Kannada Serial TRP Ratings: ಟಾಪ್ ಒನ್ ಸ್ಥಾನಕ್ಕೆ ಮತ್ತೆ ಬಂದ ಪುಟ್ಟಕ್ಕನ ಮಕ್ಕಳು
ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಾಪ್ ಒನ್ ಸ್ಥಾನದಲ್ಲಿ ಇದೆ. ದೊಡ್ಡ ಮಗಳು ಸಹನಾಳ ಮದುವೆ ಸಂಭ್ರಮ ಇಡೀ ಹಳ್ಳಿಯ ತುಂಬಾ ಮನೆ ಮಾಡಿದೆ. ಈ ಕಡೆ ಸ್ನೇಹಾ ಕಂಠಿ ಪ್ರೀತಿಯನ್ನು ಹೇಳಲಿ ಎಂದು ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದಾಳೆ. ಒಟ್ಟಾರೆ ಧಾರಾವಾಹಿ ಜನರಿಗೆ ಇಷ್ಟವಾಗಿದ್ದು, ಧಾರಾವಾಹಿಗೆ ಟಿಆರ್‌ಪಿಯಲ್ಲಿ 11.0 ರೇಟಿಂಗ್ ದೊರಕಿ ಪುಟ್ಟಕ್ಕನ ಮಕ್ಕಳು ಪ್ರಥಮ ಸ್ಥಾನ ಪಡೆದುಕೊಂಡಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಸೀರಿಯಲ್ ಎರಡನೇ ಸ್ಥಾನದಲ್ಲಿ ಇದೆ. ಈ ಕಡೆ ವೇದಾಂತ್‌ಗೆ ಏನು ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಮೂಲ್ಯ ಕುಟುಂಬಕ್ಕೆ ಸಂಕಷ್ಟವನ್ನು ತರಲಾಗಿದೆ. ಅಮೂಲ್ಯ ಅಪ್ಪ ಜೈಲು ಪಾಲಾಗುವುದನ್ನು ಮಾಡಲಾಗಿದ್ದು, ಕಥೆಗೆ ಹೊಸ ಟ್ವಿಸ್ಟ್ ಸಿಗಲಿದೆ 10.3 ಟಿಆರ್‌ಪಿಯನ್ನು ಪಡೆದಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಟಾಪ್ 3 ಸ್ಥಾನವನ್ನು ಹಾಗೇ ಉಳಿಸಿಕೊಂಡು ಮುಂದೆ ಸಾಗುತ್ತಿದೆ. ತುಳಸಿ ಮಾಧವ ನಡೆಸುವ ಅಡುಗೆ ಶೋನಲ್ಲಿ ಅಡುಗೆ ಮಾಡಿದ್ದಾರೆ. ಈ ವಿಷಯ ತಿಳಿದ ದತ್ತನಿಗೆ ತುಂಬಾ ಕೋಪ ಬಂದಿದೆ. ದತ್ತನ ಮನಸನ್ನು ಮಾಧವ ಬಂದು ಒಲಿಸಿ ಶೋ ಪ್ರಸಾರ ಮಾಡಿದ್ದಾರೆ. ಟಿಆರ್‌ಪಿಯಲ್ಲಿ 8.5 ರೇಟಿಂಗ್ ಪಡೆದುಕೊಂಡಿದೆ.

ಹಿಟ್ಲರ್ ಕಲ್ಯಾಣಕ್ಕೆ ಎಷ್ಟನೇ ಸ್ಥಾನ?
ಜೀ ಕನ್ನಡದಲ್ಲಿ ಪ್ರಸಾರವಾಗುವ ಹಿಟ್ಲರ್ ಕಲ್ಯಾಣ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಎ.ಜೆ.ಲೀಲಾ ಯಾವುದೇ ತಪ್ಪು ಮಾಡಿಲ್ಲ ಎಂದು ಗೊತ್ತಾಗಿದೆ. ಲೀಲಾ ಬಳಿ ಮಾತನಾಡಲು ತುಂಬಾ ಒದ್ದಾಟವನ್ನು ನಡೆಸಿದ್ದಾರೆ. ಈ ಕಡೆ ಲೀಲಾಳನ್ನು ಲಕ್ಷ್ಮೀ ಇಷ್ಟಪಟ್ಟು ಅತ್ತೆಯೆಂದು ಲೀಲಾಳನ್ನು ಒಪ್ಪಿಕೊಂಡಿದ್ದಾಳೆ. ಲೀಲಾಳ ಬಳಿ ತನ್ನ ಮನಸಿನ ಮಾತನ್ನು ಹೇಳಿಕೊಳ್ಳಲು ಚಡಪಡಿಸುತ್ತಿದ್ದಾನೆ. ಇದು 7.9ಟಿಆರ್‌ಪಿಯನ್ನು ಪಡೆದುಕೊಂಡಿದೆ.

ಐದನೇ ಸ್ಥಾನ ಪಡೆದ ಸತ್ಯ
ಟಾಮ್ ಬಾಯ್ ಸತ್ಯ ಟಾಪ್ 5ರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಸತ್ಯ ಮನೆಗೆ ಟೀಚರ್ ಆಗಿ ಟ್ಯೂಷನ್ ಮಾಡಲು ಬರುವ ಹುಡುಗ ಸತ್ಯಳ ಮನೆಯಲ್ಲಿರುವ ಹುಡುಗಿಯನ್ನು ಪ್ರೀತಿ ಮಾಡದೇ ಇದ್ದರೂ. ಆ ಹುಡುಗಿ ಪ್ರೀತಿಸು ಎಂದು ಹಿಂಸೆ ಮಾಡುತ್ತಿದ್ದಾಳೆ. ಇದು ಸತ್ಯಗೆ ಒಂದು ಪೀಕಲಾಟವನ್ನು ತಂದಿದೆ. ಇದು ಟಿಆರ್‌ಪಿಯಲ್ಲಿ 7.5ಸ್ಥಾನವನ್ನು ಪಡೆದುಕೊಂಡಿದೆ.

'ಭಾಗ್ಯಲಕ್ಷ್ಮಿ'ಗೆ ಎಷ್ಟನೇ ಸ್ಥಾನ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಧಾರಾವಾಹಿ 6ನೇ ಸ್ಥಾನವನ್ನು ಪಡೆದಿದೆ. ಲಕ್ಷ್ಮೀ ಮತ್ತು ವೈಷ್ಣವ್ ಮದುವೆ ಮಾಡಲು ಎರಡು ಮನೆಯವರೂ ತಯಾರಿಯನ್ನು ನಡೆಸುತ್ತಿದ್ದಾರೆ. ಈ ಕಡೆ ವೈಷ್ಣವ್ ಅತ್ತೆ ಕೀರ್ತಿ ಜೊತೆಗೆ ಮದುವೆ ಮಾಡಲು ಇಲ್ಲದ ಕಿತಾಪತಿಯನ್ನು ಮಾಡುತ್ತಿದ್ದಾಳೆ. ವೈಷ್ಣವ್ ಬರೆದ ಪತ್ರ ಲಕ್ಷ್ಮೀ ಕೈ ಸೇರಿದೆ ಇನ್ನೂ ವೈಷ್ಣವ್ ಬಳಿ ಬಂದು ಪ್ರೀತಿಯ ಬಗ್ಗೆ ಮಾತನಾಡಿದ್ದಾಳೆ. ಇದು ಟಿಆರ್‌ಪಿಯಲ್ಲಿ 6.5 ಸ್ಥಾನವನ್ನು ಪಡೆದುಕೊಂಡಿದೆ.

ಏಳನೇ ಸ್ಥಾನಕ್ಕೆ ಬಂದ ಜೊತೆ ಜೊತೆಯಲ್ಲಿ
ಎಂಟನೇ ಸ್ಥಾನದಲ್ಲಿದ್ದ ಜೊತೆ ಜೊತೆಯಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಟಿಆರ್‌ಪಿಯಲ್ಲಿ 5.5 ಸ್ಥಾನವನ್ನು ಪಡೆದಿದೆ.ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲ್ಲಿ ಸೀರಿಯಲ್ ತನ್ನದೇ ಅದ ಪ್ರೇಕ್ಷಕರ ಬಳಗವನ್ನು ಹೊಂದಿದೆ. ಜೊತೆ ಜೊತೆಯಲ್ಲಿ ಸೀರಿಯಲ್ ಟಾಪ್ 8ರ ಸ್ಥಾನವನ್ನು ಪಡೆದಿದೆ. ಇದು 5.4ಟಿಆರ್‌ಪಿಯನ್ನು ಪಡೆದುಕೊಂಡಿದೆ. ಟಾಪ್ 9ರಲ್ಲಿ ಗೀತಾ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಇದು 4.9ಸ್ಥಾನವನ್ನು ಪಡೆದುಕೊಂಡಿದೆ. ಟಾಪ್10 ರಲ್ಲಿ ರಾಮಾಚಾರಿ, ಕನ್ನಡತಿ, ಲಕ್ಷಣ, ಕೆಂಡಸಂಪಿಗೆ, ತ್ರಿಪುರ ಸುಂದರಿ ಪುನರ್ ವಿವಾಹ ಸ್ಥಾನವನ್ನು ಪಡೆದಿವೆ.


Click it and Unblock the Notifications











