ತ್ರಿನಯನಿ: ಅಮ್ಮನ ಆತ್ಮದಿಂದ ಕೈತುತ್ತು ತಿಂದ ವಿಶಾಲ್!
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರೇಕ್ಷಕರ ಅಚ್ಚು-ಮೆಚ್ಚಿನ ಧಾರಾವಾಹಿಗಳಲ್ಲಿ ಒಂದು ತ್ರಿನಯನಿ ಧಾರವಾಹಿ. ಧಾರಾವಾಹಿಯಲ್ಲಿ ನಯನಿಗೆ ವಿಶಾಲ್ ತಾಯಿ ಗಾಯತ್ರಿ ದೇವಿ, 'ವಿಶಾಲ್ ಗೆ ನೀನೇ ಊಟ ಮಾಡಿಸು ನಯನಿ' ಎನ್ನುತ್ತಾರೆ.
''ನಾನು ತಿನ್ನಿಸಬೇಕಂತೆ. ನಾನು ತಿನ್ನಿಸಬೇಕಾದರೆ ನೀವು ಕಣ್ಣುಮುಚ್ಚಿಕೊಳ್ಳಿ'' ಎಂದು ಪತಿಗೆ ಹೇಳುತ್ತಾಳೆ ನಯನಿ. ಅದಕ್ಕೆ ನಯನಿ ಗಂಡ ಕೇಳುತ್ತಾರೆ 'ಇದು ಯಾವ ಆಟ' ಎಂದು ಅದಕ್ಕೆ ಗಿಣಿರಾಮ ಉತ್ತರಿಸಿ, 'ಯಜಮಾನರೇ ಇದು ಕಣ್ಣ ಮುಚ್ಚೆ ಆಟ ಅದನ್ನು ಊಟದ ಜೊತೆ ಆಡುವುದು, ನೀವು ಕಣ್ಣು ಮುಚ್ಚಿಕೊಂಡು ಆ ಅಂತ ಬಾಯಿ ತೆಗಿರಿ ಸಾಕು' ಎಂದಾಗ ನಯನಿ ಗಂಡ ಸರಿ ಎಂದು ಆಟಕ್ಕೆ ಒಪ್ಪುತ್ತಾನೆ.
ಇನ್ನೂ ಗಾಯತ್ರಿದೇವಿ ಯಾನ್ನೂ ಸಾಯಿಸಿಬಿಟ್ಟಿದ್ದಾಳೆ ತ್ರಿಲೋಚನ. ಇದೀಗ ಗಾಯತ್ರಿದೇವಿಯ ಆತ್ಮ ನಯನಿಗೆ ಮಾತ್ರ ಕಾಣಿಸುತ್ತಿದೆ. ಗಾಯತ್ರಿದೇವಿಗೆ ತನ್ನ ಮಗ ಅಂದರೆ ಪಂಚ ಪ್ರಾಣ ಇದೀಗ ಮಗನಿಗೆ ಗಾಯತ್ರಿ ದೇವಿಯೇ ಊಟ ಮಾಡಿಸುತ್ತಾರೆ. ಆದರೆ ಈ ವಿಚಾರ ಮಗನಿಗೆ ತಿಳಿದಿಲ್ಲ.

ಕಣ್ಣು ಮುಚ್ಚಿಕೊಂಡು ಅಮ್ಮನ ಕೈತುತ್ತು ತಿಂದ ವಿಶಾಲ್
ಕಣ್ಣು ಮುಚ್ಚಿಕೊಂಡು ಊಟ ಮಾಡುತ್ತಿದ್ದಾನೆ. ಆದರೆ ಗಾಯತ್ರಿ ದೇವಿಗೆ ಮಾತ್ರ ದುಃಖ ಉಮ್ಮಳಿಸಿ ಬರುತ್ತದೆ. ಆಗ ನಯನಿ ಗಂಡ ವಿಶಾಲ್ ಹೇಳುತ್ತಾರೆ ಅದ್ಭುತವಾಗಿದೆ ಅಡಿಗೆ ಮಾಡಿದ್ದೀಯ ಎನ್ನುತ್ತಾನೆ. ಅದಕ್ಕೆ ಗಿಣಿರಾಮ, 'ಯಜಮಾನರೆ ನೀವು ಮಾಡಿದ ಅಡಿಗೆನಾ ನಾವು ಹೋಗಳಬೇಕು ಯಜಮಾನರೇ ಆದರೆ ಇದೀಗ ನೀವೇ ಹೋಗಳುತ್ತಿದ್ದಿರಾ' ಎಂದು.

ಅಮ್ಮ ಮಾಡಿರುವ ಅಡುಗೆ ಎಂದ ವಿಶಾಲ್
'ಈ ಆಡಿಗೆನಾ ನಾನು ಮಾಡಲಿಲ್ಲ ನನ್ನ ಅಮ್ಮನೇ ಮಾಡಿರೋದು' ಎಂದು ವಿಶಾಲ್ ಹೇಳಿದಾಗ ಗಾಯತ್ರಿಯಮ್ಮಗೆ ಶಾಕ್ ಆಗುತ್ತದೆ. 'ನಾನು ಚಿಕ್ಕ ವಯಸ್ಸಿನಲ್ಲಿ ಅಮ್ಮನ ಕೈ ತುತ್ತು ತಿನ್ನುತ್ತಿದ್ದೆ ಅದರಿಂದ ನನಗೆ ಅದೇ ಅನುಭವ ಈಗ ಆಗುತ್ತಿದೆ' ಎಂದು ವಿಶಾಲ್ ಹೇಳುತ್ತಾನೆ. ಇದನ್ನು ಕೇಳಿ ಗಾಯತ್ರಿ ದೇವಿಗೆ ತುಂಬಾ ಬೇಸರವಾಗುತ್ತದೆ. ಕೆಲವು ವರುಷಗಳ ಹಿಂದೆ ಅಮ್ಮನ ಕೈ ರುಚಿ ತಿಂದಿರೋ ನನಗೆ ಆ ರುಚಿ ಇನ್ನೂ ಹೋಗಿಲ್ಲ. ಇದು ಅಮ್ಮ ಮಾಡಿರೋ ಆಡಿಗೆಯಿಂದ ಬಂದಿದೆಯೋ ಅಥವಾ ನಯನಿ ಕೈ ತುತ್ತಿನಿಂದ ಬಂದಿದೆಯೋ ಒಂದು ಗೊತ್ತಾಗುತ್ತಿಲ್ಲ' ಎನ್ನುತ್ತಾನೆ ವಿಶಾಲ್.

ಊಟ ಇಷ್ಟ ಪಟ್ಟಿರುವ ವಿಶಾಲ್
'ಆದರೆ ಟೇಸ್ಟ್ ಸೂಪರ್ ಆಗಿದೆ' ಎಂದಾಗ ನಯನಿ, 'ನೀವು ಕಣ್ಣು ಮುಚ್ಚಿಕೊಳ್ಳಿ ಯಜಮಾನರೇ' ಎನ್ನುತ್ತಾಳೆ. ನಯನಿ, ಗಾಯತ್ರಿ ದೇವಿ ಅವರ ಬಳಿ ಹೇಳುತ್ತಾಳೆ. ಇವತ್ತು ನಿಮ್ಮ ಮಗನಿಗೆ ಹೊಟ್ಟೆ ತುಂಬಾ ತಿನ್ನಿಸಿ ಎಂದು ಹೇಳಿದಾಗ ವಿಶಾಲ್ ಹೇಳುತ್ತಾನೆ ಆಗಲಿಂದ ಆ ಎನ್ನುತ್ತಿದ್ದೇನೆ ಬೇಗ ತಿನ್ನಿಸಿ ಎಂದಾಗ ಗಿಣಿರಾಮ ಹೇಳುತ್ತಾನೆ ಹಾ... ತಿನ್ನಿಸುತ್ತೆನೆ ತಿನ್ನಿಸುತ್ತೇನೆ ಆ ತಿನ್ನಿ ಎಂದು ಹೇಳುತ್ತದೆ.

ಅಮ್ಮನೇ ಕೈತುತ್ತು ನೀಡಿದ್ದೆಂದು ಗೊತ್ತೆ ಆಗಲಿಲ್ಲ
ಬಳಿಕ ವಿಶಾಲ್ ಬಾಯಿ ಆ ಮಾಡುತ್ತಾನೆ. ಬಳಿಕ ಗಾಯತ್ರಿ ದೇವಿ ಊಟ ಮಾಡಿಸುತ್ತಾರೆ. ಊಟ ಮುಗಿದ ಬಳಿಕ ಹೇಳುತ್ತಾನೆ ಆಹಾ ಊಟ ಏಷ್ಟು ಚೆನ್ನಾಗಿತ್ತು ಗೊತ್ತಾ ನನ್ನ ಈ ಜನ್ಮದಲ್ಲಿ ಇಷ್ಟು ಊಟ ತಿಂದಿರುವುದು ಇದು ಮೊದಲು ಕೈ ತೊಳೆದುಕೊಂಡು ಬರುತ್ತೇನೆ ಎಂದು ಹೋಗುತ್ತಾನೆ. ಆದರೆ ಅವನಿಗೆ ಗೊತ್ತಾಗಲೇ ಇಲ್ಲ ಅಮ್ಮ ಕೈ ತುತ್ತು ನೀಡಿದ್ದು ಎಂದು ಮಗನ ಮಾತನ್ನು ಕೇಳಿದ ಗಾಯತ್ರಿದೇವಿ ಖುಷಿ ಪಡುತ್ತಾರೆ.


Click it and Unblock the Notifications











