರ ಎಂದು ಶಾಕ್‌ಗೆ ಒಳಗಾಗುತ್ತಾರೆ.
ಮಾಧವನನ್ನೂ ಕಂಡ ತುಳಸಿ ಫುಲ್ ಖುಷ್
ತುಳಸಿ ಮಧವಾನನ್ನು ಮನೆಯ ಒಳಗೆ ಕರೆದು ಉಪಚಾರ ಮಾಡುತ್ತಾರೆ. ಇನ್ನೂ ಪೂರ್ಣಿಮಾ ತುಳಸಿ ಅಮ್ಮಾ ಮನೆ ಬಿಟ್ಟು ಹೋಗಿದ್ದಕ್ಕೆ ಬಹಳ ಸಂಕಟ ಪಡುತ್ತಾ ಇರುವಾಗ ಆಕೆಯ ಗಂಡ ಅವಿ, ಹೆಂಡತಿ ಸ್ಥಿತಿ ನೋಡಲು ಆಗದೆ ಹೂವಿನ ಬೊಕ್ಕೆ ಕೊಡುತ್ತಾನೆ ಅದನ್ನು ನೋಡಿದ ಪೂರ್ಣಿಮಾ ಗಂಡನ ಪ್ರೀತಿಗೆ ಕರಗುತ್ತಾಳೆ.

ಗಂಡನ ಪ್ರೀತಿಗೆ ಕರಗಿದ ಪೂರ್ಣಿಮಾ
ಇದನ್ನು ಕಂಡ ಪೂರ್ಣಿಮಾ ಬಳಿ ಅವಿ ಮೆತ್ತಗೆ ಹೇಳುತ್ತಾನೆ. ಪೂರ್ಣಿ ಬೇಜಾರು ಮಾಡಿಕೊಳ್ಳಬೇಡ ತುಳಸಿ ಅಮ್ಮ ಹೊರಗೆ ಹೋದಾಗ ನಾನು ಅವರನ್ನು ತಡೆಯಬೇಕಾಗಿತ್ತು ಎಂದು ಹೇಳಿ ಪೂರ್ಣಿಮಾಳನ್ನು ತಬ್ಬಿಕೊಂಡು ಇರುತ್ತಾನೆ. ಇನ್ನೂ ಪೂರ್ಣಿಮಾ ಏನು ಹೇಳದೆ ಸುಮ್ಮನೆ ಆಗುತ್ತಾಳೆ. ಇನ್ನೂ ಮಾಧವ ತುಳಸಿಯನ್ನು ಮನೆಗೆ ಕರೆದುಕೊಂಡು ಹೋಗಲು ಬಂದೆ ಎಂದಾಗ ಕೊಂಚ ದತ್ತನಿಗೆ ಶಾಕ್ ಆಗುತ್ತದೆ.
ತುಳಸಿಯನ್ನು ಮನೆಗೆ ಕರೆದುಕೊಂಡು ಹೋಗಲು ಬಂದ ಮಾಧವ
ಇವತ್ತಷ್ಟೆ ಬಂದಿದ್ದಾಳೆ ಈಗಲೇ ಹೊರಡಬೇಕು ಎಂದರೆ ಹೇಗಾಗುತ್ತದೆ ಎರಡು ಮೂರು ದಿನ ಇರಲಿ ಇಲ್ಲಿ ಎಂದಾಗ ಮಾಧವ ಕೊಂಚ ಸಬೂಬು ಹೇಳುತ್ತಾನೆ. ಇನ್ನೂ ಸಿರಿ ಮಾತ್ರ ತುಳಸಿ ಅಮ್ಮನ ಜೊತೆ ಇದ್ದಿದ್ದು ಬಹಳ ಖುಷಿ ಆಯಿತು. ಎಂದೆಲ್ಲ ಹೇಳುತ್ತ ಇರುತ್ತಾಳೆ. ಇದನ್ನು ಕೇಳಿದ ಸಂಧ್ಯಾ ಮೆತ್ತಗೆ ತನ್ನ ತಾಯಿ ಬಳಿ ಬಂದು ಅಮ್ಮ ನೀನು ನನ್ನ ಜೊತೆ ಮೂರು ನಾಲ್ಕು ದಿನ ಇದ್ದು ಹೋಗಮ್ಮ ನಿನ್ನ ಜೊತೆ ಇರಬೇಕು ಅನ್ನಿಸುತ್ತಾ ಇದೆ ಎಂದು ಹೇಳುತ್ತಾಳೆ . ಇದನ್ನು ಕೇಳಿದ ಮಾಧವ ಎರಡು ಮೂರು ದಿನ ಇರಲಿ ನನ್ನ ಅಭ್ಯಂತರ ಇಲ್ಲ ಎಂದು ಹೇಳುತ್ತಾನೆ.


Click it and Unblock the Notifications











