ಟಿವಿ ಸೀರಿಯಲ್ ಗಳಲ್ಲಿ ಹಬ್ಬದ ವಾತಾವರಣ, ಸುಗ್ಗಿ ಹಬ್ಬದ ಸಂಭ್ರಮದಲ್ಲಿ ಮನರಂಜನೆಯ ಮಹಾಪೂರ..!

By ಪೂರ್ವ

ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬ ಎಲ್ಲೆಡೆ ಕಳೆಗಟ್ಟುತ್ತಿದೆ. ಹಬ್ಬದ ಸಂಭ್ರಮ ಎಲ್ಲೆಡೆ ಪಸರಿಸುತ್ತಿರುವ ಸಂದರ್ಭ ಜೀ ಕನ್ನಡ ವಾಹಿನಿಯಲ್ಲಿ ಭರ್ಜರಿ ಮನೋರಂಜನೆಯನ್ನು ನೀಡಲಾಗುತ್ತಿದೆ. ಹಬ್ಬ ಎಂದಾಕ್ಷಣ ಮೈ ಎಲ್ಲ ನವಿರೇಳುತ್ತದೆ. ಎಲ್ಲರಿಗೂ ಹಬ್ಬ ಎಂದರೆ ಬಹಳಷ್ಟು ಖುಷಿ. ಅಂದ ಹಾಗೆ ಟಿವಿ ಸೀರಿಯಲ್ ಗಳಲ್ಲಿ ಹಬ್ಬದ ವಾತಾವರಣವಿರುತ್ತದೆ. ಇದರಿಂದ ಟಿವಿ ನೋಡುಗರಿಗೆ ಭರ್ಜರಿ ಮನೋರಂಜನೆಯನ್ನು ನೀಡಲಾಗುತ್ತಿದೆ. ಈಗಾಗಲೇ ಶ್ರೀ ರಸ್ತು ಶುಭ ಮಸ್ತು ಧಾರಾವಾಹಿಯಲ್ಲಿ ಬಹಳಷ್ಟು ಟ್ವಿಸ್ಟ್ ಇದ್ದು ಧಾರವಾಹಿ ನೋಡುಗರಿಗೆ ಮತ್ತಷ್ಟು ಕೂತೂಹಲ ಹೆಚ್ಚು ಮಾಡಿದೆ.

ದತ್ತ ಹಾಗು ಆತನ ಗೆಳೆಯನಿಗೆ ನಿಧಿ ಆಕ್ಸಿಡೆಂಟ್ ಮಾಡಿದ್ದು ಎಲ್ಲರ ಮುಂದೆ ಬಯಲಾಗುವ ಸಂದರ್ಭ ಎದುರಾಗಿದೆ. ಹೌದು ದತ್ತ ಹಾಗೂ ಆತನ ಗೆಳೆಯನ ಮೇಲೆ ಕಾರು ಹರಿಸಿದ ನಿಧಿ ಎನು ಗೊತ್ತಿಲ್ಲದ ಹಾಗೆ ಮನೆ ಸೇರಿರುತ್ತಾಳೆ. ಮನೆಗೆ ಬಂದ ಸ್ವಲ್ಪ ಹೊತ್ತಿನ ಬಳಿಕ ಪೊಲೀಸರ ಆಗಮನ ಆಗುತ್ತದೆ. ಅಲ್ಲಿಯೇ ಇದ್ದ ಸಮರ್ಥ್ ತನ್ನ ಪುಟ್ಟ ತಂಗಿಯ ರಕ್ಷಣೆಗೆ ಮುಂದಾಗುತ್ತಾನೆ. ನಿಧಿ ತಪ್ಪು ಮಾಡಿದ್ದರೂ ಕೂಡ ಆಕೆ ತಪ್ಪು ಮಾಡಿಲ್ಲ. ನನ್ನದೇ ತಪ್ಪು ಎಂದು ಸಮರ್ಥ್ ತನ್ನ ಮೇಲೆಯೇ ತಪ್ಪು ಹೊರಿಸಿಕೊಂಡು ಎಲ್ಲರ ಮುಂದೆ ಕೈ ಕಟ್ಟಿ ನಿಲ್ಲುತ್ತಾನೆ. ಇದೀಗ ತುಳಸಿಗೆ ಮಗನನ್ನು ಉಳಿಸಿಕೊಳ್ಳುವ ಬಹುದೊಡ್ಡ ಅಗ್ನಿ ಪರೀಕ್ಷೆ ಎದುರಾಗಿದೆ.

kannada serials sankranti festival celebrated

ವಾರ ಪೂರ್ತಿ ವಿಶೇಷ ಸಂಚಿಕೆಗಳ ಮಹಾಪೂರ ನಡೆಯಲಿದೆ. ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಾಳಿ ಲವ್ ಸ್ಟೋರಿ ಬಯಲಾಗಿದೆ. ಕಾಳಿಗೆ ಸಹನಾ ಎಂದರೆ ಬಲು ಇಷ್ಟ. ಸಹನಾ ಯಾವತ್ತೂ ಕಾಳಿಯನ್ನು ಪ್ರೀತಿ ಮಾಡಿಯೇ ಇರಲಿಲ್ಲ. ಇದೀಗ ರಾಜಿ ಪಂಚಾಯತಿ ಕರೆಸಿದ್ದಾಳೆ. ಬಂಗಾರಮ್ಮ ಅವರು ಪಂಚಾಯತಿ ಪೀಠದಲ್ಲಿ ಕುಳಿತಿದ್ದಾರೆ. ಆದರೆ ವಿಚಾರವನ್ನು ಕೇಳಿ ಪುಟ್ಟಕ್ಕಾಗೆ ಹಾಗೂ ಸಹನಗೆ ಬಹಳಷ್ಟು ಶಾಕ್ ಆಗುತ್ತದೆ. ಸಹನಾ ಕಾಳಿಯನ್ನು ಪ್ರೀತಿ ಮಾಡಿರಲಿಲ್ಲ. ಆದರೆ ಕಾಳಿಗೆ ಸಣ್ಣ ವಯಸ್ಸಿನಿಂದಲೂ ಸಹನಾ ಎಂದರೆ ಬಹಳ ಪ್ರೀತಿ. ಸಹನಗಾಗಿ ಎನು ಮಾಡಲು ಕೂಡ ಆತ ಸಿದ್ದವಾಗಿ ನಿಂತಿದ್ದಾರೆ. ಆದರೆ ರಾಜಿಯಿಂದ ಎಲ್ಲ ಹಾಳಾಗಿದೆ.

ರಾಜಿಗೆ ಸಂಚಿಗೆ ಬಲಿಯಾದ ಕಾಳಿ ಸಹನಾ ಸಂಬಂಧ

ಸಹನಾ ಬಹಳ ಖಡಕ್ ಆಗಿ ಕಾಳಿಯನ್ನು ನಾನು ಪ್ರೀತಿ ಮಾಡಿಲ್ಲ ಎಂದು ಹೇಳಿ ಬಿಡುತ್ತಾಳೆ. ರಾಜಿಯಿಂದಾಗಿ ಕಾಳಿ ಹಾಗೂ ಸಹನಾ ಸಂಬಂಧ ಮುರಿದು ಬಿದ್ದಿದೆ. ಇನ್ನು ಭೂಮಿಕಾ ತವರು ಮನೆಯಲ್ಲಿ ಗೃಹ ಪ್ರವೇಶದ ಸಂಭ್ರಮ ಮನೆ ಮಾಡಿದ್ದು ನೋಡುಗರಿಗೆ ಬಹಳಷ್ಟು ಮನೋರಂಜನೆಯನ್ನು ನೀಡಲಿದೆ. ಹಾಗೆಯೇ ಮನಸ್ಸಿಗೆ ಮುದ ನೀಡುತ್ತಿದೆ. ಇತ್ತ ಶಿವು ಮನೆಯಲ್ಲಿ ಸಂಕ್ರಾಂತಿಯ ಸಂಬ್ರಮ ಮನೆ ಮಾಡಿದ್ದು ನೋಡುಗರಿಗೆ ಬಹಳಷ್ಟು ಮನೋರಂಜನೆಯ ಮಹಾಪೂರ ಸಿಗಲಿದೆ.ಹಾಗೆಯೇ ಪಾರುಗೆ ಮದುವೆ ಆದ ಬಳಿಕ ಮೊದಲನೇ ಬಾರಿ ಗಂಡನ ಜೊತೆ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಜೊತೆಯಾಗಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಗೆ ಅಜ್ಜಿಯನ್ನು ಸಾಯಿಸುವುದೇ ಬಹಳ ದೊಡ್ಡ ಗುರಿ ಆಗಿದೆ. ಆದರೆ ಪಾಪ ಜಾಹ್ನವಿಗೆ ಗಂಡನ ಇನ್ನೊಂದು ಮುಖ ಅರಿವಿಗೆ ಬರುತ್ತಿಲ್ಲ. ಇನ್ನು ಒಲ್ಲದ ಮದುವೆಗೆ ಸಿದ್ದವಾಗುತ್ತಿದ್ದಾಳೆ ಶ್ರಾವಣಿ.

ಒಲ್ಲದ ಮನಸಿನಿಂದ ಮದುವೆಗೆ ಸಜ್ಜಾದ ಶ್ರಾವಣಿ

ಶ್ರಾವಣಿಗೆ ಸುಬ್ರಹ್ಮಣ್ಯ ಎಂದರೆ ಬಹಳಷ್ಟು ಪ್ರೀತಿ ಇದೆ. ಆದರೆ ಸುಬ್ಬು ಮನದಲ್ಲಿ ಶ್ರಾವಣಿ ಬಗ್ಗೆ ಪ್ರೀತಿ ಕೊಂಚವೂ ಇಲ್ಲ. ಇದೀಗ ತನ್ನ ಅತ್ತೆಯ ಮಗನ ಜೊತೆಗೆ ಮದುವೆಗೆ ಸಿದ್ಧ ಆಗುತ್ತಿದ್ದಾಳೆ. ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಎಲ್ಲರ ಗಮನ ಸೆಳೆಯುತ್ತಿದ್ದಳು. ಆದರೆ ಇದೀಗ ಸಿಹಿಯ ಜಾಗದಲ್ಲಿ ಸುಬ್ಬಿ ಇದ್ದಾಳೆ. ಸೀತಾ ಮಡಿಲು ತುಂಬಲು ಸುಬ್ಬಿ ಇರುವಾಗ ಸೀತಾಗೆ ಯಾಕೆ ಚಿಂತೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗೆಯೇ ಬ್ರಹ್ಮ ಗಂಟು ಧಾರಾವಾಹಿಯ ಮೂಲಕ ಎಲ್ಲರ ಮನಸ್ಸು ಕದ್ದ ಚೋರಿ ದೀಪಾ. ದೀಪಾ ಗಂಡನಿಗೆ ದೀಪಾ ಮೇಲೆ ಸಖತ್ ಮುನಿಸು ಇರುತ್ತದೆ. ಪ್ರಾಜೆಕ್ಟ್ ಕೈ ಮೀರಿ ಹೋಯಿತು ಎನ್ನುವ ಕಾರಣಕ್ಕೆ ದೀಪಾ ಜೊತೆ ವಿಚ್ಛೇದನವನ್ನು ಚಿರು ಕೇಳಿರುತ್ತಾನೆ. ಆದರೆ ದೀಪಾ ಮಾಡಿದ ಒಂದೇ ಒಂದು ಕೆಲಸಕ್ಕೆ ಇದೀಗ ಚಿರು ಬಿಗಿಯಾದ ಅಪ್ಪುಗೆಯನ್ನು ನೀಡಿದ್ದಾರೆ. ಚಿರುಗೆ ಪ್ರಾಜೆಕ್ಟ್ ಮಿಸ್ ಆಗಿತ್ತು. ಆದರೆ ದೀಪ ಆ ಪ್ರಾಜೆಕ್ಟ್ ಅನ್ನು ತನ್ನ ಗಂಡನಿಗೆ ಮತ್ತೆ ಕೊಡಿಸಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X