Srirasthu Subhamasthu: ತುಳಸಿ ಕೆಲಸಕ್ಕೆ ಹೋಗಲು ದತ್ತನ ಪರ್ಮಿಷನ್ ಸಿಗುತ್ತಾ?
ದತ್ತ ತನ್ನ ಮಗಳ ಹಾಗೆ ತನ್ನ ಸೊಸೆಯನ್ನು ನೋಡಿಕೊಳ್ಳುತ್ತಾ ಇರುತ್ತಾನೆ. ಸಂಧ್ಯಾ ಬಂದು ಕಣ್ಣೀರು ಹಾಕುತ್ತಾ ಇರುವಾಗ ತುಳಸಿ ಮನಸು ಛಿದ್ರ ಆಗಿ ಹೋಗುತ್ತದೆ. ಅದನ್ನು ನೋಡಿದ ದತ್ತ ಹಣ ಕೊಡುತ್ತಾನೆ. ಆದರೆ ಸಾಲ ರೂಪದಲ್ಲಿ. ಸಂಧ್ಯಾ ಏನು ಆಕೆಯ ಬಂಡವಾಳ ಏನು ಎಂಬ ವಿಚಾರ ದತ್ತನಿಗೆ ತಿಳಿದಿದೆ. ಆದರೆ ಆ ಕಾರಣಕ್ಕೆ ದತ್ತ ಹಣವನ್ನು ಕೊಟ್ಟು ಆಕೆ ಹಣ ಕೊಡಲಿಲ್ಲ ಎಂದಾದರೆ ನೀನು ಹಣ ಕೊಡಬೇಕು ಎಂದಿದ್ದಾರೆ ಎಂದು ತುಳಸಿದೆ ಎಂದಿಲ್ಲ. ಇದನ್ನು ಕೇಳಿದ ತುಳಸಿ ಆಯಿತು ಎಂದು ಒಪ್ಪಿಕೊಂಡು ಹಣ ಕೊಟ್ಟು ಕಳುಹಿಸುತ್ತಾಳೆ.
ಇನ್ನು ಮರುದಿನ ದತ್ತ ತಿಂಡಿಗೆ ಕುಳಿತುಕೊಂಡಿರಬೇಕಾದರೆ ತುಳಸಿ ಬಳಿ ಸಂಧ್ಯಾ ಹಣ ಅರೇಂಜ್ ಮಾಡಿದ್ದಾಳ ಕೇಳಿ ಎಂದಾಗ ತುಳಸಿ ಸಂಧ್ಯಾಗೆ ಕರೆ ಮಾಡಿ ಮೊದಲು ಅದು ಇದು ಎಂಬ ಪ್ರಶ್ನೆ ಕೇಳುತ್ತಾಳೆ. ಆದರೆ ಆ ಬಳಿಕ ಹಣದ ಬಗ್ಗೆ ಮಾತನಾಡಿದಾಗ ನಾನು ಕೊಟ್ಟಾಗ ಎಂದು ಕಡ್ಡಿ ಮುರಿದ ಹಾಗೆ ಹೇಳಿ ಫೋನ್ ಇಡುತ್ತಾಳೆ. ಸಂಧ್ಯಾ ಮಾತನ್ನು ಆಕೆಯ ಮಾವ ಕೇಳಿಸಿಕೊಂಡು ಇರುತ್ತಾನೆ. ಇನ್ನು ತುಳಸಿ ಮಾವನ ಎದುರು ಮೌನವಾಗುತ್ತಲೇ ಇರುತ್ತಾಳೆ.

ಇದನ್ನು ನೋಡಿದ ದತ್ತ ತುಳಸಿ ನೀನು ಸರಿಯಾಗಿ ಪಾಠ ಕಲಿಯುತ್ತಿಯಾ ಎಂದೆಲ್ಲ ಮನದಲ್ಲಿ ಅಂದುಕೊಳ್ಳುತ್ತಾ ಇರುತ್ತಾನೆ. ಸಮರ್ಥ್ ಅಮ್ಮನ ಬಗ್ಗೆ ಬಹಳ ಕೋಪ ಮಾಡಿಕೊಂಡು ಇರಬೇಕಾದರೆ ಸಿರಿ ಅಮ್ಮನ ಪರವಾಗಿ ಮಾತನಾಡಿದಾಗ ಸಮರ್ಥ್‌ಗೆ ವಿಪರೀತ ಸಿಟ್ಟು ಬರುತ್ತದೆ. ಸಂಧ್ಯಾ ಏನು ಎಂಬುವುದು ಸಮರ್ಥ್‌ಗೆ ತುಂಬಾ ಚೆನ್ನಾಗಿ ತಿಳಿದಿತ್ತು.
ಸಂಧ್ಯಾ ಬಹಳ ಸ್ವಾರ್ಥಿ, ತಾನು ಅಂದುಕೊಂಡ ಕೆಲಸ ಮಾಡಲು ಏನು ಬೇಕಾದರೂ ಮಾಡುತ್ತಾಳೆ ಎಂದು ತಿಳಿದಿತ್ತು. ಇನ್ನು ಸಿರಿ ಮಾತ್ರ ಸಮರ್ಥ್ ನನ್ನು ಎಷ್ಟೇ ಸಮಾಧಾನ ಪಡಿಸಲು ಪ್ರಯತ್ನಪಟ್ಟರೂ ಆಗುವುದಿಲ್ಲ. ಕೊನೆಗೆ ಸುಮ್ಮನೆ ಆಗುತ್ತಾಳೆ. ಇನ್ನು ಸಿರಿ ತನ್ನ ತಂದೆಗೆ ಕರೆ ಮಾಡಿ ಆರೋಗ್ಯ ವಿಚಾರಣೆ ಮಾಡುತ್ತಾ ಇರುತ್ತಾಳೆ. ಆರೋಗ್ಯದ ಮೇಲೆ ಗಮನ ವಹಿಸಬೇಕು ಎಂದು ಆಗಾಗ ಹೇಳುತ್ತಾಳೆ.
ಬಳಿಕ ಪುಸ್ತಕದ ಅಂಗಡಿಗೆ ಇವತ್ತು ಬರಲು ಆಗಲಿಲ್ಲ. ಆ ಕಾರಣಕ್ಕೆ ಬೇಸರ ಮಾಡಿಕೊಳ್ಳಬೇಡ ಮನೆಯಲ್ಲಿ ಕೆಲಸ ಇತ್ತು ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿ ಸುಮ್ಮನೆ ಆಗುತ್ತಾನೆ. ಇನ್ನು ತುಳಸಿ ಮನೆಗೆ ಪಕ್ಕದ ಮನೆಯ ಪವಿತ್ರ ಬಂದು ಸಿರಿಯನ್ನು ಕರೆಯುತ್ತಾಳೆ.

ಸಿರಿ ತಗೋ ಬಾಳೆ ಹಣ್ಣಿನ ಹಲ್ವಾ ಸಮರ್ಥ್ ನನ್ನ ಮೊನ್ನೆ ಡ್ರಾಪ್ ಮಾಡಿದ ಹಾಗೆಯೇ ನನ್ನ ಮಗನಿಗೆ ಜಾಮೆಟ್ರಿ ಬಾಕ್ಸ್ ಕೊಡಿಸಿದರು ಅದಕ್ಕಾಗಿ ಅವರಿಗೆ ಬಾಳೆ ಹಣ್ಣಿನ ಹಲ್ವ ತಂದಿದ್ದೇನೆ ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಹೋಗುತ್ತಾಳೆ. ಸಿರಿ ಯೋಚನೆ ಮಾಡುತ್ತಾಳೆ ತನ್ನ ಮಾವ ಅತ್ತೆಗೆ ಏನು ಮಾಡಿಕೊಡದ ಈಕೆ ಸಮರ್ಥ್ ಗೆ ಹಲ್ವಾ ಮಾಡಿಕೊಂಡು ಬರೋದ ಈಕೆ ಉದ್ದೇಶ ಎನು ಎಂಬುವುದು ಸಿರಿಗೆ ಅರ್ಥ ಆಗಲೇ ಇಲ್ಲ.
ಇನ್ನು ಮಾಧವ ತನ್ನ ಕೆಫೆಯನ್ನು ಪಬ್ ಆಗಿ ಕ್ರಿಯೇಟ್ ಮಾಡಲು ಜನಾರ್ಧನ್ ಹಾಗೂ ಅಭಿ ಬಹಳ ಪ್ರಯತ್ನ ಪಡುತ್ತಾರೆ. ಆದರೆ ಮಾಧವ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇರುತ್ತಾರೆ. ಆದರೂ ಜನಾರ್ಧನ್ ಮಾಧವಗೆ ಸವಾಲ್ ಬೇರೆ ಹಾಕುತ್ತಾನೆ. ಆದರೆ ಮಾಧವ ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ. ಇನ್ನು ತುಳಸಿ ಮನೆಯಿಂದ ಆಚೆ ಹೋಗಬೇಕು ಎಂದು ಹೇಳಿ ಮಾವನ ಬಳಿ ಕೇಳಬೇಕು ಎನ್ನುವಷ್ಟರಲ್ಲಿ ಮನೆಯಿಂದ ಮಾವ ಕ್ಲಬ್ ಗೆ ಹೊರಟು ಹೋಗಿರುತ್ತಾನೆ. ಮನಸಿಲ್ಲದ ಮನಸಿನಿಂದಾ ಗೋದಾವರಿ ಅವರ ಜೊತೆ ತುಳಸಿ ಹೋಗುತ್ತಾಳೆ. ಕೆಲಸ ಅರಸಿಕೊಂಡು ಹೊರಟ ತುಳಸಿಗೆ ಕೆಲಸ ಸಿಕ್ಕಿಯೇ ಬಿಡುತ್ತದೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











