ಪಾರ್ಕ್‌ನಿಂದ ಮನೆಗೆ ಬಂದ ದತ್ತನಿಗೆ ಸಂಧ್ಯಾ ಮನೆಗೆ ಬಂದು ಹೋಗಿದ್ದು ತಿಳಿಯುತ್ತಾ?
ಸಂಧ್ಯಾ ಮನೆಯಿಂದ ಹೋದ ಬಳಿಕ ತುಳಸಿ ಒಬ್ಬಳೇ ಮನೆಯಲ್ಲಿ ಇರುತ್ತಾಳೆ. ಆಕೆ ಡೈನಿಂಗ್ ಹಾಲ್‌ಗೆ ಬಂದು ಊಟ ಮಾಡುತ್ತಾ ಇರುತ್ತಾಳೆ. ಈ ವೇಳೆ ಆಕೆಗೆ ಮಾಧವ ವಿಡಿಯೋ ಕಾಲ್ ಮಾಡುತ್ತಾನೆ. ಬಳಿಕ ಬಹಳ ವಿನಯತೆಯಿಂದ ಮಾತನಾಡುತ್ತಾರೆ. ಹಾಗೆಯೇ ಕೆಫೆಯಲ್ಲಿ ಕುಳಿತಿದ್ದ ಲವ್ ಬರ್ಡ್ಸ್ ಗಳನ್ನು ತೋರಿಸುತ್ತಾರೆ. ಇದನ್ನೆಲ್ಲ ನೋಡಿದ ತುಳಸಿಗೆ ಬಹಳ ಸಂತಸ ಆಗುತ್ತದೆ.
ಸರ್ ನೀವು ಮಾಡಿದ ಅರೇಂಜ್ ಮೆಂಟ್ ತುಂಬಾ ಚೆನ್ನಾಗಿ ಇದೆ ಎಂದೆಲ್ಲ ತುಳಸಿ ಹೇಳಿದಾಗ ಮಾಧವ ನಾವಿಬ್ಬರೂ ಸೇರಿ ಮಾಡಿದ ಅರೇಂಜ್ ಮೆಂಟ್ ಇದು ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ಸುಮ್ಮನೆ ನಸು ನಗುತ್ತ ಇರುತ್ತಾಳೆ. ಇನ್ನು ಇದೇ ಖುಷಿಯಲ್ಲಿ ಇಬ್ಬರು ವಿಡಿಯೋ ಕಾಲ್ ನಲ್ಲಿ ಮಾತನಾಡಿಕೊಂಡು ಊಟ ಮಾಡುತ್ತಾರೆ.
ಇನ್ನು ಸಿರಿ ಹಾಗೂ ಸಮರ್ಥ್ ಮನೆಗೆ ಹೋಗಲು ಎದ್ದು ನಿಲ್ಲುತ್ತಾರೆ ಅಷ್ಟರಲ್ಲಿ ಅಲ್ಲಿಗೆ ಅವಿ ಹಾಗೂ ಪೂರ್ಣಿಮಾ ಬರುತ್ತಾರೆ. ಅವರು ಬಂದ ಕೂಡಲೇ ಸಿರಿ ಅರೇಂಜ್ ಮೆಂಟ್ ಬಹಳ ಚೆನ್ನಾಗಿತ್ತು, ನನಗೆ ಬಹಳ ಖುಷಿ ಆಗಿದೆ ಎನ್ನುತ್ತಾಳೆ. ಏನೋ ಗಿಫ್ಟ್ ಕೊಟ್ಟಿದ್ದಾರೆ ಸಮರ್ಥ್ ಎಂದು ಸಿರಿ ಪೂರ್ಣಿಮಾಗೆ ತೋರಿಸಿ ಬಳಿಕ ನಿಮಗೆ ಎನು ಗಿಫ್ಟ್ ಸಿಕ್ಕಿಲ್ಲವೆ ಎಂದಾಗ ರಿಂಗ್ ತೋರಿಸುತ್ತಾಳೆ.

ಸಿರಿ ಜೊತೆ ಸಂತಸ ಹಂಚಿಕೊಂಡ ಪೂರ್ಣಿಮಾ
ಇದನ್ನು ಸಮರ್ಥ್ ಸಜೆಸ್ಟ್ ಮಾಡಿರುವುದಾಗಿ ಅವಿ ಹೇಳಿದಾಗ ಸಿರಿಗೆ ಬಹಳ ಖುಷಿ ಆಗುತ್ತದೆ. ಬಳಿಕ ಅಲ್ಲಿಂದ ಇಬ್ಬರು ಹೊರಡಲು ಅನುವಾದಗ ಅವಿ ಹಾಗೂ ಪೂರ್ಣಿಮಾಗೆ ಮಾಧವ ಎದುರಿಗೆ ಬರುತ್ತಾನೆ. ಪೂರ್ಣಿಮಾ ಆ ವೇಳೆ ನನಗೆ ಇನ್ನೊಂದು ಗಿಫ್ಟ್ ಬೇಕು ಎಂದು ಕೇಳುತ್ತಾಳೆ. ಏನದು ಎಂದು ಅವಿ ಕೇಳಿದ ವೇಳೆ ಪೂರ್ಣಿಮಾ ಮಾಧವನ ಬಳಿ ಮಾತನಾಡಬೇಕು ಅವರು ನನ್ನ ಬಳಿ ಮಾತನಾಡಬೇಕು ನನಗೆ ಅದಕ್ಕೆ ಒಪ್ಪಿಗೆ ಬೇಕು ಎಂದು ಕೇಳಿದಾಗ ಅವಿ ಮನಸ್ಸಿಲದೇ ಒಪ್ಪಿಕೊಳ್ಳುತ್ತಾನೆ .

ತಂದೆಯ ಬಳಿ ಮಾತನಾಡಲು ಮನಸ್ಸಿಲ್ಲದೆ ಒಪ್ಪಿಗೆ ಕೊಟ್ಟ ಅವಿ
ಪೂರ್ಣಿಮಾ ಖುಷಿಯಲ್ಲಿ ಮಾವನನ್ನು ಅಪ್ಪಿಕೊಳ್ಳುತ್ತಾ ಇರುತ್ತಾಳೆ. ಇನ್ನು ತಾತ ಪಾರ್ಕ್ ನಿಂದ ಮನೆಗೆ ಬರುತ್ತಾರೆ. ಕರೆಂಟ್ ಹೋಗಿದ್ದ ಕಾರಣ ದತ್ತನ ಕಾಲಿಗೆ ರಾಡ್ ಒಂದು ತಾಗಿ ನೋವು ಆಗುತ್ತದೆ. ಬಳಿಕ ಕರೆಂಟ್ ತೆಗೆದವರಿಗೆ ಬಯ್ಯುತ್ತಾ ಅಲ್ಲಿಂದ ಹೋಗುತ್ತಾರೆ. ಬಳಿಕ ತುಳಸಿ ಬಳಿ ಬಂದು ನಾಳೆ ಗಿಝರ್ ರಿಪೇರಿ ಮಾಡಲು ಬರಲು ಹೇಳಿದ್ದೇನೆ, ಅವರು ಬಂದರೆ ನೀನೇ ನಿಂತು ಕೆಲಸ ಮಾಡಿಸಿ ಹಣ ಕೊಟ್ಟು ಕಳುಹಿಸು ಎಂದು ಹೇಳಿ ಅಲ್ಲಿಂದ ಹೋಗುತ್ತಾರೆ.

ಮಾವ ಹೇಳಿದ ಮಾತಿಗೆ ತಲೆ ಅಲ್ಲಾಡಿಸಿದ ತುಳಸಿ
ತುಳಸಿ ಏನೂ ಮಾತನಾಡದೆ ಮಾವ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತ ಇರುತ್ತಾಳೆ. ಇನ್ನು ಪಾರ್ಟಿ ಮುಗಿಸಿ ಮನೆಗೆ ಬಂದ ಸಿರಿ ಹಾಗೂ ಸಮರ್ಥ್ ಅಮ್ಮನಿಗೆ ಧನ್ಯವಾದ ಹೇಳುತ್ತಾರೆ. ತುಳಸಿಗೆ ಬಹಳ ಖುಷಿ ಆಗುತ್ತದೆ. ಮಕ್ಕಳಿಬ್ಬರು ಅದೆಷ್ಟು ಖುಷಿಯಲ್ಲಿ ಇದ್ದಾರೆ ಎಂದು ತಿಳಿದುಕೊಂಡು ಮಕ್ಕಳ ಖುಷಿಯಲ್ಲಿ ತಾನೂ ಖುಷಿಪಡುತ್ತಾಳೆ. ಬಳಿಕ ಸಿರಿ ತುಳಸಿ ಸೆಲೆಕ್ಟ್ ಮಾಡಿರುವ ಗಿಫ್ಟ್ ತೋರಿಸಿ ಗಿಫ್ಟ್ ತುಂಬಾ ಚೆನ್ನಾಗಿದೆ ಅಮ್ಮ ನನಗೆ ಬಹಳ ಇಷ್ಟ ಆಯಿತು ಎಂದು ಹೇಳುತ್ತಾಳೆ.

ಪಾನಿಪುರಿ ತಿನ್ನಲು ಬಂದ ಸಂಧ್ಯಾ
ಇತ್ತ ಸಂಧ್ಯಾ ಆಕೆಯ ಗಂಡನನ್ನು ಕರೆದುಕೊಂಡು ಪಾನಿಪುರಿ ತಿನ್ನಲು ಬರುತ್ತಾಳೆ. ಇದೇನು ಪಾನಿಪುರಿ ತಿನ್ನಲು ಇಲ್ಲಿ ತನಕ ಬರಬೇಕಿತ್ತ ಎಲ್ಲಾದರೂ ಹೋಟೆಲಲ್ಲಿ ಊಟ ಮಾಡುವ ಸಂಧ್ಯಾ ಎಂದು ಪ್ರಸಾದ್ ಹೇಳುವಾಗ ಸಂಧ್ಯಾ ಪಾನಿಪುರಿ ಎಕ್ಸ್ಟ್ರಾ ಒಂದು ಪ್ಲೇಟ್ ತಿಂದರೂ ತೊಂದರೆ ಇಲ್ಲ, ಹೋಟೆಲ್ ಊಟ ಬೇಡ ಇರೋ ಬರೋ ದುಡ್ದು ಖಲಿ ಆದರೆ ಏನು ಮಾಡೋಣ ಅದಕ್ಕೆ ಬೇಡ ಎಂದೆಲ್ಲ ಗಂಡನ ಬಳಿ ಹೇಳಿ ಪಾನಿ ಪುರಿ ತಿಂದು ಖುಷಿ ಪಡುತ್ತಾರೆ. ಇತ್ತ ಮಾವ ಮತ್ತು ಸೊಸೆ ಬಹಳ ಖುಷಿಯಿಂದ ಮಾತನಾಡುತ್ತಾ ಇರುತ್ತಾರೆ. ಇಷ್ಟು ದಿನ ಮಾಧವ ಮಾತನಾಡದ್ದನ್ನು ಪೂರ್ಣಿಮಾ ಪ್ರಶ್ನೆ ಬೇರೆ ಮಾಡುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











