ಸೀತಾ ರಾಮ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಇಷ್ಟ ಆಯ್ತಾ ? ಸಿಕ್ಕ ಟಿಆರ್​ಪಿ ಎಷ್ಟು? ಜನ ಮೆಚ್ಚಿದ ಧಾರಾವಾಹಿ ಯಾವುದು ?

ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರತಿ ವಾರ ಇಲ್ಲಿಯೂ ಕೂಡ ಹಾವು ಏಣಿಯ ಆಟ ನಡೆಯುತ್ತಲೇ ಇರುತ್ತೆ. ಈ ವಾರ ಮೇಲೆ ಇರುವ ಧಾರಾವಾಹಿ ಮುಂದಿನ ವಾರ ಪ್ರೇಕ್ಷಕರ ಅವಕೃಪೆಗೆ ಪಾತ್ರವಾದರೆ, ನಿರಾಸೆ ಮಾಡಿದ ಧಾರಾವಾಹಿಯಲ್ಲಿ ಏಕಾಏಕಿ ಬದಲಾವಣೆಯಾಗುತ್ತೆ.ಪ್ರತಿ ವಾರ ಹೀಗೆ ಇರುತ್ತೆ ಎಂದು ಹೇಳಲು ಸಾಧ್ಯ ಇಲ್ಲ.

ಈ ಧಾರಾವಾಹಿಯೇ ಮೊದಲ ಸ್ಥಾನ ಬರಬಹುದು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಹಿಂದೆಯೆಲ್ಲ ಪ್ರೇಕ್ಷಕರಿಂದ ಕಡೆಗಣಿಸಲಾದ ಧಾರಾವಾಹಿ ಕೆಲವೊಮ್ಮೆ ಅಚ್ಚರಿ ಎಂಬಂತೆ ಅದೇ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತೆ. ಮೊದಲನೇ ಸ್ಥಾನವನ್ನು ಕೂಡ ಅಲಂಕರಿಸುತ್ತೆ. ಹಾಗಿದ್ದರೆ ಈ ವಾರ ಯಾವ ಧಾರಾವಾಹಿ ಯಾವ ಸ್ಥಾನ ಪಡೆದಿದೆ ಎಂಬ ಪ್ರಶ್ನೆಗೆ ಉತ್ತರವನ್ನು ತಿಳಿಯಲು ಮುಂದೆ ಓದಿ.

Kannada Serial TRP Week 21 Annayya Tops Chart Find Out Seetha Rama s Rating

ಅಣ್ಣಯ್ಯ ನಂಬರ್ 1

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕಳೆದ ವಾರ ಕೂಡ ಮೊದಲ ಸ್ಥಾನದಲ್ಲಿಯೇ ಇದ್ದ ಅಣ್ಣಯ್ಯ ಈ ವಾರ ಕೂಡ ಮೊದಲ ಸ್ಥಾನದಲ್ಲಿ ಇದೆ.

ಇನ್ನು, ಅಣ್ಣಯ್ಯಗೆ ಅಮೃತಧಾರೆ ಕಳೆದ ವಾರ ತೀವೃವಾದ ಸ್ಪರ್ಧೆಯನ್ನೊಡ್ಡಿತ್ತು. ಕೇವಲ ಒಂದು ಅಂಕದಿಂದ ಅಮೃತಧಾರೆ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಆದರೆ ಈ ವಾರ ಅಮೃತಧಾರೆಯ ಟಿಆರ್‌ಪಿ ಕಡಿಮೆಯಾಗಿದೆ. 21ನೇ ವಾರದ ಟಿಆರ್‌ಪಿಯಲ್ಲಿ ಅಣ್ಣಯ್ಯ ಧಾರಾವಾಹಿಗೆ 7.9 ಟಿಆರ್‌ಪಿ ರೇಟಿಂಗ್ಸ್‌ ಸಿಕ್ಕಿದ್ದರೆ ಅಮೃತಧಾರೆ ಧಾರಾವಾಹಿಗೆ 7.2 ರೇಟಿಂಗ್ ಸಿಕ್ಕಿದೆ.

ಸೀತಾರಾಮಗೆ ಕೊನೆ ವಾರದಲ್ಲಿ ಸಿಕ್ಕ ಟಿಆರ್‌ಪಿ ಎಷ್ಟು ?

ಕಿರುತೆರೆಯ ಪ್ರೇಕ್ಷಕರ ಮೇಲೆ ಮೋಡಿ ಮಾಡುತ್ತಾನೇ ಬಂದ ಸೀತಾ ರಾಮ ಧಾರಾವಾಹಿ ಅಂತ್ಯವಾಗಿದೆ. ಕಳೆದ ವಾರ ಈ ಧಾರಾವಾಹಿಗೆ 2.1 ಟಿವಿಆರ್ ಹಾಗೂ ನಗರ ಭಾಗದಲ್ಲಿ 2.3 ಟಿವಿಆರ್ ಸಿಕ್ಕಿತ್ತು.

ಆದರೆ ಈ ವಾರ ಧಾರಾವಾಹಿ ಮುಕ್ತಾಯಗೊಳ್ಳುತ್ತಿದ್ದ ಹಿನ್ನೆಲೆ ಒಳ್ಳೆಯ ಟಿಆರ್‌ಪಿ ಸಿಗುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು ಕಥೆಯಲ್ಲಿ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ನೀಡಿದರೂ ಕೂಡ ಸೀತಾರಾಮದ ಟಿಆರ್‌ಪಿ ಮೇಲಕ್ಕೇರಲಿಲ್ಲ. ರಾಜ್ಯದಲ್ಲಿ 2.9 ಟಿಆರ್‌ಪಿ ಪಡೆದ ಸೀತಾರಾಮ ನಗರ ಪ್ರದೇಶಗಳಲ್ಲಿ 3.2 ರೇಟಿಂಗ್ ಗಳಿಸಿದೆ.

ನಾ ನಿನ್ನ ಬಿಡಲಾರೆ ಸದ್ದು ಹೇಗಿದೆ ?

ಕೆಲ ತಿಂಗಳ ಹಿಂದೆ ಪ್ರಸಾರ ಆರಂಭಿಸಿದ ನಾ ನಿನ್ನ ಬಿಡಲಾರೆ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. 20ನೇ ವಾರದಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದ ನಾ ನಿನ್ನ ಬಿಡಲಾರೆ 21ನೇ ವಾರದ ಟಿಆರ್‌ಪಿ ಗೇಮ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ನಾ ನಿನ್ನ ಬಿಡಲಾರೆ ಧಾರಾವಾಹಿಗೆ ಈ ವಾರ 7.5 ಟಿಆರ್‌ಪಿ ಸಿಕ್ಕಿದೆ.

ಈ ವರ್ಷದ ಜನವರಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಈ ಬಾರಿ 7.5 ರೇಟಿಂಗ್‌ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ.

ಇನ್ನು ಗೌತಮ್ ದಿವಾನ್ ಭೂಮಿಕಾ ಮತ್ತು ಶಕುಂತಲಾ ಅವರ ಕಥೆ ಅಮೃತಧಾರೆಗೆ 7.2 ಟಿಆರ್‌ಪಿ ಸಿಕ್ಕಿದೆ. ಲಕ್ಷ್ಮೀ ನಿವಾಸ ಧಾರಾವಾಹಿಗೆ 6.9 ಟಿಆರ್‌ಪಿ ಸಿಕ್ಕಿದೆ.

ಮತ್ತೊಂದು ಕಡೆ ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀಯ ಅಬ್ಬರ ಜೋರಾಗಿದೆ. 4.7 ರೇಟಿಂಗ್ ಪಡೆದು ಭಾಗ್ಯ ಲಕ್ಷ್ಮಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮುದ್ದು ಸೊಸೆ, ನಿನಗಾಗಿ ಮತ್ತು ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗಳು ಇವೆ. ಮುದ್ದು ಸೊಸೆಗೆ 4.3 ನಿನಗಾಗಿಗೆ 3.9 ಮತ್ತು ಭಾರ್ಗವಿ ಎಲ್‌ಎಲ್‌ಬಿ 3.7 ಟಿಆರ್‌ಪಿ ಸಿಕ್ಕಿದೆ.

More from Filmibeat

Read more about: trp zee kannada ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X