ವೈದೇಹಿ ಪರಿಣಯ: ನಿಜ ಹೇಳಲಾಗದೆ ಒದ್ದಾಡಿದ ವೈದೇಹಿ

'ವೈದೇಹಿ ಪರಿಣಯ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ವೈದೇಹಿ ತಂಗಿ ಸಿಯಾ ಸುಳ್ಳುಗಳ್ಳನ್ನು ಹೇಳುವುದರಲ್ಲಿ ನಿಪುಣೆ. ವೈದೇಹಿ ಸಿಯಾಳನ್ನು ದೇವಾಲಯಕ್ಕೆ ಬಾ ಎಂದು ಕರೆದರೂ ಬಾರದೆ ಇದ್ದುದರಿಂದ ವೈದೇಹಿ ಸಾಕಷ್ಟು ಕಷ್ಟ ಅನುಭವಿಸಬೇಕಾಗಿ ಬಂದಿದೆ.

ಇದರಿಂದ ಮನೆಯವರಿಗೆ ಸಾಕಷ್ಟು ಕಿರಿ ಕಿರಿ ಉಂಟಾಗಿ ಸಿಯಾಳನ್ನು ತರಾಟೆಗೆ ತೆಗೆದುಕೊಂಡರು. ಇನ್ನೂ ಸಿಯಾ ಮನೆಗೆ ಬಂದಿದ್ದನ್ನು ನೋಡಿದ ಶ್ರಿಯಾ ತಮ್ಮ, 'ಬಾರಪ್ಪ ಬಾ ಶ್ರೀ ಸೀತಾರಾಮ ಪ್ರಿಯ'. ಶಾರ್ಟ್ ಕಟ್ಟಲ್ಲಿ ಸಿಯಾ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಸಿಯಾ ಸುಮ್ಮನಾಗುತ್ತಾಳೆ.. ಅದನ್ನು ಕೇಳಿಸಿಕೊಂಡ ಅಜ್ಜಿ ಹೇಳುತ್ತಾರೆ ನನ್ನ ಗಂಡನ ತಾಯಿ ಹೆಸರು ಅದು ಅವರ ಹೆಸರನ್ನು ನೀನು ಯಾಕೆ ಕರೆಯುತ್ತಿದ್ದಿಯಾ ಎಂದು ಗದರುತ್ತಾರೆ.

ಬಳಿಕ ವೈದೇಹಿ ಅಮ್ಮ ಸಿಯಾಳನ್ನು 'ಯಾಕಿಷ್ಟು ತಡವಾಯಿತು' ಎಲ್ಲಿಗೆ ಹೋಗಿದ್ದೆ ಎಂದು ಕೇಳುತ್ತಾರೆ, ಅದಕ್ಕೆ ಸಿಯಾ ತಡವರಿಸುತ್ತಾ ನೀನು ಇರಮ್ಮ 'ಹೇಳಕ್ಕ ನಿನ್ನ ಅನಾಥೆ ಅಂದವರು ಯಾರು? ಎನ್ನುತ್ತಾಳೆ. ಆಗ ಆಕೆಯ ತಮ್ಮ, ''ಬೇರೆಯವರು ಒಂದು ಸಲ ಹೇಳಿದರೆ ಅಜ್ಜಿ ನೂರು ಸಲ ಹೇಳುತ್ತಾಳೆ' ಎನ್ನುತ್ತಾನೆ. ಅದಕ್ಕೆ ವೈದೇಹಿ ತಂದೆ, ''ಮಾರುತಿ ಸುಮ್ಮನಿರುತ್ತಿಯಾ' ಎನ್ನುತ್ತಾರೆ ಅದಕ್ಕೆ ಪ್ರತಿಕ್ರಿಯೆಯಾಗಿ 'ವೈದೇಹಿ ಅಕ್ಕನೂ ಅದನ್ನೇ ನನಗೆ ಹೇಳಿದಳು' ಎಂದಾಗ ತಂದೆ ಸುಮ್ಮನಾಗುತ್ತಾರೆ.

ಪ್ರೋಗ್ರಾಂಗೆ ಹೋಗಿದ್ದಳಾ ಸಿಯಾ?

ಪ್ರೋಗ್ರಾಂಗೆ ಹೋಗಿದ್ದಳಾ ಸಿಯಾ?

ತಂಗಿ ಸಿಯಾ ಹೇಳುತ್ತಾಳೆ, ''ಹೇಳು ಅಕ್ಕ ಯಾರೂ ಹೇಳಿದ್ದು ಎಂದು ಇವತ್ತು ಅವರಿಗೆ ಒಂದು ಗತಿ ಕಾಣಿಸುತ್ತೇನೆ'' ಎಂದು ಹೇಳುತ್ತಾಳೆ. ಆಗ ತಂದೆ ಕೇಳುತ್ತಾರೆ 'ಏನಮ್ಮ ನೀನು ಪ್ರೋಗ್ರಾಂ ಗೆ ಹೋಗಿದ್ಯಾ' ಎಂದು ಕೇಳುತ್ತಾರೆ. ಅದಕ್ಕೆ ಸಿಯಾ ಆ ... ಎಂದು ತಡವರಿಸುತ್ತಾ ಇಲ್ಲ ಅಪ್ಪ ಅಕ್ಕನ ಯಾರೋ ಆಳಿಸಿದರು ಎಂದು ಗೊತ್ತಾಯ್ತು. ಅದಕ್ಕೆ ಬೇಗ ಬಂದೆ ಎಂದಾಗ ತಂದೆ ಹೇಳುತ್ತಾರೆ. ಅಕ್ಕ ಅಳುವುದಕ್ಕೆ ಕಾರಣ ನೀನೇ ಎಂದಾಗ ಸಿಯಾಗೆ ಶಾಕ್ ಆಗುತ್ತದೆ.

ಸಿಯಾ ಸುಳ್ಳಿಗೆ ವೈದೇಹಿ ಶಾಕ್

ಸಿಯಾ ಸುಳ್ಳಿಗೆ ವೈದೇಹಿ ಶಾಕ್

ಅದಕ್ಕೆ ಅಜ್ಜಿ ಹೇಳುತ್ತಾರೆ ಎನು ಹೇಳುತ್ತಿದ್ದಿಯಾ ಅಂದಾಗ ಸಿಯಾ ತಾಯಿ ಹೇಳುತ್ತಾರೆ 'ಹೌದು ಅತ್ತೆ ಸಿಯಾ ಹೋಗುತ್ತಿದ್ದರೆ ವೈದೇಹಿ ಹೋಗುತ್ತಿರಲಿಲ್ಲ. ಇಷ್ಟೆಲ್ಲಾ ಬೈಸಿಕೊಳ್ಳುತ್ತಿರಲಿಲ್ಲ. ಅದಕ್ಕೆ ಸಿಯಾ ಸುಳ್ಳು ಹೇಳುತ್ತಾಳೆ. ನಾನು ಬರೋದು ಬೇಡ ಅಂತ ಅಕ್ಕಾನೆ ಹೇಳಿದ್ದು ಎಂದು ತಲೆತಗ್ಗಿಸುತ್ತಾಳೆ. ಸಿಯಾ ಸುಳ್ಳಿಗೆ ವೈದೇಹಿ ಶಾಕ್ ಆಗುತ್ತಾಳೆ.

ಸುಳ್ಳು ಹೇಳುವ ಸಿಯಾ

ಸುಳ್ಳು ಹೇಳುವ ಸಿಯಾ

ಬಳಿಕ ಹೇಳುತ್ತಾಳೆ ಭರತನಾಟ್ಯ ಕ್ಲಾಸಿನಲ್ಲಿ ರಿಹರ್ಸಲ್, ಪಿಜಿ ಕಾಲೇಜಿನಲ್ಲಿ ಪ್ರಾಕ್ಟಿಕಲ್ ಇದೆ ಎಂದಿದ್ದಕ್ಕೆ ಅದೇ ಮುಖ್ಯ ಸಿಯಾ ದೇವಸ್ಥಾನದಲ್ಲಿ ಪ್ರೋಗ್ರಾಂ ಇದ್ದೆ ಇರುತ್ತೆ ಅಂತ ಅಕ್ಕನೆ ನನಗೆ ಹೇಳಿದ್ದು ಎಂದು ಇನ್ನೊಂದು ಸುಳ್ಳು ಹೇಳುತ್ತಾಳೆ. ಅದಕ್ಕೆ ಅಜ್ಜಿ ಹೇಳುತ್ತಾರೆ ಇದು ವಿಷಯ ಇವಾಗ ಅರ್ಥ ಆಯ್ತಾ ನನ್ನ ಮೊಮ್ಮಗಳು ನಾಟ್ಯ ಮಾಡುತ್ತಿದ್ದರೆ ಅಲ್ಲಿರುವ ಅತಿಥಿಗಳು ಅವಳನ್ನು ಮೆಚ್ಚಿಕೊಂಡು ಬಿಡುತ್ತಾರೆ ಅಂತ ಹೊಟ್ಟೆ ಉರಿದುಕೊಂಡು ಅಲ್ಲಿ ಹೋಗಿ ಕುಣಿದಿದ್ದಾಳೆ. ಆದರೆ ದೇವರು ಸುಮ್ಮನಿರುತ್ತಾನ ಅವಮಾನ ಅಗೋ ಹಾಗೆ ಮಾಡಿದ್ದಾನೆ ಅಲ್ವಾ. ಎಂದಾಗ ತಂದೆ ವೈದೇಹಿ ಬಳಿ ಕೇಳುತ್ತಾರೆ ಸಿಯಾ ಹೇಳಿದ್ದು ನಿಜಾನಾ ವೈದೇಹಿ ಮಾತನಾಡು ಎಂದು ಹೇಳುತ್ತಾರೆ.

ಸುಳ್ಳು ಹೇಳಿದಾಗ ವೈದೇಹಿಗೆ ಬಿಕ್ಕಳಿಕೆ ಬರುತ್ತದೆ

ಸುಳ್ಳು ಹೇಳಿದಾಗ ವೈದೇಹಿಗೆ ಬಿಕ್ಕಳಿಕೆ ಬರುತ್ತದೆ

ಆಗ ವೈದೇಹಿಗೆ ಬಿಕ್ಕಳಿಕೆ ಬರುತ್ತದೆ. ಇದನ್ನು ನೋಡಿದ ತಾಯಿ ನೀರು ತರಲು ಹೋಗುತ್ತಾರೆ. ಆಗ ಮಾರುತಿ ಮನಸಲ್ಲಿ ಸುಳ್ಳು ಹೇಳಿದರೆ ಆಕ್ಕಗೆ ಬಿಕ್ಕಳಿಕೆ ಬರುತ್ತೆ ಅಂತ ನಿಮಗೆ ಯಾರಿಗೂ ಗೊತ್ತಿಲ್ಲ ಎಂದುಕೊಳ್ಳುತ್ತಾನೆ. ಇನ್ನೂ ಸಿಯಾ ಮನದಲ್ಲಿ ಅಕ್ಕ ನಿಜ ಹೇಳಿ ಬಿಟ್ಟರೆ ಎಂದು ಆತಂಕ ಪಡುತ್ತಾರೆ. ಆಗ ತಾಯಿ ನೀರು ತಂದುಕೊಡುತ್ತಾರೆ. ಮುಂದೇನು ಆಗುತ್ತೆ ಕಾದು ನೋಡಬೇಕಿದೆ.

More from Filmibeat

English summary
Kannada serial Vaidehi Parinaya written updated on 17th July. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X