Srirasthu Shubhamasthu: ತುಳಸಿ ಮನೆಯಲ್ಲಿ ಹಬ್ಬದ ಸಂಭ್ರಮ

By Poorva

ದತ್ತ ತುಳಸಿ ಬಳಿ ನನ್ನ ರೂಮ್ ಗೀಸರ್ ಕೆಟ್ಟು ಹೋಗಿದೆ ತುಳಸಿ ನನಗೆ ಬಿಸಿ ನೀರು ಬೇಕು ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ಬಿಸಿ ನೀರು ಗ್ಯಾಸ್ ನಲ್ಲಿ ಬಿಸಿ ಮಾಡಲು ಇಟ್ಟಿದ್ದೇನೆ, ಒಂದು ನಿಮಿಷ ಆಗಿ ಹೋಗುತ್ತೆ ಎಂದು ಹೇಳಿದಾಗ ಗ್ಯಾಸ್ ಬೆಲೆ ಈಗ ಎಷ್ಟಿದೆ ಗೊತ್ತಾ ಎಂದೆಲ್ಲ ಹೇಳಿ ತುಳಸಿ ಮೇಲೆ ರೇಗಿ ಬಿಡುತ್ತಾನೆ ದತ್ತ.. ನಾನು ಸಮರ್ಥ್ ರೂಮ್ ನಲ್ಲಿ ಸ್ನಾನ ಮಾಡುತ್ತೇನೆ ಹೋಗಿ ಎಬ್ಬಿಸಿಬಿಡು ಅವರಿಬ್ಬರನ್ನು ಎಂದು ಹೇಳುತ್ತಾನೆ.

ಆದರೆ ತುಳಸಿ ಹಿಂದೆ ಮುಂದೆ ನೋಡಿದಾಗ ತುಳಸಿಗೆ ಬೈದು ಇವತ್ತು ಹಬ್ಬ ಇದೆ, ಇವತ್ತಾದರೂ ಅವರಿಬ್ಬರೂ ಬೇಗ ಎದ್ದೇಳಲಿ ಹೋಗಿ ಎಬ್ಬಿಸಿ ಬಿಡು ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ಮೆತ್ತಗೆ ಸಮರ್ಥ್ ರೂಮ್ ಹತ್ತಿರ ಹೋಗಿ ಎಬ್ಬಿಸುತ್ತಾರೆ. ಇನ್ನು ಸಮರ್ಥ್ ಮಾತ್ರ ನಿದ್ದೆಯ ಮೂಡ್ ನಲ್ಲಿ ಇರುತ್ತಾನೆ. ಇವತ್ತು ಒಂದು ದಿನ ರಜೆ ಇವತ್ತು ನಿದ್ದೆ ಮಾಡಲು ಬಿಡುವುದಿಲ್ಲ ಎಂದಾಗ ಅಲ್ಲಿಗೆ ದತ್ತ ಬರುತ್ತಾರೆ.

ಸಮರ್ಥ್ ನನ್ನು ಎಬ್ಬಿಸಿದ ದತ್ತ ಸ್ನಾನಕ್ಕೆ ಹೋಗುತ್ತಾರೆ. ಸ್ನಾನ ಮಾಡಿ ಬಂದಾದ ಬಳಿಕ ಸಮರ್ಥ್ ಬಳಿ ಸ್ನಾನಕ್ಕೆ ತೆರಳುವಂತೆ ಹೇಳಿ ಪೂಜೆ ಮಾಡಲು ಹೋಗುತ್ತಾರೆ. ಇತ್ತ ಸಿರಿ ಮನೆಯೆಲ್ಲ ಸಿಂಗಾರ ಮಾಡಿ ರಂಗೋಲಿ ಇಟ್ಟು ಸಿಂಗಾರ ಮಾಡುತ್ತಾ ಇರುತ್ತಾಳೆ. ಇನ್ನು ತುಳಸಿಗೆ ಗೀಸರ್ ರಿಪೇರಿಯವನು ಬಂದರೆ ಇದೀಗ ಎಲ್ಲಾ ಕೆಟ್ಟು ಹೋಗುತ್ತದೆ ಅಲ್ವಾ ಎಂಬುದೇ ಚಿಂತೆ. ಅತ್ತೆ ಸುಮ್ಮನೆ ಕುಳಿತಿರುವುದನ್ನು ನೋಡಿದ ಸಿರಿ ಏನಾದರು ತೊಂದರೆ ಆಯಿತಾ ಎಂದೆಲ್ಲ ವಿಚಾರಣೆ ಮಾಡುತ್ತಾಳೆ.

ಆತಂಕದಲ್ಲಿರುವ ತುಳಸಿ

ಆತಂಕದಲ್ಲಿರುವ ತುಳಸಿ

ಆದರೆ ತುಳಸಿ ಮಾತ್ರ ಏನೂ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿ ತನ್ನ ಉಳಿದ ಕೆಲಸಕ್ಕೆ ಹೋಗುತ್ತಾಳೆ. ದತ್ತ ಪೂಜೆ ಮಾಡುತ್ತಾ ಇರುವಾಗ ಶಿವರಾತ್ರಿ ವಿಶೇಷತೆ ಬಗ್ಗೆ ಸಿರಿ ದತ್ತನ ಬಳಿ ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿಸಿಕೊಂಡ ದತ್ತ ಎಲ್ಲರಿಗೂ ತಿಳಿಸಿ ಹೇಳುತ್ತಾರೆ. ಇನ್ನು ರಾತ್ರಿಯ ವೇಳೆ ನಾಟಕ ಮಾಡಲು ಮನೆ ಮಂದಿ ಸಿದ್ದರಾಗುತ್ತಾ ಇರುತ್ತಾರೆ. ಅವರೊಂದಿಗೆ ಶೇಷ ಕೂಡ ಬರುತ್ತಾರೆ. ನಾಟಕ ಅಭ್ಯಾಸ ಮಾಡುತ್ತಾರೆ.

ಅಮ್ಮನಿಗೆ ನಿಜ ವಿಚಾರ ತಿಳಿಸಿದ ನಿಧಿ

ಅಮ್ಮನಿಗೆ ನಿಜ ವಿಚಾರ ತಿಳಿಸಿದ ನಿಧಿ

ಇನ್ನು ನಿಧಿ ಅಮ್ಮನ ಬಳಿ ಓಡಿ ಬಂದು ಅಭಿ ಹುಡುಗಿಯನ್ನು ಲವ್ ಮಾಡುತ್ತಾ ಇರುವ ವಿಚಾರವನ್ನು ವಿಡಿಯೋ ಮಾಡಿ ತರುತ್ತಾಳೆ. ಆದರೆ ಅದನ್ನು ತಪ್ಪಿ ಅವಿ ನೋಡುತ್ತಾನೆ. ಅಲ್ಲಿಗೆ ಬಂದ ಅಭಿಯನ್ನು ನೋಡಿ ಅವಿ ನಿನ್ನಿಂದ ನಾನು ಎನು ನಿರೀಕ್ಷೆ ಮಾಡಿಯೇ ಇರಲಿಲ್ಲ, ನಿನಗೆ ನನ್ನ ಬಳಿ ಹೇಳಲು ಏನು ಮುಜುಗರ ನಿನ್ನ ಹೆಂಡತಿಯಾಗಿ ಬರುವವಳು ಈ ಮನೆಗೆ ಹೊಂದಿಕೆ ಆಗುತ್ತರೋ ಇಲ್ಲವೋ ಎಂಬುವುದನ್ನು ನೋಡಬೇಕು ಅಲ್ವಾ ಎಂದೆಲ್ಲ ಬಯ್ಯುತ್ತಾ ಇರುತ್ತಾನೆ.

ಅಭಿಗೆ ಬೈದ ಅವಿ

ಅಭಿಗೆ ಬೈದ ಅವಿ

ಇದನ್ನು ಕೇಳಿದ ಅಭಿಗೆ ಏನು ಹೇಳಬೇಕೋ ತಿಳಿಯದೇ ಸುಮ್ಮನೆ ಇರುತ್ತಾನೆ. ಅವಿ ಹೋದ ಬಳಿಕ ಅಭಿ ಕೂಡ ಕೋಪದಿಂದ ಒಳಗೆ ಹೋಗುತ್ತಾನೆ. ಅವರಿಬ್ಬರೂ ಅಲ್ಲಿಂದ ಹೋದ ಬಳಿಕ ಶಾರ್ವರಿ ಜೋರಾಗಿ ನಗುತ್ತಾಳೆ. ನಿಧಿಗೆ ಮಾತ್ರ ಅಮ್ಮ ಯಾಕೆ ಹೀಗೆ ನಗುತ್ತಾ ಇದ್ದಾಳೆ ಎಂದು ಸಹ ಅರ್ಥವಾಗುವುದಿಲ್ಲ. ಇನ್ನು ಶಾರ್ವರಿ ಬಳಿ ಬಂದು ಅಭಿ ಕ್ಷಮೆ ಯಾಚಿಸುತ್ತಾನೆ. ನಿಮಗೆ ಇಷ್ಟ ಇಲ್ಲದ ಹುಡುಗಿಯನ್ನೇ ಮದುವೆ ಆಗುತ್ತಾ ಇದ್ದೇನೆ, ನಿಮಗೆ ಅದಕ್ಕೆ ನನ್ನ ಮೇಲೆ ಸಿಟ್ಟು ಇರಬೇಕು ಎಂದೆಲ್ಲ ಹೇಳಿದಾಗ ಶಾರ್ವರಿ ಸುಮ್ಮನೆ ಆಗುತ್ತಾಳೆ. ಬಳಿಕ ಶಾರ್ವರಿ ಅಭಿಯನ್ನು ಸಮಾಧಾನ ಮಾಡಿ ಮದುವೆಗೆ ಅವಿಯನ್ನು ಒಪ್ಪಿಸುವುದಾಗಿ ಭರವಸೆ ನೀಡುತ್ತಾಳೆ. ಹಾಗೆಯೇ ಮರು ದಿನ ಅಭಿ ಎದುರಲ್ಲಿ ಆವಿಯನ್ನು ಮದುವೆಗೆ ಒಪ್ಪಿಸಲು ಪ್ರಯತ್ನ ಮಾಡುತ್ತಾಳೆ. ಕೊನೆಗೆ ಮದುವೆಗೆ ಅವಿ ಒಪ್ಪುತ್ತಾನೆ. ಇದನ್ನು ನೋಡಿ ಅಭಿಗೆ ಬಹಳ ಖುಷಿ ಆಗುತ್ತದೆ. ಇತ್ತ ದತ್ತ ಮನೆಗೆ ಗಿಜರ್ ರಿಪೇರಿ ಮಾಡುವವನೂ ಬರುತ್ತಾನೆ. ಆತನಿಗೆ ದುಡ್ಡು ಹೇಗೆ ಕೊಡುವುದು ಎಂದು ತುಳಸಿಗೆ ಆತಂಕ ಆಗುತ್ತದೆ. ಮಾಧವನ ಬಳಿ ಅಭಿ ಮದುವೆ ಮಾತುಕತೆ ಆಗಿದ್ದರ ಬಗ್ಗೆ ಹೇಳದೆಯೇ ಮುಚ್ಚಿಡುತ್ತಾಳೆ ಶಾರ್ವರಿ.

More from Filmibeat

English summary
Kannada serial sri rastu shubha mastu written updated on 16th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X