Srirasthu Shubhamasthu: ದತ್ತನಿಗೆ ಶಾರ್ವರಿಯಿಂದ ಅವಮಾನ, ಕೋಪಗೊಂಡ ದತ್ತ, ಮುಂದೇನು ಮಾಡುತ್ತಾರೆ..?
ರೀರಸ್ತು ಶುಭಮಸ್ತು ಧಾರವಾಹಿ ಹಲವು ತಿರುವುಗಳೊಂದಿಗೆ ನೋಡುಗರ ಮನಗೆಲ್ಲುತ್ತಿದೆ. ಧಾರಾವಾಹಿಯಲ್ಲಿ ದತ್ತ ಹಾಗೂ ಸಿರಿಯ ತಂದೆ ರವೀಂದ್ರ ಅವರು ತುಳಸಿ ಮನೆಗೆ ಹೊರಟಿದ್ದಾರೆ . ತುಳಸಿಯನ್ನು ನೋಡಬೇಕು ಎನ್ನುವ ಹಂಬಲದಲ್ಲಿ ದತ್ತ ಮನೆಗೆ ಬಂದರೆ ತುಳಸಿ ಮಾತ್ರ ಅವರ ಕೈಗೆ ಸಿಗದೆ ಒದ್ದಾಡುತ್ತಾ ಇರುತ್ತಾಳೆ.. ಏನು ಮಾಡುವುದು ಎಂದು ತಿಳಿಯದೇ ಸುಮ್ಮನೆ ಇರಲು ಆಗದೆ ಮರೆಯಲ್ಲಿ ಮಾವನನ್ನು ನೋಡುವ ಪರಿಸ್ಥಿತಿ ತುಳಸಿಗೆ ಬಂದಿದೆ.
ದತ್ತ ಮನೆಗೆ ಆಗಮಿಸಿದ್ದನ್ನು ಕಂಡ ಮಾಧವ ಮಾತ್ರ ಬಹಳ ಖುಷಿ ಪಡುತ್ತಾರೆ.. ಅರೆ ದತ್ತ ಎಂದು ಹೇಳಿ ಬಹಳ ಖುಷಿ ಪಟ್ಟು ಅವರ ಪಕ್ಕ ಕುಳಿತುಕೊಂಡಿದ್ದಾರೆ. ಆ ಬಳಿಕ ಪಾಪಮ್ಮ ಅವರಿಗೆ ರವೀಂದ್ರ ಅವರ ಪರಿಚಯವನ್ನು ಮಾಡಿಸುತ್ತಾರೆ ಮಾಧವ . ಮಾಧವನ ಮಾತಿಗೆ ಮರುಳಾಗದವರೆ ಇಲ್ಲ..

ಇನ್ನೂ ದತ್ತ ಮಾತ್ರ ತನ್ನ ಮನೆಯ ಮಹಾಲಕ್ಷ್ಮೀಯನ್ನ ಮಾಧವಗೆ ಬಿಟ್ಟು ಕೊಟ್ಟಿರುವುದನ್ನು ನೋಡಿದ ಮಾಧವ ದತ್ತನಿಗೆ ಧನ್ಯವಾದ ಹೇಳಿದ್ದಾನೆ. ಮಾಧವ ರವೀಂದ್ರ ಹಾಗೂ ದತ್ತಗೆ ಮನೆ ತೋರಿಸಲು ತೊಡಗುತ್ತಾನೆ. ಮನೆ ನೋಡಿದ ರವೀಂದ್ರ ಬಹಳ ಖುಷಿ ಪಡುತ್ತಾರೆ.. ತುಳಸಿ ಅವರು ಈ ಮನೆಗೆ ಬಂದಿರುವುದು ಅವರ ಪುಣ್ಯ ಎಂದು ಹೇಳುತ್ತಾರೆ.
ದತ್ತನ ಮಾತಿಗೆ ಖುಷಿ ಪಟ್ಟ ಮಾಧವ
ರವೀಂದ್ರ ಮಾತಿಗೆ ತುಳಸಿ ಈ ಮನೆಗೆ ಬರಲು ನಾನು ಪುಣ್ಯ ಮಾಡಿದ್ದೇನೆ ಎಂದು ಮಾಧವ ಹೇಳುತ್ತಾರೆ . ಇದೆಲ್ಲವನ್ನೂ ಕೇಳಿದ ದತ್ತ ಖುಷಿ ಪಡುತ್ತಾ ಇರುತ್ತಾರೆ.. ಇನ್ನೂ ತುಳಸಿಯನ್ನ ನೋಡಲು ದತ್ತ ಕಾತರದಿಂದ ಕಾಯುತ್ತಿದ್ದಾರೆ. ದತ್ತನ ಅವಸರ ಕಂಡು ಮಾಧವ ತುಳಸಿಯನ್ನು ಕರೆ ತರಲು ಹೋಗುತ್ತಾರೆ.

ದತ್ತ ರೂಮ್ ಕಡೆ ಹೋಗುತ್ತಾ ಇರುವಾಗ ಶಾರ್ವರಿ ಸಿಗುತ್ತಾಳೆ.. ಆಕೆಯ ಬಳಿ ನಮ್ಮ ತುಳಸಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಾರೆ . ಆಗ ಶಾರ್ವರಿ ಬಹಳ ಕೋಪದಿಂದ ನಿಮಗೆ ಮದುವೆ ಮಾಡುವ ವೇಳೆ ನನ್ನ ಬಳಿ ಏನಾದರು ಹೇಳಿದ್ದೀರ ಇಲ್ಲ ತಾನೇ.. ನಾನು ಯಾವತ್ತೂ ಅವರನ್ನು ಈ ಮನೆಯ ಕುಟುಂಬದವರು ಎಂದು ತಿಳಿದುಕೊಂಡಿಲ್ಲ.. ಅವರು ಭಾವನಿಗೆ ಮಾತ್ರ ಹೆಂಡತಿ..ನಮಗೆ ಎನು ಇಲ್ಲ ಎಂದು ಹೇಳಿ ಅವಮಾನ ಮಾಡುತ್ತಾಳೆ.
ಮಾವನ ಮುಂದೆ ಬರಲಾರದೆ ಕುಳಿತ ತುಳಸಿ
ಶಾರ್ವರಿ ಮಾತಿಗೆ ದತ್ತ ಮಾತ್ರ ಎನು ಹೇಳದೆ ಸುಮ್ಮನೇ ಆಗುತ್ತಾನೆ.. ಇನ್ನೂ ತುಳಸಿ ಮಾಧವನ ಬಳಿ ನಮ್ಮ ಬೀಗರು ಬಂದಿದ್ದಾರೆ.. ಅವರ ಎದುರು ನಾವು ಎನು ಮಾತನಾಡುವುದು .. ನನಗೆ ಸರಿ ಎನಿಸುವುದು ಇಲ್ಲ ಎಂದು ಹೇಳುತ್ತ ಇರುತ್ತಾಳೆ.. ಇದೆಲ್ಲವನ್ನೂ ಕೇಳಿಸಿಕೊಂಡ ಮಾಧವ ಎನು ಮಾಡುವುದು ಎಂದು ತಿಳಿಯದೇ ಸುಮ್ಮನೆ ಇರುತ್ತಾರೆ.. ದತ್ತ ಬಹಳ ಬೇಸರ ಮಾಡಿಕೊಂಡಿದ್ದಾರೆ. ಈ ಸ್ಥಿತಿಯಲ್ಲಿ ಏನು ಮಾಡುವುದು ಎಂದು ತಿಳಿಯದೇ ದತ್ತನ ಬಳಿ ಹೇಳಲು ಆಗದೆ ತುಳಸಿ ಸುಮ್ಮನಿದ್ದಾಳೆ.


Click it and Unblock the Notifications











