ಮಾಧವನ ಖುಷಿ ಕಂಡು ಶಾಕ್ ಆದ ಶಾರ್ವರಿ ತುಳಸಿ ಯಾರೆಂದು ಪತ್ತೆ ಹಚ್ತಾಳಾ?

ಶ್ರೀರಸ್ತು ಶುಭಮಸ್ತು ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಮಾಧವ ಬಹಳ ನೋವಿನಿಂದ ತುಳಸಿ ಮನೆಗೆ ಬರುತ್ತಾನೆ. ತುಳಸಿ ಮಾಧವನನ್ನು ಅಷ್ಟು ಕುಗ್ಗಿರುವ ಸ್ಥಿತಿಯಲ್ಲಿ ನಾನು ಇದೇ ಮೊದಲ ಬಾರಿ ನೋಡುತ್ತಾ ಇರುವುದು ಅವರನ್ನು ಹೇಗಾದರೂ ಸಮಾಧಾನ ಮಾಡಬೇಕು ಎಂದುಕೊಂಡು ಎರಡು ಚೀಟಿ ರೆಡಿ ಮಾಡಿ ಇಟ್ಟುಕೊಂಡು ಇರುತ್ತಾಳೆ. ಬಳಿಕ ಆ ಚೀಟಿಯಲ್ಲಿ ಮಾಧವ ಅವರಿಗೆ ಸಮಾಧಾನ ಆಗುವ ರೀತಿಯಲ್ಲಿ ಬರೆದಿರುತ್ತಾಳೆ.
ಅದನ್ನು ನೋಡಿದ ಮಾಧವ ಒಂದು ಚೀಟಿ ತೆಗೆದು ಓದುವಾಗ ಅದರಲ್ಲಿ ಆತನಿಗೆ ಸಮಾಧಾನ ನೀಡುವ ಹಾಗೆ ತುಳಸಿ ಬರೆದು ಹಾಕಿದ್ದಳು. ಆ ಬಳಿಕ ಮಾಧವ ಕೊಂಚ ಸಮಾಧಾನಗೊಂಡು ತುಳಸಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ಆದರೆ ತುಳಸಿ ಮಾತ್ರ ಮನದಲ್ಲಿ ದೇವರ ಬಳಿ ಮಾಧವ ಖುಷಿ ಆಗಿ ಇರಲಿ ಎಂದು ಪ್ರಾರ್ಥನೆ ಮಾಡುತ್ತಾಳೆ.
ಇನ್ನು ದತ್ತ ಮನೆಗೆ ಬಂದಾಗ ಸಿರಿ ಸಮರ್ಥ್ ಇಬ್ಬರು ಬರುತ್ತಾರೆ. ದತ್ತ ಮನೆಗೆ ಬಂದವನೇ ಇಬ್ಬರು ಬಂದಿರುವುದನ್ನು ನೋಡಿ ಬಹಳ ಖುಷಿ ಆಗುತ್ತದೆ. ಇನ್ನು ಎಲ್ಲರೂ ಊಟಕ್ಕೆ ಕುಳಿತಾಗ ದತ್ತ ಹೇಗೆ ಆಯಿತು ಎಂದಾಗ ಸಮರ್ಥ್ ಕೊಂಚ ತೆಪ್ಪಗೆ ಆದರೂ ಎನು ಮಾತನಾಡದೆ ಸುಮ್ಮನೆ ಆಗುತ್ತಾನೆ.
ಸಿರು ತಾತ ತುಂಬಾ ಚೆನ್ನಾಗಿತ್ತು ಎಂದು ಹೇಳುತ್ತಾಳೆ. ಇನ್ನು ಶಾರ್ವರಿ ಮಾತ್ರ ರೂಂನಲ್ಲಿ ಕುಳಿತಿರಬೇಕಾದರೆ ಆಕೆಯ ಮಗಳು ಬರುತ್ತಾಳೆ. ಆಕೆ ಕದ್ದು ಕೇಳಿಸಿಕೊಂಡಿದ್ದನ್ನು ಆಕೆಯ ಬಳಿ ಕೇಳುತ್ತಾಳೆ . ಆ ಜನಾರ್ಧನ್ ಹಾಗೂ ಆಕೆಯ ಮಗಳು ನಿನಗೆ ಮುಂಚೆಯೇ ಪರಿಚಯ ಇತ್ತಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಶಾರ್ವರಿ ನೀನು ಅಂದುಕೊಂಡಿದ್ದದ್ದು ಎಲ್ಲ ನಿಜ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಶಾರ್ವರಿ ಮಗಳಿಗೆ ಶಾಕ್ ಆಗುತ್ತದೆ. ಶಾರ್ವರಿ ನಗುತ್ತಾಳೆ. ಅದಕ್ಕೂ ಮೀರಿ ಆಕೆಯ ಮಗಳು ಇನ್ನಷ್ಟು ಪ್ರಶ್ನೆ ಕೇಳಲು ಆರಂಭಿಸುತ್ತಾಳೆ. ಇದನ್ನು ಕೇಳಿದ ಶಾರ್ವರಿಗೆ ಸಿಟ್ಟು ಬರುತ್ತದೆ, ಇವತ್ತು ಇಷ್ಟು ತಿಳಿದುಕೊಂಡರೆ ಸಾಕು ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಆಕೆಯ ಮಗಳು ಹೋಗಬೇಕು ಎಂದುಕೊಂಡಾಗ ಯಾರೋ ಡೋರ್ ಬಡಿದ ಸದ್ದು ಆಗುತ್ತದೆ. ಡೋರ್ ತೆಗೆದರೆ ಹೊರಗಡೆ ಅಭಿಜಿತ್ ನಿಂತಿರುತ್ತಾನೆ.
ಅಭಿಜಿತ್ ನೋಡಿ ಶಾಕ್ ಶಾರ್ವರಿಗೆ ಆಗುತ್ತದೆ. ಬಳಿಕ ಅಭಿಜಿತ್ ಚಿಕ್ಕಮ್ಮನ ಬಳಿ ಏನಾದರೂ ಮುಖ್ಯವಾದ ವಿಷಯ ಮಾತನಾಡುತ್ತಾ ಇದ್ದೀರಾ ಎಂದು ಕೇಳುತ್ತಾನೆ. ಆಗ ಶಾರ್ವರಿ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅಭಿಜಿತ್ ಸರಿ ಎಂದು ಬೇರೆ ವಿಚಾರ ಮಾತನಾಡುತ್ತಾ ಇರುತ್ತಾನೆ. ಇನ್ನು ಮಾಧವ ಮನೆಗೆ ಬಂದು ನೀರಾಳವಾಗಿ ಕುಳಿತಿರುತ್ತಾನೆ. ಮಾಧವ ಕುಳಿತಿರುವುದನ್ನು ಕಂಡ ಪೂರ್ಣಿಮಾಗೆ ಬಹಳ ಖುಷಿ ಆಗುತ್ತದೆ.
ಮಾವ ನೀವು ಮೊದಲಿನ ಹಾಗೆ ಆಗುತ್ತಿರಾ ಎಂದುಕೊಂಡಿದ್ದೆ, ನೀವು ಬಂದಿರುವುದು ತಿಳಿದು ನನಗೆ ಬಹಳ ಖುಷಿ ಆಯಿತು ಎಂದು ಹೇಳುತ್ತಾಳೆ. ಬಳಿಕ ಕುಡಿಯಲು ಪಾನೀಯ ಕೊಡುತ್ತಾಳೆ. ಇನ್ನು ಮಾಧವ ಪೂರ್ಣಿಮಾ ಬಳಿ ತುಳಸಿ ಬಳಿ ಮಾತನಾಡಿರುವುದು ಮನಸ್ಸಿಗೆ ಖುಷಿ ತಂದಿದೆ ಎಂಬ ವಿಚಾರ ಹೇಳುತ್ತ ಇರುತ್ತಾನೆ. ಇದನ್ನು ಮರೆಯಲ್ಲಿ ಕೇಳಿದ ಶಾರ್ವರಿಗೆ ಶಾಕ್ ಆಗುತ್ತದೆ.


Click it and Unblock the Notifications











