Ranjani Raghavan: 'ಕನ್ನಡತಿ' ಕಥೆ ಮುಗಿದ ಮೇಲೆ ಮಾಯವಾದ ನಟಿ ರಂಜಿನಿ ರಾಘವನ್ ಈಗ ಏನು ಮಾಡ್ತಿದ್ದಾರೆ..?
ಕಿರುತೆರೆಯ 'ಕನ್ನಡತಿ' ಧಾರಾವಾಹಿಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ನಟಿ ರಂಜಿನಿ ರಾಘವನ್ ಈಗ ಕಣ್ಮರೆಯಾಗಿದ್ದಾರೆ. 'ಕನ್ನಡತಿ' ಧಾರಾವಾಹಿ ಮುಗಿದ ಮೇಲೆ ಕಿರುತೆರೆಯಲ್ಲಿ ರಂಜನಿ ಕಾಣಿಸಿಕೊಂಡಿಲ್ಲ.
ಅಭಿಮಾನಿಗಳು ಕೂಡ ಫುಲ್ ಬೇಸರದಲ್ಲಿದ್ದಾರೆ. ಮತ್ತೆ ಯಾವುದಾದರೂ ಧಾರಾವಾಹಿಯಲ್ಲಿ ರಂಜಿನಿ ರಾಘವನ್ ಅವರು ನಟಿಸಬಾರದೇ ಎಂದು ಪ್ರೇಕ್ಷಕರು ಯೋಚಿಸುತ್ತಿದ್ದಾರೆ.
ಕಿರುತೆರೆಯಲ್ಲಿ ಇಲ್ಲದಿದ್ದರೂ ರಂಜಿನಿ ರಾಘವನ್ ಅವರು ಬೆಳ್ಳಿತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ಸಾಹಿತ್ಯ, ನಟನೆ ಎಂದು ಬ್ಯುಸಿ ಇರುವ ಈ ನಟಿ ಸದ್ಯ ಏನು ಮಾಡುತ್ತಿದ್ದಾರೆ ಎಂದು ನೋಡೋಣ ಬನ್ನಿ.

ಬಹುಮುಖ ಪ್ರತಿಭೆ ರಂಜಿನಿ
ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿರುವುದು ಕೆಲವೇ ಕೆಲವು ಮಂದಿ ಇರುತ್ತಾರೆ. ಅವರಲ್ಲಿ ನಟಿ ರಂಜಿನಿ ರಾಘವನ್ ಅವರು ಕೂಡ ಒಬ್ಬರು. ಬಹುಮುಖ ಪ್ರತಿಭೆ ನಟಿ, ಬರಹಗಾರ್ತಿ ರಂಜನಿ ರಾಘವನ್ ಪ್ರತೀ ಬಾರಿ ಹೊಸತೇನನ್ನಾದರೂ ಹೊತ್ತು ಪ್ರೇಕ್ಷಕರ ಮುಂದೆ ಬರುತ್ತಾರೆ. 'ಕಥೆ ಡಬ್ಬಿ', 'ಸ್ವೈಪ್ ರೈಟರ್' ಎಂಬ ಎರಡು ಪುಸ್ತಕಗಳನ್ನು ಇತ್ತೀಚೆಗೆ ಬರೆದು ಬಿಡುಗಡೆಯನ್ನೂ ಮಾಡಿದರು. ಇವರ ಪುಸ್ತಕಗಳನ್ನು ಓದಲು ಹಲವರು ಬಯಸುತ್ತಾರೆ ಕೂಡ.

ಸಿನಿಮಾಗಳಲ್ಲೂ ನಟನೆ
'ಆಕಾಶ ದೀಪಾ', 'ಪುಟ್ಟ ಗೌರಿ', 'ಕನ್ನಡತಿ' ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದವರು. ಅಷ್ಟೇ ಅಲ್ಲದೇ, ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದರು. 'ರಾಜಹಂಸ', 'ಸೂಫಿ', 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾಗಳಲ್ಲಿ ನಟಿಸಿದವರು. ಇಷ್ಟೇ ಅಲ್ಲದೇ, ಇನ್ನೂ ಹಲವು ಸಿನಿಮಾಗಳು ರಂಜಿನಿ ರಾಘವನ್ ಅವರ ಕೈಯಲ್ಲಿದ್ದು ಅವು ರಿಲೀಸ್ ಆಗಬೇಕಿವೆ ಅಷ್ಟೇ. 'ನೈಟ್ ಕರ್ಫ್ಯೂ' ಎಂಬ ಚಿತ್ರದಲ್ಲಿ ನಟಿಸಿರುವ ರಂಜನಿ ರಾಘವನ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಮಾಲಾಶ್ರೀ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇದರ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಸಿನಿಮಾ ಬಿಡುಗಡೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.

ಸಿನಿಮಾ ರಿಲೀಸ್‌ಗೆ ಕಾತರ
'ನೈಟ್ ಕರ್ಫ್ಯೂ'ಗೂ ಮುನ್ನ ರಂಜಿನಿ ರಾಘವನ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಅದೇ, 'ಸತ್ಯಂ'. ಈ ಚಿತ್ರದಲ್ಲಿ ರಂಜಿನಿ ರಾಘವನ್ ಅವರು ನಾಯಕಿ ಗೀತಾ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅವರ ನಾಲ್ಕನೇ ಚಿತ್ರವಾಗಿದ್ದು, ಅಶೋಕ್ ಕಡಬ ಅವರು ನಿ೯ರ್ದೇಶನ ಮಾಡಿದ್ದಾರೆ. ಮಹಂತೇಶ್ ವಿಕೆ.ಶ್ರೀಮಾತಾ ಕ್ರಿಯೇಶನ್ಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ರಂಜನಿ ರಾಘವನ್ ಅವರಿಗೆ ಜೋಡಿಯಾಗಿ ನಟ ಸಂತೋಷ್ ಅವರು ಅಭಿನಯಿಸಿದ್ದಾರೆ. ಇವರನ್ನು ಹೊರತು ಪಡಿಸಿ ಚಿತ್ರದಲ್ಲಿ ಹಿರಿಯನಟ ಸುಮನ್, ಅವಿನಾಶ್, ಸಯ್ಯಾಜಿ ಶಿಂಧೆ, ವಿನಯಾ ಪ್ರಸಾದ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ.

ಭೂತಾರಾಧನೆಯ ಕಥೆಯಲ್ಲಿ ಕನ್ನಡತಿ
ಉಡುಪಿ, ಚಿಕ್ಕಮಗಳೂರು, ಮಂಗಳೂರು ಸುತ್ತಮುತ್ತ ಈ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದ್ದು, ಶೇ.40ರಷ್ಟು ರಾತ್ರಿಯಲ್ಲೇ ಶೂಟಿಂಗ್ ಮಾಡಲಾಗಿದೆ. ಈ ಚಿತ್ರ ನೈಜ ಕಥೆಯನ್ನು ಆಧರಿಸಿದ್ದು, ಭೂತಾರಾಧನೆಯ ಕಥೆ ಇದೆ. ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಇದರಲ್ಲಿ ರಾಜನೊಬ್ಬ ಮಾಡಿದ ತಪ್ಪಿನಿಂದ ಇಡೀ ವಂಶ ನಾಶವಾಗುವ ಕಥೆ ಇದೆ. ಸದ್ಯ ಕಿರುತೆರೆಯಿಂದ ದೂರಾಗಿರುವ ನಟಿ ರಂಜಿನಿ ರಾಘವನ್ ಈಗ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











