Srirasthu Subhamasthu: ಮಾಧವ ಬಳಿ ಕ್ಷಮೆ ಕೇಳಿದ ರಾಜೇಶ್; ಜನಾರ್ಧನ್ ಮಾಡಿದ ಪ್ಲಾನ್ ಫ್ಲಾಪ್?
ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ದತ್ತ ಮಾಧವನ ಕೆಫೆಗೆ ಬರುತ್ತಾನೆ. ದತ್ತನನ್ನು ನೋಡಿದ ಪೂರ್ಣಿಮಾ ಹಾಗೂ ಮ್ಯಾಗಿಗೆ ಖುಷಿ ಆಗುತ್ತದೆ. ಆದರೆ ಅಭಿ ಮದುವೆ ಆಗುವ ಹುಡುಗಿಗೆ ಮಾತ್ರ ಈ ಮುದುಕ ಯಾರಪ್ಪ ಎನ್ನುವ ಪ್ರಶ್ನೆ ಮೂಡುತ್ತದೆ.
ದತ್ತ ಬಂದು ಅಕೌಂಟ್ ನಾನು ನೋಡಿಕೊಳ್ಳುತ್ತೇನೆ ಡೀಟೇಲ್ಸ್ ಕೊಡಿ ಎಂದು ಕೇಳುತ್ತಾನೆ. ಇದನ್ನು ಕೇಳಿದ ಬಳಿಕ ಮ್ಯಾಗಿ ಮನಸ್ಸಿಲ್ಲದ ಮನಸ್ಸಿನಿಂದ ಕೊಡುತ್ತಾಳೆ. ಈ ವೇಳೆ ಅಭಿಯ ಹುಡುಗಿ ಆಗಾಗ ದತ್ತನನ್ನು ಪ್ರಶ್ನೆ ಮಾಡುತ್ತಾ ಇರುತ್ತಾಳೆ. ಇದರಿಂದ ದತ್ತನಿಗೆ ಬಹಳ ಕಿರಿ ಕಿರಿ ಆಗುತ್ತದೆ. ದತ್ತ ಆಕೆಗೆ ಬಯ್ಯುತ್ತಲೇ ಇರುತ್ತಾನೆ.

ಇನ್ನು ದತ್ತನ ಬೈಗುಳ ಕೇಳಿ ಸುಮ್ಮನೆ ಆಗುತ್ತಾಳೆ. ಆ ಬಳಿಕ ಕರೆಕ್ಟ್ ಆಗಿ ಲೆಕ್ಕ ಬರೆಯುತ್ತಾನೆ. ಇದನ್ನು ನೋಡಿದ ಮ್ಯಾಗಿ ಬಹಳ ಖುಷಿ ಪಡುತ್ತಾಳೆ. ಇನ್ನು ಅಭಿ ಹುಡುಗಿ ಜೋತೆ ನೀನೇ ಎಣಿಕೆ ಮಾಡಿ ನೋಡು ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇನ್ನು ಮ್ಯಾಗಿಗೆ ಆಗ ದತ್ತನ ಪವರ್ ಏನು ಎಂಬುವುದು ಅರ್ಥ ಆಗುತ್ತದೆ. ಇನ್ನು ಸಿರಿಗೆ ಸಮರ್ಥ್ ಕರೆ ಮಾಡುತ್ತಾನೆ. ಸಿರಿ ಹಾಗೂ ತುಳಸಿ ಊಟದ ಡಬ್ಬಿಯನ್ನು ಆಫೀಸಿಗೆ ಕಳುಹಿಸುತ್ತಾ ಇದ್ದೆವು. ಆದರೆ ಇವತ್ತು ಕಳುಹಿಸಲು ಸಾಧ್ಯ ಆಗಲಿಲ್ಲ ಎಂದು ಹೇಳುತ್ತಾರೆ.
ಇದನ್ನು ಕೇಳಿದ ಸಮರ್ಥ್ ಎಲ್ಲಾ ವರ್ಕರ್ಸ್ ಕೂಡ ಮಾಧವ ಅವರ ಕೆಫೆಗೆ ಊಟಕ್ಕೆ ಬಂದಿದ್ದಾರೆ ಎಂದು ಹೇಳಿದಾಗ ಸಿರಿ ಬಹಳ ಖುಷಿ ಪಡುತ್ತಾಳೆ. ಸಿರಿ ಇಲ್ಲಿ ಇರುವ ಎಲ್ಲ ವಿಚಾರ ಸಮರ್ಥ್ ಜೊತೆ ಹೇಳಿದಾಗ ಆತ ಸೂಪರ್ ಆಗಿರುವ ಐಡಿಯಾ ಕೊಡುತ್ತಾನೆ. ಇದನ್ನು ಪೂರ್ಣಿಮಾ ಹಾಗೂ ಮಾಧವ ಬಳಿ ಬಂದು ಹೇಳಿದಾಗ ಅವರಿಂದ ಕೂಡ ಒಪ್ಪಿಗೆ ಸಿಗುತ್ತದೆ.

ಇನ್ನು ತುಳಸಿ ಬಳಿಗೆ ಬಂದ ಸಿರಿ ಬಹಳ ಖುಷಿಯಲ್ಲಿ ಇರುತ್ತಾಳೆ. ತುಳಸಿಯನ್ನು ಕರೆದುಕೊಂಡು ಹೋಗುತ್ತಾಳೆ. ದತ್ತ ಬಂದಿರುವ ಸುದ್ದಿ ಸಿರಿಗೆ ಮಾತ್ರ ತಿಳಿದಿರುತ್ತದೆ. ಆಕೆ ತುಳಸಿಯನ್ನು ಕರೆದುಕೊಂಡು ಬಂದು ತೋರಿಸಿದಾಗ ಆಕೆಗೆ ತನ್ನ ಮಾವನನ್ನು ನೋಡಿ ಬಹಳ ಖುಷಿ ಆಗುತ್ತದೆ. ಇನ್ನು ಪೂರ್ಣಿಮಾ ಮಾಧವನ ಬಳಿ ಬಂದು ದತ್ತ ಬಂದಿರುವ ಸುದ್ದಿಯನ್ನು ಹೇಳಿದಾಗ ಮಾಧವಗೆ ಬಹಳ ಖುಷಿ ಆಗುತ್ತದೆ.
ಮಾಧವನ ಮಗ ಅಭಿ ಅತ್ತಿಂದ ಇತ್ತ ಹೋಗುತ್ತಾ ಟೆನ್ಶನ್‌ನಲ್ಲಿರುತ್ತಾನೆ. ಈತ ತನ್ನ ಹುಡುಗಿ ಇನ್ನೂ ಕರೆ ಮಾಡಿಲ್ಲ ಏಕೆ, ಅಲ್ಲಿ ಏನಾದರು ಪ್ರಾಬ್ಲಂ ಆಯಿತಾ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇದನ್ನು ನೋಡಿದ ಜನಾರ್ಧನ್ ಅಭಿಗೆ ಸಮಾಧಾನ ಮಾಡುತ್ತಾ ಇರುತ್ತಾನೆ. ಆ ವೇಳೆ ಅಭಿ ಜನಾರ್ಧನನ ಬಳಿ ಆಮೆ ಮೊಲದ ಕಥೆ ಹೇಳುತ್ತಾನೆ. ಇದನ್ನು ಕೇಳಿದ ಜನಾರ್ಧನ್ ಸುಮ್ಮನೆ ಇರಲು ಆಗದೆ ಅಭಿ ಜೊತೆ ಕೆಫೆಗೆ ಹೋಗಲು ರೆಡಿ ಆಗುತ್ತಾನೆ. ಬಳಿಕ ಅವರಿಬ್ಬರೂ ಹೋಗುತ್ತಾರೆ. ಇದನ್ನೆಲ್ಲ ನೋಡಿದ ಅವಿ ಇದರಲ್ಲಿ ನೀನು ಖಂಡಿತ ಸೋಲುತ್ತಿಯ ಗೆಲ್ಲೋದು ನಾವು ಮಾತ್ರ ಎಂದು ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಂಡ ಪಾಪಮ್ಮಗೆ ಬಹಳ ಖುಷಿ ಆಗುತ್ತದೆ. ಇನ್ನು ಮಾಧವನ ಬಳಿಗೆ ಬಂದ ಅಡುಗೆ ಭಟ್ಟ ಮಾಧವನ ಬಳಿ ಕ್ಷಮೆಯಾಚಿಸುತ್ತಾ ಇರುತ್ತಾನೆ. ಬಳಿಕ ಜನಾರ್ಧನ್ ಆಮಿಷಕ್ಕೆ ನಾವು ಬಲಿ ಆದೆವು ನಮ್ಮನ್ನು ಕ್ಷಮಿಸಿ ಬಿಡಿ ಎಂದು ಹೇಳುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











