Srirastu Shubhamastu: ಅಮ್ಮನ ಮೇಲೆ ಮುನಿಸಿಕೊಂಡ ಸಮರ್ಥ್.. ತಾತನ ಬಳಿ ದುಃಖ ತೋಡಿಕೊಂಡ ಮೊಮ್ಮಗ
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಕಿರುತೆರೆ ವೀಕ್ಷಕರನ್ನು ಸೆಳೆದಿಟ್ಟುಕೊಂಡಿದೆ. ಇದೀಗ ತುಳಸಿ ಸಮರ್ಥ್‌ಗೆ ಬೈದು ಬುದ್ದಿ ಹೇಳಿದ್ದಾರೆ. ಸಂಧ್ಯಾ ಮಾಡಿದ ಕೆಲಸಕ್ಕೆ ಇದೀಗ ಅಮ್ಮ ಮಗ ದೂರ ಆಗುವ ಸಂದರ್ಭ ಬಂದಿದೆ. ದತ್ತನ ಮನೆಗೆ ಪೊಲೀಸರು ಬರುವ ಸನ್ನಿವೇಶವಿದೆ. ತನ್ನ ಕಂಪನಿಗೆ ಒಂದು ಲಕ್ಷ ರೂಪಾಯಿಯನ್ನು ಸಮರ್ಥ್ ಮೋಸ ಮಾಡಿದ್ದಾರೆಂದು ಅಭಿ ದೂರು ಕೊಟ್ಟ ಕಾರಣ ಸೀನ್‌ಗೆ ಪೊಲೀಸರ ಎಂಟ್ರಿ ಆಗಿದೆ.
ಸಮರ್ಥ್ ಮೇಲೆ ದೂರು ಇರುವ ಕಾರಣ ಅವರನ್ನು ಅರೆಸ್ಟ್ ಮಾಡಲು ನೋಡುತ್ತಾರೆ. ಆದರೆ, ದತ್ತ ಮಾತ್ರ ಇದನ್ನು ವಿರೋಧಿಸುತ್ತಾರೆ. ಸಮರ್ಥ್ ಬಗ್ಗೆ ಕೇವಲವಾಗಿ ಮಾತನಾಡಿದ ಪೊಲೀಸರು ಗಪ್ ಚುಪ್ ಎನ್ನುವಂತೆ ಮಾತನಾಡಿ ಆ ಒಂದು ಲಕ್ಷ ರೂಪಾಯಿಯನ್ನು ಕೊಟ್ಟು ಬಿಡುತ್ತೇವೆ ಎಂದು ಹೇಳುತ್ತಾರೆ.

ಇತ್ತ ಸಮರ್ಥ್ ಮಾತ್ರ ಬಹಳ ಬೇಸರ ಮಾಡಿಕೊಂಡಿರುತ್ತಾರೆ. ಈ ಸಂಧ್ಯಾ ಬಳಿ ದುಡ್ಡು ತೆಗೆದುಕೊಂಡ ಕಾರಣದಿಂದಾಗಿ ನಮಗೆ ಈ ದುಸ್ಥಿತಿ ಬಂತು ಎಂದು ಬೇಸರ ಮಾಡಿಕೊಂಡು ಇರುತ್ತಾರೆ. ಈ ವೇಳೆ ಸಂಧ್ಯಾ, ತುಳಸಿಗೆ ಫೋನ್ ಮಾಡುತ್ತಾಳೆ. ಆಗ ಪೊಲೀಸರು ಹಾಗೂ ಸಮರ್ಥ್ ನಡುವೆ ನಡೆಯುತ್ತಿದ್ದ ಮಾತುಕತೆ ಕೇಳಿ ತುಳಸಿಗೆ ಶಾಕ್ ಆಗುತ್ತಾರೆ.
ಅಭಿ ಆಫೀಸ್‌ಗೆ ಬಂದ ತುಳಸಿ
ತುಳಸಿ ಒಂದು ಲಕ್ಷ ಹಣವನ್ನು ತೆಗೆದುಕೊಂಡು ಆಫೀಸಿಗೆ ಹೋಗಿ ಅಭಿ ಬಳಿ ತುಂಬಾ ರಿಕ್ವೆಸ್ಟ್ ಮಾಡುತ್ತಾರೆ. ಆದರೆ, ಅಭಿ ಅದ್ಯಾವುದಕ್ಕೂ ಕ್ಯಾರೆ ಎನ್ನದೆ ಮಾತನಾಡುತ್ತಾನೆ. "ನಿಮ್ಮ ಮಗ ಸಮರ್ಥ್ ಇನ್ನು ಮುಂದೆ ಆಫೀಸಿಗೆ ಬರುವುದಿಲ್ಲ. ಆ ಒಂದು ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿ ಇದೀಗ ಪೇಚಿಗೆ ಸಿಲುಕಿದ್ದಾನೆ." ಎಂದೆಲ್ಲಾ ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ಮಾತ್ರ ನನ್ನ ಮಗನಿಗೆ ಏನು ಮಾಡಬೇಡ ಎಂದೆಲ್ಲಾ ಬೇಡಿಕೊಳ್ಳುತ್ತಾಳೆ.
ಮಗನನ್ನು ನೋಡಿ ಕಣ್ಣೀರಿಟ್ಟ ತುಳಸಿ
ಆಮೇಲೆ ಅಲ್ಲಿಗೆ ಸಮರ್ಥ್ ಬರುತ್ತಾನೆ. ಅಭಿ, ಸಮರ್ಥ್ ಅಪ್ಪ ಅಮ್ಮನ ಮೇಲೆ ಬಹಳ ತುಚ್ಚವಾಗಿ ಮಾತನಾಡುತ್ತಾನೆ. ಇದನ್ನು ಸಹಿಸಿಕೊಳ್ಳದ ಸಮರ್ಥ್, ಅಭಿಯ ಕಾಲರ್ ಪಟ್ಟಿ ಹಿಡಿಯುತ್ತಾನೆ. ಆಗ ಕೋಪಗೊಂಡ ತುಳಸಿ ಸಮರ್ಥಗೆ ಬುದ್ಧಿ ಹೇಳುತ್ತಾಳೆ. ಆದರೆ ಇದರಿಂದ ಸಮರ್ಥ್‌ಗೆ ತುಂಬಾನೇ ನೋವಾಗುತ್ತೆ.

ನನ್ನ ಅಮ್ಮ ಇದೀಗ ನನ್ನವಳಲ್ಲ
"ನನ್ನ ಅಮ್ಮ ನನ್ನ ಕಡೆಯಿಂದ ಮದುವೆಯಾಗಿ ಬೇರೆ ಅವರ ಮಕ್ಕಳಿಗೆ ತಾಯಿಯಾಗಿದ್ದಾಳೆ" ಎಂದು ಬೇಸರ ಮಾಡಿಕೊಂಡಿರುತ್ತಾನೆ. ಆಗ ಅಲ್ಲಿಗೆ ಬಂದ ದತ್ತ ಸಮರ್ಥ್ ಬಳಿ "ಏನಾಯ್ತು.. ಒಂದು ಲಕ್ಷ ಆರು ರೂಪಾಯಿ ಹಣವನ್ನು ಕೊಟ್ಟೆಯಾ ಎಂದು ಕೇಳಿದಾಗ, ಸಂಧ್ಯಾ ಆ ಕಡೆಯಿಂದ "ತಾತ ಅಮ್ಮ ಎಲ್ಲಾ ಹಣವನ್ನು ಪಾವತಿ ಮಾಡಿರುತ್ತಾಳೆ. ಮಕ್ಕಳು ಕಷ್ಟದಲ್ಲಿದ್ದಾರೆ ಎಂದು ತಿಳಿದರೆ ಅಮ್ಮ ಯಾವತ್ತೂ ಸುಮ್ಮನೆ ಇರುವುದಿಲ್ಲ" ಎಂದು ಹೇಳುವ ದೃಶ್ಯ ಹೆಂಗಳೆಯ ಮನಸ್ಸು ಗೆದ್ದಿದೆ.
ಸಮರ್ಥ್ ದುಃಖಕ್ಕೆ ಮೌನ ತಳೆದ ದತ್ತ
ಇದನ್ನು ಕೇಳಿದ ಸಮರ್ಥ್ "ಆಯಮ್ಮನ ಬಗ್ಗೆ ಮಾತನಾಡಬೇಡ" ಎಂದು ಹೇಳುತ್ತಾನೆ. ಇದನ್ನು ಕೇಳಿದ ದತ್ತಗೆ ಬಹಳ ಬೇಸರ ಆಗುತ್ತದೆ. ಏನಾಯಿತು ಎಂದು ಕೇಳಿದಾಗ ಸಮರ್ಥ ಜೋರಾಗಿ ಅಳುತ್ತಾನೆ. "ಅಮ್ಮ ಇದೀಗ ಬದಲಾಗಿದ್ದಾಳೆ. ಆಕೆ ಇದೀಗ ಶ್ರೀಮಂತರ ಮಕ್ಕಳಿಗೆ ಅಮ್ಮ ಆಗಿದ್ದಾಳೆ. ನಾವು ಬಡವರು. ನಾವು ಅವರಿಗೆ ಕಾಣಿಸುತ್ತೇವಾ? ಎಂದು ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ದತ್ತ ಸಮರ್ಥ್‌ಗೆ ಸಮಾಧಾನ ಮಾಡುತ್ತಾರೆ.


Click it and Unblock the Notifications











