ತುಳಸಿ ಮನೆಗೆ ಬಂದ ಸಂಧ್ಯಾ, ಜಗ್ಗ: ತುಳಸಿಗೆ ಇನ್ನೇನು ಗಂಡಾಂತರ ಕಾದಿದೆಯೋ?
ಶ್ರೀರಸ್ತು ಶುಭಮಸ್ತು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಅಭಿಗೆ ತುಳಸಿ ಮಾಡಿರುವ ಕಿಚಡಿ ಬಹಳ ಇಷ್ಟ ಆಗುತ್ತದೆ. ತನ್ನ ಹಳೆಯ ಗೆಳತಿಯನ್ನು ನೆನೆದು ಅಭಿ ಸದಾ ನೋವಲ್ಲಿ ಬೆಂದು ಹೋಗಿರುತ್ತಾನೆ. ಆದರೆ ಆ ಬಳಿಕ ಮನೆಗೆ ಹೊರಟ ಅಭಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸಂದರ್ಭ ಜೀವ ಹೋಗುವ ಹಾಗೆ ಆಗಿತ್ತು.
ಆದರೆ ಮಾಧವ ಹಾಗೂ ತುಳಸಿ ಅಭಿ ಸ್ಥಿತಿಯನ್ನು ನೋಡಿ ಆಸ್ಪತ್ರೆಗೆ ಸೇರಿಸಿ ಆತನನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಆದರೆ ಅಭಿ ಮಾತ್ರ ಊಟದತ್ತ ಗಮನ ಕೊಡದೆ ಸದಾ ತನ್ನ ಪ್ರೇಯಸಿ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾನೆ. ಇದನ್ನು ನೋಡಿದ ತುಳಸಿ ಅಭಿಗಾಗಿ ಕಿಚಡಿ ಮಾಡಿಕೊಡುತ್ತಾರೆ. ಅದನ್ನು ತಿಂದು ಬಹಳ ಖುಷಿಯಲ್ಲಿ ಅಭಿ ಮಲಗುತ್ತಾನೆ.

ಇನ್ನೂ ಮರುದಿನ ರಕ್ಷಾ ಬಂಧನ ದಿನ. ಇನ್ನೂ ಸಂಧ್ಯಾ ಹಾಗೂ ಜಗ್ಗ ನೇರವಾಗಿ ತುಳಸಿ ಮನೆಗೆ ಬರುತ್ತಾರೆ. ತುಳಸಿ ಮದುವೆ ಬಗ್ಗೆ ಸಂಧ್ಯಾ ಬಹಳ ಕೆಟ್ಟದಾಗಿ ಮಾತನಾಡಿ ಇದ್ದರೂ ಅದನ್ನೆಲ್ಲ ಮೀರಿ ತುಳಸಿ ಮನೆಗೆ ಬಂದು ಅಭಿ ಹಾಗೂ ಅವಿಗೆ ರಕ್ಷಾ ಬಂಧನ ಕಟ್ಟುತ್ತಾಳೆ.ಇದನ್ನು ನೋಡಿದ ತುಳಸಿಗೆ ಶಾಕ್ ಆಗುತ್ತದೆ.
ಅಣ್ಣಂದಿರಿಗೆ ರಾಖಿ ಕಟ್ಟಿದ ಸಂಧ್ಯಾ
ಅದು ಹೇಗೆ ಅವಿ ಹಾಗೂ ಅಭಿಗೆ ರಕ್ಷಾಬಂಧನ ಕಟ್ಟಿದಳು ಈಕೆ. ಅಷ್ಟಕ್ಕೂ ಈಕೆ ಯಾರು ಎಂದು ಅಲ್ಲಿದ್ದವರ ಮನದಲ್ಲಿ ಸಾವಿರ ಪ್ರಶ್ನೆ ಮೂಡುತ್ತ ಇರುತ್ತದೆ. ಇನ್ನೂ ತುಳಸಿಯನ್ನು ನೋಡಿದ ಕೂಡಲೇ ಸಂಧ್ಯಾ ಅಮ್ಮ ಎಂದು ಹೇಳುತ್ತಾಳೆ. ತುಳಸಿಗೆ ಸಂಧ್ಯಾ ನೋಡಿ ಬಹಳ ಶಾಕ್ ಆಗುತ್ತದೆ. ಇದೇನಪ್ಪಾ ಸಂಧ್ಯಾ ಇಲ್ಲಿ ಬಂದು ಹೀಗೆಲ್ಲ ನಡೆದುಕೊಂಡು ಇದ್ದಾಳೆ. ಮೊದಲೇ ಈ ಮನೆಯವರೆಲ್ಲ ನನ್ನ ಮೇಲೆ ಬಹಳ ಕೋಪ ಮಾಡಿಕೊಂಡು ಇದ್ದಾರೆ.

ಸಂಧ್ಯಾಳನ್ನು ನೋಡಿ ಶಾಕ್ ಆದ ತುಳಸಿ
ಇದೀಗ ಕ್ಕೆಯಿ ಬಂದು ಇಲ್ಲಸಲ್ಲದನ್ನು ಹೇಳಿದರೆ ಇನ್ನು ಸಿಟ್ಟು ನೆತ್ತಿಗೆರುತ್ತದೆ ಎಂದೆಲ್ಲ ಮನದಲ್ಲಿ ತುಳಸಿ ಭಯ ಪಟ್ಟುಕೊಂಡು ಇರುವಾಗ ಜುಗ್ಗ ಕೂಡ ಅಲ್ಲಿಗೆ ಬರುತ್ತಾನೆ.. ಭೀಗಿತ್ತಿ ಅವರೇ ನೋಡಲು ಮಹಾಲಕ್ಷ್ಮೀ ಹಾಗೆ ಕಾಣಿಸುತ್ತ ಇದ್ದೀರಿ ಎಂದು ಹೊಗಳುತ್ತಾನೆ.. ಆತ ಹೊಗಳುತ್ತಾ ಇರುವುದನ್ನು ನೋಡಿದ ತುಳಸಿ ಗೆ ಇನ್ನೂ ಭಯ ಆಗುತ್ತದೆ.. ಇಷ್ಟು ಹೊತ್ತಿನಲ್ಲಿ ಈ ಜುಗ್ಗ ಎನು ಮಾಡುತ್ತಾ ಇದ್ದಾನೆ ಇಲ್ಲಿ ಎನ್ನುವ ಅನುಮಾನ ತುಳಸಿ ಗೆ ಮೂಡುತ್ತದೆ.
ತಂಗಿಗಾಗಿ ಗಿಫ್ಟ್ ತಂದ ಸಮರ್ಥ್
ಇನ್ನೂ ಸಮರ್ಥ್ ತನ್ನ ತಂಗಿಗಾಗಿ ಗಿಫ್ಟ್ ತೆಗೆದುಕೊಂಡು ಬರುತ್ತಾನೆ. ಇವತ್ತು ರಕ್ಷಾ ಬಂಧನ ನನ್ನ ತಂಗಿ ಇಲ್ಲಿಗೆ ಬಂದೆ ಬರುತ್ತಾಳೆ. ಆಕೆ ನಂಗೆ ರಾಖಿ ಕಟ್ಟಲು ಬರುತ್ತಾಳೆ. ಅದಕ್ಕಾಗಿ ನಾನು ಬರಬೇಕಾದರೆ ಆಕೆಗಾಗಿ ಗಿಫ್ಟ್ ತಂದಿದ್ದೇನೆ ಎಂದು ಸಿರಿ ಬಳಿ ಸಮರ್ಥ್ ಹೇಳಿಕೊಂಡಿದ್ದಾನೆ. ಇದನ್ನು ನೋಡಿದ ಸಿರಿಗೆ ಸಂಧ್ಯಾ ಮೇಲೆ ಸಿಟ್ಟು ಬಂದರು ಅದ್ಯಾವುದನ್ನೂ ತೋರಿಸಿಕೊಳ್ಳದೆ ಸುಮ್ಮನೆ ಇರುತ್ತಾಳೆ.


Click it and Unblock the Notifications










