Srirasthu Shubhamasthu: ಲವರ್ಸ್ ಡೇಗಾಗಿ ಗ್ರೀಟಿಂಗ್ಸ್ ಖರೀದಿಸಿದ ತುಳಸಿ!

By Poorva

ಇದೀಗ ಒಗ್ಗರಣೆ ಡಬ್ಬಿ ಕಾರ್ಯಕ್ರಮ ನೋಡಿದ ಎಲ್ಲರೂ ಬಹಳ ಖುಷಿ ವ್ಯಕ್ತಪಡಿಸುತ್ತಾರೆ. ತುಳಸಿಯನ್ನು ಹಾಡಿ ಹೊಗಳುತ್ತಾರೆ. ಸಿರಿ ಅಂತೂ ಅತ್ತೆಯನ್ನು ಹೊಗಳುತ್ತಳೇ ಇರುತ್ತಾಳೆ. ಇದನ್ನು ನೋಡಿದ ತುಳಸಿ ಬಹಳ ಖುಷಿ ಪಡುತ್ತಾಳೆ. ಆದರೆ ಶೇಷನ ಸೊಸೆಗೆ ಮಾತ್ರ ಬಹಳ ಕೋಪ ಬರುತ್ತಾ ಇರುತ್ತದೆ. ನಾನು ಮಾಡಿದ ಪ್ಲಾನ್ ವರ್ಕೌಟ್ ಆಗುತ್ತಿಲ್ಲ ಅಲ್ವಾ ಎಂದು ಬೇಸರ ವ್ಯಕ್ತ ಪಡಿಸುತ್ತಾಳೆ. ಇನ್ನು ದತ್ತ ಮಾತ್ರ ತನ್ನ ಸೊಸೆಯ ಬಗ್ಗೆ ಬಹಳ ಹೆಮ್ಮೆ ಆಗುತ್ತದೆ ಎಂದು ಶೇಶು ತುಳಸಿ ಬಳಿ ಹೇಳುತ್ತಾನೆ. ಇದಕ್ಕೆಲ್ಲ ಕಾರಣ ಮಾಧವ ಅವರು ದತ್ತಣ್ಣನ ಬಳಿ ರಿಕ್ವೆಸ್ಟ್ ಮಾಡಿದರು ಅದಕ್ಕೆ ದತ್ತಣ್ಣ ಒಪ್ಪಿಗೆ ಕೊಟ್ಟಿದ್ದಾರೆ ಎಂದಾಗ ತುಳಸಿಗೆ ಬಹಳ ಖುಷಿ ಆಗುತ್ತದೆ.

ಮಾಧವ ತನ್ನ ತಮ್ಮನ ಎದುರು ಕುಳಿತುಕೊಂಡು ಅಂದು ನಡೆದ ವಿಚಾರಗಳನ್ನು ಹೇಳುತ್ತ ಇರುತ್ತಾನೆ. ಆದರೆ ಮಾಧವ ಅವರ ತಮ್ಮ ಯಾವುದಕ್ಕು ರಿಯಾಕ್ಟ್ ಮಾಡದೇ ಮಲಗಿರುತ್ತಾನೆ. ಈ ವೇಳೆ ಮಾಧವಗೆ ತುಳಸಿ ಕರೆ ಮಾಡಿ ಧನ್ಯವಾದ ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಮಾಧವ ಫ್ರೆಂಡ್ ಶಿಪ್ ನಲ್ಲಿ ನೋ ಸಾರಿ ನೋ ಥಾಂಕ್ಸ್ ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿಗೆ ಬಹಳ ಖುಷಿ ಆಗುತ್ತದೆ. ಮಾಧವ ಹಾಗೂ ತುಳಸಿ ಮಾತನಾಡುತ್ತಾ ಇರುವುದನ್ನು ಶಾರ್ವರಿ ಕದ್ದು ಕೇಳಿಕೊಳ್ಳುತ್ತಾಳೆ.

ಇನ್ನು ಸಿರಿ ರೂಮ್ ನಲ್ಲಿ ಏನೋ ಯೋಚನೆ ಮಾಡುತ್ತಾ ಮಗ್ನಳಾಗಿರುತ್ತಾಳೆ. ಇದನ್ನು ಕಂಡ ಸಮರ್ಥ್ ಇವತ್ತೇನು ರೂಮ್ ನಲ್ಲಿ ಇದ್ದೀಯಾ ಅತ್ತೆ ಕರೆದರೂ ಮಾವ ಕರೆದರೂ ಕಾರಣ ಹೇಳಲೇ ಇಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಕೂಡಲೇ ಸಿರಿ ಸಮರ್ಥ್ ಬಳಿ ನಾಳೆ ಯಾವ ದಿನ ನಾಳೆ ಏನು ವಿಶೇಷ ದಿನ ಹೇಳು ಎಂದೆಲ್ಲ ಪ್ರಶ್ನೆ ಮಾಡಿದಾಗ ಸಮರ್ಥ್ ನಿರಾಯಾಸ ಪ್ರತಿಕ್ರಿಯೆ ನೀಡುತ್ತಾನೆ. ಇದನ್ನು ಕೇಳಿಸಿಕೊಂಡ ಸಿರಿಗೆ ಕೊಂಚ ಬೇಸರ ಆಗಿ ಮಲಗುತ್ತಾಳೆ. ಇತ್ತ ದತ್ತ ಬೆಳಗ್ಗೆ ವಾಕಿಂಗ್ ಮುಗಿಸಿ ಕೋಪದಿಂದ ಗೊಣಗುತ್ತಾ ಬರುತ್ತಾನೆ. ಇದನ್ನು ನೋಡಿದ ತುಳಸಿ ಏನಾಯಿತು ಮಾವ ಎಂದೆಲ್ಲ ಕೇಳುತ್ತಾಳೆ.

ಕೋಪದಲ್ಲಿ ಗೊಣಗುತ್ತಿರುವ ದತ್ತ

ಕೋಪದಲ್ಲಿ ಗೊಣಗುತ್ತಿರುವ ದತ್ತ

ಇವತ್ತು ಏನಾಯಿತು ಗೊತ್ತಾ ತುಳಸಿ ಪಾರ್ಕ್ ನಲ್ಲಿ ಒಬ್ಬ ಹುಡುಗ ಹೂ ಹಿಡಿದುಕೊಂಡು ಮಂಡಿಯೂರಿ ಐಲವ್ ಯು ಎನ್ನುತ್ತಿದ್ದ, ಇವತ್ತು ಅದೇನೋ ಪ್ರೇಮಿಗಳ ದಿನ ಅಂತೆ ಸಂಪ್ರದಾಯ ಎಲ್ಲ ಮಾಯ ಆಗುತ್ತಿದೆ ಎಂದೆಲ್ಲ ಹೇಳಿದಾಗ ತುಳಸಿ ಮೌನ ವಹಿಸುತ್ತಾಳೆ. ಇನ್ನು ದತ್ತ ಹೋದ ಬಳಿಕ ಸಿರಿ ಹಾಗೂ ಸಮರ್ಥ್ ಬರುತ್ತಾರೆ. ಸಮರ್ಥ್ ಬರಬೇಕಾದರೆ ಅಮ್ಮನ ಬಳಿ ಇವತ್ತು ತಿಂಡಿ ಊಟ ಎನು ಬೇಡ ಅಷ್ಟೂ ಬ್ಯುಸಿ ಇದ್ದೇನೆ ಎಂದು ಹೇಳಿ ಹೊರಟು ಹೋಗುತ್ತಾನೆ. ಸಮರ್ಥ್ ಹೋದ ಬಳಿಕ ಸಿರಿ ನೋವಿಗೆ ಕಾರಣ ಕೇಳುತ್ತಾಳೆ.

ಸಿರಿಯನ್ನು ಸಮಾಧಾನ ಮಾಡಿದ ತುಳಸಿ

ಸಿರಿಯನ್ನು ಸಮಾಧಾನ ಮಾಡಿದ ತುಳಸಿ

ಆಗ ಸಿರಿ ಸಮರ್ಥ್ ಇವತ್ತು ಪ್ರೇಮಿಗಳ ದಿನ ಎಂಬುವುದನ್ನು ಮರೆತು ಬಿಟ್ಟಿದ್ದಾನೆ ಎಂದು ಬೇಸರ ಮಾಡಿಕೊಂಡು ಹೇಳಿದಾಗ ತುಳಸಿ ಸಮಾಧಾನ ಮಾಡುತ್ತಾಳೆ. ಇನ್ನು ದತ್ತ ಚೆಸ್ ಆಡುತ್ತಿದ್ದ ವೇಳೆ ತುಳಸಿ ಹೊರಗೆ ಹೋಗಲು ಸಿದ್ಧವಾಗಿ ಬರುತ್ತಾಳೆ. ಇದನ್ನು ನೋಡಿದ ದತ್ತ ಇವತ್ತು ಎಲ್ಲಿಗೆ ಹೋಗುತ್ತಾ ಇದ್ದೀರಿ ಎಂದು ಕೇಳಿದಾಗ ತುಳಸಿ ಇವತ್ತು ಪ್ರೇಮಿಗಳ ದಿನಾಚರಣೆ ಅಲ್ವಾ ಅದಕ್ಕೆ ಪಾಪುಗೆ ಇವತ್ತು ಬ್ಯುಸಿ ಅಂತೆ ಅದಕ್ಕೆ ಅವನ ಪರವಾಗಿ ಸಿರಿಗೆ ಗಿಫ್ಟ್ ತರಲು ಹೋಗುತ್ತಾ ಇದ್ದೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ.

ಅವಿಗೆ ಗ್ರೀಟಿಂಗ್ ಕಾರ್ಡ್ ಕೊಡಲು ಬಂದ ಪೂರ್ಣಿಮಾ

ಅವಿಗೆ ಗ್ರೀಟಿಂಗ್ ಕಾರ್ಡ್ ಕೊಡಲು ಬಂದ ಪೂರ್ಣಿಮಾ

ಇನ್ನು ಪೂರ್ಣಿಮಾ ಕೂಡ ಅವಿಗಾಗಿ ಗ್ರೀಟಿಂಗ್ ಕಾರ್ಡ್ ಕೊಡುತ್ತಾಳೆ. ಅದರಲ್ಲಿ ಪ್ರೇಮಿಗಳ ದಿನದ ವಿಶ್ ಮಾಡಿರುವುದು ಕಂಡು ಅವಿಗೇ ಬಹಳ ಖುಷಿ ಆಗುತ್ತದೆ. ಇದನ್ನು ದೂರದಿಂದ ನೋಡಿದ ಮಾಧವ ಬಹಳ ಖುಷಿ ಪಡುತ್ತಾನೆ. ಇನ್ನು ಆಟೋದಲ್ಲಿ ಮಾಧವ ಕೆಫೆಗೆ ಹೊರಡುತ್ತಾನೆ. ದಾರಿಯುದ್ದಕ್ಕೂ ತನ್ನ ಮಗ ಹಾಗೂ ಸೊಸೆಯ ಬಗ್ಗೆಯೇ ಯೋಚನೆ ಮಾಡುತ್ತಾ ಹೋಗುತ್ತಾನೆ. ಆ ವೇಳೆ ದಾರಿಯಲ್ಲಿ ತುಳಸಿ ಅವರನ್ನು ನೋಡಿ ತುಳಸಿ ಬಳಿ ಮಾತನಾಡಬೇಕು ಎಂದು ಆಕೆಯ ಹಿಂದೆ ಹೋಗಿ ಗಿಫ್ಟ್ ಶಾಪ್ ಬಳಿ ತುಳಸಿ ಜತೆ ಮಾತನಾಡುತ್ತಾನೆ.

ಸಿರಿಗೆ ಗಿಫ್ಟ್ ರೆಡಿ

ಸಿರಿಗೆ ಗಿಫ್ಟ್ ರೆಡಿ

ಇನ್ನು ತುಳಸಿ ಬಳಿ ಮಾತನಾಡಿದ ಬಳಿಕ ಇಬ್ಬರು ಸೇರಿ ಒಂದು ಗಿಫ್ಟ್ ಅನ್ನು ಸೆಲೆಕ್ಟ್ ಮಾಡುತ್ತಾರೆ. ಬಳಿಕ ಅಲ್ಲಿಂದ ಇಬ್ಬರು ತೆರಳುತ್ತಾರೆ. ಅವಿ ಅಭಿ ಬಳಿ ಮದುವೆ ಬಗ್ಗೆ ಮಾತನಾಡಿದ ವೇಳೆ ಅಭಿ ಮಾತ್ರ ಏನೂ ಹೇಳದೆ ಹೊರಟು ಹೋಗುತ್ತಾನೆ. ಇದನ್ನು ಕೇಳಿದ ಅವಿ ಅಭಿ ನನ್ನ ಬಳಿ ಏನೋ ಮುಚ್ಚಿಡುತ್ತಿದ್ದಾನೆ ಎಂದುಕೊಂಡು ಕಾರು ಡ್ರೈವರ್ ಬಳಿ ಅಭಿ ಎಲ್ಲಿಗೆ ಹೋಗುತ್ತಾನೆ ಏನು ಕಥೆ ಎಲ್ಲವನ್ನೂ ಅಪ್ಡೇಟ್ ಮಾಡಲು ಹೇಳುತ್ತಾನೆ.

More from Filmibeat

English summary
Kannada serial sri rastu shubha mastu written update on 9th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X