Srirasthu Shubhamasthu: ಸಂಧ್ಯಾ ಮಾಡುತ್ತಿರುವ ರಂಪಾಟಕ್ಕೆ ತುಳಸಿ ಸುಸ್ತು!
ಶ್ರೀರಸ್ತು ಶುಭಮಸ್ತು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇದೀಗ ಮಾಧವ ಹಾಗೂ ದತ್ತನ ನಡುವೆ ಚೆಸ್ ಪಂದ್ಯಾಟ ನಡೆಯುತ್ತಿದೆ. ಮಾಧವ ಚೆಕ್ ಕೊಟ್ಟಿದ್ದನ್ನು ನೋಡಿ ಶಾಕ್ ಆದ ತಾತ ನೀರು ಕುಡಿದು ಬರುತ್ತೇನೆ ಎಂದು ಎದ್ದು ನಿಲ್ಲುತ್ತಾರೆ. ಇದನ್ನು ಕಂಡ ಮಾಧವ ಬಿಡಿ ದತ್ತ ಅವರೇ ನಾನು ನೀರು ತರುತ್ತೇನೆ ಎಂದು ಹೇಳಿ ಅಲ್ಲಿಂದ ಎದ್ದು ಹೋಗುತ್ತಾನೆ. ತುಳಸಿ ಹಾಗೂ ಸಂಧ್ಯಾ ಜೋರಾಗಿ ಮಾತನಾಡುತ್ತಾ ಇರುತ್ತಾರೆ.
ಸಂಧ್ಯಾ ತನ್ನ ತಾಯಿ ಬಳಿ ನನಗೆ ಹಣದ ಅಗತ್ಯ ಇದೆ, ನನಗೆ ಎಷ್ಟು ಕಷ್ಟ ಇದೆ, ಕಷ್ಟ ಬಂದಾಗ ತವರು ಮನೆಗೆ ಬರದೇ ಎಲ್ಲಿಗೆ ಹೋಗುವುದು ಎಂದು ಜೋರಾಗಿ ಮಾತನಾಡುತ್ತಾ ಇರುವಾಗ ಮಾಧವ ಬರುತ್ತಾನೆ. ಮಾಧವನನ್ನು ನೋಡಿದ ಸಂಧ್ಯಾ ಮಾತು ನಿಲ್ಲಿಸಿ ಬಿಡುತ್ತಾಳೆ. ತುಳಸಿ ಮಾವ ಏನಾದರೂ ಬಂದೇ ಬಿಟ್ಟರ ಎಂದು ಭಯ ಪಟ್ಟುಕೊಂಡು ಹಿಂದೆ ತಿರುಗಿ ನೋಡಿದರೆ ಮಾಧವ ತುಳಸಿ ಬಳಿ ಬಂದು ನಿಲ್ಲುತ್ತಾನೆ

ಆಗ ತುಳಸಿ ಮಾಧವನ ಬಳಿ ಸಂಧ್ಯಾಳನ್ನು ತೋರಿಸಿ ಮಾಧವ ಅವರೇ ಇವಳೇ ನನ್ನ ಮಗಳು ಎಂದು ಹೇಳಿದಾಗ ಹೇಳಿಕೊಳ್ಳುವಷ್ಟು ಮರ್ಯಾದೆ ನನಗೆ ಈ ಮನೆಯಲ್ಲಿ ಇಲ್ಲ ಎಂದು ಕೊಂಕು ಮಾತುಗಳನ್ನು ಆಡುತ್ತಾಳೆ. ಇದನ್ನು ಕೇಳಿದ ಮಾಧವ ಸುಮ್ಮನೆ ಆಗುತ್ತಾನೆ. ಬಳಿಕ ಮಾಧವ ದತ್ತನಿಗೆ ನೀರು ಬೇಕಂತೆ ತುಳಸಿ ಅವರೇ ಎಂದಾಗ ತುಳಸಿ ನೀರು ತರಲು ಹೋಗುತ್ತಾಳೆ.
ಆಗ ಸಂಧ್ಯಾ ಬಳಿ ಮಾಧವ ನಾನು ದತ್ತ ಚೆಸ್ ಆಡುತ್ತಿದ್ದೇವೆ ಬನ್ನಿ ಎಂದು ಕರೆಯುತ್ತಾನೆ. ಆದರೆ ಅದನ್ನು ಕೇಳಿದ ತುಳಸಿ ಓಡಿ ಬರುತ್ತಾಳೆ. ಬೇಡ ಮಾಧವ ಅವರೇ ಆಕೆ ಬೇಡ ಬರುವುದು ಎಂದು ಹೇಳುತ್ತಾಳೆ. ಬಳಿಕ ಮಾಧವಗೆ ನೀರು ತಂದು ಕೊಡುತ್ತಾಳೆ. ಮಾಧವ ಅದನ್ನು ತೆಗೆದುಕೊಂಡು ದತ್ತ ಬಳಿ ಹೋಗಿ ಕೊಡುತ್ತಾನೆ. ಬಳಿಕ ಚೆಸ್ ಕಾಯಿಗಳು ಮೊದಲು ಇದ್ದ ಜಾಗದಲ್ಲಿ ಇಲ್ಲದನ್ನು ಕಂಡು ಅರೆರೆ ಇದೇನಿದು ಬೇರೆ ಬೇರೆ ಜಾಗಕ್ಕೆ ಕಾಯಿಗಳು ಹೋಗಿದೆ ಎಂದಾಗ ದತ್ತಗೆ ಕೊಂಚ ಕೆಮ್ಮು ಬಂದ ಹಾಗೆ ಆಗುತ್ತದೆ. ಆ ಬಳಿಕ ಚೆಸ್ ನಲ್ಲಿ ದತ್ತಾ ಗೆಲ್ಲುತ್ತಾನೆ.
ಆ ಕೂಡಲೇ ದತ್ತ ಖುಷಿಯಿಂದ ಕುಣಿದು ಕುಪ್ಪಳಿಸುತ್ತ ಇರುತ್ತಾನೆ. ಅದನ್ನು ನೋಡಿದ ಮಾಧವ ಖುಷಿ ಪಡುತ್ತಾನೆ. ಬಳಿಕ ಮಾಧವ ಹೊರಡಲು ಅನುವಾಗುತ್ತಾನೆ. ಆದರೆ ದತ್ತ ಮಾತ್ರ ಎಲ್ಲೂ ಹೋಗುವುದು ಬೇಡ ಎಂದು ಹೇಳುತ್ತಾನೆ. ಇನ್ನು ಮಾಧವನ ಮನೆಯಲ್ಲೂ ಮದುವೆ ಮಾತುಕತೆ ನಡೆಯುತ್ತಿದೆ ಆದರೆ ಮಾಧವ ಮಾತ್ರ ಇರುವುದು ಇಲ್ಲ. ಆದರೆ ಜನಾರ್ಧನ ಮಾಧವ ಇಲ್ಲ ಎಂಬುವುದನ್ನು ನೆಪವಾಗಿ ಇಟ್ಟುಕೊಂಡು ಮದುವೆ ನಿಶ್ಚಿತಾರ್ಥದವರೆಗೆ ಮುಂದುವರೆಯುತ್ತಾನೆ.

ಆದರೆ ಶಾರ್ವರಿ ಮಾತ್ರ ಎಲ್ಲದಕ್ಕೂ ಒಪ್ಪಿಗೆ ಸೂಚಿಸಿ ಅವರನ್ನು ಕಳುಹಿಸಿಕೊಡುತ್ತಾಳೆ. ಅವಿ ಕೋಪದಿಂದ ಶಾರ್ವರಿಗೆ ಬಯ್ಯುತ್ತಾ ಇರುತ್ತಾನೆ. ಇದನ್ನು ಕಂಡ ಶಾರ್ವರಿ ಮೊಸಳೆ ಕಣ್ಣೀರು ಹಾಕುತ್ತಾ ಇರುತ್ತಾಳೆ. ಇದನ್ನು ನೋಡಿದ ಅವಿ ಮೆತ್ತಗೆ ಆಗುತ್ತಾನೆ. ಚಿಕ್ಕಮ್ಮನಿಗೆ ಎರಡು ಮಾತು ಹೆಚ್ಚೇ ಆಡಿಬಿಟ್ಟೆನೇನೋ ಎಂದು ಬೇಸರ ವ್ಯಕ್ತಪಡಿಸುತ್ತಾನೆ. ಬಳಿಕ ತನ್ನ ಚಿಕ್ಕಮ್ಮನ ಕೆಲ ಮಾತುಗಳನ್ನು ಕೇಳಿ ಮನಸ್ಸಿಗೆ ಸಮಾಧಾನ ಆಗದಿದ್ದರೂ ಅದೆಲ್ಲವನ್ನು ತಡೆದುಕೊಂಡು ಸುಮ್ಮನೆ ಆಗುತ್ತಾನೆ .
ಆದರೆ ಪೂರ್ಣಿಮಾ ಮಾತ್ರ ಇದೆಲ್ಲ ಏನು ನಡೆಯುತ್ತಿದೆ, ಇದೆಲ್ಲವನ್ನೂ ನಾನು ಮಾವನಿಗೆ ಹೇಳಲೇ ಬೇಕು ಇಲ್ಲವಾದರೆ ಬಹಳ ಕಷ್ಟ ಆಗುತ್ತದೆ ಎಂದು ಮೆಟ್ಟಿಲು ಏರಿ ರೂಮ್ ಕಡೆ ಹೋಗುತ್ತಾಳೆ. ಜನಾರ್ಧನ್ ನೀಚ ಮನುಷ್ಯ ಆಗಿದ್ದರೂ ಶಾರ್ವರಿ ಆತನ ಜೊತೆ ಕೈ ಜೋಡಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಿದೆ.


Click it and Unblock the Notifications











