Srirasthu Shubhamasthu: ತಂದೆಯನ್ನು ತರಾಟೆಗೆ ತೆಗೆದುಕೊಂಡ ಮಗ; ಶಾರ್ವರಿ ಪ್ಲಾನ್ ವರ್ಕ್ ಆಗುತ್ತಾ?

By Poorva

ಶ್ರೀ ರಸ್ತು ಶುಭ ಮಸ್ತು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದೆ. ಇದೀಗ ಮಾಧವ ಹಾಗೂ ತುಳಸಿ ಕಾರಿನಲ್ಲಿ ಹೋಗಬೇಕಾದರೆ ಫೋಟೋ ತೆಗೆದು ಮಾಧ್ಯಮದವರು ಪೇಪರ್ ನಲ್ಲಿ ಕೂಡ ಪಬ್ಲಿಷ್ ಮಾಡಿದ್ದಾರೆ. ಆದರೆ ಈ ವಿಚಾರ ತುಳಸಿಗೆ ಆಗಲಿ ಮಾಧವ ಗೆ ಆಗಲಿ ತಿಳಿದೇ ಇಲ್ಲ ತುಳಸಿ ಗೆ ತನ್ನ ಮನದ ಪ್ರೀತಿಯನ್ನು ಹೇಳಬೇಕು ಎಂದಾಗ ಮಧವಾಗೆ ನಾನಾ ಅಡೆತಡೆಗಳು ಬರುತ್ತಾ ಇರುತ್ತದೆ.

ಆದರೆ ಹೋಟೆಲ್ ಒಂದರಲ್ಲಿ ಮಾಧವ ಶೇಶು ಹಾಗೂ ಅವರ ಪತ್ನಿ ಯನ್ನೂ ನೋಡಿ ಬಹಳ ಬೇಸರ ಆಗುತ್ತದೆ. ಆದರೆ ಅವರಿಬ್ಬರ ಬಳಿ ಮಾತನಾಡಿದ್ದು ಹಾಗೆಯೇ ನೀಡಿದ ವಿಚಾರವನ್ನು ತುಳಸಿ ಗೆ ಹೇಳದೆ ಮುಚ್ಚಿ ಇಡುತ್ತಾನೆ ಮಾಧವ. ಇನ್ನೂ ತುಳಸಿ ನೇರವಾಗಿ ಮನೆಗೆ ಬರುತ್ತಾಳೆ.

srirasthu shubhamasthu

ಮನೆಯವರು ಆಕೆಗೆ ಇದು ಯಾವ ವಿಚಾರವೂ ತಿಳಿಯದೇ ಇರುವ ಹಾಗೆ ನಟನೆ ಮಾಡುತ್ತಾರೆ. ಮೊದಲೇ ದತ್ತ ಮನೆಯವರಿಗೆ ಹೇಳಿ ಇರುತ್ತಾನೆ. ಯಾವುದೇ ಕಾರಣಕ್ಕೂ ತುಳಸಿಗೆ ವಿಚಾರ ತಿಳಿಯ ಬಾರದು ಎಂದು.

ಇನ್ನೂ ಎಲ್ಲರೂ ಡೈನಿಂಗ್ ಟೇಬಲ್ ನಲ್ಲಿ ಕುಳಿತು ಊಟ ಮಾಡಬೇಕಾದರೆ ತುಳಸಿ ತನ್ನ ಸೊಸೆಯ ಬಳಿ ಕುಳಿತು ಕೊ ಸಿರಿ ನಾನು ಊಟ ಬಡಿಸುತ್ತೇನೆ ಎಂದು ಹೇಳಿ ಊಟ ಬಡಿಸುತ್ತಾ ಇರಬೇಕಾದರೆ ಶೇಶೂ ಹಾಗೂ ಅವರ ಪತ್ನಿ ಬಗ್ಗೆ ಕೇಳುತ್ತಾಳೆ ತುಳಸಿ. ಅದಕ್ಕೆ ದತ್ತ ಹೇಳುತ್ತಾನೆ ನನ್ನ ಗೆಳೆಯ ನನ್ನ ಬಳಿ ಸುಳ್ಳು ಹೇಳುತ್ತ ಇದ್ದಾನೆ ಎನ್ನಿಸುತ್ತದೆ. ಆತನ ಧ್ವನಿಯಲ್ಲಿ ನನಗೆ ಎಲ್ಲ ಗೊತ್ತಾಗುತ್ತದೆ ಎಂದು ಹೇಳುತ್ತಾರೆ. ಆಗ ತುಳಸಿ ಗೆ ಬಹಳ ನೋವು ಆಗುತ್ತದೆ.

ಇನ್ನೂ ಸಮರ್ಥ್ ಬಳಿ ಮಾತನಾಡುತ್ತಾ ಊಟ ಬಡಿಸುತ್ತಾರೆ.. ಹೀಗಿರುವಾಗ ಸಮರ್ಥ್ ಗೆ ಮನೆಯ ಪಕ್ಕದವಳು ಮನೆಗೆ ಬಂದು ರಾದ್ಧಾಂತ ಮಾಡಿರುವುದನ್ನು ನೆನಪಿಸಿಕೊಂಡು ಅಲ್ಲಿಂದ ಅಮ್ಮನ ಬಳಿ ಸರಿಯಾಗಿ ಮಾತನಾಡದೆ ಎದ್ದು ಹೋಗುತ್ತಾನೆ ಇದನ್ನು ನೋಡಿದ ತುಳಸಿ ಎನು ಅರ್ಥ ಆಗದ ಹಾಗೆ ನಿಂತುಕೊಂಡು ಇರುತ್ತಾಳೆ

ದತ್ತ ಮಾತ್ರ ಎನು ಹೇಳಲಾದ ಸ್ಥಿತಿಯಲ್ಲಿ ನೋಡುತ್ತಾ ಇರುತ್ತಾರೆ. ಇನ್ನೂ ಮಾಧವ ಮನೆಗೆ ಬಂದ ಕೂಡಲೇ ಆತನ ಕಿರಿಯ ಮಗ ಅಭಿ ಜೋರಾಗಿ ಮಾತನಾಡುತ್ತಾನೆ ಇದನ್ನು ಕೇಳಿದ ಮಾಧವ ನಾನು ಎನು ತಪ್ಪು ಮಾಡಿದೆ ಎಂದು ಹೇಳುತ್ತಾನೆ .ಆಗ ಅಭಿ ಬಂದು ಒಂದು ಪೇಪರ್ ಅನ್ನು ತಂದೆಯ ಕೈ ಗೆ ಕೊಟ್ಟು ನೋಡಿ ಎಂದು ಹೇಳಿದಾಗ ಪೂರ್ಣಿಮಾ ಅದನ್ನು ತೆಗೆದು ಹಿಡಿದುಕೊಂಡು ಏನಿಲ್ಲ ಮಾವ ಎಂದು ಹೇಳುತ್ತಾರೆ

ಇದನ್ನು ಕೇಳಿದ ಮಾಧವ ಏನಿಲ್ಲ ಅಂದರೆ ಎನು ಪೂರ್ಣಿಮಾ ಕೊಡು ಪೇಪರ್ ನ ಎಂದು ಹೇಳಿ ಬಲವಂತವಾಗಿ ಕೇಳಿ ತೆಗೆದುಕೊಳ್ಳುತ್ತಾನೆ. ಬಳಿಕ ಆತನ ಹಾಗೂ ತುಳಸಿ ಫೋಟೋ ನೋಡಿ ಶಾಕ್ ಆಗುತ್ತಾನೆ. ಶಾರ್ವರಿ ಮಾಡಿದ ಪ್ಲಾನ್ ಮಾತ್ರ ಸಖತ್ ವರ್ಕಾಗಿದೆ ಆದರೆ ಮುಂದೆ ತುಳಸಿ ಹಾಗೂ ಮಾಧವ ದೂರ ಆಗುತ್ತಾರ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Sri rastu shubha mastu written updated on 3th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X