Aishwarya Rangarajan: ಸಿನಿಮಾಗೆ ಎಂಟ್ರಿ ಕೊಟ್ಟ ಸರಿಗಮಪ ರನ್ನರ್ ಅಪ್ ಐಶ್ವರ್ಯ ರಂಗರಾಜನ್

By ಅನಿತಾ ಬನಾರಿ

ಸರಿಗಮಪ ರಿಯಾಲಿಟಿ ಶೋ ಮೂಲಕ ಪಾಪ್ಯುಲಾರಿಟಿ ಪಡೆದ ಗಾಯಕಿಯರ ಪೈಕಿ ಐಶ್ವರ್ಯ ರಂಗರಾಜನ್ ಕೂಡಾ ಒಬ್ಬರು. ರನ್ನರ್ ಅಪ್ ಆಗಿ ಹೊರಬಂದ ಇವರು ತದ ನಂತರ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಹತ್ತಾರು ಕಡೆ ಕಾರ್ಯಕ್ರಮಗಳನ್ನು ಕೊಡುತ್ತಾ, ಸಂಗೀತ ಪ್ರಿಯರನ್ನು ತಮ್ನ ಸುಮಧುರ ಗಾಯನದಿಂದ ರಂಜಿಸುವ ಈಕೆ ಇದೀಗ ಸಿನಿಮಾ ಕಡೆಗೆ ಮುಖ ಮಾಡಿದ್ದಾರೆ.

ಅದೊಂದು ಕಾಲವಿತ್ತಂತೆ. ಸ್ಯಾಂಡಲ್‌ವುಡ್ ಅನ್ನು ಬಾಲಿವುಡ್ ಗಾಯಕರು ಡಾಮಿನೇಟ್ ಮಾಡುತ್ತಿದ್ದರಂತೆ. ಇದರಿಂದ ಕನ್ನಡದ ಗಾಯಕರಿಗೆ ಅವಕಾಶಗಳು ಸಿಗುತ್ತಿರಲಿಲ್ಲವಂತೆ. ಆದರೆ, ಈಗ ಕಾಲ ಬದಲಾಗಿದೆ. ಕನ್ನಡದ ಗಾಯಕರಿಗೂ ಬಹಳಷ್ಟು ಅವಕಾಶಗಳು ದೊರೆಯುತ್ತಿದೆಯಂತೆ. ಹಾಗಾಗಿ ಐಶ್ವರ್ಯ ರಂಗರಾಜನ್ ಅವರ ಮೊದಲ ಆದ್ಯತೆ ಯಾವತ್ತಿಗೂ ಗಾಯನವಂತೆ.

kannada-actor-singer-aishwarya-rangarajan

ಅಂದ ಹಾಗೆ ಇದೇನು ಮೊದಲ ಬಾರಿಗೆ ಗಾಯಕರು ನಟನೆಗೆ ಕಡೆ ವಾಲುತ್ತಿರುವುದಲ್ಲ. ಬಿಗ್ ಬಾಸ್ ಖ್ಯಾತಿಯ ಬ್ರೋ ಗೌಡ ಅಲಿಯಾಸ್ ಶಮಂತ್ ಕೂಡ ಗಾಯಕ, ಈಗ 'ಲಕ್ಷ್ಮೀ ಬಾರಮ್ಮ' ಧಾರವಾಹಿಯ ನಟನೆಯಲ್ಲಿ ಬಿಜಿಯಾಗಿದ್ದಾರೆ. ಖ್ಯಾತ ಗಾಯಕಿ ಎಂ ಡಿ ಪಲ್ಲವಿ ಅವರು ಕೂಡ ನಟನೆಯ ಮೂಲಕವೇ ಮೊದಲು ಜನರಿಗೆ ಪರಿಚಯವಾಗಿದ್ದು. ಭಾರತ ಕಂಡ ಅತ್ಯದ್ಭುತ ಗಾಯಕರಲ್ಲಿ ಒಬ್ಬರಾದ ಎಸ್ ಪಿ ಬಾಲಸುಬ್ರಮಣ್ಯಂ ಅವರು ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಗಾಯಕಿ ಐಶ್ವರ್ಯ ರಂಗರಾಜನ್ 'ಮನ್ ರೇ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಗಾಯಕರಿಗೆ ಒಳ್ಳೆಯ ಫೇಶಿಯಲ್ ಎಕ್ಸ್‌ಪ್ರೆಶನ್ ಇರುತ್ತದೆ. ಏಕೆಂದರೆ, ಅವರು ಪ್ರತಿ ಹಾಡಿಗೂ ಭಾವ ತುಂಬಿ ಹಾಡುತ್ತಿರುತ್ತಾರೆ. ಬಹುಶಃ ಈ ಕಾರಣಕ್ಕೆ ಗಾಯಕ ಗಾಯಕಿಯರಿಗೆ ನಟನೆಗೆ ಹೋಗಲು ಅಷ್ಟೇನು ಕಷ್ಟವಾಗುವುದಿಲ್ಲ. ಇನ್ನು ಐಶ್ವರ್ಯಾ ರಂಗರಾಜನ್ ಅವರಿಗೆ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾಗಳೆಂದರೆ ತುಂಬಾ ಇಷ್ಟ.

kannada-actor-singer-aishwarya-rangarajan

ಇದೀಗ ಸೈಕಾಲಾಜಿಕಲ್ ಥ್ರಿಲ್ಲರ್ ಥೀಮ್ ಹೊಂದಿರುವ 'ಮನ್ ರೇ' ಸಿನಿಮಾದಲ್ಲಿ ನಟಿಸುವ ಅವಕಾಶ ಆಕೆಗೆ ದೊರಕಿರುವುದರಿಂದ ಸಕತ್ ಖುಷಿಯಲ್ಲಿದ್ದಾರೆ. ಗಾಯಕಿಯಾಗಿ ಗುರುತಿಸಿಕೊಂಡಿರುವ ಐಶ್ವರ್ಯಾ ರಂಗರಾಜನ್ ಅವರಿಗೆ ಸಿನಿಮಾ ರಂಗ ಹೊಸತು ಹೊರತು ನಟನೆಯಲ್ಲ. ಹೌದು, ಕಲರ್ಸ್ ಸೂಪರ್ ವಾಹಿನಿಯಲ್ಲಿ ಟಿ.ಎನ್.ಸೀತಾರಾಮ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಟಿಸಿದ್ದರು.

'ಮಗಳು ಜಾನಕಿ' ಧಾರಾವಾಹಿಯಲ್ಲಿ ನಾಯಕಿ ಜಾನಕಿಯ ತಂಗಿ ಚಂಚಲಾ ಪಾತ್ರಕ್ಕೆ ಐಶ್ವರ್ಯಾ ರಂಗರಾಜನ್ ಜೀವ ತುಂಬಿದ್ದರು. ಆ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಐಶ್ವರ್ಯಾ ರಂಗರಾಜನ್ ಅವರು ಇದೀಗ ಮೊದಲ ಬಾರಿಗೆ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದು ಆ ಮೂಲಕ ರಂಜಿಸಲಿದ್ದಾರೆ.

More from Filmibeat

English summary
Singer Aishwarya Rangarajan is now making her Sandalwood debut
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X