Srirasthu Shubhamasthu: ತುಳಸಿ ಕುರಿತು ದತ್ತ ಕೇಳಿದ ಪ್ರಶ್ನೆಗೆ ಶಾಕ್ ಆದ ಮಾಧವ!

By Poorva

ಶ್ರೀ ರಸ್ತು ಶುಭ ಮಸ್ತು ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಾ ಇದೆ. ಇದೀಗ ಮಾಧವ ತನ್ನ ಮಗ ಅಭಿಗಾಗಿ ಪತ್ರಕರ್ತರನ್ನು ಕರೆಸಿ ಸಂದರ್ಶನ ಕೂಡ ಮಾಡಿದ್ದಾರೆ. ತುಳಸಿ ಹಾಗೂ ತಮ್ಮ ಬಗ್ಗೆ ಸರಿಯಾಗಿ ಕ್ಲಾರಿಟಿ ಕೊಡದೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾಧವ ಪತ್ರಕರ್ತರ ಬಳಿ ಮಾತನಾಡುತ್ತಾನೆ.

ಆದರೆ ಆ ಸಂದರ್ಶನ ನೋಡಿದ ಮಾಧವನ ಮನೆಯವರು ಮಾತ್ರ ಸುಮ್ಮನೆ ಇದ್ದರೆ ಅಭಿ ಮಾತ್ರ ಎಗರಡುತ್ತಲೇ ಇರುತ್ತಾನೆ. ತನ್ನ ತಂದೆಯಿಂದ ತನ್ನ ಮದುವೆಯೇ ಕ್ಯಾನ್ಸಲ್ ಆಗುವ ಹಂತಕ್ಕೆ ಬಂದು ಬಿಟ್ಟಿದೆ. ಆದರೆ ಅದಕ್ಕೆ ನಾನು ಅವಕಾಶ ಮಾಡಿ ಕೊಡುವುದಿಲ್ಲ, ನನ್ನ ಮದುವೆಗೆ ನಿಮ್ಮಿಂದ ಏನಾದರೂ ತೊಂದರೆ ಆದರೆ ನಾನು ಖಂಡಿತ ಯಾವತ್ತೂ ನಿಮ್ಮನ್ನು ಬಿಡುವುದಿಲ್ಲ ಎಂದು ಹೇಳುತ್ತ ಇರುತ್ತಾನೆ. ಆಗ ಶಾರ್ವರಿ ಅಭಿ ಬಾಯಿ ಮುಚ್ಚಿಸುವ ಪ್ರಯತ್ನ ಪಡುತ್ತಾ ಇರುತ್ತಾಳೆ.

Kannada serial Srirastu Shubhamastu written update on 18th July

ಆದರೆ ಅಭಿ ಮಾಧವನ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತನಾಡುವುದು ನೋಡಿ ಶಾರ್ವಾರಿ ಖುಷಿ ಆದರೆ ಮಾಧವನ ಎದುರು ಅಭಿಗೆ ಬುದ್ದಿ ಹೇಳುವ ಹಾಗೆ ನಾಟಕವನ್ನು ಮಾಡುತ್ತಾ ಇರುತ್ತಾಳೆ . ಇನ್ನು ಅಭಿ ಮಿತಿ ಮೀರಿ ತುಳಸಿಯನ್ನು ಆ ಹೆಂಗಸು ಯಾರುಮ, ಆಕೆಯ ಮೇಲೆ ಯಾಕಿಷ್ಟು ಅನುಕಂಪ ಎಲ್ಲಾ ದಯವಿಟ್ಟು ಹೀಗೆಲ್ಲ ಮಾಡಬೇಡಿ ಎಂದೆಲ್ಲ ಹೇಳಿದಾಗ ಕೋಪಗೊಂಡ ಮಾಧವ ತುಳಸಿ ಅವರನ್ನು ಹೆಂಗಸು ಎಂದು ಕರೆಯಬೇಡಿ, ಆಕೆಯದ್ದು ಏನು ತಪ್ಪಿಲ್ಲ ಎಂದು ಜೋರಾಗಿ ಹೇಳಿದಾಗ ಶಾರ್ವರಿಗೆ ಬಹಳ ಶಾಕ್ ಆಗುತ್ತದೆ.

ಆದರೆ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಇನ್ನು ಅವಿ ಮಾತ್ರ ಏನು ಮಾತನಾಡುವುದೇ ಇಲ್ಲ. ಪೂರ್ಣಿಮಗೆ ಅಭಿ ಮಾತಿನಿಂದ ಬಹಳ ಬೇಸರ ಆಗುತ್ತದೆ. ಇನ್ನು ಅಭಿ ಮದುವೆ ದಿನ ಬಂದೇ ಬಿಟ್ಟಿತು, ಮಾಧವನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ವೇಳೆ ದತ್ತ ಮಾಧವನ ಮನೆಗೆ ಬಂದು ಚಪ್ಪಲಿ ಕಳ್ಳ ನಿಮ್ಮ ಬಳಿ ಮಾತನಾಡಬಹುದ ಎಂದು ಕೇಳುತ್ತಾನೆ. ಪೂರ್ಣಿಮಾ ಕೂಡ ದತ್ತನನ್ನು ಬಹಳ ಪ್ರೀತಿ ಪೂರ್ವಕವಾಗಿ ಆಹ್ವಾನಿಸುತ್ತಾಳೆ.

ಆದರೆ ಶಾರ್ವರಿ ಮುಖ ಮುಚ್ಚಿಕೊಂಡಿರುತ್ತಾಳೆ. ಈ ಮುದುಕ ಇಲ್ಲಿಗೆ ಯಾಕೆ ಬಂದ್ನಪ್ಪ ಎಂದುಕೊಳ್ತಾಳೆ. ಇನ್ನು ಮಾಧವ ರೂಂಗೆ ಕರೆದುಕೊಂಡು ಹೋಗಿ ಹೇಳುತ್ತಾನೆ. ದತ್ತ ಅವರೇ ನಿಮಗೆ ಏನು ಹೇಳಬೇಕೋ ಅದನ್ನು ಇಲ್ಲಿ ಹೇಳಿ ಎಂದು ಹೇಳಿದಾಗ ದತ್ತ ನೇರವಾಗಿ ನನಗೆ ಉತ್ತರ ಬೇಕು ಹಾಗಾದರೆ ಮಾತ್ರ ನಾನು ಪ್ರಶ್ನೆ ಕೇಳುವುದು ಎಂದಾಗ ಮಾಧವ ಸರಿ ಎಂದು ಹೇಳಿ ಬಿಡುತ್ತಾನೆ.

ಇನ್ನು ಮಾಧವನ ಬಳಿ ದತ್ತ ಪ್ರಶ್ನೆ ಮಾಡುತ್ತಾನೆ. ನಿಮಗೆ ನಮ್ಮ ತುಳಸಿ ಬಗ್ಗೆ ಇರುವ ಅಭಿಪ್ರಾಯ ಗೌರವನ ಅಥವಾ ಬೇರೆಯೇ ಇದೆಯಾ ಎಂದು ಕೇಳುತ್ತಾನೆ. ಈ ಪ್ರಶ್ನೆಗೆ ಮಾಧವ ಬಹಳ ಶಾಕ್ ಆಗುತ್ತಾನೆ.

More from Filmibeat

English summary
Kannada serial sri rastu shubha mastu written updated on 18th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X