Srirasthu Shubhamasthu: ಮಾಧವನ ಮುಖದಲ್ಲಿ ನೋವು ಕಂಡು ಖುಷಿಪಟ್ಟ ಶಾರ್ವರಿ!
ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಮುದ ನೀಡುತ್ತಿದೆ. ಇದೀಗ ಮಾಧವ ತನ್ನ ಮಗನ ನಿಶ್ಚಿತಾರ್ಥ ಕಂಡು ಬಹಳ ಬೇಸರಗೊಂಡಿದ್ದಾನೆ. ತನ್ನ ಬಳಿ ಒಂದು ಮಾತೂ ಹೇಳದೆ ನಿರ್ಧಾರ ತೆಗೆದುಕೊಂಡರು ಅಲ್ವಾ, ತಾನು ಅಷ್ಟು ಬೇಡ ಆಗಿಬಿಟ್ಟೆ ಅಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಪೂರ್ಣಿಮಾಳನ್ನು ಅಭಿ ತರಾತುರಿಯಲ್ಲಿ ಕರೆದುಕೊಂಡು ಹೋಗುತ್ತಾನೆ.
ಇದನ್ನೆಲ್ಲ ನೋಡುತ್ತ ಮಾಧವ ದೂರದಲ್ಲಿ ಇರುತ್ತಾನೆ. ಪೂರ್ಣಿಮಾ ಮಾಧವನತ್ತ ನೋಡಿ ಎಷ್ಟು ನೋವು ಕೊಟ್ಟೆ ಮಾವ ನಿಮ್ಮಂತಹ ಒಳ್ಳೆಯ ಮನುಷ್ಯನಿಗೆ ಈ ನೋವು ಶಾಶ್ವತ ಅಲ್ಲ ಎಂದು ಹೇಳುತ್ತಾಳೆ. ಪಾಪಾಮ್ಮ ಮಾಧವ ಅವರನ್ನು ನೋಡಿ ಅಳುತ್ತಾಳೆ. ನೋವು ತಡೆದುಕೊಳ್ಳುವ ಶಕ್ತಿ ಮಾಧವ ಅವರಿಗೆ ಕೊಡಲಿ ಎಂದು ಬೇಡಿಕೊಳ್ಳುತ್ತಾ ಇರುತ್ತಾಳೆ. ಇದನ್ನು ನೋಡಿದ ಶಾರ್ವರಿ ನಗುತ್ತಾಳೆ. ಮಾಧವನ ಜೀವನದಲ್ಲಿ ಕೋಲಾಹಲ ಆಗಲು ಕಾರಣ ಶಾರ್ವರಿ.

ಆದರೆ ಇದಾವುದೂ ಮಾಧವನಿಗೆ ತಿಳಿದೇ ಇಲ್ಲ. ಮಾಧವ ಮಾತ್ರ ತನ್ನ ಮಗ ಅಭಿಜಿತ್ ತೆಗೆದುಕೊಂಡ ನಿರ್ಧಾರ ಸರಿ ಇಲ್ಲ ಎಂಬುವುದು ಒಂದು ತಿಳಿದಿತ್ತು. ಇನ್ನು ಅಭಿ ಮಾತ್ರ ತಂದೆಯನ್ನು ನೋಡಿ ಮುಖ ತಿರುವಿಕೊಂಡರೆ, ಶಾರ್ವರಿ ಮಾಧವನನ್ನು ಸ್ಟೇಜ್ ಗೆ ಕರೆದುಕೊಂಡು ಬರುತ್ತಾಳೆ. ಮನಸ್ಸಿಲ್ಲದ ಮನಸ್ಸಿನಿಂದ ಮಾಧವ ಸ್ಟೇಜ್ ಬಳಿ ಬರುತ್ತಾನೆ. ಬಳಿಕ ಮಾಧವ ಏನು ಮಾತನಾಡದೆ ಸುಮ್ಮನಾಗುತ್ತಾನೆ.
ಇನ್ನು ಮಾಧವನಿಗೆ ಇನ್ನೊಂದು ಶಾಕ್ ಕಾದಿರುತ್ತದೆ. ಮಾಧವ ಸ್ಟೇಜ್ ನಲ್ಲಿ ಜನಾರ್ಧನ್ ನೋಡಿ ಶಾಕ್ ಆಗುತ್ತಾನೆ. ಈತ ಯಾಕೆ ಬಂದಿದ್ದಾನೆ ಎಂದೆಲ್ಲ ಯೋಚನೆ ಮಾಡುತ್ತಾ ಇರುವಾಗ ಪುರೋಹಿತರು ಮಂತ್ರ ಪಠಣ ಮಾಡುತ್ತಾ ಇರುತ್ತಾರೆ. ಇದನ್ನು ನೋಡಿದ ಮಾಧವ ಕೊಂಚ ನಿರಾಳ ಆಗುವ ಮುನ್ನವೇ ಜನಾರ್ಧನ್ ಕಡೆ ನೋಡಿ ತಾಂಬೂಲ ಬದಲಾಯಿಸಿ ಎಂದು ಹೇಳುತ್ತಾರೆ. ಇದನ್ನು ನೋಡಿದ ಮಾಧವಗೆ ತಿಳಿಯುತ್ತದೆ ನನ್ನ ಮಗ ಬೇರೆ ಯಾರನ್ನೂ ಮದುವೆ ಆಗುತ್ತಾ ಇರುವುದಲ್ಲ, ತನ್ನ ಶತ್ರು ಮಗಳನ್ನೇ ಮದುವೆ ಆಗುತ್ತಾ ಇದ್ದಾನೆ ಎಂದು ಬಹಳ ಬೇಸರ ಪಟ್ಟುಕೊಳ್ತಾನೆ.
ಇದನ್ನೆಲ್ಲ ನೋಡಿದ ಶಾರ್ವರಿಗೆ ಬಹಳ ಖುಷಿ ಆಗುತ್ತದೆ. ಇನ್ನು ವನಜ ಫೋನ್ ನಲ್ಲಿ ಮಾತನಾಡುತ್ತಾ ಇರುತ್ತಾಳೆ. ಈ ವೇಳೆ ಅಲ್ಲಿಯೇ ಇದ್ದ ತುಳಸಿ ವನಜಳನ್ನು ಕರೆಯುತ್ತಾಳೆ. ವನಜ ಅವರೇ ನೀವು ನನ್ನ ಬಳಿ ಸ್ವೀಟ್ ಮಾಡಿಕೊಂಡು ಬರಲು ಹೇಳಿದ್ದಿರಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ವನಜ ಹೌದು ಎಂದೆಲ್ಲ ತುಳಸಿ ಬಳಿ ಮಾತನಾಡಿಸುತ್ತಾಳೆ. ಇದನ್ನು ನೋಡಿದ ತುಳಸಿಗೆ ಕೂಡ ಬಹಳ ಖುಷಿ ಆಗುತ್ತದೆ.

ಇನ್ನು ತುಳಸಿ ಕಾರ್ಯಕ್ರಮಕ್ಕೆ ಬಂದಿದ್ದು ಎಂದು ತಿಳಿದರೆ ಇನ್ನೂ ಖುಷಿ ಪಡುತ್ತಾರೆ ಎಂದು ಮನದಲ್ಲೇ ವನಜ ಹೇಳಿಕೊಳ್ತಾಳೆ. ಬಳಿಕ ತುಳಸಿಯನ್ನು ಅಲ್ಲೇ ಕುಳ್ಳಿರಿಸಿ ಸರ್ಪ್ರೈಸ್ ನೀಡುತ್ತೇನೆ ಇಲ್ಲಿಯೇ ಇರಿ ಎಂದು ಹೇಳಿ ಹೋಗುತ್ತಾಳೆ.ಇನ್ನು ದತ್ತ ತನಗೆ ಹುಷಾರಿಲ್ಲ ಎಂದು ಹೇಳಿ ಮಲಗುತ್ತಾನೆ. ಈ ವೇಳೆ ಸಿರಿ ತಂದೆ ಏನು ದತ್ತ ಅವರು ಮಲಗಿ ಬಿಟ್ಟರಲ್ಲ ಯಾಕೆ ಏನಾಯಿತು ಎಂದೆಲ್ಲ ಹೇಳುತ್ತಾರೆ. ಆಗ ಅಲ್ಲಿಯೇ ಇದ್ದ ಶೇಷನಿಗೆ ದತ್ತನ ನಾಟಕ ಎಲ್ಲಾ ತಿಳಿದಿತ್ತು.
ಸಿರಿ ತಂದೆ ದತ್ತ ಅವರಿಗೆ ಸುಸ್ತು ಆಯಿತು ಎಂದು ಅನ್ನಿಸುತ್ತದೆ, ಅದಕ್ಕೆ ಅವರು ಮಲಗಿರಬೇಕು ವಯಸ್ಸು ಆಯಿತಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ದತ್ತ ಮಾತ್ರ ಯಾರಿಗೆ ವಯಸ್ಸಾಗಿದ್ದೂ ಎಂದೆಲ್ಲ ಹೇಳಿಕೊಂಡು ರೂಮ್ ನಿಂದಾ ಹೊರಗೆ ಬರುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











