Srirasthu Shubhamasthu: ತುಳಸಿಗೆ ಶಾಕ್ ಕೊಟ್ಟ ಸಂಧ್ಯಾ; ದತ್ತನ ಕೈಗೆ ಸಿಕ್ಕಿ ಬೀಳುತ್ತಾಳಾ?
ತುಳಸಿ ಮನೆಯಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಇದೀಗ ದೇವಸ್ಥಾನದಲ್ಲಿ ತುಳಸಿಯನ್ನು ನೋಡಿದ ಶಾರ್ವರಿ ಆಕೆಯ ಮುಖ ನೋಡಲು ತುಂಬಾ ಪ್ರಯತ್ನ ಪಟ್ಟರೂ ಸಾಧ್ಯ ಆಗುವುದಿಲ್ಲ. ಅಷ್ಟರಲ್ಲಿ ತುಳಸಿ ಅಲ್ಲಿಂದ ತೆರಳುತ್ತಾಳೆ. ತುಳಸಿ ಹೋಗಿದ್ದನ್ನು ನೋಡಿದ ಶಾರ್ವರಿಗೆ ಕೊಂಚ ನಿರಾಸೆ ಆಗುತ್ತದೆ. ಆದರೂ ಅದರ ಬಗ್ಗೆ ಏನೂ ಯೋಚನೆ ಮಾಡದೆ ಮನೆಗೆ ಹೋಗುತ್ತಾರೆ.
ಇನ್ನು ಮಹೇಶನ ಜೊತೆ ರೂಮ್ ಗೆ ಬಂದ ಶಾರ್ವರಿ ಕೋಪದಲ್ಲಿ ಇರುತ್ತಾಳೆ. ನನ್ನ ಮಾತು ಇದುವರೆಗೂ ನಡೆಯುತ್ತಾ ಇತ್ತು ಎಂದು ಅಂದುಕೊಂಡಿದ್ದೆ, ಆದರೆ ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ, ಇದೀಗ ನನಗೆ ಎಲ್ಲವೂ ಅರ್ಥ ಆಗುತ್ತಿದೆ ಎಂದು ಕೋಪದಲ್ಲಿ ಇರುತ್ತಾಳೆ. ಆದರೆ ಇದೆಲ್ಲ ಮಹೇಶನಿಗೆ ತಿಳಿದಿದ್ದರೂ ಆತ ಮಾತ್ರ ಏನೂ ಹೇಳಲು ಆಗದ ಸ್ಥಿತಿಯಲ್ಲಿ ಇರುತ್ತಾನೆ.
ಶಿವ ರಾತ್ರಿ ಸಂಭ್ರಮದಲ್ಲಿ ಇರುವ ದತ್ತಣ್ಣ ರಾವಣನ ಪಾತ್ರ ಮಾಡುತ್ತಾರೆ. ನಾಟಕ ನೋಡಿದ ಎಲ್ಲರೂ ಬಹಳ ಖುಷಿ ಆಗುತ್ತಾರೆ. ಗಣೇಶನ ಪಾತ್ರದಲ್ಲಿ ಚೋಟು ಮಿಂಚುತ್ತಾ ಇರುತ್ತಾನೆ. ಶಿವ ಪಾರ್ವತಿಯಾಗಿ ಸಿರಿ ಹಾಗೂ ಸಮರ್ಥ್ ಉತ್ತಮ ಆಕ್ಟಿಂಗ್ ಮಾಡುತ್ತಾರೆ. ಇದನ್ನೆಲ್ಲ ನೋಡಿದ ಜನರು ಬಹಳ ಖುಷಿ ಪಡುತ್ತಾರೆ. ದತ್ತನ ಬಳಿ ಬಂದ ಶೇಷಣ್ಣ ದತ್ತನ ಪಾತ್ರ ನೋಡಿ ಖುಷಿ ಪಡುತ್ತಾನೆ. ಇನ್ನು ದತ್ತ ಮಾತ್ರ ನಾನು ಯಾವುದೇ ಪಾತ್ರ ಕೊಟ್ಟರೂ ಅದನ್ನು ಲೀಲಾಜಾಲವಾಗಿ ಮಾಡುತ್ತೇನೆ ಎಂದು ಹೇಳುತ್ತಾನೆ.

ಅವಿ ಬಳಿ ಮದುವೆ ಬಗ್ಗೆ ಮಾತನಾಡಲು ಹೋದ ಮಾಧವ
ಇನ್ನು ಅವಿ ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಾ ಇರುವಾಗ ಅಲ್ಲಿಗೆ ಬಂದ ಶಾರ್ವರಿ ನಾಳೆ ದೀಪಿಕಾ ಮನೆಗೆ ಹೋಗಬೇಕು ಎಂದೆಲ್ಲ ಹೇಳಿದಾಗ ನಾಳೆ ಒಂದು ಮೀಟಿಂಗ್ ಇದೆ ಎಂದು ಅವಿ ಹೇಳುತ್ತಾನೆ. ಇದನ್ನು ಕೇಳಿದ ಶಾರ್ವರಿ ಸುಮ್ಮನೆ ಆಗುತ್ತಾಳೆ. ಇನ್ನು ಮಾಧವ ಸೋಫಾ ಮೇಲೆ ಕುಳಿತು ಇರುತ್ತಾನೆ. ಆಗ ಅಲ್ಲಿಗೆ ಬಂದ ಪಾಪಮ್ಮ ಹಾಗೂ ಪೂರ್ಣಿಮಾ ಮಾಧವನ ಬಳಿ ಮಾತನಾಡುತ್ತಾ ಇರುತ್ತಾರೆ. ಮಾಧವನ ಬಳಿ ರಾವಣ ಪಾತ್ರಧಾರಿ ಫೋಟೋ ತೋರಿಸಿ ಮಾವ ಇದ್ಯಾರು ಗುರುತಿಸಿ ನೋಡೋಣ ಎಂದು ಹೇಳುತ್ತಾರೆ. ಮಾಧವ ಫೋಟೋ ನೋಡುತ್ತಾನೆ. ಅದರಲ್ಲಿ ಇರುವುದು ಯಾರು ಎಂದು ತಿಳಿಯದೇ ಸುಮ್ಮನೆ ಆಗುತ್ತಾನೆ.

ದತ್ತನ ಮಾಡಿದ ಪಾತ್ರ ನೋಡಿ ಖುಷಿ ಪಟ್ಟ ಮಾಧವ
ನನಗೆ ಅದು ಯಾರು ಎಂದು ತಿಳಿಯುತ್ತಾ ಇಲ್ಲ ಎಂದು ಹೇಳಿದಾಗ ಪೂರ್ಣಿಮಾ ಅವರು ಬೇರೆ ಯಾರೂ ಅಲ್ಲ ದತ್ತ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಾಧವ ಅದೂ ಯಾರು ದತ್ತನ ಎಂದು ಆಶ್ಚರ್ಯಗೊಳ್ಳುತ್ತಾನೆ. ಇದನ್ನು ಕೇಳಿದ ಪೂರ್ಣಿಮಾ ಅವರ ಮನೆಯಲ್ಲಿ ಶಿವರಾತ್ರಿ ಪ್ರಯುಕ್ತ ನಾಟಕ ಇತ್ತಂತೆ ಅದಕ್ಕಾಗಿ ಇಂದು ರಾವಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ, ನಾನು ಸಿರಿ ಬಳಿ ಬರುವ ವರುಷದಿಂದ ನಮಗೂ ಹೇಳಬೇಕು ಎಂದು ಹೇಳಿದ್ದೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಾಧವ ಸುಮ್ಮನಾದರೂ ಪೂರ್ಣಿಮಾ ಬರುವ ವರುಷದಿಂದ ನಾವಿಬ್ಬರೂ ಹೋಗೋಣ ಮಾವ ಎಂದು ಹೇಳುತ್ತಾಳೆ. ಇನ್ನು ನಾಟಕ ಎಲ್ಲಾ ಮುಗಿದ ಬಳಿಕ ತುಳಸಿ ಬಳಿಗೆ ಚೋಟು ಬಂದು ಕರೆಯುತ್ತಾನೆ. ಇದನ್ನು ಕಂಡ ದತ್ತ ಚೋಟೂ ಯಾಕೆ ನಿನ್ನ ಕರೆಯುತ್ತಾ ಇದ್ದಾನೆ ಹೋಗಿ ನೋಡು ಒಮ್ಮೆ ಎಂದು ಹೇಳಿದಾಗ ಅಲ್ಲಿಂದ ತುಳಸಿ ಹೋಗುತ್ತಾಳೆ. ಆಗ ಅಲ್ಲಿ ಸಂಧ್ಯಾನ ನೋಡಿ ತುಳಸಿ ಗಾಬರಿ ಆಗ್ತಾಳೆ.

ಅಮ್ಮನ ಬಳಿ ಅಳಲು ತೋಡಿಕೊಂಡ ಸಂಧ್ಯಾ
ಏನು ಎತ್ತ ಎಂದು ವಿಚಾರಿಸಿದಾಗ ಪ್ರಸಾದ್ ಆಪತ್ತಿನಲ್ಲಿ ಇದ್ದಾನೆ ಅಮ್ಮ ಅವರಿಗೆ ಮೂರು ಲಕ್ಷ ಬೇಕು ಇಲ್ಲವಾದರೆ ಅವರನ್ನು ಪೊಲೀಸರು ಜೈಲಿಗೆ ಹಾಕುತ್ತಾರೆ ಎಂದು ಅಳುತ್ತಾಳೆ. ಆದರೆ ತುಳಸಿಗೆ ಈ ಮಾತು ಕೇಳಿ ಶಾಕ್ ಆಗುತ್ತದೆ. ನನ್ನ ಬಳಿ ಅಷ್ಟೊಂದು ಹಣ ಎಲ್ಲಮ್ಮ ಇದೆ ಎಂದೆಲ್ಲ ಹೇಳಿದರೂ ಆಕೆ ಮಾತ್ರ ನನಗೆ ಮೂರು ಲಕ್ಷ ಹಣ ಬೇಕಮ್ಮ ಇಲ್ಲವಾದರೆ ನನಗೆ ತುಂಬಾ ಕಷ್ಟ ಆಗುತ್ತದೆ ದಯವಿಟ್ಟು ಸಹಾಯ ಮಾಡು ಎಂದು ಹೇಳುತ್ತಾಳೆ. ಇನ್ನು ತುಳಸಿಯನ್ನು ದತ್ತ ಕೂಡ ಕರೆಯುತ್ತಾ ಬರುತ್ತಾನೆ. ತುಳಸಿಗೆ ಏನು ಮಾಡುವುದು ಎಂದು ತಿಳಿಯದೇ ದಿಕ್ಕು ತೋಚದಂತಾಗುತ್ತದೆ.


Click it and Unblock the Notifications











